೭. ಮರವು(ಹಲಗೆ) ಮೂಲಭೂತ ತತ್ತ್ವ ಹೇಗೆ ?
ಫೆಂಗ್‌ಶೂಯಿಯಲ್ಲಿ ಮರದ ಹಲಗೆಯನ್ನು ೫ ತತ್ತ್ವ ಗಳಲ್ಲಿ ಒಂದು ಮೂಲಭೂತ ತತ್ತ್ವವೆಂದು ನಂಬಲಾಗಿದೆ. ‘ಮರವು (ಹಲಗೆಯು) ಮೂಲಭೂತ ತತ್ತ್ವವು ಹೇಗಾಗಲು ಸಾಧ್ಯ ?’, ಮಣ್ಣು, ನೀರು ಮತ್ತು ಅಗ್ನಿ ಇವುಗಳು ಮೂಲಭೂತ ತತ್ತ್ವಗಳಾಗಿವೆ. ಹಲಗೆ ತಯಾರಿಸಲು ಮೂಲದಲ್ಲಿ ಮರ ಬೇಕು. ಈ ಮರವು ಬೆಳೆಯಲು ಬೀಜ ಬೇಕು. ಅದರಿಂದ ಮುಂದೆ ಚಿಗುರು ಮೊಳಕೆಯೊಡೆದು ನಂತರ ಅದರ ಮರವಾಗುತ್ತದೆ, ಅಂದರೆ ಹಲಗೆ ಸಿದ್ಧವಾಗುತ್ತದೆ. ಮಣ್ಣು ಯಾವುದರಿಂದಲೂ ಸಿದ್ಧವಾಗುವುದಿಲ್ಲ, ಅದು ಅಸ್ತಿತ್ವದಲ್ಲಿಯೇ ಇದೆ. ನೀರು ಸಹ ಮೊದಲಿನಿಂದಲೂ ಇದೆ; ಆದರೆ ಕಟ್ಟಿಗೆ ಹಾಗಲ್ಲ. ಮರ ಇಲ್ಲದಿದ್ದರೆ, ಕಟ್ಟಿಗೆ ಸಿಗುವುದಿಲ್ಲ ಮತ್ತು ಬೀಜಾಂಕುರವಿಲ್ಲದ ಮರವಿಲ್ಲ. ಇನ್ನೊಬ್ಬರ ಅಸ್ತಿತ್ವದಲ್ಲಿ ಅವಲಂಬಿಸಿರುವಂತಹದ್ದು ಮೂಲಭೂತ ತತ್ತ್ವವಾಗಲು ಸಾಧ್ಯವೇ ಇಲ್ಲ; ಆದರೆ ಚೀನಿ ತತ್ತ್ವಜ್ಞಾನಿಯಾದ ‘ಕನ್ಫ್ಯೂಶಿಯಸ್’ ಇವನು ತನ್ನ ಕಲ್ಪನೆಯಂತೆ ಮೂಲಭೂತ ತತ್ತ್ವಗಳನ್ನು ಹೇಳಿದ್ದಾನೆ ಮತ್ತು ಅವುಗಳು ಅಂದಿನಿಂದ ಜಾರಿಗೆ ಬಂದಿವೆ.
೮. ಕೆಲವು ರಾಜರು ತಮ್ಮ ಬೌದ್ಧಿಕ ಸಾಮರ್ಥ್ಯಗಳಿಗೆ ಅನುಸಾರವಾಗಿ ಮಾಡಿರುವುದು, ಅದರಲ್ಲಿ ಯಾವುದೇ ನಿಗದಿತ ತತ್ತ್ವಗಳು ಇಲ್ಲದಿರುವುದು
ಕ್ರಿಸ್ತಶಕ ೬೭೨ ಕ್ಕಿಂತ ಮೊದಲು ಕಾವೂ ಎಂಬವನು ರಾಜ್ಯಸರಕಾರದಲ್ಲಿ ಮತ್ತು ನಂತರ ರಾಜಾ ವಾನ್ ಹಾಗೂ ರಾಜಕುಮಾರ ಟಾನ್ ಇವರು ತಮ್ಮ ಬೌದ್ಧಿಕ ಸಾಮರ್ಥ್ಯಗಳಿಗೆ ಅನುಗುಣವಾಗಿ ವಿವಿಧ ಅರ್ಥಗಳನ್ನು ನೀಡಿದರು. ಅದೇ ರೀತಿ ನಂತರ ೮ ರೀತಿಯ ರೇಖಾಂಕಿತ ಆಕೃತಿಗಳನ್ನು ಸಿದ್ಧಪಡಿಸಿದರು. ನಂತರ ಅವು ಅರವತ್ನಾಲುಗಳಾದವು ಮತ್ತು ಅವುಗಳನ್ನು ವಿವಿಧ ರೀತಿಯಲ್ಲಿ ಅರ್ಥೈಸಲು ಆರಂಭವಾಯಿತು. ಅದರ ಹಿಂದೆ ಯಾವುದೇ ಸ್ಥಿರ ತತ್ತ್ವವಿಲ್ಲ. ಈ ಆಕೃತಿಗಳನ್ನು ಯಾರು ಯಾವಾಗ ವಿಸ್ತರಿಸಿದ್ದಾರೆ, ಎಂಬುದರ ಸುಳಿವು ಸಿಗಲಿಲ್ಲ. ‘೬೪ ಏಕೆ ? ೧೨೮ ಏಕೆ ಬೇಡ ?’, ಎಂಬುದಕ್ಕೂ ಉತ್ತರವಿಲ್ಲ.
೯. ಪ್ರಸ್ತುತ ಎಲ್ಲೆಡೆ ಕಾಣಿಸುತ್ತಿರುವ ಚೀನಿ ವಸ್ತುಗಳು
೯ ಅ. ಪ್ರಾರಂಭದಲ್ಲಿ ೭ ರೀತಿಯ ವಸ್ತುಗಳಿದ್ದು ಈಗ ಅದರಲ್ಲಿ ಹೆಚ್ಚಳವಾಗಿರುವುದು : ೧೯೬೦ ರಿಂದ ೮೦ ರ ಕಾಲಾವಧಿಯಲ್ಲಿ ಪರಿಹಾರವೆಂದು ಸಿಗುತ್ತಿದ್ದ ವಿವಿಧ ಚೀನಿ ವಸ್ತುಗಳಲ್ಲಿ ಕೇವಲ ೭ ಪ್ರಕಾರಗಳಿದ್ದವು; ಆದರೆ ಆ ವಸ್ತುಗಳ ಹೆಚ್ಚಳದೊಂದಿಗೆ ಬೆಲೆಗಳಲ್ಲಿಯೂ ಹೆಚ್ಚಳವಾಯಿತು, ಉದಾ. ಮೊದಲು ಪೊಳ್ಳು ಹಿತ್ತಾಳೆ ಕೊಳವೆಗಳ ವಿಂಡ್‌ಚೈಮ್ ಇತ್ತು. ಈಗ ಅದರಲ್ಲಿ ಪ್ರತಿಯೊಬ್ಬರೂ ವಿವಿಧ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ೯ ಟೊಳ್ಳು ಕೊಳವೆಗಳು, ೭ ದಪ್ಪ ಕೊಳವೆಗಳು, ೫ ದಪ್ಪ ಕೊಳವೆಗಳು ಮತ್ತು ೪ ಪೊಳ್ಳು ಕೊಳವೆಗಳು, ಕೆಳಗೆ ನೇತಾಡುವ ಲೋಲಕ ಅಥವಾ ದುಂಡಗಿರುವ ತಟ್ಟೆ ಇತ್ಯಾದಿಗಳು ಅನೇಕ ಪ್ರಕಾರದ ವಿಂಡ್‌ಚೈಮ್ ಸಿಗುತ್ತವೆ. ಕೆಲವುದರಲ್ಲಿ ಹಿತ್ತಾಳೆಯ ತಂತಿ, ಕೆಲವುಗಳಲ್ಲಿ ಕೆಂಪು ದಾರ, ಇನ್ನು ಕೆಲವುಗಳಲ್ಲಿ ಕೆಂಪು ಮತ್ತು ಹಳದಿ ದಾರ ಇತ್ಯಾದಿಗಳಿರುತ್ತವೆ.
೯ ಆ. ‘ಕಪ್ಪೆಯನ್ನು ಎಲ್ಲಿ ಇಡಬೇಕು ?’, ಎಂಬುದರ ಬಗ್ಗೆಯೂ ತಿಳಿಯದಿರುವುದು : ಕಪ್ಪೆಯನ್ನು ಎಲ್ಲಿಡಬೇಕು ?’, ಎಂಬ ಬಗ್ಗೆಯೂ ಗೊತ್ತಿಲ್ಲ. ಕೆಲವರು, ‘ಬಾಗಿಲ ಮುಂದೆ ಇಡಬೇಕು, ಎನ್ನುತ್ತ್ತಾರೆ, ಕೆಲವರು, ‘ಸಣ್ಣ ಟೇಬಲ್ ಮೇಲೆ ಇಡಬೇಕು’, ಎಂದು ಹೇಳುತ್ತಾರೆ, ಕೆಲವರು ‘ಮೂಲೆಯಲ್ಲಿಟ್ಟರೆ ಆ ಕಪ್ಪೆಯು ಬಾಗಿಲಿನಿಂದ ‘ಹಣ ಬರುತ್ತದೆಯೋ ಅಥವಾ ಇಲ್ಲ ಎಂದು ನೋಡಬಹುದಂತೆ !’ ಛೆ ! ಇದೆಂತಹ ಸಲಹೆ ! ಕೆಲವರು, ‘ಹಗಲಿನಲ್ಲಿ ಬಾಗಿಲ ಮುಂದೆ ಮುಖ ಮಾಡಿ ಇಡಬೇಕು ಮತ್ತು ರಾತ್ರಿ ಅದರ ಮುಖ ಮನೆಯ ಒಳಗೆ ಮಾಡಿ ಇಡಬೇಕು. ಎಂದು ಹೇಳುತ್ತಾರೆ. ೯ ಕಪ್ಪೆಗಳನ್ನು ಇಟ್ಟರೆ ಒಳ್ಳೆಯದಂತೆ.’ ಒಬ್ಬರು ಮನೆಯಲ್ಲಿ ಮುಂಗುಸಿಯನ್ನಿಡಲು ಹೇಳಿದ್ದಾರೆ. ಬಿಳಿ ಬಣ್ಣದ ಹುಲಿಯನ್ನಿಡಬೇಕು, ಅಂದರೆ ಅದು ನಿಮಗೆ ಧೈರ್ಯವನ್ನು ನೀಡುತ್ತದೆ ಎಂದು ಹೇಳುತ್ತಾರೆ. ‘ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಬೇಡಿ, ಅದು ಕೆಟ್ಟದಾಗಿದೆ. ಕೇವಲ ೬೦ ವರ್ಷದ ನಂತರದ ವೃದ್ಧರ ಹುಟ್ಟುಹಬ್ಬವನ್ನು ಆಚರಿಸಬೇಕು’, ಎಂದು ಫೆಂಗ್‌ಶೂಯಿ ತಜ್ಞರು ಹೇಳುತ್ತಾರೆ. ೧೦ ನೇ ಶತಮಾನದಲ್ಲಿ ಲುಯಿಹೈ ಎಂಬ ಓರ್ವ ಮಂತ್ರಿಯು ೩ ಕಾಲಿನ ಕಪ್ಪೆಯ ‘ಟೂಮ್’ಅನ್ನು ಚಿತ್ರಿಸಿದನು; ಏಕೆಂದರೆ ಅದು ಪ್ರತ್ಯಕ್ಷ ಆಕಾಶದಿಂದ ಬಿದ್ದಿರುವುದೆಂದು ಹೇಳಲಾಗಿದೆ.
೯ ಇ. ಪುರುಷರು ಮೂಲೆಯಲ್ಲಿ ಕೆಂಪು ಕೊಕ್ಕಿನ ಕೋಳಿ ಯನ್ನಿಡಬೇಕು ಮತ್ತು ಮಹಿಳೆಯರು, ತಮ್ಮ ಕೋಣೆಯ ಮೂಲೆಯಲ್ಲಿ ಹುಂಜವನ್ನಿಡಬೇಕು.
೯ ಈ. ಹಾನ್ ರಾಜಕಾರಣಿಯು ಮುದ್ರಿಸಿದ ನಾಣ್ಯಗಳನ್ನು ಕೊರಳಿನಲ್ಲಿ ಕಟ್ಟಲು ಹೇಳುವುದು : ಕ್ರಿಸ್ತ ಪೂರ್ವ ೨೦೬ ನೇ ವರ್ಷದಲ್ಲಿ ಹಾನ್ ರಾಜಕಾರಣಿಯು ಟಂಕಿಸಿದ ನಾಣ್ಯಗಳಲ್ಲಿ, ೯ ನಾಣ್ಯಗಳನ್ನು ಕೊರಳಲ್ಲಿ ಕಟ್ಟಿದರೆ ತುಂಬಾ ಸಂಪತ್ತು ಸಿಗುತ್ತದೆ, ಎಂದು ಹೇಳಲಾಗುತ್ತದೆ. ಮೇಲಿನ ಎಲ್ಲ ಪ್ರಕಾರಗಳಿಗೆ ಇಂದು ಈ ವಿದ್ಯಾವಂತರು ಮತ್ತು ಮೇಲ್ಮಧ್ಯಮ ವರ್ಗದವರಿಗೆ, ಜಾಹೀರಾತುಗಳಿಂದ ಮನ್ನಣೆ ದೊರಕುತ್ತದೆ. ನಿಜವಾಗಿಯೂ ಏನು ನಡೆಯುತ್ತಿದೆ ? ಎಂಬುದನ್ನು ಅವರೇ ತಿಳಿದುಕೊಳ್ಳಲಿ; ಆದರೆ ಹಣ ಖರ್ಚು ಮಾಡಿ ವಸ್ತುಗಳನ್ನು ಖರೀದಿಸುವುದು ನಡೆದಿದೆ. ಹೀಗೆ ಚೀನಿ ವಾಸ್ತುಶಾಸ್ತ್ರದ ಹೆಸರಿನಲ್ಲಿ ಅನೇಕ ಪ್ರಕಾರಗಳÀÄ ಇತ್ತೀಚೆಗೆ ನೋಡಲು ಸಿಗುತ್ತಿವೆ.
೧೦. ಭಾರತೀಯ ಪದ್ಧತಿಯ ಶುಭಚಿಹ್ನೆಗಳು, ಪ್ರಾಣಿಗಳು ಮತ್ತು ರೀತಿನೀತಿಗಳ ಸಾರಾಸಗಟಾಗಿ ಉಪಯೋಗ !
ಇತ್ತೀಚಿನ ಪುಸ್ತಕಗಳಲ್ಲಿ, ಚೀನಿ ವಾಸ್ತುಶಾಸ್ತ್ರದ ಹೆಸರಿನಲ್ಲಿ ಭಾರತೀಯ ಪದ್ಧತಿಯ ಶುಭಚಿಹ್ನೆಗಳು, ಪ್ರಾಣಿಗಳು ಮತ್ತು ರೀತಿನೀತಿಗಳನ್ನು ಉಪಯೋಗಿಸುತ್ತಿರುವುದು ಕಂಡು ಬರುತ್ತಿದೆ. ಭಾರತೀಯ ವಾಸ್ತುಶಾಸ್ತ್ರದಲ್ಲಿ ಸಾವಿರಾರು ವರ್ಷಗಳ ಹಿಂದೆ ಬರೆದಿರುವಂತೆ, ‘ಯಾವುದು ಕಣ್ಣಿಗೆ ಒಳ್ಳೆಯದೆನಿಸುತ್ತದೆಯೋ, ಅದನ್ನು ಮನೆಯಲ್ಲಿಡಬೇಕು. ಯುದ್ಧ ನಡೆಯುವ ದೃಶ್ಯ ಮತ್ತು ಉಗ್ರ ಪ್ರಾಣಿಗಳ ಚಿತ್ರಗಳು ಇತ್ಯಾದಿಗಳನ್ನು ಹಚ್ಚಬಾರದು. ಇದೇ ವಿಷಯ ಇತ್ತೀಚಿನ ಫೆಂಗ್‌ಶೂಯಿ ಪುಸ್ತಕಗಳಲ್ಲಿ ಕಂಡುಬರುತ್ತಿದೆ. ಇತ್ತೀಚಿನ ಪುಸ್ತಕಗಳಲ್ಲಿ, ‘ಹಸುವಿನ ಚಿತ್ರ ಒಳ್ಳೆಯದು’, ಎಂದು ಸ್ಪಷ್ಟವಾಗಿ ಬರೆಯಲಾಗಿದೆ.
ಭಾರತೀಯ ವಾಸ್ತುಶಾಸ್ತ್ರದಲ್ಲಿ ಹೇಳಿರುವುದನ್ನು, ಆಗ ಯಾರೂ ಕೇಳಲಿಲ್ಲ. ಚಿಕ್ಕ ಮಕ್ಕಳ ಕೊರಳಿನಲ್ಲಿ ಕಪ್ಪು ದಾರವನ್ನು ಮಂತ್ರಿಸಿ ಅಥವಾ ಯಾವುದಾದರೊಂದು ದೇವತೆಯ ಪದಕ ವನ್ನು ಕಟ್ಟಿ ಹಾಕಿಕೊಳ್ಳಬೇಕು; ಎಂದು ಹೇಳಲಾಗುತ್ತಿತ್ತು. ಅದು ನಮ್ಮ ಜನರು ಕೇಳುವುದಿಲ್ಲ. ಅದರ ಬಗ್ಗೆ ಚೇಷ್ಟೆ ಮಾಡುತ್ತಾರೆ; ಆದರೆ ಈಗ ಅವರು ಚೀನಿ ನಾಣ್ಯಗಳನ್ನು ದಾರದಲ್ಲಿ ಕಟ್ಟಿ ಚಿಕ್ಕ ಮಕ್ಕಳ ಕೊರಳಿನಲ್ಲಿ ಹಾಕಲು ಸಿದ್ಧರಾಗುತ್ತಾರೆ.
೧೧. ಭಾರತೀಯ ವಾಸ್ತುಶಾಸ್ತ್ರವೇ ಶ್ರೇಷ್ಠವಾಗಿದೆ
೧೧ ಅ. ತುಲನಾತ್ಮಕವಾಗಿ ಭಾರತೀಯ ವಾಸ್ತುಶಾಸ್ತ್ರ ಶ್ರೇಷ್ಠವಾಗಿರುವುದು : ತುಲನಾತ್ಮಕ ದೃಷ್ಟಿಯಲ್ಲಿ ಈ ಎರಡೂ ಶಾಸ್ತ್ರಗಳ ಅಧ್ಯಯನ ಮಾಡಿದಾಗ ಕೊನೆಗೆ ‘ಭಾರತೀಯ ವಾಸ್ತುಶಾಸ್ತ್ರವೇ ಎಲ್ಲಕ್ಕಿಂತ ಶ್ರೇಷ್ಠವಾಗಿದೆ’, ಎಂಬುದು ಕಂಡುಬಂದಿತು. ಸಾವಿರಾರು ವರ್ಷಗಳ ಹಿಂದೆ ಯಾವ ನಿಯಮ ಗಳನ್ನು ಭಾರತೀಯ ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆಯೋ, ಅದನ್ನೇ ಇಂದಿಗೂ ಎಲ್ಲೆಡೆ ಅನ್ವಯಿಸುತ್ತದೆ ಮತ್ತು ಮುಂದೆ ಭವಿಷ್ಯದಲ್ಲಿಯೂ ಅದೇ ಅಸ್ವಿತ್ವದಲ್ಲಿರುವುದು. ಆ ನಿಯಮಗಳು ಶಾಶ್ವತವಾಗಿವೆ, ಚಿರಂತನವಾಗಿವೆ; ಏಕೆಂದರೆ ಅದು ಜ್ಞಾನವಾಗಿದೆ. ಪೃಥ್ವಿಯ ಪ್ರತಿಯೊಬ್ಬ ಮನುಷ್ಯನಿಗೆ ಅದು ಅನ್ವಯಿಸು ತ್ತದೆ. ಯಾವುದೇ ರೀತಿಯ ಮನೆಯಲ್ಲಿ ಅದು ಅನ್ವಯಿಸುತ್ತದೆ. ಯಾವುದೇ ವರ್ಷದಲ್ಲಿ ಅದೇ ನಿಯಮಗಳು ಯಥಾವತ್ತಾಗಿ ಅನ್ವಯಿಸುವುದು. ವರ್ಷಗನುಗುಣವಾಗಿ ಮನೆಯ ರಚನೆ ಬದಲಾಯಿಸುವ ಅಗತ್ಯವಿಲ್ಲ. ‘ಮನೆಯ ಬಾಗಿಲಿನಂತೆ ಫರ್ನಿಚರ್, ಬಣ್ಣ ಮತ್ತು ರಚನೆ ಯನ್ನು ಬದಲಾಯಿಸಬೇಕಾಗುವುದು’, ಎಂದೇನಿಲ್ಲ. ಮನೆಯಲ್ಲಿ ಎಷ್ಟೇ ಜನರಿದ್ದರೂ ಅದೇ ನಿಯಮವಿರುತ್ತದೆ.ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯ ಜನ್ಮದಿನಾಂಕದ ಪ್ರಕಾರ ಮನೆಯಲ್ಲಿನ ಕೋಣೆಗಳ ರಚನೆಯನ್ನು ಸತತವಾಗಿ ಬದಲಾಯಿಸುವ ಅಗತ್ಯವಿಲ್ಲ.
೧೧ ಆ. ವಾಸ್ತುಶಾಸ್ತ್ರದಲ್ಲಿನ ನಿಯಮಗಳಿಗನುಸಾರ ಮನೆಯನ್ನು ಕಟ್ಟಿದರೆ ಅದರ ಲಾಭವಾಗುವುದು : ವಾಸ್ತುಶಾಸ್ತ್ರದ ನಿಯಮ ಗಳಿಗನುಸಾರ ಹೊಸ ಮನೆಯನ್ನು ಕಟ್ಟಿದರೆ, ನಿರಂತರವಾಗಿ ಆನಂದವೇ ಸಿಗುವುದು. ಹೆಚ್ಚೆಚ್ಚು ಆನಂದ, ಆರೋಗ್ಯ, ನೆಮ್ಮದಿ ಸಮೃದ್ಧಿಯನ್ನು ಪಡೆಯುವುದಿದ್ದರೆ, ವಿವಿಧ ರೀತಿಗಳಿಂದ ನಾವು ಮನೆಯನ್ನು ಒಳ್ಳೆಯದಾಗಿ ಅಲಂಕರಿಸಬಹುದು; ಆದರೆ ಏನು ಮಾಡದಿದ್ದರೂ ಯಾವ ಹಾನಿಯೂ ಆಗುವುದಿಲ್ಲ. ಇಷ್ಟೇ ಅಲ್ಲ, ಸದ್ಯ ನಾವಿರುವ ಜಾಗದಲ್ಲಿಯೂ ಹೆಚ್ಚುಕಡಿಮೆ ರಚನೆಯನ್ನು ಬದಲಾಯಿಸಿದರೆ, ಒಳ್ಳೆಯ ಫಲ ಸಿಗುತ್ತದೆ. ‘ಬಹಳಷ್ಟು ಕೆಡವಬೇಕಾಗುತ್ತದೆ, ಖರ್ಚು ಮಾಡಬೇಕಾಗುತ್ತದೆ’, ಎಂಬ ತಪ್ಪುಕಲ್ಪನೆ ಯನ್ನು ಹಬ್ಬಿಸಲಾಗಿದೆ. ಯಾವ ಶಾಸ್ತ್ರದಲ್ಲಿ ಈಶ್ವರನಿಗೆ ಸ್ಥಾನವಿಲ್ಲವೋ, ಆ ಚೀನಿ ವಾಸ್ತುಶಾಸ್ತ್ರ ಒಳ್ಳೆಯದೋ ಅಥವಾ ನಮ್ಮ ಭಾರತೀಯ ವಾಸ್ತುಶಾಸ್ತ್ರ ಒಳ್ಳೆಯದೋ ? ಎಂಬುದನ್ನು ಪ್ರತಿಯೊಬ್ಬರು ನಿರ್ಧರಿಸಬೇಕು. ‘ಭಾರತೀಯ ವಾಸ್ತುಶಾಸ್ತ್ರದಲ್ಲಿ ಮೊದಲಿಗೆ ದೇವಸ್ಥಾನ, ನಂತರ ಉಳಿದ ರಚನೆಗಳಿರುತ್ತವೆ. ಯಾವುದೇ ಭಾರತೀಯ ಮನುಷ್ಯನು ಎಲ್ಲ ವಿಷಯವನ್ನು ಸರಿಯಾಗಿ ಓದಿದ ನಂತರ ಮತ್ತು ತಿಳಿದುಕೊಂಡ ನಂತರ ಖಂಡಿತವಾಗಿಯೂ ಭಾರತೀಯ ವಾಸ್ತುಶಾಸ್ತ್ರ ಒಳ್ಳೆಯದು ಮತ್ತು ಅತ್ಯುತ್ತಮವೇ ಆಗಿದೆ’, ಎಂದು ಹೇಳಬಹುದು. – ನ್ಯಾಯವಾದಿ ಅರವಿಂದ ವಝೆ (ಆಧಾರ : ‘ಆಧ್ಯಾತ್ಮಿಕ ಓಂ ಚೈತನ್ಯ’, ಮೇ ೨೦೦೪)
ಹಿಂದಿನ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ – https://sanatanprabhat.org/kannada/98514.html