ಅಮೆರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಅಭ್ಯರ್ಥಿ ಜೊ ಬಾಯಡೆನ್ ಇವರಿಂದ ಜಗತ್ತಿನಾದ್ಯಂತ ಭಾರತೀಯರಿಗೆ ಶ್ರೀ ಗಣೇಶ ಚತುರ್ಥಿಯ ಶುಭಾಶಯ!

ಅಮೇರಿಕಾದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಹಿಂದೂಗಳ ಮತಗಳ ಮೇಲೆ ಕಣ್ಣಿಟ್ಟು ಬಾಯಡೇನ್ ಇವರು ಈ ಶುಭಾಶಯಗಳನ್ನು ನೀಡಿದ್ದಾರೆಂಬುದು ಖಚಿತ. ಆದುದರಿಂದ ಅಮೇರಿಕದ ಹಿಂದೂಗಳು ಸಹ ‘ಬಾಯಡೇನ ಇವರು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಕಥಿತ ಕಗ್ಗೊಲೆಯಾಗುತ್ತಿರುವ ಕೂಗನ್ನು ನಿಲ್ಲಿಸಬೇಕು, ಪಾಕ್‌ಗೆ ಸಹಾಯ ಮಾಡುವುದನ್ನು ನಿಲ್ಲಿಸಬೇಕು ಮತ್ತು ಅಮೇರಿಕದಲ್ಲಿನ ಹಿಂದೂಗಳ ರಕ್ಷಣೆಯಾಗಬೇಕು, ಎಂದು ಬಾಯಡೇನ ಇವರಿಗೆ ಒತ್ತಾಯಿಸಬೇಕು !

ಜೊ ಬಾಯಡೆನ್

ವಾಶಿಂಗಟನ್- ಅಮೆರಿಕದ ಡೆಮೊಕ್ರೇಟಿಕ್ ಪಕ್ಷದ ಪರವಾಗಿ ಅಲ್ಲಿಯ ರಾಷ್ಟ್ರಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಜೋ ಬಾಯಡೇನ ಇವರು ಅಮೆರಿಕದ ಭಾರತೀಯರಿಗೆ ಶ್ರೀ ಗಣೇಶ ಚತುರ್ಥಿಯ ಶುಭಾಶಯಗಳನ್ನು ನೀಡಿದರು.
‘ಅಮೆರಿಕಾ, ಭಾರತ ಮತ್ತು ಜಗತ್ತಿನಾದ್ಯಂತ ಹಿಂದೂಗಳ ಉತ್ಸವ ಗಣೇಶ ಚತುರ್ಥಿಯನ್ನು ಆಚರಿಸುವ ಪ್ರತಿಯೊಬ್ಬರ ಸಕಲ ಸಮಸ್ಯೆಗಳು ನಿವಾರಣೆಯಾಗಬೇಕು ಮತ್ತು ಹೊಸ ಆರಂಭದತ್ತ ಮಾರ್ಗ ಕ್ರಮಿಸುವಂತಾಗಲಿ, ಎಂಬ ಶಬ್ದಗಳಲ್ಲಿ ಬಾಯಡೇನ ಇವರು ಶ್ರೀ ಗಣೇಶ ಚತುರ್ಥಿಯ ಶುಭಾಶಯಗಳನ್ನು ನೀಡಿದ್ದಾರೆ. ಅದಲ್ಲದೇ ಡೆಮೊಕ್ರೇಟಿಕ್ ಪಕ್ಷದ ಪರವಾಗಿ ಅಮೇರಿಕದ ಉಪರಾಷ್ಟ್ರಾಧ್ಯಕ್ಷ ಹುದ್ದೆಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಇವರೂ ಸಹ ಭಾರತೀಯರಿಗೆ ಶ್ರೀ ಗಣೇಶ ಚತುರ್ಥಿಯ ಶುಭಾಶಯಗಳನ್ನು ನೀಡಿದ್ದಾರೆ. ಕಮಲಾ ಹ್ಯಾರಿಸ್ ಇವರು ಭಾರತೀಯ ಮೂಲದವರಾಗಿದ್ದಾರೆ. ಅಮೇರಿಕದಲ್ಲಿ ಈ ವರ್ಷದ ಅಂತ್ಯದಲ್ಲಿ ರಾಷ್ಟ್ರಾಧ್ಯಕ್ಷ ಹುದ್ದೆಯ ಚುನಾವಣೆಗಳು ನಡೆಯಲಿದ್ದು ಬಾಯಡೇನ ಇವರು ಸದ್ಯದ ರಾಷ್ಟ್ರಾಧ್ಯಕ್ಷ ಡೋನಾಲ್ಡ್ ಟ್ರಂಪ್ ಇವರ ವಿರುದ್ಧ ಹೋರಾಡಲಿದ್ದಾರೆ.