ಭಾರತೀಯ ಸೇನಾ ಪಡೆಯಲ್ಲಿ ಶೇ. ೮೬ ರಷ್ಟು ಸೈನ್ಯ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳು ರಶಿಯನ್ ನಿರ್ಮಿತ ! – ಸ್ಟಿಸ್ಮನ ಸೆಂಟರ

ಭಾರತೀಯ ಸೇನಾಪಡೆಯಲ್ಲಿ ಶೇ. ೮೬ ರಷ್ಟು ಸೈನ್ಯ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳು ರಶಿಯನ್ ನಿರ್ಮಿತವಾಗಿವೆ, ಎಂಬ ಮಾಹಿತಿಯನ್ನು ಅಮೇರಿಕಾದ ‘ಸ್ಟಿಸ್ಮನ ಸೆಂಟರ್’ನ ವರದಿಯಲ್ಲಿ ಹೇಳಲಾಗಿದೆ. ನೌಕಾದಳದ ಶೇ. ೪೧ ರಷ್ಟು, ವಾಯುದಳದ ಎರಡು ಮೂರಂಶ ಸೈನಿಕರ ಉಪಕರಣಗಳು ರಶಿಯಾದಿಂದ ಆಮದು ಮಾಡಿಕೊಳ್ಳಲಾಗಿದೆ. ೨೦೧೪ ರಲ್ಲಿ ಶೇ. ೫೫ ಕ್ಕಿಂತಲೂ ಹೆಚ್ಚು ಉಪಕರಣಗಳು ರಶಿಯಾದಿಂದ ಆಮದು ಮಾಡಿಕೊಳ್ಳಲಾಗಿತ್ತು.

೫ ಸಾವಿರ ವರ್ಷಗಳ ಹಿಂದೆ ಪ್ರಪ್ರಥಮವಾಗಿ ರಾವಣನು ವಿಮಾನವನ್ನು ಹಾರಿಸಿದ್ದನು ! – ಶ್ರೀಲಂಕಾ ಸರಕಾರದ ಹೇಳಿಕೆ

ಶ್ರೀಲಂಕಾ ಸರಕಾರವು ರಾವಣ ಹಾಗೂ ಆತನ ವಿಮಾನದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಜನರಿಗೆ ಕಾಗದಪತ್ರ ಅಥವಾ ಪುಸ್ತಕಗಳ ಮಾಧ್ಯಮದಿಂದ ಇರುವಂತಹ ಯಾವುದೇ ಪ್ರಕಾರದ ಮಾಹಿತಿಗಳು ಇದ್ದಲ್ಲಿ ಅದನ್ನು ನೀಡಬೇಕು ಎಂದು ಹೇಳಿದೆ. ಈ ಬಗ್ಗೆ ವಿವಿಧ ದಿನಪತ್ರಿಕೆಗಳಲ್ಲಿ ಜಾಹೀರಾತನ್ನು ಪ್ರಕಾಶಿಸಿದೆ.

ಈಗ ಬಿಹಾರದ ಸೀತಾಮಾತಾ ಗುಹೆಯನ್ನೂ ತನ್ನದೆಂದ ನೇಪಾಳ !

ನೇಪಾಳವು ಬಿಹಾರ್‌ನ ಪಶ್ಚಿಮ ಚಂಪಾರಣ ಜಿಲ್ಲೆಯಲ್ಲಿರುವ ‘ಸೀತಾಮಾತಾ ಗುಹೆ’ ಹೆಸರಿನಿಂದ ಗುರುತಿಸುವ ಪ್ರದೇಶವನ್ನು ತನ್ನದೆಂದು ಹೇಳಿಕೊಳ್ಳುತ್ತಿದೆ. ಕೆಲವು ನೇಪಾಳಿ ಸಮಾಜಕಂಟಕರು ಭಾರತ-ನೇಪಾಳ ಗಡಿಯಲ್ಲಿರುವ ಸೀತಾಮಾತಾ ಗುಹೆಯ ಪ್ರದೇಶದಲ್ಲಿ ಹಾಕಲಾಗಿದ್ದ ಕಲ್ಲಿನ ಖಂಬ ಕ್ರಮಸಂಖ್ಯೆ ೪೩೬ ಕಿತ್ತುಹಾಕಿದ್ದಾರೆ.

ಕೊರೋನಾ ರೋಗಕ್ಕೆ ಯೋಗ ಹಾಗೂ ಧ್ಯಾನಧಾರಣೆ ಈ ಪ್ರಾಚೀನ ಭಾರತೀಯ ಚಿಕಿತ್ಸಾಪದ್ದತಿ ಹೆಚ್ಚು ಪರಿಣಾಮಕಾರಿ ! – ಅಂತರರಾಷ್ಟ್ರೀಯ ತಜ್ಞರ ಹೇಳಿಕೆ

ಕೊರೋನಾ ಪೀಡಿತರ ಮೇಲಿನ ಚಿಕಿತ್ಸೆಗಾಗಿ ಯೋಗ ಹಾಗೂ ಧ್ಯಾನ ಧಾರಣೆ ಈ ೨ ಪ್ರಾಚೀನ ಚಿಕಿತ್ಸಾಪದ್ದತಿಗಳು ಪರಿಣಾಮಕಾರಿಯಾಗಿವೆ ಎಂದು ಅಂತರರಾಷ್ಟ್ರೀಯ ತಜ್ಞರು ಕಂಡುಹಿಡಿದ್ದಾರೆ. ಅಮೇರಿಕಾದ ‘ಮೆಸಾಚ್ಯುಸೆಟ್ಸ್ ಆಫ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಾಜಿ’, ‘ಕ್ಯಾಲಿಫೋರ್ನಿಯಾ ಯುನಿವರ್ಸಿಟಿ’, ‘ಚೋಪಡಾ ಲೈಬ್ರೇರಿ’ ಹಾಗೂ ‘ಹಾವರ್ಡ್ ಯುನಿವರ್ಸಿಟಿ’ಯ ಸಂಶೋಧಕರು

ಕೊರೋನಾದ ಮೇಲೆ ಲಸಿಕೆ ತಯಾರಿಸಲು ಹಾಗೂ ಅದನ್ನು ಜಗತ್ತಿಗೆ ಪೂರೈಸುವ ಕ್ಷಮತೆ ಭಾರತಕ್ಕೆ ಇದೆ ! – ಬಿಲ್ ಗೆಟ್ಸ್

ಭಾರತವು ದೊಡ್ಡ ಆಕಾರದ ಹಾಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಆದ್ದರಿಂದ ಭಾರತವು ಕೊರೊನಾ ದೊಡ್ಡ ಸವಾಲವನ್ನು ಎದುರಿಸಬೇಕಾಗುತ್ತಿದೆ. ಭಾರತದ ಔಷಧಿ ಉದ್ಯಮಕ್ಕೆ ಕೇವಲ ಸ್ವಂತಕ್ಕಾಗಿ ಅಲ್ಲ, ಸಂಪೂರ್ಣ ಜಗತ್ತಿಗೆ ಕೊರೋನಾ ಮೇಲಿನ ಲಸಿಕೆಯನ್ನು ತಯಾರಿಸುವ ಕ್ಷಮತೆ ಇದೆ.

ಪಾಕಿಸ್ತಾನದ ಸಿಂಧ್‌ನಲ್ಲಿ ಇಬ್ಬರು ಹಿಂದೂ ಯುವಕರ ಹತ್ಯೆ : ಅರೆಬೆಂದಾವಸ್ಥೆಯಲ್ಲಿ ಮೃತದೇಹ ಪತ್ತೆ

ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಘಟನೆಗಳು ನಡೆಯುತ್ತಿವೆ. ಇಲ್ಲಿಯ ಮಿಟಿಯಾರಿ ಹಾಲಾ ಪ್ರದೇಶದಲ್ಲಿ ಮೊಹನ ಬಾಗರಿ ಹೆಸರಿನ ಹಿಂದೂ ಯುವಕನ ಅರೆಬೆಂದ ಮೃತದೇಹವು ಪತ್ತೆಯಾಗಿದೆ. ಇದರ ಮಾಹಿತಿಯನ್ನು ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತ ಹಾಗೂ ನ್ಯಾಯವಾದಿ ರಾಹತ ಆಸ್ಟೀನ್ ಇವರು ಸಾಮಾಜಿಕ ಮಾಧ್ಯಮದಿಂದ ಪ್ರಸಾರ ಮಾಡಿದ್ದಾರೆ.

ಇಸ್ರೈಲ್‌ನ ರಾಷ್ಟ್ರಪತಿ ನೆತನ್ಯಾಹೂ, ಬರಾಕ ಓಬಾಮಾ, ಬಿಲ್ ಗೆಟ್ಸ್ ಮುಂತಾದ ಹೆಸರಾಂತ ವ್ಯಕ್ತಿಗಳ ಟ್ವಿಟರ್ ಖಾತೆ ‘ಹ್ಯಾಕ್’

ಇಸ್ರೇಲ್‌ನ ರಾಷ್ಟ್ರಪತಿ ನೆತನ್ಯಾಹೂ, ಅಮೇರಿಕಾದ ಮಾಜಿ ರಾಷ್ಟ್ರಾಧ್ಯಕ್ಷ ಬರಾಕ ಓಬಾಮಾ, ಅಮೇರಿಕಾದ ನಾಯಕ ಜೊ. ಬಿಡೆನ, ಮೈಕ್ರೊಸಾಫ್ಟ್‌ನ ಸಹ-ಸಂಸ್ಥಾಪಕ ಬಿಲ್ ಗೆಟ್ಸ್, ‘ಟೆಸ್ಲಾ’ ಸಂಸ್ಥೆಯ ಮುಖ್ಯ ಕಾರ್ಯಕಾರಿ ಅಧಿಕಾರಿ ಎಲೊನ್ ಮಸ್ಕ ಮುಂತಾದ ಹೆಸರಾಂತ ವ್ಯಕ್ತಿಗಳ ಟ್ವಿಟರ್ ಖಾತೆಗಳನ್ನು ‘ಹ್ಯಾಕರ‍್ಸ್’ಗಳು ಹ್ಯಾಕ್ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಮತಾಂಧರಿಂದ ಮತ್ತೋರ್ವ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ

ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿ ಮತಾಂಧರಿಂದ ಓರ್ವ ೧೨ ವರ್ಷದ ಹಿಂದೂ ಹುಡುಗಿಯನ್ನು ಅಪಹರಿಸಲಾಗಿದೆ ಎಂದು ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ ರಾಹತ ಆಸ್ಟೀನ್ ಇವರು ಟ್ವೀಟ್ ಮಾಡುವ ಮೂಲಕ ಮಹಿತಿಯನ್ನು ನೀಡಿದ್ದಾರೆ.

ಭಾರತದಲ್ಲಿಯ ಗ್ರಂಥಾಲಯಗಳ ಈ ಸ್ಥಿತಿ ಕೇವಲ ಹಿಂದೂ ರಾಷ್ಟ್ರದಲ್ಲಿ ಆಗಲು ಸಾಧ್ಯ !

‘ಪುಸ್ತಕವನ್ನು ಸರಿಯಾಗಿ ಉಪಯೋಗಿಸದಿದ್ದರೆ, ಎಷ್ಟು ದಂಡ ತುಂಬ ಬೇಕಾಗುತ್ತದೆ ? ಎಂದು ನಾವು ವಿಚಾರಿಸಿದಾಗ, “ನನಗೆ ನಿಯಮ ಗೊತ್ತಿಲ್ಲ. ನಾನು ನೋಡಿ ಹೇಳುತ್ತೇನೆ, ಎಂದು ಗ್ರಂಥಪಾಲರು ಹೇಳಿದರು. ಪುಸ್ತಕಗಳನ್ನು ಯಾರಾದರೂ ಅಯೋಗ್ಯ ರೀತಿಯಿಂದ ಉಪಯೋಗಿಸಿದ ಅನುಭವ ಇದುವರೆಗೆ ಅವರಿಗೆ ಬಂದಿರಲಿಲ್ಲ.

ನೇಪಾಳ ಚೀನಾದ ಕಪಿಮುಷ್ಟಿಯಲ್ಲಿ !

ಒಂದು ವೇಳೆ ನೇಪಾಳ ಚೀನಾದ ವಶಕ್ಕೆ ಹೋದರೆ ನಾಳೆ ಲಡಾಖ್, ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ, ಭೂತಾನ, ಸಿಕ್ಕಿಮ್, ಅರುಣಾಚಲ ಪ್ರದೇಶ ಇಷ್ಟು ಮಾತ್ರವಲ್ಲ, ಸಂಪೂರ್ಣ ಈಶಾನ್ಯ ಭಾರತಕ್ಕೆ ದೊಡ್ಡ ಆಘಾತ ನಿರ್ಮಾಣ ವಾಗಬಹುದು. ಇದನ್ನು ತಪ್ಪಿಸಲು ಈಗ ಭಾರತ ಕೃತಿಶೀಲವಾಗಬೇಕು.