ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಇವರು ತಿರುಪತಿ ದೇವಸ್ಥಾನದಲ್ಲಿ ಭಗವಾನ ಶ್ರೀ ವೆಂಕಟೇಶ್ವರ ದರ್ಶನವನ್ನು ಪಡೆದರು !

ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಇವರು ಇಲ್ಲಿನ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಭಗವಾನ್ ವೆಂಕಟೇಶ್ವರನ ದರ್ಶನವನ್ನು ಪಡೆದರು. ಜೊತೆಗೆ ಅವರು ಭಗವಾನ ವೆಂಕಟೇಶ್ವರನ ಪೂಜೆ ಮಾಡಿದರು ಮತ್ತು ಏಕಾಂತ ಸೇವೆಯಲ್ಲಿಯೂ ಸಹ ಭಾಗವಹಿಸಿದರು.

ಭಗವಾನ್ ಶಿವನನ್ನು ಅವಮಾನಿಸುವಂತಹ ಆಕ್ಷೇಪಾರ್ಹ ಹೇಳಿಕೆಯ ವೀಡಿಯೊವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಅಪಲೋಡ್ ಮಾಡಿದ ಭಾಗ್ಯನಗರದ ಇಬ್ಬರು ಹಿಂದೂಗಳು !

ವಿವಾದದ ಹಿನ್ನೆಲೆಯಲ್ಲಿ ವೀಡಿಯೊವನ್ನು ಇನ್‍ಸ್ಟಾಗ್ರಾಮ್‍ನಿಂದ ತೆಗೆದುಹಾಕಲಾಗಿದೆ. ಆದರೆ, ಗೋಶಾಮಹಲ ಮತದಾರ ಕ್ಷೇತ್ರದ ಬಿಜೆಪಿ ಶಾಸಕ ಟಿ. ರಾಜಾಸಿಂಹ ಇವರು ದೇವತೆಗಳನ್ನು ಅಪಮಾನಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ನೆಲ್ಲೂರು (ಆಂಧ್ರಪ್ರದೇಶ)ನಲ್ಲಿ ಆಯುರ್ವೇದ ಔಷಧಿಯಿಂದ ೨ ದಿನಗಳಲ್ಲಿ ಗುಣಮುಖರಾದ ಕೊರೊನಾ ರೋಗಿಗಳು !

ಆಯುರ್ವೇದದಲ್ಲಿನ ಔಷಧಿಗಳನ್ನು ಈಗಾಗಲೇ ಕೊರೊನಾದ ವಿರುದ್ಧ ಅಭ್ಯಾಸ ಮಾಡಿ ಸರಿಯಾದ ರೀತಿಯಲ್ಲಿ ಬಳಸಿದ್ದರೆ, ಇಷ್ಟರೊಳಗೆ ದೇಶದಲ್ಲಾದ ಕೊರೊನಾದ ಪರಿಣಾಮವನ್ನು ಕಡಿಮೆಯಾಗಿ ಸಾವಿರಾರು ಜೀವಗಳನ್ನು ಉಳಿಸಬಹುದಿತ್ತು ಎಂದು ಹೇಳಿದರೆ ಅದರಲ್ಲಿ ಅತಿಶಯೋಕ್ತಿಯೇನಿಲ್ಲ !

ಆಂಧ್ರಪ್ರದೇಶದಲ್ಲಿ ಮತಾಂತರದ ವಿರುದ್ಧ ಧ್ವನಿ ಎತ್ತಿದ ಸಂಸದ ರಘುರಾಮ ಕೃಷ್ಣಮ್ ರಾಜು ಅವರಿಗೆ ಪೊಲೀಸ್ ಕಸ್ಟಡಿಯಲ್ಲಿ ಥಳಿತ !

ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿ ರಾಜ್ಯದಲ್ಲಿ ಇದನ್ನು ಬಿಟ್ಟು ಬೇರೆ ಘಟಿಸಬಹುದು ? ಇದನ್ನು ದೇಶದ ಹಿಂದುತ್ವನಿಷ್ಠರು ಸಂಘಟಿತರಾಗಿ ನ್ಯಾಯಸಮ್ಮತ ಮಾರ್ಗದಿಂದ ವಿರೋಧಿಸಬೇಕು !

ಆಂಧ್ರಪ್ರದೇಶದಲ್ಲಿ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡಿದ್ದರಿಂದ ೧೬ ಕೊರೋನಾ ರೋಗಿಗಳ ಸಾವು

ರಾಜ್ಯದ ಅನಂತಪುರ ಮತ್ತು ಕುರ್ನೂಲ್‍ನಲ್ಲಿ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿದ್ದರಿಂದ ಒಟ್ಟು ೧೬ ಕೊರೋನಾ ರೋಗಿಗಳು ಸಾವನ್ನಪ್ಪಿದ್ದಾರೆ. ಹನ್ನೊಂದು ಮಂದಿ ಅನಂತಪುರದ ಸರಕಾರಿ ಆಸ್ಪತ್ರೆಯಲ್ಲಿ ಮತ್ತು ಐದು ಮಂದಿ ಕುರ್ನೂಲ್‍ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ತಿರುಪತಿ ದೇವಸ್ಥಾನದಲ್ಲಿ ದಾನ ಮಾಡಿದ ಕೂದಲನ್ನು ಸಾಗಾಟ ಮಾಡುವ ಹಿಂದೆ ಆಡಳಿತಾರೂಢ ವೈ.ಎಸ್.ಆರ್. ಕಾಂಗ್ರೆಸ್ ನಾಯಕರ ಕೈವಾಡ !

ದೇವಸ್ಥಾನ ಸರಕಾರಿಕರಣದಿಂದಾಗುವ ದುಷ್ಪರಿಣಾಮದ ಇನ್ನೊಂದು ಮಗ್ಗಲು ! ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ವೈ.ಎಸ್.ಆರ್. ಕಾಂಗ್ರೆಸ್ ಇದು ಕ್ರೈಸ್ತರ ಪಕ್ಷವಾಗಿರುವುದರಿಂದ, ಇಂತಹ ಘಟನೆಗಳು ಹಿಂದೂ ದೇವಾಲಯದ ಸಂದರ್ಭದಲ್ಲಿ ನಡೆಯುತ್ತಿದ್ದರೂ, ಕೇಂದ್ರ ಸರಕಾರವು ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸುತ್ತದೆ ಎಂದು ಹಿಂದೂಗಳ ಅಪೇಕ್ಷೆಯಾಗಿದೆ !