ಮೊಹಮ್ಮದ ಪೈಗಂಬರ ಇವರ ವ್ಯಂಗ್ಯಚಿತ್ರವನ್ನು ಪುನಃ ಮುದ್ರಿಸಿದ ಫ್ರಾನ್ಸ್‌ನ ಮಾಸಿಕ ‘ಚಾರ್ಲಿ ಹೆಬ್ಡೊ’

ಪ್ಯಾರಿಸ್ – ಫ್ರಾನ್ಸ್‌ನ ಮಾಸಿಕ ‘ಚಾರ್ಲಿ ಹೆಬ್ಡೊ’ ಮತ್ತೊಮ್ಮೆ ಮೊಹಮ್ಮದ ಪೈಗಂಬರರ ವ್ಯಂಗ್ಯಚಿತ್ರವನ್ನು ಪ್ರಕಾಶಿಸಿದೆ. ಇದೇ ವ್ಯಂಗ್ಯಚಿತ್ರದಿಂದಾಗಿ ೨೦೧೫ ರಲ್ಲಿ ‘ಚಾರ್ಲಿ ಹೆಬ್ಡೊ’ದ ಕಛೇರಿಯ ಮೇಲೆ ಭೀಕರ ಭಯೋತ್ಪಾದನಾ ದಾಳಿಯಾಗಿತ್ತು. ಇದರಲ್ಲಿ ಮೇಲಿನ ವ್ಯಂಗ್ಯಚಿತ್ರವನ್ನು ಬಿಡಿಸುವ ಚಿತ್ರಕಾರನೊಂದಿಗೆ ‘ಚಾರ್ಲಿ ಹೆಬ್ಡೊ’ದ ಕಛೇರಿಯಲ್ಲಿನ ೧೨ ಜನರು ಸಾವನ್ನಪ್ಪಿದ್ದರು.
ಫ್ರಾನ್ಸ್‌ನ ನ್ಯಾಯಾಲಯದಲ್ಲಿ ಈ ಭಯೋತ್ಪಾದನಾ ದಾಳಿಯ ಮೊಕದ್ದಮೆಯನ್ನು ಆರಂಭಿಸುವ ಹಿಂದಿನ ದಿನವೇ ಈ ಮಾಸಿಕವು ಈ ವ್ಯಂಗ್ಯಚಿತ್ರವನ್ನು ಮತ್ತೊಮ್ಮೆ ಪ್ರಕಾಶಿಸುವ ನಿರ್ಣಯವನ್ನು ತೆಗೆದುಕೊಂಡಿತು. ಈ ಪ್ರಕರಣದಲ್ಲಿ ೧೪ ಜನರ ವಿರುದ್ಧ ಖಟ್ಲೆ ನಡೆಯಲಿದೆ. ‘ಚಾರ್ಲಿ ಹೆಬ್ಡೊ’ ಪ್ರಕಾಶಿಸಿದ ವ್ಯಂಗ್ಯಚಿತ್ರದಲ್ಲಿ ಮಹಮ್ಮದ ಪೈಗಂಬರ ಇವರು ಪೇಟದ ಬದಲಾಗಿ ಬಾಂಬ್‌ನ್ನು ಧರಿಸಿರುವಂತೆ ತೋರಿಸಲಾಗಿದ್ದು ಅದಕ್ಕೆ ‘ಈ ಒಂದು ವ್ಯಂಗ್ಯಚಿತ್ರಕ್ಕಾಗಿ ಇಷ್ಟೆಲ್ಲಾ’, ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ವಾಚಕರು ನೀಡಿದ ಬೇಡಿಕೆಗನುಸಾರ ಈ ಛಾಯಾಚಿತ್ರವನ್ನು ಪ್ರಕಾಶಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಈ ಮಾಸಿಕದ ಸಂಪಾದಕರು ತಮ್ಮ ಸಂಪಾದಕೀಯ ಲೇಖನದಲ್ಲಿ ನೀಡಿದ್ದಾರೆ.

ನಮ್ಮಲ್ಲಿ ಪ್ರಸಾರಮಾಧ್ಯಮಗಳಿಗೆ ಅತ್ಯುನ್ನತ ಸ್ವಾತಂತ್ರ್ಯವಿದೆ ! – ಫ್ರಾನ್ಸ್‌ನ ರಾಷ್ಟ್ರಪತಿ

ಈ ಬಗ್ಗೆ ಫ್ರಾನ್ಸ್‌ನ ರಾಷ್ಟ್ರಪತಿ ಇಮ್ಯಾನುವಲ್ ಮ್ಯಾಕ್ರೊರವರು, ‘ಈ ಮಾಸಿಕವು ಪ್ರಕಟಿಸಿದ ವ್ಯಂಗ್ಯಚಿತ್ರದ ಬಗ್ಗೆ ನಾನು ಯಾವುದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಮಾಸಿಕದ ಸಂಪಾದಕೀಯ ಲೇಖನಗಳ ಮೇಲೆ ರಾಷ್ಟ್ರಪತಿಗಳು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವುದು ಯೋಗ್ಯವಲ್ಲ; ಏಕೆಂದರೆ ಫ್ರಾನ್ಸ್‌ನಲ್ಲಿ ಪ್ರಸಾರಮಾಧ್ಯಮಗಳಿಗೆ ಅತ್ಯುನ್ನತ ಸ್ವಾತಂತ್ರ್ಯವಿದೆ. ಆದ್ದರಿಂದ ನಾಗರಿಕರು ಪರಸ್ಪರರನ್ನು ಗೌರವಿಸಬೇಕು, ಅದೇರೀತಿ ದ್ವೇಷವನ್ನು ಹರಡಿಸುವ ಸಂವಾದಗಳಿಂದ ದೂರವಿರಬೇಕು” ಎಂದು ಹೇಳಿದರು.