ಭಾರತೀಯ ಸೇನಾ ಪಡೆಯಲ್ಲಿ ಶೇ. ೮೬ ರಷ್ಟು ಸೈನ್ಯ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳು ರಶಿಯನ್ ನಿರ್ಮಿತ ! – ಸ್ಟಿಸ್ಮನ ಸೆಂಟರ

ಸರಕಾರವು ಇನ್ನು ಸ್ವಾವಲಂಬಿಯಾಗಲು ಒತ್ತು ನೀಡಿದ್ದರಿಂದ ಆಧುನಿಕ ಹಾಗೂ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ನಿರ್ಮಾಣದ ಕೊರತೆ ಆದಷ್ಟು ಬೇಗನೆ ನಿವಾರಿಸುವುದು ಅಗತ್ಯವಿದೆ !

ನವ ದೆಹಲಿ – ಭಾರತೀಯ ಸೇನಾಪಡೆಯಲ್ಲಿ ಶೇ. ೮೬ ರಷ್ಟು ಸೈನ್ಯ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳು ರಶಿಯನ್ ನಿರ್ಮಿತವಾಗಿವೆ, ಎಂಬ ಮಾಹಿತಿಯನ್ನು ಅಮೇರಿಕಾದ ‘ಸ್ಟಿಸ್ಮನ ಸೆಂಟರ್’ನ ವರದಿಯಲ್ಲಿ ಹೇಳಲಾಗಿದೆ. ನೌಕಾದಳದ ಶೇ. ೪೧ ರಷ್ಟು, ವಾಯುದಳದ ಎರಡು ಮೂರಂಶ ಸೈನಿಕರ ಉಪಕರಣಗಳು ರಶಿಯಾದಿಂದ ಆಮದು ಮಾಡಿಕೊಳ್ಳಲಾಗಿದೆ. ೨೦೧೪ ರಲ್ಲಿ ಶೇ. ೫೫ ಕ್ಕಿಂತಲೂ ಹೆಚ್ಚು ಉಪಕರಣಗಳು ರಶಿಯಾದಿಂದ ಆಮದು ಮಾಡಿಕೊಳ್ಳಲಾಗಿತ್ತು.

ಈ ಸಂಘಟನೆಯ ಏಶಿಯಾ ಹಾಗೂ ದಕ್ಷಿಣ ಏಶಿಯಾದ ಸಂಚಾಲಕರಾದ ಸಮೀರ ಲಲವಾನಿಯವರು, “ಈ ಎಲ್ಲ ಉಪಕರಣಗಳ ಆಯುಷ್ಯಗಳನ್ನು ನೋಡಿದರೆ ಈಗಲೂ ಭಾರತದ ರಶಿಯಾ ಮೇಲಿನ ಅವಲಂಬನೆ ಶಾಶ್ವತವಾಗಿರಲಿದೆ, ಎಂಬ ಚಿತ್ರಣ ಕಂಡು ಬರುತ್ತದೆ” ಎಂದು ಹೇಳಿದ್ದಾರೆ.