ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾದಿಂದ ಕಟ್ಟಲಾಗುತ್ತಿರುವ ಆಣೆಕಟ್ಟಿನ ವಿರುದ್ಧ ನಾಗರಿಕರಿಂದ ಪಂಜಿನ ಮೆರವಣಿಗೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಅದು ಭಾರತದ ಭಾಗವಾಗಿರುವಾಗ ಅಲ್ಲಿ ಯಾವುದೇ ರೀತಿಯ ಕಾಮಗಾರಿಯನ್ನು ಪಾಕಿಸ್ತಾನ ಮಾಡುವಂತಿಲ್ಲ ಅಥವಾ ೩ ನೇ ದೇಶಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಭಾರತವು ತೀವ್ರವಾಗಿ ವಿರೋಧಿಸಿ ಈ ಕಾಮಗಾರಿಯನ್ನು ನಿಲ್ಲಿಸಬೇಕಿದೆ !

ಮುಝಾಫ್ಫರಾಬಾದ(ಪಾಕ್ ಆಕ್ರಮಿತ ಕಾಶ್ಮೀರ) – ಒಂದು ಚೀನಾದ ಸಂಸ್ಥೆಯ ಸಹಾಯದಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೀಲಮ್-ಝೇಲಮ್ ನದಿಯ ಮೇಲೆ ಕಟ್ಟಲಾಗುತ್ತಿರುವ ಆಣೆಕಟ್ಟಿನ ವಿರುದ್ಧ ಆಗಸ್ಟ್ ೨೪ ರಂದು ರಾತ್ರಿ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಝಾಫ್ಫರಾಬಾದನಲ್ಲಿ ಸ್ಥಳೀಯರಿಂದ ರಸ್ತೆಗಿಳಿದು ಪಂಜು ಹಿಡಿದು ಮೆರವಣಿಗೆಯನ್ನು ಮಾಡಿದರು. ಇದರಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಕೈಯಲ್ಲಿ ಪಂಜನ್ನು ಹಿಡಿದ ಜನರು, ‘ದರಿಯಾ ಬಚಾವೋ, ಮುಝಾಫ್ಫರಾಬಾದ ಬಚಾವೋ’ ಹಾಗೂ ‘ನೀಲಮ್-ಝೇಲಮ್ ಕೋ ಬಹನೆ ದೋ, ಹಮೆ ಜಿಂದಾ ರಹನೆ ದೋ’ ಈ ರೀತಿಯ ಘೋಷಣೆಯನ್ನು ಕೊಡುತ್ತಿದ್ದರು. ಈ ಪ್ರತಿಭಟನೆಯ ವಿಡಿಯೋ ಪ್ರಸಾರವಾಗಿದೆ.

ಪಾಕಿಸ್ತಾನ ಹಾಗೂ ಚೀನಾ ಸೇರಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೈಡ್ರೋಪವರ್ ಪ್ರೋಜೆಕ್ಟ್ ನಿರ್ಮಿಸುವ ಒಪ್ಪಂದವನ್ನು ಮಾಡಿಕೊಂಡಿದೆ. ‘ಆಜಾದ ಪತ್ತನ’ ಈ ಯೋಜನೆಯ ಹೆಸರಾಗಿದೆ. ಈ ಯೋಜನೆಯ ಅಂತರ್ಗತ ಚೀನಾದ ಕಂಪನಿ ಝೇಲಮ್ ಹಾಗೂ ನೀಲಮ್ ನದಿಯ ಮೇಲೆ ದೊಡ್ಡದಾದ ಆಣೆಕಟ್ಟನ್ನು ಕಟ್ಟಿ ೭೦೦ ಮೆಗಾವ್ಯಾಟ್ ವಿದ್ಯುತ್ತನ್ನು ನಿರ್ಮಿಸಲಿದೆ. ಈ ಯೋಜನೆಯ ಗುತ್ತಿಗೆಯನ್ನು ಚೀನಾದ ಕಂಪನಿಗೆ ನೀಡಿದೆ.

ಭಾರತದಿಂದ ಈ ಆಣೆಕಟ್ಟಿಗೆ ವಿರೋಧ

ಭಾರತವು ಈ ವಿವಾದಿತ ಭೂಭಾಗದ ಮೇಲೆ ಆಣೆಕಟ್ಟನ್ನು ಕಟ್ಟುವುದನ್ನು ವಿರೋಧಿಸಿದೆ. ಪಾಕ್ ಆಖ್ರಮಿತ ಕಾಶ್ಮೀರದಲ್ಲಿ ಸ್ಥಳೀಯ ನಾಗರಿಕರಿಕರೂ ಕೂಡಾ ಇದನ್ನು ವಿರೋಧಿಸಿದ್ದಾರೆ. ಈ ಸ್ಥಳದಲ್ಲಿ ಚೀನಾವು ಆಣೆಕಟ್ಟನ್ನು ಕಟ್ಟಿದ ನಂತರ ಅಲ್ಲಿಯ ಪ್ರದೇಶದ ಮೇಲೆ ಚೀನಾದ ಪ್ರಭಾವ ಹೆಚ್ಚಾಗಲಿದ್ದು ಸ್ಥಳೀಯರಿಗೆ ಇನ್ನೂ ಅಡಚಣೆಗಳು ನಿರ್ಮಾಣವಾಗಬಹುದು, ಎಂಬ ಆತಂಕ ಇಲ್ಲಿಯ ನಾಗರಿಕರಲ್ಲಿ ನಿರ್ಮಾಣವಾಗಿದೆ.

(Source : News Nation)