ಆಂಧ್ರಪ್ರದೇಶದಲ್ಲಿ ಮತಾಂತರದ ವಿರುದ್ಧ ಧ್ವನಿ ಎತ್ತಿದ ಸಂಸದ ರಘುರಾಮ ಕೃಷ್ಣಮ್ ರಾಜು ಅವರಿಗೆ ಪೊಲೀಸ್ ಕಸ್ಟಡಿಯಲ್ಲಿ ಥಳಿತ !

* ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿ ರಾಜ್ಯದಲ್ಲಿ ಇದನ್ನು ಬಿಟ್ಟು ಬೇರೆ ಘಟಿಸಬಹುದು ? ಇದನ್ನು ದೇಶದ ಹಿಂದುತ್ವನಿಷ್ಠರು ಸಂಘಟಿತರಾಗಿ ನ್ಯಾಯಸಮ್ಮತ ಮಾರ್ಗದಿಂದ ವಿರೋಧಿಸಬೇಕು !

* ಆಡಳಿತಾರೂಢ ವೈ.ಎಸ್.ಆರ್. ಕಾಂಗ್ರೆಸ್‍ನ ರಾಜ್ಯದಲ್ಲಿ ಹಿಂದೂಗಳನ್ನು ಮತಾಂತರಿಸಲಾಗುತ್ತಿರುವ ಬಗ್ಗೆ ಧ್ವನಿ ಎತ್ತುತ್ತಿರುವ ಪಕ್ಷದ ಸಂಸದರೇ ಈ ರೀತಿ ಕಿರುಕುಳಕ್ಕೆ ಒಳಗಾಗುತ್ತಿದ್ದರೆ, ಅಲ್ಲಿನ ಸಾಮಾನ್ಯ ಹಿಂದೂತ್ವನಿಷ್ಠರ ಭವಿಷ್ಯದ ಬಗ್ಗೆ ಯೋಚಿಸದಿರುವುದು ಉತ್ತಮ !

ಅಮರಾವತಿ (ಆಂಧ್ರಪ್ರದೇಶ) – ಆಡಳಿತಾರೂಢ ವೈ.ಎಸ್.ಆರ್. ಕಾಂಗ್ರೆಸ್ ಬಂಡಾಯ ಸಂಸದ ರಘುರಾಮ ಕೃಷ್ಣಮ್ ರಾಜು ಅವರನ್ನು ಬಂಧಿಸಿದ ನಂತರ ಪೊಲೀಸ್ ಕಸ್ಟಡಿಯಲ್ಲಿ ಥಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ರಾಜು ಅವರನ್ನು ದೇಶದ್ರೋಹದ ಆರೋಪದ ಅಡಿಯಲ್ಲಿ ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಪೊಲೀಸರು ಕಸ್ಟಡಿಯಲ್ಲಿ ಥರ್ಡ್ ಡಿಗ್ರಿಯನ್ನು ಬಳಸಿದ್ದಾರೆ ಎಂದು ಅವರ ವಕೀಲರು ಆರೋಪಿಸಿದರು. ಇದರಿಂದಾಗಿ ಅವರಿಗೆ ಸರಿಯಾಗಿ ನಡೆಯಲು ಆಗುತ್ತಿಲ್ಲ. ಕೆಲವು ತಿಂಗಳ ಹಿಂದೆ ಬೈಪಾಸ್ ಶಸ್ತ್ರಚಿಕಿತ್ಸೆಗೆ ಅವರು ಒಳಗಾಗಿದ್ದರು. ಆದ್ದರಿಂದ ಅವರ ವೈದ್ಯಕೀಯ ಪರೀಕ್ಷೆಯನ್ನು ನಡೆಸುವ ಅವಶ್ಯಕತೆಯಿದೆ. ರಾಜುರವರು ಜಾತಿ ಮತ್ತು ಧರ್ಮಗಳ ನಡುವೆ ದ್ವೇಷವನ್ನುಂಟು ಮಾಡುವ ಹೇಳಿಕೆ ನೀಡಿದ್ದರಿಂದ ಅವರನ್ನು ರಾಜ್ಯದ ಗುಪ್ತಚರ ವಿಭಾಗವು ಬಂಧಿಸಿತ್ತು.

ಕ್ರೈಸ್ತ ಮಿಷನರಿಗಳ ವಿರುದ್ಧ ಧ್ವನಿ ಎತ್ತುವ ರಘುರಾಮ ಕೃಷ್ಣಮ್ ರಾಜು !

೧. ಕೃಷ್ಣಮ್ ರಾಜು ಅವರು ಆಂಧ್ರಪ್ರದೇಶದಲ್ಲಿ ಮತಾಂತರ ಮಾಡುವ ಕ್ರೈಸ್ತ ಮಿಷನರಿಗಳ ವಿರುದ್ಧ ಸತತವಾಗಿ ಧ್ವನಿ ಎತ್ತುತ್ತಿದ್ದಾರೆ. ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯು ದೇವಾಲಯದ ಆಭರಣಗಳನ್ನು ಹರಾಜು ಮಾಡಲು ನಿರ್ಧರಿಸಿತ್ತು, ಆಗ ರಾಜು ಅವರು ಅದನ್ನು ವಿರೋಧಿಸಿದ್ದರು. ಮರಳು ಮಾರಾಟಕ್ಕೆ ಸಂಬಂಧಿಸಿದಂತೆ ದೇವಾಲಯ ಆಡಳಿತದ ಭ್ರಷ್ಟಾಚಾರದ ವಿರುದ್ಧವೂ ಅವರು ಧ್ವನಿ ಎತ್ತಿದ್ದರು. ಆದ್ದರಿಂದ ಪಕ್ಷದ ಮುಖಂಡರೇ ಅವರನ್ನು ವಿರೋಧಿಸಿದ್ದರು.

೨. ಆಂಧ್ರಪ್ರದೇಶದಲ್ಲಿ ಕ್ರೈಸ್ತರ ಜನಸಂಖ್ಯೆ ಶೇಕಡಾ ೨.೫ ರಷ್ಟು ಇದೆ ಅಧಿಕೃತವಾಗಿ ಹೇಳುತ್ತಿದ್ದರೂ, ಪ್ರತ್ಯಕ್ಷವಾಗಿ ಅದು ಶೇ. ೨೫ ರಷ್ಟಿದೆ.

. ಕ್ರೈಸ್ತರ ವಿರುದ್ಧ ಮಾತನಾಡಿದ್ದಕ್ಕಾಗಿ ರಾಜು ಅವರ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಮ್ನನ್ನು ಕೊಲ್ಲುವ ಸಾಧ್ಯತೆಯಿದೆ (ಜೀವ ಬೆದರಿಕೆಯಿದೆ) ಎಂದು ಆರೋಪಿಸಿ ರಾಜುಅವರು ತಮಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದರು.