ಹಿಂದೂಗಳ ಪವಿತ್ರ ಧಾರ್ಮಿಕ ಸ್ಥಳದಲ್ಲಿ ಈ ರೀತಿಯ ಕ್ಷಿಪಣಿ ನೆಲೆಯನ್ನು ನಿರ್ಮಿಸಿ ಚೀನಾವು ಅಲ್ಲಿಯ ಪಾವಿತ್ರ್ಯವನ್ನು ಭಂಗ ಮಾಡುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಭಾರತ ಸರಕಾರವು ಚೀನಾವನ್ನು ವಿರೋಧಿಸಿ ಖಂಡಿಸಬೇಕು !
ನವ ದೆಹಲಿ – ಟಿಬೆಟ್‌ನಲ್ಲಿಯ ಮಾನಸರೋವರ ಪ್ರದೇಶದಲ್ಲಿ ಚೀನಾದಿಂದ ಭೂಮಿಯಿಂದ ಗಾಳಿಯಲ್ಲಿ ಹೊಡೆದುರುಳಿಸುವ ಕ್ಷಿಪಣಿ ನೆಲೆಯನ್ನು ನಿರ್ಮಿಸುವ ಕೆಲಸವನ್ನು ಮಾಡುತ್ತಿದೆ. ಉಪಗ್ರಹದ ಮೂಲಕ ತೆಗೆಯಲಾಗಿದ್ದ ಛಾಯಾಚಿತ್ರದ ವಿಶ್ಲೇಷಣೆಯಿಂದ ಈ ಮಾಹಿತಿ ಬಹಿರಂಗಗೊಂಡಿದೆ. ಚೀನಾವು ಇಲ್ಲಿ ‘ಎಚ್.ಕ್ಯೂ.-೯ ಸಾಮ್’ ಕ್ಷಿಪಣಿತಂತ್ರಾಂಶವನ್ನು ನೇಮಿಸುವ ಆಯೋಜನೆ ಇದೆ. ಕ್ಷಿಪಣಿ ವ್ಯವಸ್ಥೆಯೊಂದಿಗೆ ವಾಹನ ಆಧಾರಿತ ರಡಾರ್ ವ್ಯವಸ್ಥೆಯನ್ನೂ ಅಳವಡಿಸಲಾಗುವುದು. ‘ಹೆಚ್.ಕ್ಯೂ.-೯ ಸಾಮ್’ ಕ್ಷಿಪಣಿ ವ್ಯವಸ್ಥೆ ‘ಹೆಚ್.ಟಿ.-೨೩೩’ ರಡಾರ್ ಮೇಲೆ ಅವಲಂಬಿಸಿರುತ್ತದೆ. ಇದಲ್ಲದೇ ‘ಟೈಪ್ ೩೦೫ ಬಿ’, ‘ಟೈಪ್ ೧೨೦’, ‘ಟೈಪ್ ೩೦೫ಎ’. ‘ವೈ.ಎಲ್.ಸಿ.-೨೦’ ಹಾಗೂ ‘ಡಿ.ಡಬ್ಲು.ಎಲ್. -೦೦೨’ ಈ ರಡಾರ್ ಕೂಡ ಇರಲಿದೆ. ಈ ರಡಾರ‍್ಸ್ ಗುರಿಯನ್ನು ಹುಡುಕಿ ಅದನ್ನು ನಾಶ ಮಾಡುವ ಕ್ಷಮತೆ ಹೊಂದಿದೆ.