ಇಸ್ರೈಲ್‌ನ ರಾಷ್ಟ್ರಪತಿ ನೆತನ್ಯಾಹೂ, ಬರಾಕ ಓಬಾಮಾ, ಬಿಲ್ ಗೆಟ್ಸ್ ಮುಂತಾದ ಹೆಸರಾಂತ ವ್ಯಕ್ತಿಗಳ ಟ್ವಿಟರ್ ಖಾತೆ ‘ಹ್ಯಾಕ್’

ನವ ದೆಹಲಿ – ಇಸ್ರೇಲ್‌ನ ರಾಷ್ಟ್ರಪತಿ ನೆತನ್ಯಾಹೂ, ಅಮೇರಿಕಾದ ಮಾಜಿ ರಾಷ್ಟ್ರಾಧ್ಯಕ್ಷ ಬರಾಕ ಓಬಾಮಾ, ಅಮೇರಿಕಾದ ನಾಯಕ ಜೊ. ಬಿಡೆನ, ಮೈಕ್ರೊಸಾಫ್ಟ್‌ನ ಸಹ-ಸಂಸ್ಥಾಪಕ ಬಿಲ್ ಗೆಟ್ಸ್, ‘ಟೆಸ್ಲಾ’ ಸಂಸ್ಥೆಯ ಮುಖ್ಯ ಕಾರ್ಯಕಾರಿ ಅಧಿಕಾರಿ ಎಲೊನ್ ಮಸ್ಕ ಮುಂತಾದ ಹೆಸರಾಂತ ವ್ಯಕ್ತಿಗಳ ಟ್ವಿಟರ್ ಖಾತೆಗಳನ್ನು ‘ಹ್ಯಾಕರ‍್ಸ್’ಗಳು ಹ್ಯಾಕ್ ಮಾಡಿದ್ದಾರೆ. ‘ಹ್ಯಾಕ್’ ಮಾಡುವಾಗ ‘ಹ್ಯಾಕರ‍್ಸ್’ನಿಂದ ಒಂದು ಟ್ವೀಟ್ ಮಾಡಲಾಗಿತ್ತು. ಅದರಲ್ಲಿ ‘ನನಗೆ ಬಿಟ್‌ಕಾಯಿನ್ಸ್ (ಆಭಾಸಿ ನಾಣ್ಯ) ನೀಡಿ, ಅದನ್ನು ನಾನು ನಿಮಗೆ ದ್ವಿಗುಣಗೊಳಿಸಿ ಕೊಡುತ್ತೇನೆ. ಈ ಆಫರ್ ಕೇವಲ ೩೦ ನಿಮಿಷಕ್ಕಾಗಿ ಇದೆ. ನೀವು ೧ ಸಾವಿರ ಡಾಲರ‍್ಸ್ ಕಳುಹಿಸಿ ಕೊಡಿ ಹಾಗೂ ನಾನು ನಿಮಗೆ ೨ ಸಾವಿರ ಡಾಲರ‍್ಸ್ ಮಾಡಿ ಕೊಡುವೆ’, ಎಂದು ಹೇಳಲಾಗಿತ್ತು. ಈ ಟ್ವೀಟ್ ಕೆಲ ಸಮಯದ ನಂತರ ತೆಗೆಯಲಾಯಿತು. ಈ ಪ್ರಕರಣದಲ್ಲಿ ಟ್ವಿಟರ್, ‘ಈ ನಾಯಕರ ಟ್ವಿಟರ್ ಖಾತೆ ‘ಹ್ಯಾಕ್’ ಮಾಡಿರುವ ಘಟನೆಯ ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದೆ.