ನೇಪಾಳ ಮತ್ತು ಭಾರತದ ನಡುವಿನ ಗಡಿವಿವಾದ ಅವರ ಆಂತರಿಕ ಪ್ರಶ್ನೆ! – ಚೀನಾ

ಇದನ್ನು ಹೇಳುವ ಮೂಲಕ, ನಾನು ಈ ವಿವಾದದಲ್ಲಿಲ್ಲ ಎಂದು ಚೀನಾ ಜಗತ್ತಿಗೆ ತೋರಿಸಲು ಪ್ರಯತ್ನಿಸುತ್ತಿದೆ, ಆದರೆ ಈ ವಿವಾದದ ಹಿಂದೆ ಚೀನಾ ಇದೆ ಎಂದು ಜಗತ್ತಿಗೆ ತಿಳಿದಿದೆ!

ಬೀಜಿಂಗ್ (ಚೀನಾ) – ಕಲಾಪಾನಿ ವಿಷಯವು ಭಾರತ ಮತ್ತು ನೇಪಾಳ ನಡುವಿನ ಆಂತರಿಕ ವಿವಾದವಾಗಿದೆ. ಸ್ನೇಹಪರ ಮಾತುಕತೆಯ ಮೂಲಕ ಉಭಯ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುತ್ತವೆ ಎಂದು ನಾವು ಭಾವಿಸುತ್ತೇವೆ. ಪರಿಸ್ಥಿತಿ ಹದಗೆಡದಂತೆ ಅವರು ಯಾವುದೇ ರೀತಿಯ ಏಕಪಕ್ಷೀಯ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ. ಈ ರೀತಿಯಾಗಿ, ಭಾರತ ಮತ್ತು ನೇಪಾಳ ನಡುವಿನ ಗಡಿ ವಿವಾದದಲ್ಲಿ ಚೀನಾ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲು ಪ್ರಯತ್ನಿಸಿದೆ. ಚೀನಾ ಕಲಾಪಾನಿ ಪ್ರದೇಶದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಪ್ರಸ್ತುತ ವಿವಾದವು ಕಲಾಪಾನಿ ಬಳಿಯ ಲಿಪುಲೆಖ್ ಪ್ರದೇಶದ ಬಗ್ಗೆ ಇದೆ. ಭಾರತ ಇತ್ತೀಚೆಗೆ ಇಲ್ಲಿ ರಸ್ತೆ ನಿರ್ಮಿಸಿದೆ. ಇದನ್ನು ನೇಪಾಳ ವಿರೋಧಿಸುತ್ತದೆ. ಭಾರತದ ಮೇಲೆ ಒತ್ತಡ ತರಲು ನೇಪಾಳ ಚೀನಾದೊಂದಿಗೆ ಇದರ ಬಗ್ಗೆ ಮಾತುಕತೆ ನಡೆಸುತ್ತಿದೆ; ಆದರೆ, ಚೀನಾದ ಪ್ರತಿಕ್ರಿಯೆಯಿಂದ ನೇಪಾಳ ಆಘಾತಕ್ಕೊಳಗಾಗಿದೆ ಎಂದು ಹೇಳಲಾಗಿದೆ.