ಭಾರತದ ಲಿಪುಲೆಖ, ಲಿಪಿಯಾಧುರಾ ಹಾಗೂ ಕಾಲಾಪಾನಿ ಈ ಪ್ರದೇಶಗಳು ತನ್ನದೆಂದ ನೇಪಾಳ

ನೇಪಾಳವು ಹೊಸ ನಕಾಶೆಯನ್ನು ಪ್ರಕಾಶಿಸುವುದು

ಚೀನಾ ಹೇಳಿದ್ದರಿಂದ ನೇಪಾಳವು ಹೀಗೆ ಮಾಡುತ್ತಿದೆ, ಎಂಬುದು ಹೇಳುವ ಅಗತ್ಯವಿಲ್ಲ ! ಇದರ ಬಗ್ಗೆ ನೇಪಾಳಕ್ಕೆ ಪಾಠಕಲಿಸುವ ಬದಲು ಭಾರತವು ‘ಚೀನಾಗೆ ಹೇಗೆ ಪ್ರತ್ಯುತ್ತರ ನೀಡಬಹುದು ?’, ಇದರ ಬಗ್ಗೆ ವಿಚಾರ ಮಾಡುವುದು ಅಗತ್ಯವಾಗಿದೆ !

ಕಾಠಮಾಂಡು (ನೇಪಾಳ) – ಭಾರತದ ಲಿಪುಲೆಖ, ಲಿಪಿಯಾಧುರಾ ಹಾಗೂ ಕಾಲಾಪಾನಿ ಈ ಪ್ರದೇಶಗಳ ಮೇಲೆ ನೇಪಾಳ ತನ್ನದೆಂದು ಹೇಳಿಗೆ. ಭಾರತದ ಈ ಮೂರು ಪ್ರದೇಶಗಳು ನೇಪಾಳದ್ದಾಗಿದೆ ಎಂಬ ನಕಾಶೆಯನ್ನು ನೇಪಾಳವು ಪ್ರಕಾಶಿಸಲಿದೆ. ನೇಪಾಳದ ಮಂತ್ರಿಮಂಡಳಿಯ ಸಭೆಯಲ್ಲಿ ಈ ನಿರ್ಣಯವನ್ನು ತೆಗೆಕೊಳ್ಳಲಾಯಿತು. ಭಾರತವು ಉತ್ತರಾಖಂಡದಲ್ಲಿ ಘಾಟಿಯಾಬಾಗಢದಿಂದ ಲಿಪುಲೇಖ ಹೀಗೆ ೮೦ ಕಿ.ಮೀ ರಸ್ತೆಯನ್ನು ನಿರ್ಮಿಸಿದೆ. ಭಾರತ, ನೇಪಾಳ ಹಾಗೂ ಚೀನಾ ಈ ಮೂರೂ ದೇಶಗಳ ಗಡಿ ಎಲ್ಲಿ ಸೇರುತ್ತದೆ ಆ ಸ್ಥಳದ ಹತ್ತಿರದ ಈ ರಸ್ತೆ ಇಗೆ. ಈ ರಸ್ತೆಯಿಂದ ಕೈಲಾಸ ಮಾನಸರೋವರಕ್ಕೆ ಹೋಗುವ ಭಾರತೀಯ ಯಾತ್ರಿಕರ ಸಮಯ ಉಳಿಯಲಿದೆ. ಭಾರತವು ಕಟ್ಟಿದ ಈ ರಸ್ತೆಯ ಮೇಲೆ ನೇಪಾಳವು ಆಕ್ಷೇಪಣೆಯನ್ನು ನೀಡಿತ್ತು. ಈ ಹಿಂದೆ ಉತ್ತರಾಖಾಂಡ ರಾಜ್ಯದ ಲಿಪಿಯಾಧುರಾ ಈ ಪ್ರದೇಶದ ಮೇಲೆಯೂ ನೇಪಾಳವು ತಮ್ಮದಾಗಿದೆ ಎಂದು ಹೇಳಿದೆ. ‘ನೇಪಾಳದ ಹೊಸ ನಕಾಶೆಯಲ್ಲಿ ೭೭ ಜಿಲ್ಲೆ, ಅದೇರೀತಿ ಲಿಪಿಯಾಧುರಾ, ಲಿಪುಲೇಖ ಹಾಗೂ ಕಾಲಾಪಾನಿಯೊಂದಿಗೆ ೭೫೩ ಸ್ಥಳೀಯ ಪ್ರಾದೇಶಿಕ ಮಂಡಳಿಯನ್ನೂ ತೋರಿಸಲಾಗುವುದು’, ಎಂದು ನೇಪಾಳದ ವಿದೇಶಾಂಗ ಸಚಿವ ಪ್ರದೀಪ ಜ್ಞಾನವಲೀ ಇವರು ಟ್ವೀಟ್ ಮಾಡಿ ಹೇಳಿದ್ದಾರೆ.