ಅರುಣಾಚಲ ಪ್ರದೇಶ ಹಾಗೂ ಭೂತಾನ್ ಗಡಿಭಾಗದಲ್ಲಿನ ಹಳ್ಳಿಗಳನ್ನು ಖಾಲಿ ಮಾಡುತ್ತಿರುವ ಚೀನಾ !

ಚೀನಾಗೆ ಭಾರತದೊಂದಿಗೆ ಯುದ್ಧ ಮಾಡಲು ಉನ್ಮಾದದಲ್ಲಿದ್ದು ಅದಕ್ಕಾಗಿ ಅದು ಸಿದ್ಧತೆಯನ್ನು ಮಾಡುತ್ತಿದೆ. ಆದ್ದರಿಂದ ಭಾರತವೂ ಸಹ ಅದರ ಉನ್ಮಾದವನ್ನು ತಣಿಸಲು ಸಿದ್ಧತೆಯನ್ನು ತೋರಿಸಬೇಕು

ಬಿಜಿಂಗ್(ಚೀನಾ) – ಚೀನಾವು ಭಾರತದೊಂದಿಗಿನ ಘರ್ಷಣೆಯ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶ ಹಾಗೂ ಭೂತಾನ ಗಡಿ ಭಾಗದ ಟಿಬೆಟಿ ನಾಗರಿಕರನ್ನು ಸ್ಥಳಾಂತರಿಸಲು ಆರಂಭಿಸಿದೆ. ಚೀನಾ ಸರಕಾರದ ದಿನಪತ್ರಿಕೆಯಾಗಿರುವ ‘ಗ್ಲೋಬಲ್ ಟೈಮ್ಸ್’ ನೀಡಿದ ವರದಿಗನುಸಾರ, ‘ಚೀನಾ ಭಾರತ ಹಾಗೂ ಭೂತಾನ ಗಡಿಭಾಗದ ಹತ್ತಿರವಿರುವ ೯೩ ಗ್ರಾಮಗಳಲ್ಲಿನ ಜನರನ್ನು ಗಡಿಯಿಂದ ದೂರವಿರುವ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಈ ಗ್ರಾಮಸ್ಥರಿಗೆ ಹೊಸ ಮನೆಗಳನ್ನು ನೀಡಲಾಗಿದ್ದು ಅದರಲ್ಲಿ ವಿದ್ಯುತ್, ನೀರು ಹಾಗೂ ಇಂಟರನೆಟ್ ನಂತಹ ಸೌಲಭ್ಯಗಳನ್ನು ನೀಡಲಾಗಿದೆ.’ ಪ್ರತ್ಯಕ್ಷದಲ್ಲಿ ಈ ನಾಗರಿಕರನ್ನು ಸ್ಥಳಾಂತರಿಸಿದ ನಂತರ ಗಡಿಗೆ ಅಂಟಿಕೊಂಡ ಭಾಗದಲ್ಲಿ ಚೀನಾದಿಂದ ಭೂಮಿಯಿಂದ ಗಾಳಿಯಲ್ಲಿ ಹೊಡೆದುರುಳಿಸುವ ಕ್ಷಿಪಣಿಗಳನ್ನು ನೇಮಿಸಲಾಗುತ್ತಿದೆ.