ರಾವಣನು ವಿಮಾನ ಹಾರಿಸಿದ್ದರ ಮಾಹಿತಿ, ಪುರಾವೆ ಸಲ್ಲಿಸಲು ಜನರಿಗೆ ಕರೆ ರಾವಣನ ಸಹೋದರನ ಬಳಿ ಅಂದರೆ ಕುಬೇರನ ಬಳಿ ‘ಪುಷ್ಪಕ’ ವಿಮಾನ ಇತ್ತು ಹಾಗೂ ರಾವಣನು ಬಲವಂತವಾಗಿ ಆತನಿಂದ ಕಸಿದುಕೊಂಡಿದ್ದ, ಎಂಬ ಇತಿಹಾಸ ಇದೆ, ಎಂಬುದು ಶ್ರೀಲಂಕಾದ ಸರಕಾರ ಗಮನದಲ್ಲಿಟ್ಟುಕೊಳ್ಳಬೇಕು !
ಕೊಲೊಂಬೊ (ಶ್ರೀಲಂಕಾ) – ರಾವಣ ಅಲೌಕಿಕ ಬುದ್ಧಿವಂತ ರಾಜನಾಗಿದ್ದ. ರಾವಣನು ೫ ಸಾವಿರ ವರ್ಷಗಳ ಹಿಂದೆ ಪ್ರಪ್ರಥಮಬಾರಿಗೆ ವಿಮಾನವನ್ನು ಉಪಯೋಗಿಸಿದ್ದನು. ಇದು ಪೌರಾಣಿಕ ಕಥೆಯಾಗಿರದೇ ಸತ್ಯವಾಗಿದೆ. ಇದರ ಬಗ್ಗೆ ಸಂಪೂರ್ಣ ಶೋಧನೆಯಾಗುವುದು ಅವಶ್ಯಕತೆ ಇದೆ. ಮುಂದಿನ ೫ ವರ್ಷಗಳಲ್ಲಿ ನಾವು ಅದನ್ನು ಸಾಬೀತುಪಡಿಸುವವರಿದ್ದೇವೆ, ಎಂದು ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಶಶಿ ದಾನತುಂಜರು ಹೇಳಿದ್ದಾರೆ. ಶ್ರೀಲಂಕಾದಲ್ಲಿ ರಾವಣನ ಬಗ್ಗೆ ಜನರಿಗೆ ಅಪಾರ ಶ್ರದ್ಧೆ ಇದೆ ಹಾಗೂ ಗೌರವವಿದೆ. (ಅದಕ್ಕಾಗಿಯೇ ಶ್ರೀಲಂಕಾದಲ್ಲಿ ರಾಮಭಕ್ತರಿರುವ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ! – ಸಂಪಾದಕರು) ೧೭ ಎಪ್ರಿಲ್ ೨೦೧೯ ರಲ್ಲಿ ಶ್ರೀಲಂಕಾವು ತನ್ನ ಉಪಗ್ರಹಕ್ಕೆ ‘ರಾವಣ ೧’ ಎಂದು ಹೆಸರು ಇಟ್ಟಿತ್ತು.
೧. ಶ್ರೀಲಂಕಾ ಸರಕಾರವು ರಾವಣ ಹಾಗೂ ಆತನ ವಿಮಾನದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಜನರಿಗೆ ಕಾಗದಪತ್ರ ಅಥವಾ ಪುಸ್ತಕಗಳ ಮಾಧ್ಯಮದಿಂದ ಇರುವಂತಹ ಯಾವುದೇ ಪ್ರಕಾರದ ಮಾಹಿತಿಗಳು ಇದ್ದಲ್ಲಿ ಅದನ್ನು ನೀಡಬೇಕು ಎಂದು ಹೇಳಿದೆ. ಈ ಬಗ್ಗೆ ವಿವಿಧ ದಿನಪತ್ರಿಕೆಗಳಲ್ಲಿ ಜಾಹೀರಾತನ್ನು ಪ್ರಕಾಶಿಸಿದೆ.
೨. ಹಿಂದಿನ ವರ್ಷ ನಾಗರಿಕ ವಿಮಾನಯಾನ ತಜ್ಞ, ಇತಿಹಾಸಕಾರ, ಪುರಾತತ್ವ ತಜ್ಞರು ಹಾಗೂ ಇತರ ಕೆಲವು ತಜ್ಞರಿಂದ ಒಂದು ಪರಿಷತ್ತಿನಲ್ಲಿ ‘ರಾವಣನು ೫ ಸಾವಿರ ವರ್ಷಗಳ ಹಿಂದೆ ವಿಮಾನವನ್ನು ಹಾರಿಸಿ ಭಾರತದ ತನಕ ಪ್ರವಾಸ ಮಾಡಿ ನಂತರ ಸುರಕ್ಷಿತವಾಗಿ ಹಿಂದಿರುಗಿದ್ದ’, ಎಂದು ಹೇಳಿದ್ದಾರೆ.