ಪಾಕಿಸ್ತಾನವನ್ನು ಭಿಕ್ಷೆಬೇಡುವಂತೆ ಮಾಡುವುದರೊಂದಿಗೆ ಅದನ್ನು ತನ್ನ ವಶದಲ್ಲಿಡುವುದಕ್ಕಾಗಿಯೇ ಚೀನಾವು ಪಾಕಿಸ್ತಾನದಲ್ಲಿ ಆರ್ಥಿಕ ಹೆದ್ದಾರಿಯನ್ನು ನಿರ್ಮಿಸಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !
ಇಸ್ಲಾಮಾಬಾದ್ (ಪಾಕಿಸ್ತಾನ) – ಚೀನಾದ ಕಂಪನಿಗಳು ಪಾಕಿಸ್ತಾನದಲ್ಲಿ ೬ ಸಾವಿರದ ೨೦೦ ಕೋಟಿ ರೂ. ಹೂಡಿಕೆ ಮಾಡಿ ೪ ಲಕ್ಷ ಕೋಟಿ ರೂಪಾಯಿಯ ಲಾಭವನ್ನು ಗಳಿಸಿರುವ ಅಂಶವು ಬೆಳಕಿಗೆ ಬಂದಿದೆ. ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ದೇಶದಲ್ಲಿ ಹೆಚ್ಚುತ್ತಿರುವ ವಿದ್ಯುತ್ ದರಗಳ ಬಗ್ಗೆ ಪರಿಶೀಲನೆ ನಡೆಸಲು ಒಂದು ಸಮಿತಿಯನ್ನು ನೇಮಿಸಿದ್ದರು. ‘ಪವರ ಸೆಕ್ಟರ ಆಡಿಟ ಕಮೀಟಿ, ಸರ್ಕ್ಯುಲರ್ ಡೇಬಟ್ ರಿಝರ್ವೇಶನ ಅಂಡ ಫ್ಯೂಚರ ರೋಡ ಮ್ಯಾಪ್’ ಈ ಸಮಿತಿಯು ಸಲ್ಲಿಸಿದ ೨೭೮ ಪುಟಗಳ ವರದಿಯಿಂದ ‘ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್’ (‘ಸಿ.ಪಿ.ಇ.ಸಿ.’ಯ) ಅಡಿಯಲ್ಲಿ ಚೀನಾದ ಕಂಪನಿಗಳ ಭ್ರಷ್ಟಾಚಾರವು ಬಹಿರಂಗವಾಗಿದೆ.
೧. ವರದಿಯ ಪ್ರಕಾರ, ವಿದ್ಯುತ್ ನಿರ್ಮಾಣ ಕ್ಷೇತ್ರದಲ್ಲಿ ಸಾತತ್ಯತೆ ಇಲ್ಲದ್ದರಿಂದ ಪಾಕಿಸ್ತಾನಕ್ಕೆ ೧ ಸಾವಿರ ಕೋಟಿ ರೂಪಾಯಿಯ ನಷ್ಟವುಂಟಾಗಿದೆ. ಇದರಲ್ಲಿ ಮೂರನೇ ಒಂದು ಭಾಗದಷ್ಟು ನಷ್ಟ ಚೀನಾದ ಯೋಜನೆಯಿಂದ ಆಗಿದೆ.
೨. ಸಿ.ಪಿ.ಇ.ಸಿ.ಯಲ್ಲಿ ಪಾಕಿಸ್ತಾನದ ಸೈನಿಕರ ನೇರ ಹಸ್ತಕ್ಷೇಪವನ್ನು ನೋಡುತ್ತ ಚೀನಾದ ಯೋಜನೆಗಳ ತನಿಖೆಯ ಬಗ್ಗೆ ಸ್ವಲ್ಪ ಮಟ್ಟಿಗೆ ಸೌಮ್ಯವಾಗಿದೆ. ಲೆಫ್ಟಿನೆಂಟ್ ಜನರಲ್ ಅಸಿಮ್ ಸಲೀಮ್ ಬಜ್ವಾ ಸಿ.ಪಿ.ಇ.ಸಿ. ಪ್ರಾಧಿಕಾರದ ಅಧ್ಯಕ್ಷರಾಗಿದ್ದು ಅವರು ಮಾಹಿತಿ ಮತ್ತು ಪ್ರಸಾರ ಸಚಿವರಾಗಿಯೂ ಇದ್ದಾರೆ.