ನೇಪಾಳ ಚೀನಾದ ಕಪಿಮುಷ್ಟಿಯಲ್ಲಿ !

ಈಗ ಚೀನಾದ ವಿಸ್ತಾರವಾದಿ ಮಹತ್ವಾಕಾಂಕ್ಷೆಯು ಬಹಿರಂಗವಾಗಿದೆ. ೨೩ ದೇಶಗಳೊಂದಿಗೆ ಚೀನಾದ ವಾದ ನಡೆಯುತ್ತಿದೆ. ಅವುಗಳಲ್ಲಿ ಕೇವಲ ೧೪ ದೇಶಗಳ ಸೀಮೆಗಳು ಅದರ ಸೀಮೆಗೆ ಅಂಟಿಕೊಂಡಿವೆ. ಇದರಿಂದ ಚೀನಾದ ಮಾನಸಿಕತೆಯ ಅರಿವಾಗುತ್ತದೆ. ಭಾರತ ಮತ್ತು ಚೀನಾ ಒಂದೇ ಸಮಯದಲ್ಲಿ ಸ್ವತಂತ್ರವಾದವು. ಚೀನಾದ ಮೇಲೆ ಜಪಾನಿಯರು ಅನೇಕ ವರ್ಷ ಅತ್ಯಾಚಾರ ಮಾಡಿದರು. ಎರಡನೇ ಮಹಾಯುದ್ಧದಲ್ಲಿ ಜಪಾನ ದಾರುಣ ಪರಾಭವವನ್ನು ಅನುಭವಿಸಬೇಕಾಯಿತು. ಇದರಿಂದ ಅದಕ್ಕೆ ಚೀನಾವನ್ನು ಬಿಟ್ಟು ಕೊಡಬೇಕಾಯಿತು. ಅನಂತರ ಚೀನಾದ ಮುಖಂಡ ಮಾವೋ ಚೀನಾವನ್ನು ಪುನರ್ನಿರ್ಮಾಣ ಮಾಡುವ ಪ್ರಯತ್ನವನ್ನು ಆರಂಭಿಸಿದ. ಆತ ಸೈನ್ಯಶಕ್ತಿಯನ್ನು ಹೆಚ್ಚಿಸಲು ಆರಂಭಿಸಿದ. ‘ಪುನಃ ಗುಲಾಮರಾಗಬಾರದು, ಎಂಬುದು ಆತನ ಪ್ರಯತ್ನವಾಗಿತ್ತು. ಆತನಲ್ಲಿ ಇತರರನ್ನು ಗುಲಾಮರನ್ನಾಗಿ ಮಾಡುವ ಮಾನಸಿಕತೆ ನಿರ್ಮಾಣವಾಯಿತು ಮತ್ತು ಆ ಸಮಯದಲ್ಲಿ ಚೀನಾ ತಿಬೇಟನ್ನು ಕಬಳಿಸಿತು. ಅಲ್ಲಿಯವರೆಗೆ ಭಾರತದ ಗಡಿ ಚೀನಾಕ್ಕೆ ಎಲ್ಲಿಯೂ ಹೊಂದಿಕೊಂಡಿರಲಿಲ್ಲ. ಅನಂತರ ಅದು ಅರುಣಾಚಲ ಪ್ರದೇಶ ಮತ್ತು ಲಡಾಖ್‌ಕ್ಕೆ ಹೊಂದಿಕೊಂಡಿತು ಹಾಗೂ ೧೯೬೨ ರ ಯುದ್ಧದಲ್ಲಿ ಅದು ಲಡಾಖ್‌ನ ಪೂರ್ವ ಭಾಗವನ್ನು ಕಬಳಿಸಿತು. ಇಂದು ಅದಕ್ಕೆ ‘ಅಕ್ಸಾಯಿ ಚೀನಾ ಎಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಅದು ಭಾರತದ ಭಾಗವಾಗಿರುವುದರಿಂದ ಅದಕ್ಕೆ ‘ಅಕ್ಸಾಯ ಹಿಂದ್ ಎಂದು ಹೇಳಿದರೆ ಹೆಚ್ಚು ಯೋಗ್ಯವೆನಿಸುತ್ತದೆ. ಇದೇ ರೀತಿ ಚೀನಾಕ್ಕೆ ಭೂತಾನ ಮತ್ತು ಸಿಕ್ಕಿಮ್‌ನ ಮೇಲೆ ಕೂಡ ಕಣ್ಣಿದೆ. ಸಿಕ್ಕಿಮ್ ಸ್ವತಂತ್ರ ದೇಶವಾಗಿತ್ತು; ಅದರೆ ಭಾರತದ ರಾಜಕಾರಣಿಗಳ ಕುಶಲ ನೀತಿಯಿಂದ ಭಾರತ ಅದನ್ನು ತನ್ನೊಂದಿಗೆ ಜೋಡಿಸಿಕೊಂಡಿತು. ಭೂತಾನ ಸ್ವತಂತ್ರವಾಗಿದ್ದರೂ ಅದರ ರಕ್ಷಣೆಯ ಹೊಣೆ ಭಾರತದ ಕಡೆ ಇದೆ. ಡೋಕ್ಲಾಮ್ ಪ್ರದೇಶ ಭೂತಾನದ ಗಡಿಯಲ್ಲಿದೆ ಹಾಗೂ ಚೀನಾ ಅದನ್ನು ಕಬಳಿಸಲು ಪ್ರಯತ್ನಿಸುತ್ತಿದೆ. ಚೀನಾವು ಮಾಡುತ್ತಿರುವ ಚಲನವಲನವನ್ನು ನೋಡಿದರೆ ಇದು ಅದರ ‘ಫೈ ಫಿಂಗರ‍್ಸ್ ಆಫ್ ಟಿಬೇಟ್ ಸ್ಟ್ಯಾಟ್‌ರ್ಜಿ ಈ ಧೋರಣೆಯ ಭಾಗವಾಗಿದೆ ಎಂದು ಅರಿವಾಗುತ್ತದೆ. ಚೀನಾವನ್ನು ಸ್ಥಾಪನೆ ಮಾಡಿದ ಮಾವೋ ತ್ಸೆ ತುಂಗ್ ಇವರೇ ಈ ಧೋರಣೆಯನ್ನು ಮಾಡಿದ್ದರು. ಅವರ ಅಭಿಪ್ರಾಯದಂತೆ ‘ಟಿಬೇಟ್ ಅಂಗೈಯಾಗಿದೆ. ಅದರ ಮೇಲೆ ನಾವು ನಿಯಂತ್ರಣವನ್ನು ಪಡೆಯುವುದು ಅವಶ್ಯಕವಾಗಿದೆ. ಅನಂತರ ನಾವು ೫ ಬೆರಳುಗಳ ವಿಚಾರ ಮಾಡಬೇಕು. ಈ ೫ ರಲ್ಲಿ ಮೊದಲ ಬೆರಳು ಲಡಾಖ್ ಮತ್ತು ಉಳಿದ ೪ ಬೆರಳುಗಳೆಂದರೆ ನೇಪಾಳ, ಭೂತಾನ, ಸಿಕ್ಕಿಮ್ ಮತ್ತು ಅರುಣಾಚಲ ಪ್ರದೇಶಗಳಾಗಿವೆ. ಆದ್ದರಿಂದ ಚೀನಾ ಇದೇ ನೀತಿಗನುಸಾರ ನಡೆಯುತ್ತಿದೆ. ಲಡಾಖ್‌ನ ಕೆಲವು ಭಾಗವನ್ನು ಅದು ಮೊದಲೆ ಕಬಳಿಸಿದೆ ಹಾಗೂ ಉಳಿದ ಭಾಗವನ್ನು ಕಬಳಿಸಲು ಅದು ಗಲವಾನ್ ಕಣಿವೆಯಲ್ಲಿ ನುಸುಳುತ್ತಿದೆ. ನೇಪಾಳವಂತೂ ಸಂಪೂರ್ಣ ಅದರ ವಶವಾಗಿದೆ. ಅದು ಈಗ ಹೆಸರಿಗೆ ಮಾತ್ರ ಸ್ವತಂತ್ರ ರಾಷ್ಟ್ರವಾಗಿದೆ. ಸ್ವಲ್ಪ ಸಮಯದ ಕಾಲದ ನಂತರ ಅದು ಚೀನಾದ ಪ್ರದೇಶವಾಗುವ ಸಾಧ್ಯತೆಯಿದೆ. ಚೀನಾ ನೇಪಾಳದ ‘ರೂಯಿ ಎಂಬ ಊರನ್ನು ತನ್ನ ನಿಯಂತ್ರಣದಲ್ಲಿ ತೆಗೆದುಕೊಂಡಿದೆ, ಎಂಬುದು ಬೆಳಕಿಗೆ ಬಂದನಂತರ ಈಗ ಚೀನಾ ನೇಪಾಳದ ೩೩ ಹೆಕ್ಟರ್ ಭೂಮಿಯನ್ನು ಕಬಳಿಸಿದ್ದು ಅಲ್ಲಿರುವ ನದಿಯ ಪ್ರವಾಹವನ್ನು ಕೂಡ ಅದಕ್ಕೆ ಬೇಕಾದ ಹಾಗೆ ತಿರುಗಿಸಿಕೊಂಡಿದೆ, ಎಂಬುದು ತಿಳಿದುಬಂದಿದೆ. ನೇಪಾಳದ ಅಧಿಕಾರರೂಢ ಕಮ್ಯುನಿಸ್ಟ್ ಪಕ್ಷದ ಸರಕಾರ ಈ ವಿಷಯದಲ್ಲಿ ಬಾಯಿಮುಚ್ಚಿಕೊಂಡು ಕುಳಿತಿದೆ ಹಾಗೂ ಇನ್ನೊಂದೆಡೆ ಭಾರತದ ಭೂಭಾಗವನ್ನು ತನ್ನ ಭೂಭಾಗವೆಂದು ಡಂಗುರ ಸಾರುತ್ತಿದೆ. ‘ಚೀನಾ ಕಬಳಿಸಿರುವ ನೇಪಾಳದ ಭೂಭಾಗದ ಬಗ್ಗೆ ಯಾರೂ ಏನೂ ಮಾತನಾಡಬಾರದೆಂದು ಅದು ಭಾರತದ ಭೂಭಾಗ ತನ್ನದೆಂದು ಹೇಳಲು ಪ್ರಯತ್ನಿಸುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ನೇಪಾಳಿ ಹಿಂದೂ ಜನರನ್ನು ಜಾಗೃತಗೊಳಿಸಬೇಕು !

ಈಗ ನೇಪಾಳದ ಜನರು ಕೂಡ ಭಾರತದ ವಿರುದ್ಧ ಮಾತನಾಡಲು ಪ್ರಾರಂಭಿಸಿದ್ದಾರೆ. ರಸ್ತೆಗಿಳಿದು ಭಾರತದ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಭಾರತದಲ್ಲಿ ಹಿಂದಿ ಚಲನಚಿತ್ರ ನಟಿಯಾಗಿದ್ದ ನೇಪಾಳಿ ಮೂಲದ ಮನಿಷಾ ಕೊಯಿರಾಲ ಇವಳು ಕೂಡ ನೇಪಾಳದ ಪರವಾಗಿ ಮಾತನಾಡುತ್ತಿದ್ದಾಳೆ. ಈ ನೇಪಾಳಿ ಜನರಿಗೆ ಚೀನಾ ಹೇಗೆ ಅವರ ದೇಶವನ್ನು ನುಂಗುತ್ತಿದೆ ಅಥವಾ ಅವರ ದೇಶ ಚೀನಾದ ವಶವಾಗಿದೆ, ಎಂಬುದರ ಅರಿವಿಲ್ಲ. ನೇಪಾಳದ ಕಮ್ಯುನಿಸ್ಟ್ ರಾಜಕಾರಣಿಗಳು ಆತ್ಮಾಘಾತವನ್ನು ಮಾಡಿಕೊಳ್ಳುತ್ತಿದ್ದಾರೆ. ಎಲ್ಲಿಯವರೆಗೆ ನೇಪಾಳದಲ್ಲಿ ರಾಜರ ಆಡಳಿತವಿತ್ತೊ, ಅಲ್ಲಿಯವರೆಗೆ ನೇಪಾಳ ಮತ್ತು ಅಲ್ಲಿನ ಜನರು ಭಾರತದೊಂದಿಗೆ ಏಕನಿಷ್ಠರಾಗಿದ್ದರು; ಆದರೆ ಈಗ ಕಮ್ಯುನಿಸ್ಟರಿಂದಾಗಿ ನೇಪಾಳ ಚೀನಾದ ಗುಲಾಮವಾಗಿದೆ. ಟಿಬೇಟ್‌ನಲ್ಲಿನ ರಸ್ತೆ ನಿರ್ಮಾಣದ ಯೋಜನೆಯ ಮೂಲಕ ಚೀನಾ ನೇಪಾಳದಲ್ಲಿನ ಭೂಮಿಯನ್ನು ಕಬಳಿಸಲು ಪ್ರಯತ್ನಿಸುತ್ತಿದೆ. ‘ಚೀನಾ ಭವಿಷ್ಯದಲ್ಲಿ ಈ ಗಡಿಯಲ್ಲಿ ಸೈನಿಕ ಚೌಕಿಗಳನ್ನು ನಿರ್ಮಾಣ ಮಾಡಬಹುದು, ಎಂದು ನೇಪಾಳದ ಕೃಷಿ ಸಚಿವಾಲಯದ ಒಂದು ವರದಿಯಿಂದ ತಿಳಿದುಬಂದಿದೆ. ಈ ವರದಿ ಬಂದು ತುಂಬಾ ಸಮಯವಾಗಿದೆ. ಆದರೂ ನೇಪಾಳ ಚೀನಾದ ವಿರುದ್ಧ ಒಂದು ಶಬ್ದವನ್ನೂ ಮಾತನಾಡಿಲ್ಲ. ಇದರಲ್ಲಿನ ಒಂದು ವಿಷಯವೇನೆಂದರೆ ಅಧಿಕಾರರೂಢ ಕಮ್ಯುನಿಸ್ಟ್ ಪಕ್ಷ ಚೀನಾದ ಜೊತೆಗೆ ಆಯೋಜಿಸಿದ ಒಂದು ಬೈಠಕ್‌ದಿಂದವಾದ ನಿರ್ಮಾಣವಾಗಿದೆ. ಇದರಿಂದ ಈ ಪಕ್ಷದಲ್ಲಿ ಬಿರುಕು ಬಿಟ್ಟಿರುವುದು ಕಂಡು ಬರುತ್ತಿದೆ. ಇದೊಂದು ಒಳ್ಳೆಯ ವಿಷಯವೆಂದು ಹೇಳಬಹುದು. ಈಗ ಭಾರತ ಈ ಗುಂಪಿಗೆ ಸಹಾಯ ಮಾಡಿ ಚೀನಾದ ವಿರುದ್ಧ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಬೇಕು. ನೇಪಾಳಿ ಜನರಿಗೆ ‘ಚೀನಾ ನೇಪಾಳದೊಂದಿಗೆ ಹೇಗೆ ವಿಶ್ವಾಸಘಾತ ಮಾಡುತ್ತಿದೆ, ಅದರ ಒಳಸಂಚು ಏನಿದೆ ಹಾಗೂ ಅದು ಹೇಗೆ ಆ ದಿಕ್ಕಿನಲ್ಲಿ ನಡೆದಿದೆ ನೇಪಾಳದ ಭೂಮಿಯನ್ನು ವಶಪಡಿಸಿಕೊಂಡು ನೇಪಾಳವನ್ನು ಭಾರತದ ವಿರುದ್ಧ ಮಾಡಿ ನೇಪಾಳಕ್ಕೆ ಆತ್ಮಾಘಾತ ಮಾಡಲು ಉತ್ತೇಜಿಸುತ್ತಿದೆ, ಎಂದು ಹೇಳಬೇಕು. ನೇಪಾಳ ತನ್ನ ದೇಶದ ಪುರುಷರೊಂದಿಗೆ ವಿವಾಹ ಮಾಡಿಕೊಳ್ಳುವ ಭಾರತೀಯ ಮಹಿಳೆಯರಿಗೆ ೭ ವರ್ಷ ಪೌರತ್ವವನ್ನು ನಿರಾಕರಿಸಲು ಕಾನೂನಿನಲ್ಲಿ ಸುಧಾರಣೆ ಮಾಡುವ ಪ್ರಸ್ತಾಪವನ್ನು ಮಾಡಿದೆ. ಅದಕ್ಕೆ ಈಗ ಅಲ್ಲಿನ ಕೆಲವು ನಾಗರಿಕರು ವಿರೋಧವನ್ನು ಆರಂಭಿಸಿದ್ದಾರೆ. ಈ ವಿರೋಧಕ್ಕೆ ಭಾರತ ಅಂತರ್ಗತ ಸಮರ್ಥನೆ ನೀಡಿ ನೇಪಾಳದ ಅಧಿಕಾರರೂಢ ಪಕ್ಷಕ್ಕೆ ಹೇಗೆ ಆಘಾತ ಮಾಡ ಬಹುದು ಎಂದು ವಿಚಾರ ಮಾಡಬೇಕು. ಮೂಲತಃ ಭಾರತದ ವಿದೇಶ ನೀತಿ ನೇಪಾಳದ ವಿಷಯದಲ್ಲಿ ತಪ್ಪಾಗಿದೆ. ಪ್ರಧಾನಮಂತ್ರಿ ಮೋದಿ ಯವರು ಅದನ್ನು ಸುಧಾರಿಸಲು ಪ್ರಯತ್ನಿಸಿದರು; ಆದರೆ ಅದು ಯಶಸ್ವಿಯಾಗಲಿಲ್ಲ. ಆದ್ದರಿಂದ ಈಗ ಭಾರತ ನೀತಿಯನ್ನು ಬದಲಾಯಿಸುವ ಪ್ರಯತ್ನ ಮಾಡುತ್ತಾ ನೇಪಾಳದಲ್ಲಿ ಕಮ್ಯುನಿಸ್ಟರ ಮತ್ತು ಚೀನಾದ ವಿರುದ್ಧ ಅಸಂತೋಷವನ್ನು ನಿರ್ಮಾಣ ಮಾಡಲು ಪ್ರಯತ್ನಿಸಬೇಕು. ನೇಪಾಳಿ ಹಿಂದೂಗಳಿಗೆ ಮುಂದೆ ಅವರ ದೇಶದ ಮೇಲಾಗುವ ಆತ್ಮಾಘಾತದ ವಿಷಯವನ್ನು ಅರಿವು ಮಾಡಿಕೊಡಬೇಕು. ‘ನೇಪಾಳ ಭಾರತದ ಜೊತೆಗಿರುವುದು ಎಷ್ಟು ಹಿತಕರವಾಗಿದೆ, ಎಂಬುದನ್ನು ಅವರಿಗೆ ಅರಿವು ಮಾಡಿಕೊಡಬೇಕು ಹಾಗೂ ಚೀನಾದ ಹಿಡಿತದಿಂದ ಹೊರಗೆ ಬರಲು ಸಹಾಯ ಮಾಡಬೇಕು. ಒಂದು ವೇಳೆ ನೇಪಾಳ ಚೀನಾದ ವಶಕ್ಕೆ ಹೋದರೆ ನಾಳೆ ಲಡಾಖ್, ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ, ಭೂತಾನ, ಸಿಕ್ಕಿಮ್, ಅರುಣಾಚಲ ಪ್ರದೇಶ ಇಷ್ಟು ಮಾತ್ರವಲ್ಲ, ಸಂಪೂರ್ಣ ಈಶಾನ್ಯ ಭಾರತಕ್ಕೆ ದೊಡ್ಡ ಆಘಾತ ನಿರ್ಮಾಣ ವಾಗಬಹುದು. ಇದನ್ನು ತಪ್ಪಿಸಲು ಈಗ ಭಾರತ ಕೃತಿಶೀಲವಾಗಬೇಕು.