ಪಾಕ್‌ನಲ್ಲಿ ಸಣ್ಣ ಮಕ್ಕಳ ಗಣಿತ ಪುಸ್ತಕದಲ್ಲಿ ಹಂದಿಯ ಚಿತ್ರವನ್ನು ಪ್ರಕಾಶಿದ್ದರಿಂದ ಪುಸ್ತಕದ ಮೇಲೆ ನಿಷೇಧ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕ್‌ನ ಪಂಜಾಬ ಪ್ರಾಂತದಲ್ಲಿಯ ಮಕ್ಕಳ ಗಣಿತ ಪುಸ್ತಕದಲ್ಲಿ ಹಂದಿಯ ಚಿತ್ರ ಪ್ರಕಾಸಿದ್ದರಿಂದ ಸರಕಾರವು ಈ ಪುಸ್ತಕವನ್ನು ನಿಷೇಧಿಸಿದೆ. ಇಸ್ಲಾಮ್ ಮತ್ತು ಪಾಕಿಸ್ತಾನದ ಸುರಕ್ಷೆಗಾಗಿ ಈ ನಿಷೇಧ ಹೇರಿದೆ, ಎಂದು ಸರಕಾರವು ಹೇಳಿದೆ. ಸರಕಾರಿ ಪುಸ್ತಕ ಮಂಡಳಿಯು, ಈ ಪುಸ್ತಕವನ್ನು ಅನುಮತಿ ಇಲ್ಲದೇ ಮಾರಾಟ ಮಾಡಲಾಗುತ್ತಿತ್ತು, ಎಂದು ಹೇಳಿದೆ.