ಪಾಕಿಸ್ತಾನದಲ್ಲಿನ ೪೫೩ ಭಾರತ ವಿರೋಧಿ ಪ್ರಸಾರ ಮಾಡುವ ಖಾತೆಗಳನ್ನು ನಿಲ್ಲಿಸಿದ ಫೇಸ್‌ಬುಕ್ !

ಭಾರತವನ್ನು ವಿರೋಧಿಸುವ ಒಂದೇ ಒಂದು ಅವಕಾಶವನ್ನು ಬಿಡದ ಪಾಕ್‌ಗೆ ಈಗ ಹೆಚ್ಚು ಅವಕಾಶವನ್ನು ನೀಡದೇ ಅದನ್ನು ನಿರ್ನಾಮ ಮಾಡುವುದೇ ಯೋಗ್ಯವಾಗಿದೆ, ಎಂಬುದನ್ನು ಸರಕಾರವು ಈಗಲಾದರೂ ತಿಳಿದುಕೊಳ್ಳಬೇಕು !

ನವ ದೆಹಲಿ – ಭಾರತದ ವಿರುದ್ಧ ಸುಳ್ಳು ಮಾಹಿತಿಯನ್ನು ಹಬ್ಬಿಸಿ ಅಪಪ್ರಚಾರವನ್ನು ಮಾಡುವ ಪಾಕ್ ದಲ್ಲಿನ ಫೇಸ್‌ಬುಕ್‌ನ ೪೫೩ ಖಾತೆಗಳನ್ನು ಫೇಸ್‌ಬುಕ್ ಸಂಸ್ಥೆಯು ನಿಲ್ಲಿಸಿದೆ. ಇದರ ಹೊರತಾಗಿ ೧೦೩ ಫೇಸ್‌ಬುಕ್ ಪೇಜ್, ೭೮ ಗ್ರೂಪ್ ಹಾಗೂ ೧೦೭ ಇನ್‌ಸ್ಟಾಗ್ರಾಮ್ ಖಾತೆಗಳನ್ನು ನಿಲ್ಲಿಸಲಾಗಿದೆ. ಈ ಎಲ್ಲ ಖಾತೆಗಳನ್ನು ಸೇರಿಸಿ ೧೧ ಲಕ್ಷ ಜನರು ಸಂಪರ್ಕ ಹೊಂದಿದ್ದರು. ಈ ಖಾತೆಗಳಿಂದ ಪಾಕಿಸ್ತಾನದ ಗುಪ್ತಚರ ಇಲಾಖೆಯಾದ ಐಎಸ್‌ಐ ಹಾಗೂ ಪಾಕಿಸ್ತಾನದ ಶ್ಲಾಘನೆ ಹಾಗೂ ಭಾರತ, ಭಾಜಪ ಹಾಗೂ ಪ್ರಧಾನಿ ಮೋದಿಯವರನ್ನು ಟೀಕಿಸಲಾಗುತ್ತಿತ್ತು. ಇದಕ್ಕಾಗಿ ಉರ್ದು, ಹಿಂದಿ, ಆಂಗ್ಲ ಹಾಗೂ ಪಂಜಾಬಿ ಭಾಷೆಗಳನ್ನು ಉಪಯೋಗಿಸಲಾಗುತ್ತಿತ್ತು.