ಪಾಕಿಸ್ತಾನದಿಂದ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗೆ ಸಮನ್ಸ್

ನಿಯಂತ್ರಣ ರೇಖೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಕದನವಿರಾಮದ ಉಲ್ಲಂಘನೆ ಮಾಡುತ್ತಿವೆ ಎಂಬ ನೆವನವನ್ನಿಟ್ಟು ನಿಷೇಧವನ್ನು ನೋಂದಾಯಿಸಲು ಪಾಕಿಸ್ತಾನವು ಭಾರತೀಯ ರಾಯಭಾರಿ ಕಚೇರಿಯ ಹಿರಿಯ ರಾಜನೈತಿಕ ಅಧಿಕಾರಿಗೆ ಸೆಪ್ಟೆಂಬರ್ ೬ ರಂದು ಸಮನ್ಸ್ ಕಳುಹಿಸಿದೆ.

ನಾರ್ವೆ ದೇಶದಿಂದ ಕಟ್ಟರ ಮುಸಲ್ಮಾನರನ್ನು ಗಡಿಪಾರು ಮಾಡಿದ್ದರಿಂದ ಅಲ್ಲಿಯ ಅಪರಾಧದಲ್ಲಿ ಶೇ. ೩೧ ರಷ್ಟು ಇಳಿಕೆ

ನಾರ್ವೆಯ ಪ್ರಧಾನಿ ಎರ್ನಾ ಸೋಲಬರ್ಗ್ ಇವರು ಕಟ್ಟರ ಸಮೂಹದ ಸಂಪರ್ಕ ಹೊಂದಿರುವ ಮುಸಲ್ಮಾನರನ್ನು ನಾರ್ವೆಯಿಂದ ಗಡಿಪಾರು ಮಾಡುವ ಅಭಿಯಾನವನ್ನು ಜನವರಿ ೨೦೨೦ ರಿಂದ ಕೈಗೆತ್ತುಕೊಂಡಿದ್ದಾರೆ. ಇದರಿಂದ ನಾರ್ವೆಯಲ್ಲಿನ ಹಿಂಸಾತ್ಮಕ ಅಪರಾಧದಲ್ಲಿ ಶೇ. ೩೧ ರಷ್ಟು ಇಳಿಕೆಯಾಗಿದೆ. ಇನ್ನೊಂದೆಡೆ ತಥಾಕಥಿತ ಉದಾರವಾದಿಯವರು ಈ ಘಟನೆಯನ್ನು ಉಲ್ಲೇಖಿಸಿ ಖಂಡಿಸುತ್ತಿದ್ದಾರೆ.

ಮೊಹಮ್ಮದ ಪೈಗಂಬರ ಇವರ ವ್ಯಂಗ್ಯಚಿತ್ರವನ್ನು ಪುನಃ ಮುದ್ರಿಸಿದ ಫ್ರಾನ್ಸ್‌ನ ಮಾಸಿಕ ‘ಚಾರ್ಲಿ ಹೆಬ್ಡೊ’

ಫ್ರಾನ್ಸ್‌ನ ಮಾಸಿಕ ‘ಚಾರ್ಲಿ ಹೆಬ್ಡೊ’ ಮತ್ತೊಮ್ಮೆ ಮೊಹಮ್ಮದ ಪೈಗಂಬರರ ವ್ಯಂಗ್ಯಚಿತ್ರವನ್ನು ಪ್ರಕಾಶಿಸಿದೆ. ಇದೇ ವ್ಯಂಗ್ಯಚಿತ್ರದಿಂದಾಗಿ ೨೦೧೫ ರಲ್ಲಿ ‘ಚಾರ್ಲಿ ಹೆಬ್ಡೊ’ದ ಕಛೇರಿಯ ಮೇಲೆ ಭೀಕರ ಭಯೋತ್ಪಾದನಾ ದಾಳಿಯಾಗಿತ್ತು. ಇದರಲ್ಲಿ ಮೇಲಿನ ವ್ಯಂಗ್ಯಚಿತ್ರವನ್ನು ಬಿಡಿಸುವ ಚಿತ್ರಕಾರನೊಂದಿಗೆ ‘ಚಾರ್ಲಿ ಹೆಬ್ಡೊ’ದ ಕಛೇರಿಯಲ್ಲಿನ ೧೨ ಜನರು ಸಾವನ್ನಪ್ಪಿದ್ದರು.

ಪಾಕಿಸ್ತಾನದಲ್ಲಿನ ೪೫೩ ಭಾರತ ವಿರೋಧಿ ಪ್ರಸಾರ ಮಾಡುವ ಖಾತೆಗಳನ್ನು ನಿಲ್ಲಿಸಿದ ಫೇಸ್‌ಬುಕ್ !

ಭಾರತದ ವಿರುದ್ಧ ಸುಳ್ಳು ಮಾಹಿತಿಯನ್ನು ಹಬ್ಬಿಸಿ ಅಪಪ್ರಚಾರವನ್ನು ಮಾಡುವ ಪಾಕ್ ದಲ್ಲಿನ ಫೇಸ್‌ಬುಕ್‌ನ ೪೫೩ ಖಾತೆಗಳನ್ನು ಫೇಸ್‌ಬುಕ್ ಸಂಸ್ಥೆಯು ನಿಲ್ಲಿಸಿದೆ. ಇದರ ಹೊರತಾಗಿ ೧೦೩ ಫೇಸ್‌ಬುಕ್ ಪೇಜ್, ೭೮ ಗ್ರೂಪ್ ಹಾಗೂ ೧೦೭ ಇನ್‌ಸ್ಟಾಗ್ರಾಮ್ ಖಾತೆಗಳನ್ನು ನಿಲ್ಲಿಸಲಾಗಿದೆ.

ಅರುಣಾಚಲ ಪ್ರದೇಶ ಹಾಗೂ ಭೂತಾನ್ ಗಡಿಭಾಗದಲ್ಲಿನ ಹಳ್ಳಿಗಳನ್ನು ಖಾಲಿ ಮಾಡುತ್ತಿರುವ ಚೀನಾ !

ಚೀನಾವು ಭಾರತದೊಂದಿಗಿನ ಘರ್ಷಣೆಯ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶ ಹಾಗೂ ಭೂತಾನ ಗಡಿ ಭಾಗದ ಟಿಬೆಟಿ ನಾಗರಿಕರನ್ನು ಸ್ಥಳಾಂತರಿಸಲು ಆರಂಭಿಸಿದೆ. ಚೀನಾ ಸರಕಾರದ ದಿನಪತ್ರಿಕೆಯಾಗಿರುವ ‘ಗ್ಲೋಬಲ್ ಟೈಮ್ಸ್’ ನೀಡಿದ ವರದಿಗನುಸಾರ, ‘ಚೀನಾ ಭಾರತ ಹಾಗೂ ಭೂತಾನ ಗಡಿಭಾಗದ ಹತ್ತಿರವಿರುವ ೯೩ ಗ್ರಾಮಗಳಲ್ಲಿನ ಜನರನ್ನು ಗಡಿಯಿಂದ ದೂರವಿರುವ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಅಮೇರಿಕಾದ ವೈಟ್ ಹೌಸ್‌ನಲ್ಲಿನ ಕಾರ್ಯಕ್ರಮದಲ್ಲಿ ಭಾರತೀಯ ಮಹಿಳಾ ಕಂಪ್ಯೂಟರ್ ಇಂಜಿನಿಯರ್‌ನಿಂದ ಅಮೇರಿಕಾದ ಪೌರತ್ವದ ಪ್ರಮಾಣವಚನ ಸ್ವೀಕಾರ

ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರ ಉಪಸ್ಥಿತಿಯಲ್ಲಿ ವೈಟ್ ಹೌಸ್‌ನಲ್ಲಿ ನೆರವೇರಿದ ಒಂದು ಕಾರ್ಯಕ್ರಮದಲ್ಲಿ ಭಾರತೀಯ ಸಂಜಾತೆ ಹಾಗೂ ಕಂಪ್ಯೂಟರ್ ಇಂಜಿನಿಯರ್ ಆಗಿರುವ ಸುಧಾ ಸುಂದರಿ ನಾರಾಯಣನ್ ಇವರು ಅಮೇರಿಕಾದ ಪೌರತ್ವದ ಪ್ರಮಾಣವಚನವನ್ನು ಸ್ವೀಕರಿಸಿದರು. ಅಮೇರಿಕಾದ ರಾಷ್ಟ್ರಾಧ್ಯಕ್ಷರ ಉಪಸ್ಥಿತಿಯಲ್ಲಿ ಈ ರೀತಿಯ ಕಾರ್ಯಕ್ರಮ ನಡೆಯುವುದು ಅಪರೂಪದ ಘಟನೆಯಾಗಿದೆ

ಚೀನಾ ಹಾಗೂ ಪಾಕಿಸ್ತಾನ ಜೈವಿಕ ಅಸ್ತ್ರ ಅಭಿವೃದ್ಧಿ ಪಡಿಸುತ್ತಿದೆ ! – ಆಸ್ಟ್ರೇಲಿಯಾದ ಜಾಲತಾಣದ ಮಾಹಿತಿ

‘ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್’ (ಸಿಪಿಇಸಿ- ಚೀನಾ-ಪಾಕಿಸ್ತಾನ ಆರ್ಥಿಕ ಹೆದ್ದಾರಿ) ಇವರಿಂದ ಚೀನಾ ಹಾಗೂ ಪಾಕಿಸ್ತಾನ ಜೈವಿಕ ಅಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಕಳೆದ ೫ ವರ್ಷಗಳಿಂದ ಇದರ ಮೇಲೆ ಕೆಲಸ ನಡೆಯುತ್ತಿದೆ, ಎಂದು ಆಸ್ಟ್ರೇಲಿಯಾದ ಜಾಲತಾಣ ‘ಕ್ಲಾಕ್ಸೋನ್’ ಹೇಳಿದೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾದಿಂದ ಕಟ್ಟಲಾಗುತ್ತಿರುವ ಆಣೆಕಟ್ಟಿನ ವಿರುದ್ಧ ನಾಗರಿಕರಿಂದ ಪಂಜಿನ ಮೆರವಣಿಗೆ

ಒಂದು ಚೀನಾದ ಸಂಸ್ಥೆಯ ಸಹಾಯದಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೀಲಮ್-ಝೇಲಮ್ ನದಿಯ ಮೇಲೆ ಕಟ್ಟಲಾಗುತ್ತಿರುವ ಆಣೆಕಟ್ಟಿನ ವಿರುದ್ಧ ಆಗಸ್ಟ್ ೨೪ ರಂದು ರಾತ್ರಿ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಝಾಫ್ಫರಾಬಾದನಲ್ಲಿ ಸ್ಥಳೀಯರಿಂದ ರಸ್ತೆಗಿಳಿದು ಪಂಜು ಹಿಡಿದು ಮೆರವಣಿಗೆಯನ್ನು ಮಾಡಿದರು.

ಕೈಲಾಸ ಮಾನಸರೋವರ ಪ್ರದೇಶದಲ್ಲಿ ಚೀನಾದಿಂದ ಕ್ಷಿಪಣಿ ನೆಲೆಯ ನಿರ್ಮಾಣ

ಟಿಬೆಟ್‌ನಲ್ಲಿಯ ಮಾನಸರೋವರ ಪ್ರದೇಶದಲ್ಲಿ ಚೀನಾದಿಂದ ಭೂಮಿಯಿಂದ ಗಾಳಿಯಲ್ಲಿ ಹೊಡೆದುರುಳಿಸುವ ಕ್ಷಿಪಣಿ ನೆಲೆಯನ್ನು ನಿರ್ಮಿಸುವ ಕೆಲಸವನ್ನು ಮಾಡುತ್ತಿದೆ. ಉಪಗ್ರಹದ ಮೂಲಕ ತೆಗೆಯಲಾಗಿದ್ದ ಛಾಯಾಚಿತ್ರದ ವಿಶ್ಲೇಷಣೆಯಿಂದ ಈ ಮಾಹಿತಿ ಬಹಿರಂಗಗೊಂಡಿದೆ.

ಅಮೆರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಅಭ್ಯರ್ಥಿ ಜೊ ಬಾಯಡೆನ್ ಇವರಿಂದ ಜಗತ್ತಿನಾದ್ಯಂತ ಭಾರತೀಯರಿಗೆ ಶ್ರೀ ಗಣೇಶ ಚತುರ್ಥಿಯ ಶುಭಾಶಯ!

‘ಅಮೆರಿಕಾ, ಭಾರತ ಮತ್ತು ಜಗತ್ತಿನಾದ್ಯಂತ ಹಿಂದೂಗಳ ಉತ್ಸವ ಗಣೇಶ ಚತುರ್ಥಿಯನ್ನು ಆಚರಿಸುವ ಪ್ರತಿಯೊಬ್ಬರ ಸಕಲ ಸಮಸ್ಯೆಗಳು ನಿವಾರಣೆಯಾಗಬೇಕು ಮತ್ತು ಹೊಸ ಆರಂಭದತ್ತ ಮಾರ್ಗ ಕ್ರಮಿಸುವಂತಾಗಲಿ, ಎಂಬ ಶಬ್ದಗಳಲ್ಲಿ ಬಾಯಡೇನ ಇವರು ಶ್ರೀ ಗಣೇಶ ಚತುರ್ಥಿಯ ಶುಭಾಶಯಗಳನ್ನು ನೀಡಿದ್ದಾರೆ.