ನೇಪಾಳದ ಹೊಸ ನಕಾಶೆಗೆ ಭಾರತದ ಆಕ್ಷೇಪ

ನೇಪಾಳವು ಭಾರತದ ಸ್ವಾತಂತ್ರ್ಯ ಮತ್ತು ಸಮಗ್ರತೆಯನ್ನು ಗೌರವಿಸಬೇಕು!

ನವ ದೆಹಲಿ: ಲಿಪುಲೆಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ಇವೆಲ್ಲವೂ ತಮ್ಮದೆಂದು ಹೇಳಿಕೊಳ್ಳುತ್ತ ಈ ಮೂರೂ ಪ್ರದೇಶಗಳನ್ನು ನೇಪಾಳವು ಪ್ರಕಟಿಸಿದ ನಕಾಶೆಯಲ್ಲಿ ನೇಪಾಳದಲ್ಲಿರುವಂತೆ ತೋರಿಸಿದೆ. ಇದನ್ನು ಭಾರತವು ಆಕ್ಷೇಪಿಸಿದೆ. ಈ ಹೊಸ ನಕಾಶೆಯಲ್ಲಿ, ನೇಪಾಳವು ಭಾರತದ ಒಟ್ಟು ೩೯೫ ಚದರ ಕಿ.ಮೀ.ದಷ್ಟು ಭೂಮಿಯನ್ನು ತನ್ನ ಗಡಿಯಲ್ಲಿ ತೋರಿಸಿದೆ. ಈ ಕುರಿತು ವಿದೇಶಾಂಗ ಸಚಿವಾಲಯದ ವಕ್ತಾರರಾದ ಅನುರಾಗ್ ಶ್ರೀವಾಸ್ತವ ಇವರು, “ನೇಪಾಳವು ಪ್ರಕಟಿಸಿದ ಹೊಸ ನಕಾಶೆಯು ಯಾವುದೇ ಐತಿಹಾಸಿಕ ಸತ್ಯಗಳನ್ನು ಆಧರಿಸಿಲ್ಲ. ಅದು ಕಾಲ್ಪನಿಕವಾಗಿದೆ. ದೇಶದ ಸ್ವಾತಂತ್ರ್ಯ ಮತ್ತು ಸಮಗ್ರತೆಯಲ್ಲಿ ಇಂತಹ ಹಸ್ತಕ್ಷೇಪವನ್ನು ಎಂದಿಗೂ ಸಹಿಸುವುದಿಲ್ಲ. ನೇಪಾಳವು ಭಾರತದ ಸ್ವಾತಂತ್ರ್ಯ ಮತ್ತು ಸಮಗ್ರತೆಯನ್ನು ಗೌರವಿಸಬೇಕು. ಈ ಸಮಸ್ಯೆಯನ್ನು ಚರ್ಚೆಯ ಮೂಲಕ ಪರಿಹರಿಸಬೇಕು”, ಎಂದು ಹೇಳಿದ್ದಾರೆ.