ಅಮೇರಿಕಾದಲ್ಲಿ ಪ್ರಾರ್ಥನೆಯ ಮೂಲಕ ಕೊರೋನಾ ಪೀಡಿತರ ಮೇಲೆ ಚಿಕಿತ್ಸೆ ನೀಡಲು ಯತ್ನ

  • ಭಾರತೀಯ ವಂಶದ ಡಾ. ಧನಂಜಯ ಲಾಕಿರೆಡ್ಡಿಯವರ ‘ಪ್ರೇಯರ್ ಥೆರಪಿ ಪ್ರಾರಂಭ                             

  • ಎಲ್ಲಾ ಮತದವರ ಪ್ರಾರ್ಥನೆಯ ಸಮಾವೇಶ

  • ಜೊತೆಗೆ ವೈದ್ಯಕೀಯ ಔಷಧೋಪಚಾರವೂ ನಡೆಯುವುದು

  • ಭಾರತವು ವಿಶ್ವದ ಆಧ್ಯಾತ್ಮಿಕ ಗುರುವಾಗಿದ್ದರೂ ಭಾರತದಲ್ಲಿ ಈ ರೀತಿಯ ಪ್ರಯೋಗ ನಡೆಸುವ ವಿಚಾರ ಯಾರ ಮನಸ್ಸಿಗೂ ಬರುವುದಿಲ್ಲ; ಏಕೆಂದರೆ ಭಾರತವು ವಿನಾಶಕಾರಿ ಜಾತ್ಯತೀತವನ್ನು ಅಂಗೀಕರಿಸಿದೆ !

  • ನಮಗೆ ದೈವೀ ಶಕ್ತಿಯ ಮೇಲೆ ವಿಶ್ವಾಸ ! – ಡಾ. ಧನಂಜಯ ಲಾಕಿರೆಡ್ಡಿ

ಡಾ. ಧನಂಜಯ ಲಾಕಿರೆಡ್ಡಿರವರು ಮಾತನಾಡುತ್ತ, “ನಾವು ವಿಜ್ಞಾನದ ಮೇಲೆ ವಿಶ್ವಾಸವಿಡುತ್ತೇವೆ. ಜೊತೆಗೆ ದೈವೀ ಅಲೌಕಿಕ ಶಕ್ತಿಯ ಮೇಲೆ ಕೂಡ ವಿಶ್ವಾಸವಿಡುತ್ತೇವೆ. ಆದ್ದರಿಂದ ‘ದೈವೀ ಶಕ್ತಿಯಿಂದ ರೋಗಿಗಳ ಮೇಲೆ ಏನಾದರೂ ಪರಿಣಾಮವಾಗುತ್ತದೆಯೇ ?, ಎಂಬ ಬಗ್ಗೆ ನಾವು ಅಭ್ಯಾಸ ಮಾಡಲಿದ್ದೇವೆ, ಎಂದಿದ್ದಾರೆ.

ವಾಶಿಂಗ್ಟನ್ (ಅಮೇರಿಕಾ) – ಅಮೇರಿಕಾದಲ್ಲಿ ಕೊರೋನಾವು ಕಾಡ್ಗಿಚ್ಚಿನಂತೆ ಹರಡುತ್ತಿದೆ. ಇಲ್ಲಿಯವರೆಗೆ ಅಲ್ಲಿ ೧೧ ಲಕ್ಷಕ್ಕಿಂತ ಹೆಚ್ಚು ಜನರಿಗೆ ಕೊರೋನಾದ ಸಂಕ್ರಮಣವಾಗಿದೆ ಹಾಗೂ ೬೩ ಸಾವಿರಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸೋಂಕನ್ನು ಹತೋಟಿಗೆ ತರಲು ಇನ್ನೂ ಅಮೇರಿಕ ವಿಫಲವಾಗಿದೆ. ಆದ್ದರಿಂದ ಇಲ್ಲಿ ಕೊರೋನಾ ಪೀಡಿತರ ಮೇಲೆ ಚಿಕಿತ್ಸೆ ಮಾಡಲು ಬೇರೆ ಬೇರೆ ಪರ್ಯಾಯಗಳನ್ನು ಅವಲಂಬಿಸಲಾಗುತ್ತಿದೆ. ಅಮೇರಿಕಾದಲ್ಲಿನ ಭಾರತೀಯ ವಂಶದ ಡಾಕ್ಟರ್‌ಗಳಿಂದ ‘ಪ್ರಾರ್ಥನೆ ಮಾಡುವುದರಿಂದ ಕೊರೋನಾ ಪೀಡಿತರ ಆರೋಗ್ಯದಲ್ಲಿ ಸುಧಾರಣೆ ಆಗಬಹುದೇ ?, ಎಂಬ ವಿಷಯದ ಮೇಲೆ ಸಂಶೋಧನೆ ನಡೆಯುತ್ತಿದೆ. ಅದರ ಒಂದು ಭಾಗವೆಂದು ಭಾರತೀಯ ಮೂಲದ ಡಾ. ಧನಂಜಯ ಲಾಕಿರೆಡ್ಡಿಯವರು ಮೇ ೧ ರಿಂದ ‘ಪ್ರೇಯರ್ ಥೆರಪಿ ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದಾರೆ. ಪ್ರಾರ್ಥನೆಯ ಮೂಲಕ ಕೊರೋನಾ ಪೀಡಿತರ ಮೇಲೆ ಚಿಕಿತ್ಸೆ ಮಾಡುತ್ತಿರುವಾಗ ವೈದ್ಯಕೀಯ ಔಷಧೋಪಚಾರ ಕೂಡ ನಡೆಯುತ್ತಿರುವುದು.

ಪ್ರಾರಂಭದಲ್ಲಿ ‘ಪ್ರಾರ್ಥನೆಯ ಅಭ್ಯಾಸದ ಪ್ರಯೋಗವನ್ನು ೫೦೦ ರೋಗಿಗಳ ಮೇಲೆ ನಡೆಸಲಾಗುವುದು. ಈ ೫೦೦ ರೋಗಿಗಳನ್ನು ೨ ಗುಂಪುಗಳನ್ನಾಗಿ ವಿಭಾಗಿಸಲಾಗಿದೆ. ಈ ರೋಗಿಗಳಿಗೆ ಯಾವುದೇ ಪೂರ್ವ ಪರಿಕಲ್ಪನೆ ನೀಡಲಾಗುವುದಿಲ್ಲ. ಈ ರೋಗಿಗಳಿಗಾಗಿ ಅವರ ಧರ್ಮಕ್ಕನುಸಾರ ಪ್ರಾರ್ಥನೆ ಮಾಡಲಾಗುವುದು. ರೋಗಿಗಳಲ್ಲಿ ಕ್ರೈಸ್ತರು, ಮುಸಲ್ಮಾನರು, ಹಿಂದೂಗಳು, ಬೌದ್ಧ ಇತ್ಯಾದಿ ಧರ್ಮದವರು ಒಳಗೊಂಡಿದ್ದಾರೆ.

ಡಾ. ಧನಂಜಯರವರು ಈ ‘ಪ್ರೇಯರ್ ಥೆರಪಿನ ಪರಿಣಾಮಗಳನ್ನು ಅಭ್ಯಾಸ ಮಾಡಲು ಒಂದು ವೈದ್ಯಕೀಯ ತಂಡವನ್ನು ತಯಾರಿಸಿದ್ದಾರೆ. ಈ ತಂಡವು ರೋಗಿಗಳ ಆರೋಗ್ಯದ ಮೇಲೆ ಗಮನವಿಡಲಿದೆ. ಅದರಲ್ಲಿ ರೋಗಿಗಳು ಎಷ್ಟು ದಿನ ‘ವೆಂಟಿಲೇಟರ್ನಲ್ಲಿದ್ದಾರೆ ?  ಅವರ ಶರೀರದಲ್ಲಿ ಎಷ್ಟು ಹಾಗೂ ಯಾವ ಅವಯವಗಳು ಕೆಲಸ ಮಾಡುವುದನ್ನು ನಿಲ್ಲಿಸಿದೆ ?, ಎಷ್ಟು ದಿನ ಅವರನ್ನು ತುರ್ತು ನಿಗಾ ಘಟಕದಿಂದ ಹೊರ ತರಲಾಯಿತು ?, ಎಷ್ಟು ಜನರು ಮೃತ ಪಟ್ಟಿದ್ದಾರೆ ? ಇತ್ಯಾದಿ ನಾನಾ ರೀತಿಯ ಮಾಹಿತಿಗಳ ನೋಂದಣಿಯಿಡಲಾಗಿದೆ. ಡಾ. ಲಾಕಿರೆಡ್ಡಿಯವರ ಪ್ರಯೋಗದ ವಿಷಯದಲ್ಲಿ ಅವರ ಸಹಕಾರಿಗಳು ಅವರನ್ನು ಹೊಗಳುತ್ತಿದ್ದಾರೆ.