ತಿರುಪತಿ ದೇವಸ್ಥಾನದಲ್ಲಿ ದಾನ ಮಾಡಿದ ಕೂದಲನ್ನು ಸಾಗಾಟ ಮಾಡುವ ಹಿಂದೆ ಆಡಳಿತಾರೂಢ ವೈ.ಎಸ್.ಆರ್. ಕಾಂಗ್ರೆಸ್ ನಾಯಕರ ಕೈವಾಡ !

ತೆಲುಗು ದೇಶಮ್ ಪಕ್ಷದ ಮುಖಂಡ ಅಯನ್ನಾ ಪತ್ರುದು ಇವರ ಆರೋಪ !

ದೇವಸ್ಥಾನ ಸರಕಾರಿಕರಣದಿಂದಾಗುವ ದುಷ್ಪರಿಣಾಮದ ಇನ್ನೊಂದು ಮಗ್ಗಲು ! ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ವೈ.ಎಸ್.ಆರ್. ಕಾಂಗ್ರೆಸ್ ಇದು ಕ್ರೈಸ್ತರ ಪಕ್ಷವಾಗಿರುವುದರಿಂದ, ಇಂತಹ ಘಟನೆಗಳು ಹಿಂದೂ ದೇವಾಲಯದ ಸಂದರ್ಭದಲ್ಲಿ ನಡೆಯುತ್ತಿದ್ದರೂ, ಕೇಂದ್ರ ಸರಕಾರವು ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸುತ್ತದೆ ಎಂದು ಹಿಂದೂಗಳ ಅಪೇಕ್ಷೆಯಾಗಿದೆ !

ಶ್ರೀ. ಅಯ್ಯನಾ ಪತ್ರುದು

ಅಮರಾವತಿ (ಆಂಧ್ರಪ್ರದೇಶ) – ತಿರುಪತಿ ದೇವಸ್ಥಾನದಲ್ಲಿ ಭಕ್ತರು ನೀಡುವ ಕೂದಲನ್ನು ಚೀನಾ, ಥೈಲ್ಯಾಂಡ್ ಮತ್ತು ಮ್ಯಾನ್ಮಾರ್ ಈ ದೇಶಗಳಿಗೆ ಕಳ್ಳಸಾಗಣೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದರ ಹಿಂದೆ ವೈ.ಎಸ್.ಆರ್. ಕಾಂಗ್ರೇಸ್‍ನ ಅನೇಕ ದೊಡ್ಡ ಮುಖಂಡರ ಕೈವಾಡ ಇದೆ ಎಂದು ರಾಜ್ಯದ ಮಾಜಿ ಸಚಿವ ಮತ್ತು ತೆಲುಗು ದೇಶಂ ಪಕ್ಷದ ಮುಖಂಡ ಅಯ್ಯನಾ ಪತ್ರುದು ಎಂದು ಆರೋಪಿಸಿದ್ದಾರೆ. ಮಿಜೋರಾಂ-ಮ್ಯಾನ್ಮಾರ್ ಗಡಿಯಲ್ಲಿ ನಿಯುಕ್ತ ಅಸ್ಸಾಂ ರೈಫಲ್ಸ್ ಪಡೆಗಳು ಇತ್ತೀಚೆಗೆ ೨ ಕೋಟಿ ರೂಪಾಯಿಯ ಮನುಷ್ಯರ ಕೂದಲುಗಳನ್ನು ಜಪ್ತಿ ಮಾಡಿತ್ತು.

ಅಯ್ಯನ್ನಾ ಪತ್ರುದು ಅವರು ತಮ್ಮ ಮಾತನ್ನು ಮುಂದುವರೆಸುತ್ತಾ ಹೀಗೆಂದಿದ್ದರು,

೧. ವೈ.ಎಸ್.ಆರ್. ಕಾಂಗ್ರೆಸ್ ನಾಯಕರು ಮರಳು, ಸಿಮೆಂಟ್ ಮತ್ತು ಮದ್ಯದ ಜೊತೆಗೆ ಕೂದಲನ್ನು ಕಳ್ಳಸಾಗಣೆ ಮಾಡುತ್ತಿದ್ದು ಅವರ ಮಾಫಿಯಾ ಗ್ಯಾಂಗ್ ಬಹಿರಂಗಗೊಂಡಿದೆ. ತಿರುಪತಿ ದೇವಸ್ಥಾನದಿಂದ ಈ ಕೂದಲುಗಳನ್ನು ಮೊದಲು ಮ್ಯಾನ್ಮಾರ್‍ಗೆ ಕಳುಹಿಸಲಾಗುತ್ತದೆ. ಹೆಚ್ಚಿನ ಪ್ರಕ್ರಿಯೆಗಾಗಿ ಅವುಗಳನ್ನು ಥೈಲ್ಯಾಂಡ್ ಮತ್ತು ಚೀನಾಗೆ ಕಳುಹಿಸಲಾಗುತ್ತದೆ. ಈ ಕೂದಲನ್ನು ‘ವಿಗ್’ ತಯಾರಿಸಲು ಬಳಸಲಾಗುತ್ತದೆ ಮತ್ತು ಜಗತ್ತಿನಾದ್ಯಂತ ವ್ಯಾಪಾರ ಮಾಡಲಾಗುತ್ತದೆ. ಜಗನಮೋಹನ ರೆಡ್ಡಿ ಅವರ ನೇತೃತ್ವದಲ್ಲಿ ಸರಕಾರ ಈ ಇಡೀ ವಿಷಯದ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಕೂದಲು ಮಾಫಿಯಾ ಗ್ಯಾಂಗ್ ಅನ್ನು ನಿಯಂತ್ರಿಸಲು ಸರಕಾರ ಏಕೆ ವಿಫಲವಾಗುತ್ತಿದೆ ?

. ಭಕ್ತರು ದಾನ ಮಾಡಿದ ಕೂದಲುಗಳ ಕಳ್ಳ ಸಾಗಣೆಗೆ ಸಹಾಯ ಮಾಡುವ ಮೂಲಕ ವೈ.ಎಸ್.ಆರ್. ಕಾಂಗ್ರೆಸ್ ನಾಯಕರು ಹಿಂದೂಗಳ ಭಾವನೆಗಳನ್ನು ನೋಯಿಸುವ ಕೆಲಸ ಮಾಡಿದ್ದಾರೆ. ಜಗತ್ತಿನಾದ್ಯಂತದ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ದೇವರ ಮೇಲಿನ ಶ್ರದ್ಧೆಯಿಂದ ಅವರು ತಮ್ಮ ಕೂದಲನ್ನು ದಾನ ಮಾಡುತ್ತಾರೆ; ಆದರೆ ಆಡಳಿತಾರೂಢ ಪಕ್ಷದ ಮುಖಂಡರು ದೇವಾಲಯದ ಚಿತ್ರಣವನ್ನು ಕೆಡಿಸುವ ಕೆಲಸ ಮಾಡುತ್ತಿದ್ದಾರೆ.

ತಿರುಪತಿ ದೇವಾಲಯ ಟ್ರಸ್ಟ್ ಈ ಆರೋಪಗಳನ್ನು ನಿರಾಕರಿಸಿದೆ !

ಕೂದಲು ಕಳ್ಳಸಾಗಣೆ ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಹೇಳಿದೆ. ತಿರುಪತಿ ದೇವಾಲಯ ಟ್ರಸ್ಟ್ ಅಧಿಕಾರಿ ಎ.ವಿ. ಧರ್ಮರೆಡ್ಡಿಯವರು, ತಿರುಪತಿ ದೇವಸ್ಥಾನವು ಭಕ್ತರು ದಾನ ಮಾಡಿದ ಕೂದಲಿನ ಸಂಗ್ರಹ, ಸಂಸ್ಕರಣೆ, ನಿರ್ವಹಣೆ ಮತ್ತು ಸಾಗಣೆಗೆ ಸರಿಯಾದ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಸಿದ್ಧಪಡಿಸಿದೆ. ಇದರಲ್ಲಿ ಯಾವುದೇ ಅಯೋಗ್ಯ ಕೃತಿಯ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.