ಭಗವಾನ್ ಶಿವನನ್ನು ಅವಮಾನಿಸುವಂತಹ ಆಕ್ಷೇಪಾರ್ಹ ಹೇಳಿಕೆಯ ವೀಡಿಯೊವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಅಪಲೋಡ್ ಮಾಡಿದ ಭಾಗ್ಯನಗರದ ಇಬ್ಬರು ಹಿಂದೂಗಳು !

ವಿರೋಧದ ನಂತರ ವೀಡಿಯೊವನ್ನು ತೆಗೆಯಲಾಗಿದೆ !

ಶಾಸಕ ಟಿ. ರಾಜಾ ಸಿಂಗ್ ಇವರಿಂದ ಪೊಲೀಸರಲ್ಲಿ ದೂರು !

(ಎಡದಿಂದ ಚಿತ್ತೀನ್ ಮಟ್ಟಾ ಮತ್ತು ಕೃತಿಕಾ ಗೌರಾ)

ಭಾಗ್ಯನಗರ (ತೆಲಂಗಾಣಾ) – ಇಲ್ಲಿಯ ಕೃತಿಕಾ ಗೌರಾ ಮತ್ತು ಚಿತ್ತೀನ್ ಮಟ್ಟಾ ಅವರು ಇನ್‍ಸ್ಟಾಗ್ರಾಮ್ ನಲ್ಲಿ ಪ್ರಸಾರ ಮಾಡಿದ ವಿಡಿಯೋದಲ್ಲಿ ಹಿಂದೂ ದೇವತೆಗಳನ್ನು ಅಶ್ಲೀಲ ಭಾಷೆಯಲ್ಲಿ ಅವಮಾನಿಸಿದ್ದಾರೆ. ಇವರಿಬ್ಬರು ಅವರ ವಿಡಿಯೋದಲ್ಲಿ ‘ಶಿವನು ತಮ್ಮ ಜನನಾಂಗಗಳನ್ನು ಕತ್ತರಿಸಿದನು’ ಎಂದು ಬರೆದಿದ್ದಾರೆ. ವಿವಾದದ ಹಿನ್ನೆಲೆಯಲ್ಲಿ ವೀಡಿಯೊವನ್ನು ಇನ್‍ಸ್ಟಾಗ್ರಾಮ್‍ನಿಂದ ತೆಗೆದುಹಾಕಲಾಗಿದೆ. ಆದರೆ, ಗೋಶಾಮಹಲ ಮತದಾರ ಕ್ಷೇತ್ರದ ಬಿಜೆಪಿ ಶಾಸಕ ಟಿ. ರಾಜಾಸಿಂಹ ಇವರು ದೇವತೆಗಳನ್ನು ಅಪಮಾನಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

 

ಮೇಲಿನ ವೀಡಿಯೊ ಬಿಡುಗಡೆ ಮಾಡಿರುವುದು ಯಾರ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶದಿಂದಲ್ಲ. ಮಾಹಿತಿಗಾಗಿ ಈ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ. – ಸಂಪಾದಕ