ಈಗ ಬಿಹಾರದ ಸೀತಾಮಾತಾ ಗುಹೆಯನ್ನೂ ತನ್ನದೆಂದ ನೇಪಾಳ !

ಚೀನಾದ ಸಹವಾಸದೋಷದಿಂದ ಈಗ ನೇಪಾಳದ ಕಮ್ಯುನಿಸ್ಟ ಪ್ರಧಾನಮಂತ್ರಿ ಓಲಿ ಇವರೂ ಅಸುರ ವಿಸ್ತಾರವಾದಿಯನ್ನು ಜೋಪಾಸನೆ ಮಾಡುತ್ತಿರುವುದು ಕಂಡುಬರುತ್ತದೆ. ಭಾರತ-ನೇಪಾಳದ ನಡುವೆ ವೈರತ್ವ ನಿರ್ಮಿಸಲು ನೋಡುತ್ತಿರುವ ಓಲಿಯವರನ್ನು ಈಗ ನೇಪಾಳದ ಜನರೇ ಮನೆಗೆ ಕಳುಹಿಸಬೇಕು !

ಪಶ್ಚಿಮ ಚಂಪಾರಣ (ಬಿಹಾರ) – ನೇಪಾಳವು ಬಿಹಾರ್‌ನ ಪಶ್ಚಿಮ ಚಂಪಾರಣ ಜಿಲ್ಲೆಯಲ್ಲಿರುವ ‘ಸೀತಾಮಾತಾ ಗುಹೆ’ ಹೆಸರಿನಿಂದ ಗುರುತಿಸುವ ಪ್ರದೇಶವನ್ನು ತನ್ನದೆಂದು ಹೇಳಿಕೊಳ್ಳುತ್ತಿದೆ. ಕೆಲವು ನೇಪಾಳಿ ಸಮಾಜಕಂಟಕರು ಭಾರತ-ನೇಪಾಳ ಗಡಿಯಲ್ಲಿರುವ ಸೀತಾಮಾತಾ ಗುಹೆಯ ಪ್ರದೇಶದಲ್ಲಿ ಹಾಕಲಾಗಿದ್ದ ಕಲ್ಲಿನ ಖಂಬ ಕ್ರಮಸಂಖ್ಯೆ ೪೩೬ ಕಿತ್ತುಹಾಕಿದ್ದಾರೆ. ಈ ಘಟನೆಯ ಬಗ್ಗೆ ಸ್ಥಳೀಯರಿಂದ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾದ ನಂತರ ಸೈನ್ಯದ ಅಧಿಕಾರಿಯು ಘಟನಾಸ್ಥಳಕ್ಕೆ ಭೇಟಿ ನೀಡಿದ್ದಾರೆ. ನೇಪಾಳ ಸರಕಾರದ ಹೇಳಿಕೆಗನುಸಾರ ‘ಸೀತಾಮಾತೆಯು ಕೆಲವು ದಿನಗಳ ಕಾಲ ಈ ಗುಹೆಯಲ್ಲಿ ವಾಸವಾಗಿದ್ದರು ನಂತರ ಅವರು ವಾಲ್ಮಿಕೀ ಆಶ್ರಮಕ್ಕೆ ಹೋದರು’ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ಈ ಸ್ಥಳದಲ್ಲಿ ಎರಡೂ ದೇಶದ ನಾಗರಿಕರು ಪೂಜೆ ಮಾಡುತ್ತಿದ್ದರು.