ಆಂಧ್ರಪ್ರದೇಶದಲ್ಲಿ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡಿದ್ದರಿಂದ ೧೬ ಕೊರೋನಾ ರೋಗಿಗಳ ಸಾವು

ತಿರುಪತಿ (ಆಂಧ್ರಪ್ರದೇಶ) – ರಾಜ್ಯದ ಅನಂತಪುರ ಮತ್ತು ಕುರ್ನೂಲ್‍ನಲ್ಲಿ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡಿದ್ದರಿಂದ ಒಟ್ಟು ೧೬ ಕೊರೋನಾ ರೋಗಿಗಳು ಸಾವನ್ನಪ್ಪಿದ್ದಾರೆ. ಹನ್ನೊಂದು ಮಂದಿ ಅನಂತಪುರದ ಸರಕಾರಿ ಆಸ್ಪತ್ರೆಯಲ್ಲಿ ಮತ್ತು ಐದು ಮಂದಿ ಕುರ್ನೂಲ್‍ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹಠಾತ್ ಸರಬರಾಜು ಸ್ಥಗಿತಗೊಂಡಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.