ಪಾಕಿಸ್ತಾನದಿಂದ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗೆ ಸಮನ್ಸ್

ಭಾರತೀಯ ಭದ್ರತಾ ಪಡೆಗಳು ಕದನವಿರಾಮ ಉಲ್ಲಂಘಿಸುತ್ತಿವೆಯೆಂದು ನುಡಿಮುತ್ತು !

ಕಳ್ಳನಿಗೊಂದು ಪಿಳ್ಳೆ ನೆವ ! ಸರಕಾರವು ಇಂತಹ ಕಪಟಿ ಪಾಕಿಸ್ತಾನದೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿತಗೊಳಿಸಿ ಅದು ನೆನಪಿನಲ್ಲಿಟ್ಟುಕೊಳ್ಳುವಂತೆ ಪಾಠ ಕಲಿಸಬೇಕು !

ನವ ದೆಹಲಿ – ನಿಯಂತ್ರಣ ರೇಖೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಕದನವಿರಾಮದ ಉಲ್ಲಂಘನೆ ಮಾಡುತ್ತಿವೆ ಎಂಬ ನೆವನವನ್ನಿಟ್ಟು ನಿಷೇಧವನ್ನು ನೋಂದಾಯಿಸಲು ಪಾಕಿಸ್ತಾನವು ಭಾರತೀಯ ರಾಯಭಾರಿ ಕಚೇರಿಯ ಹಿರಿಯ ರಾಜನೈತಿಕ ಅಧಿಕಾರಿಗೆ ಸೆಪ್ಟೆಂಬರ್ ೬ ರಂದು ಸಮನ್ಸ್ ಕಳುಹಿಸಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಿಂದ ನೀಡಿದ ಮನವಿಯಲ್ಲಿ ‘ನಿಯಂತ್ರಣ ರೇಖೆಯ ರಖಚಿಕರಿ ಪ್ರದೇಶದಲ್ಲಿ ಸೆಪ್ಟೆಂಬರ ೫ ರಂದು ಮಾಡಿದ ಗುಂಡು ಹಾರಾಟದಲ್ಲಿ ಓರ್ವ ನಾಗರಿಕನು ಗಂಭೀರವಾಗಿ ಗಾಯಗೊಂಡಿದ್ದಾನೆ’, ಎಂದು ಹೇಳಲಾಗಿದೆ. ‘ಭಾರತೀಯ ಭದ್ರತಾ ಪಡೆಯು ಫಿರಂಗಿ, ಸ್ನೈಪರ್ ರೈಫಲ್, ಸ್ವಯಂಚಾಲಿತ ಶಸ್ತ್ರಗಳ ಮೂಲಕ ನಿಯಂತ್ರಣ ರೇಖೆಯ ಜನವಸತಿ ಇರುವ ಪ್ರದೇಶಗಳನ್ನು ಸತತವಾಗಿ ಗುರಿಯಾಗಿಸುತ್ತಿದೆ’, ಎಂದೂ ಹೇಳಲಾಯಿತು. ಕದನವಿರಾಮ ಉಲ್ಲಂಘನೆಯ ಘಟನೆಯ ತನಿಖೆಯನ್ನು ಮಾಡುವುದು ಹಾಗೂ ನಿಯಂತ್ರಣ ರೇಖೆಯಲ್ಲಿ ಶಾಂತಿಯನ್ನು ಕಾಪಾಡುವುದು, ಅದಕ್ಕಾಗಿ ರಾಯಭಾರಿ ಕಚೇರಿಯ ಅಧಿಕಾರಿಗೆ ಸಮನ್ಸ್ ನೀಡಲಾಗಿದೆ ಎಂದು ಸಹ ಈ ಮನವಿಯಲ್ಲಿ ಹೇಳಿದೆ.