ವಿಶ್ವ ಆರೋಗ್ಯ ಸಂಘಟನೆಯ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ ಇವರ ನೇಮಕ

ಡಾ. ಹರ್ಷವರ್ಧನ

ಜಿನೆವಾ(ಸ್ವಿಜರ್ಲ್ಯಾಂಡ್) – ಕೇಂದ್ರೀಯ ಆರೋಗ್ಯಮಂತ್ರಿ ಡಾ. ಹರ್ಷವರ್ಧನ ಇವರನ್ನು ವಿಶ್ವ ಆರೋಗ್ಯ ಸಂಘಟನೆಯ ೩೪ ಸದಸ್ಯರ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಪದವಿಗೆ ಆಯ್ಕೆ ಮಾಡಲಾಗಿದೆ. ಅವರು ಮೇ ೨೨ ರಂದು ಉಸ್ತುವಾರಿಯನ್ನು ವಹಿಸಲಿದ್ದಾರೆ. ಪ್ರಾದೇಶಿಕ ಸಮೂಹದ ಕಾರ್ಯಕಾರಿ ಮಂಡಳಿಯ ಅಧಿಕಾರವನ್ನು ಒಂದು ವರ್ಷಕ್ಕಾಗಿ ‘ರೊಟೇಶನ್’ (ಸರದಿ) ಪದ್ದತಿಯಲ್ಲಿ ನೀಡುತ್ತಾರೆ. ಮೇ ೨೨ ರಂದು ಆರಂಭವಾಗುವ ಮೊದಲನೇ ವರ್ಷಕ್ಕಾಗಿ ಈ ಅಧಿಕಾರವನ್ನು ಭಾರತಕ್ಕೆ ನೀಡುವ ನಿರ್ಧಾರವನ್ನು ಕೈಗೊಂಡಿದ್ದಾರೆ. ‘೩ ವರ್ಷಕ್ಕಾಗಿ ಕಾರ್ಯಕಾರಿ ಮಂಡಳಿಗೆ ಭಾರತವನ್ನು ಆಯ್ಕೆ ಮಾಡಲಾಗುವುದು’, ಎಂಬ ನಿರ್ಣಯವನ್ನು ಹಿಂದಿನ ವರ್ಷ ವಿಶ್ವ ಆರೋಗ್ಯ ಸಂಘಟನೆಯ ದಕ್ಷಿಣ ಪೂರ್ವ ಏಶಿಯಾ ಸಮೂಹವು ಎಲ್ಲರ ಒಪ್ಪಿಗೆಯ ಮೇರೆಗೆ ತೆಗೆದುಕೊಂಡಿದ್ದರು.
ಈ ಕಾರ್ಯಕಾರಿ ಮಂಡಳಿಯ ಸಭೆಯು ವರ್ಷದಲ್ಲಿ ೨ ಬಾರಿ ಆಗುತ್ತದೆ ಹಾಗೂ ಅದರಲ್ಲಿ ಮುಖ್ಯವಾದ ಸಭೆಯು ಜನವರಿ ತಿಂಗಳಲ್ಲಿ ಆಗುತ್ತದೆ. ಆರೋಗ್ಯ ಸಭೆಯ ನಂತರ ಕೂಡಲೇ ಮೇ ತಿಂಗಳಲ್ಲಿ ಈ ಮಂಡಳಿಯ ಮತ್ತೊಂದು ಸಭೆಯ ಆಯೋಜನೆಯನ್ನು ಮಾಡಲಾಗುತ್ತದೆ. ಆರೋಗ್ಯ ಸಭೆಯಲ್ಲಿ ಎಲ್ಲಾ ನಿಯಮಾವಳಿ ಹಾಗೂ ಧೋರಣೆಗಳನ್ನು ಪರಿಣಾಮಕಾರಿಯಾಗಿ ಮಾಡಲು ಯೋಗ್ಯ ಸಲಹೆಯನ್ನು ನೀಡುವ ಜವಾಬ್ದಾರಿಯು ಕಾರ್ಯಕಾರಿ ಮಂಡಳಿಯ ಅಧ್ಯಕ್ಷರ ಬಳಿ ಇರುತ್ತದೆ.