ಅಮೇರಿಕಾದ ವೈಟ್ ಹೌಸ್‌ನಲ್ಲಿನ ಕಾರ್ಯಕ್ರಮದಲ್ಲಿ ಭಾರತೀಯ ಮಹಿಳಾ ಕಂಪ್ಯೂಟರ್ ಇಂಜಿನಿಯರ್‌ನಿಂದ ಅಮೇರಿಕಾದ ಪೌರತ್ವದ ಪ್ರಮಾಣವಚನ ಸ್ವೀಕಾರ

ಅಮೇರಿಕನ್ ಪೌರತ್ವ ನೀಡುವ ಕಾರ್ಯಕ್ರಮದಲ್ಲಿ ಸುಧಾ ಸುಂದರಿ ನಾರಾಯಣನ್ (ಸೀರೆ ಉಟ್ಟುಕೊಂಡಿರುವ) – ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರ ಉಪಸ್ಥಿತಿ

ಅಮೇರಿಕನ್ ಪೌರತ್ವ ನೀಡುವ ಕಾರ್ಯಕ್ರಮದಲ್ಲಿ ಸುಧಾ ಸುಂದರಿ ನಾರಾಯಣನ್ (ಸೀರೆ ಉಟ್ಟುಕೊಂಡಿರುವ) – ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರ ಉಪಸ್ಥಿತಿ

ವಾಶಿಂಗ್‌ಟನ್ – ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರ ಉಪಸ್ಥಿತಿಯಲ್ಲಿ ವೈಟ್ ಹೌಸ್‌ನಲ್ಲಿ ನೆರವೇರಿದ ಒಂದು ಕಾರ್ಯಕ್ರಮದಲ್ಲಿ ಭಾರತೀಯ ಸಂಜಾತೆ ಹಾಗೂ ಕಂಪ್ಯೂಟರ್ ಇಂಜಿನಿಯರ್ ಆಗಿರುವ ಸುಧಾ ಸುಂದರಿ ನಾರಾಯಣನ್ ಇವರು ಅಮೇರಿಕಾದ ಪೌರತ್ವದ ಪ್ರಮಾಣವಚನವನ್ನು ಸ್ವೀಕರಿಸಿದರು. ಅಮೇರಿಕಾದ ರಾಷ್ಟ್ರಾಧ್ಯಕ್ಷರ ಉಪಸ್ಥಿತಿಯಲ್ಲಿ ಈ ರೀತಿಯ ಕಾರ್ಯಕ್ರಮ ನಡೆಯುವುದು ಅಪರೂಪದ ಘಟನೆಯಾಗಿದೆ ಎಂದು ಹೇಳಲಾಗುತ್ತಿದೆ.

ಭಾರತ, ಬೊಲಿವಿಯಾ, ಲೆಬನಾನ್, ಸೂಡಾನ್ ಹಾಗೂ ಘಾನಾ ಈ ೫ ದೇಶಗಳ ೫ ವಲಸಿಗರನ್ನು ವೈಟ್‌ಹೌಸ್‌ನಲ್ಲಿ ಸಾಲಾಗಿ ನಿಲ್ಲಿಸಲಾಗಿತ್ತು. ಅಲ್ಲಿ ಅವರಿಗೆ ಅವರ ಎಡಗೈಯಲ್ಲಿ ಅಮೇರಿಕಾದ ಧ್ವಜವನ್ನು ನೀಡಿ ಬಲಗೈಯನ್ನು ಮೇಲಕ್ಕೆ ಎತ್ತಲು ಹೇಳಿ ಅಮೇರಿಕಾದ ಗೃಹ ಸುರಕ್ಷಾ ವಿಭಾಗದ ಸಚಿವ ಚಾಡ ವುಲ್ಫ ಇವರು ನಿಷ್ಠೆಯ ಪ್ರಮಾಣವನ್ನು ಮಾಡಿಸಿದರು. ಈ ಸಮಯದಲ್ಲಿ ಟ್ರಂಪ್ ಇವರು ಎಲ್ಲರನ್ನೂ ಸ್ವಾಗತಿಸಿದರು. ಸುಧಾ ನಾರಾಯಣನ್ ಇವರ ಪತಿ ಹಾಗೂ ೨ ಮಕ್ಕಳೊಂದಿಗೆ ಕಳೆದ ೧೩ ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿದ್ದಾರೆ.