೧. ‘ಫೇಂಗಶುಯೀ’ಯಲ್ಲಿ ಸತತವಾಗಿ ಬೇರೆ ಬೇರೆ ಪ್ರಯೋಗಗಳನ್ನು ಮಾಡಬೇಕಾಗುತ್ತದೆ
೧ ಅ. ಪ್ರತಿ ಎರಡು ವರ್ಷಕ್ಕೊಮ್ಮೆ ಬದಲಾವಣೆ ಮಾಡಲು ಹೇಳಲಾಗುತ್ತದೆ : ‘ಫೇಂಗಶುಯೀ’ (ವಾಸ್ತುಶಾಸ್ತ್ರ) ಯಲ್ಲಿ ನಿಶ್ಚಿತ ಸ್ವರೂಪದ ನಿಯಮ ಅಥವಾ ನಿಶ್ಚಿತ ಸ್ವರೂಪದ ಉತ್ತರಗಳಿಲ್ಲ, ಹಾಗೆಯೇ ಶಾಶ್ವತ ಸ್ವರೂಪದ ನಿರ್ಣಾಯಕ ರಚನೆಯಿಲ್ಲ. ಪ್ರತಿಯೊಬ್ಬ ವ್ಯಕ್ತಿ, ಕುಟುಂಬ, ಮನೆ, ವರ್ಷ, ಕ್ರಮಾಂಕ ಇವುಗಳ ಪ್ರಕಾರ ಎಲ್ಲವೂ ಸತತವಾಗಿ ಬದಲಾಗುವ ವಾಸ್ತುರಚನೆ ಇರುತ್ತದೆ. ಈ ವರ್ಷ ಮಾಡಿದ ವಾಸ್ತುರಚನೆಯ ಲಾಭವು ೨ ವರ್ಷಗಳ ನಂತರ ಸಿಗುವುದಿಲ್ಲ, ಅಂದರೆ ೨ ವರ್ಷಗಳ ನಂತರ ಮತ್ತೆ ವಾಸ್ತುರಚನೆಯಲ್ಲಿ ಬದಲಾವಣೆಯನ್ನು ಮಾಡಬೇಕಾಗುತ್ತದೆ. ಅಂದರೆ ಚಿತ್ರ, ಫರ್ನಿಚರ, ಕನ್ನಡಿ, ಡೆಕೊರೆಶನ್, ಬಾಗಿಲು, ಪಾರ್ಟಿಶನ್ಸ್ ಇತ್ಯಾದಿಗಳಲ್ಲಿ ಪುನಃ ಬದಲಾವಣೆಯನ್ನು ಮಾಡಬೇಕಾಗುತ್ತದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಎಲ್ಲವನ್ನು ಬದಲಾಯಿಸಬೇಕಾಗಿದ್ದರೆ, ಇದೆಂತಹ ಶಾಸ್ತ್ರ ! ಮತ್ತ್ತು ‘ಮನೆಯ ಎಲ್ಲರಿಗೂ ಒಂದೇ ರೀತಿಯ ಲಾಭ ಸಿಗುತ್ತದೆ’ ಎಂದೂ ಇಲ್ಲ. ಸತತವಾಗಿ ಪ್ರಯೋಗಗಳನ್ನು ಮಾಡಬೇಕಾಗುತ್ತದೆ.
೧ ಆ. ಸತತವಾಗಿ ಬದಲಾವಣೆಗಳನ್ನು ಮಾಡಿಯೂ ಯಾವುದೇ ಲಾಭವಾಗದಿದ್ದರೆ, ಮತ್ತೆ ಮೊದಲಿನಂತೆ ರಚನೆಯನ್ನು ಮಾಡಲು ಹೇಳುತ್ತಾರೆ : ಚೀನಿ ವಾಸ್ತುಶಾಸ್ತ್ರದಂತೆ ಬದಲಾವಣೆಯನ್ನು ಮಾಡಿರಿ. ಅದರಿಂದ ಏನೂ ವ್ಯತ್ಯಾಸ ಕಂಡುಬರದಿದ್ದರೆ, ೩ ವಾರಗಳ ನಂತರ ಬೇರೆ ರೀತಿ ರಚನೆಯನ್ನು ಮಾಡಿ. ಈ ರಚನೆಯಿಂದ ಏನಾದರೂ ಕೆಟ್ಟ ಅನುಭವ ಬಂದರೆ ಮತ್ತೆ ಮೊದಲಿ ನಂತೆಯೇ ರಚನೆಯನ್ನು ಮಾಡಿ. ನಂತರ ೩ ವಾರ ತಡೆಯಿರಿ. ಏನೂ ವ್ಯತ್ಯಾಸ ಕಂಡುಬರದಿದ್ದರೆ ಮತ್ತೆ ರಚನೆಯನ್ನು ಮಾಡಿ, ಮೊದಲಿಗಿಂತ ಯಾವುದೇ ವ್ಯತ್ಯಾಸ ಕಂಡು ಬರದಿದ್ದರೆ, ನಿಮ್ಮ ಮನೆಯಲ್ಲಿ ಮೊದಲಿದ್ದಂತೆಯೇ ರಚನೆ ಮಾಡಿ ಸುಖವಾಗಿರಿ. ಈ ಶಾಸ್ತ್ರದಲ್ಲಿ ಏನೇನೊ ಉಪದೇಶಗಳನ್ನು ನೀಡಿದ್ದಾರೆ.
೨. ಭಾರತೀಯ ವಾಸ್ತುಶಾಸ್ತ್ರದಲ್ಲಿ ನಿಶ್ಚಿತ ನಿಯಮಗಳಿವೆ
ಭಾರತೀಯ ವಾಸ್ತುಶಾಸ್ತ್ರದಲ್ಲಿ ನಿಶ್ಚಿತ ನಿಯಮಗಳಿವೆ. ಈ ನಿಯಮಗಳು ಯಾವುದೇ ವ್ಯಕ್ತಿಗೆ, ಕುಟುಂಬಕ್ಕೆ ಮತ್ತು ಮನೆಗೆ ಸಮವಾಗಿ ಅನ್ವಯಿಸುತ್ತವೆ. ಪುನಃ ಪುನಃ ರಚನೆಯಲ್ಲಿ ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ. ‘ಒಳ್ಳೆಯ ಅಥವಾ ಕೆÀಟ್ಟ ಪರಿಣಾಮಗಳು ಯಾವುದರಿಂದ ಆಗುತ್ತವೆ ?’, ಇದನ್ನು ಸಹ ಸ್ಪಷ್ಟವಾಗಿ ಹೇಳಲಾಗಿದೆ. ಖರ್ಚು ಮಾಡುವುದಿದ್ದರೆ ಒಂದೇ ಬಾರಿ ಮಾಡಿ. ಪ್ರತಿ ೨ ವರ್ಷಕ್ಕೊಮ್ಮೆ ಖರ್ಚು ಮಾಡುವ ಅವಶ್ಯಕತೆ ಇಲ್ಲ. ಭಾರತೀಯ ವಾಸ್ತುಶಾಸ್ತ್ರದ ನಿಯಮಗಳಂತೆ ವಾಸ್ತುವಿನ ರಚನೆಯನ್ನು ಮಾಡಿದರೆ ಲಾಭ ಆಗುವುದು, ಹಾನಿ ಮಾತ್ರ ನಿಶ್ಚಿತವಾಗಿಯೂ ೧೦೦ಕ್ಕೆ ೧೦೦ ರಷ್ಟು ಆಗುವುದಿಲ್ಲ.
೩. ಚೀನಿ ವಾಸ್ತುಶಾಸ್ತ್ರದಲ್ಲಿ ಅವರು ತಯಾರಿಸಿದ ಬೇರೆ ಬೇರೆ ವಸ್ತುಗಳ ಮಾರಾಟ ಮಾಡಲಾಗುತ್ತದೆ
ಚಿತ್ರವಿಚಿತ್ರ ವಸ್ತುಗಳನ್ನು ಮಾರುವುದೇ ಫೇಂಗಶುಯೀಯ ಮುಖ್ಯ ಕೆಲಸವಾಗಿದೆ. ಚೀನಿ ಜನರಲ್ಲಿ ತಮ್ಮನ್ನು ವಾಸ್ತುಶಾಸ್ತ್ರದ ತಜ್ಞರೆಂದು ಹೇಳಿಕೊಳ್ಳುವವರಿದ್ದಾರೆ, ಅವರು ಯಾವಾಗಲೂ ಬೇರೆ ಬೇರೆ ವಸ್ತುಗಳನ್ನು ಬಳಸಲು ಹೇಳುತ್ತಾರೆ ಮತ್ತು ಆ ವಸ್ತುಗಳು ಅವರಲ್ಲಿ ಮಾತ್ರ ಇರುತ್ತವೆ. ಆ ವಸ್ತುಗಳ ಮಾರಾಟವೇ, ಫೇಂಗಶುಯೀಯ ಒಂದು ಮುಖ್ಯ ಉದ್ಯೋಗವಾಗಿದೆ. ಖರೀದಿದಾರರು ಅವುಗಳನ್ನು ಖರೀದಿಸಬೇಕೆಂದು ಅವರನ್ನು ಆಕರ್ಷಿಸಲು ಅಥವಾ ಅವರ ಮನವೊಲಿಸಲು ಬಳಸುವ ಅನೇಕ ತಂತ್ರಗಳಿರುತ್ತವೆ'(ಈಣ ಹ್ಚಿಸ್ ಬೆಛಿಒಮೆ ಚಿ ಮ್ಚಿಡಿಎಞಣೈಟಿಗ್ ಗಿಮ್ಮಿಛಿಞ), ಹೀಗೆ ಹಾಂಗ್‌ಕಾಂಗ್ ನ ಓರ್ವ ‘ಫೇಂಗಶುಯೀ’ ತಜ್ಞನ ಸ್ಪಷ್ಟ ಮತವಾಗಿದೆ.
೪. ದುಬಾರಿ ಬೆಲೆಗೆ ವಿವಿಧ ವಸ್ತುಗಳ ಮಾರಾಟ
ಕೆಲವು ವರ್ಷಗಳ ಹಿಂದೆ ೨೦-೨೫ ರೂ. ಗಳಿಗೆ ಸಿಗುತ್ತಿದ್ದ ಹಿತ್ತಾಳೆಯ ಟೊಳ್ಳು ಕೊಳವೆಗಳ ಕಿಣಿಕಿಣಿ ನಾದದ ‘ವಿಂಡ್ ಚಾಯಿಮ್’ ನ್ನು ಈಗ ೮೫ ರಿಂದ ೪೫೦ ರೂಪಾಯಿಗಳ ತನಕ ಮಾರಾಟ ಮಾಡುತ್ತಿದ್ದಾರೆ. ಮೂರು ಕಾಲಿನ ಬಾಯಿಯಲ್ಲಿ ನಾಣ್ಯವಿರುವ ಬೇರೆ ಬೇರೆ ಆಕಾರದ ಕಪ್ಪೆ, ‘ಕ್ರಿಸ್ಟಲ್’ನ ಚೀನಿ ನಾಣ್ಯ ಇತ್ಯಾದಿಗಳನ್ನು ಬಹಳ ದುಬಾರಿ ಬೆಲೆಯಲ್ಲಿ ಮಾರುವುದೇ ಅವರ ಪ್ರಮುಖ ವ್ಯವಸಾಯವಾಗಿದೆ.
೫. ೧೫ ರಿಂದ ೨೦ ದಿನಗಳಲ್ಲಿಯೇ ‘ಫೇಂಗಶುಯೀ’ ತಜ್ಞರು ಹೇಗೆ ತಯಾರಾಗುತ್ತಾರೆ ?
ಯಾವುದೇ ಶಾಸ್ತ್ರದ ಪೂರ್ಣ ಮಾಹಿತಿ ಪಡೆಯಲು, ಜ್ಞಾನವನ್ನು ಪಡೆಯಲು ಬಹಳ ಕಷ್ಟಪಡಬೇಕಾಗುತ್ತದೆ. ಸತತ ಅದರ ಧ್ಯಾಸವನ್ನೇ ಹಿಡಿಯಬೇಕಾಗುತ್ತದೆ. ಇಲ್ಲದಿದ್ದರೆ ಆ ವಿಷಯದ ಜ್ಞಾನವನ್ನು ಪಡೆಯಲು ಆಗುವುದಿಲ್ಲ. ‘ಶನಿವಾರ ಮತ್ತು ರವಿವಾರ ರಜೆಯ ದಿನಗಳಂದು ಪಂಚತಾರಾ ‘ಹೋಟೆಲ್’ಗಳಿಗೆ ಹೋಗಿ ಕೆಲವು ದಿನ ಈ ವಿಷಯದ ಮಾಹಿತಿ ಪಡೆದುಕೊಳ್ಳುವುದೆಂದರೆ ಈ ವಿಷಯದ ತಜ್ಞರಾಗುವುದಲ್ಲ’, ಹೀಗೆ ಓರ್ವ ಪ್ರಸಿದ್ಧ ‘ಫೇಂಗ್‌ಶುಯೀಯ’ ತಜ್ಞನ ಅಭಿಪ್ರಾಯ ವಾಗಿದೆ. ‘೩ ಸಾವಿರದಿಂದ ೧೦ ಸಾವಿರದ ತನಕ ದುಡ್ಡು ಖರ್ಚು ಮಾಡಿ ಪ್ರಮಾಣಪತ್ರವನ್ನು (ಸರ್ಟಿಫಿಕೇಟ್) ಪಡೆದು ಕೊಂಡರೆ ನಾವು ‘ಫೇಂಗ್‌ಶುಯೀ’ ತಜ್ಞರಾಗುತ್ತೇವೆ, ಆದರೆ ದುರ್ದೈವದಿಂದ ಪ್ರತ್ಯಕ್ಷದಲ್ಲಿ ಹೀಗೆ ಆಗುವುದಿಲ್ಲ. ಬಹಳಷ್ಟು ಕಡೆಗಳಲ್ಲಿ ಸಮಾಜದ ಮತ್ತು ಅನೇಕ ಸಂಸ್ಥೆಗಳಿಗೆ ಹಾನಿಯಾಗಿದೆ’, ಎಂದು ಪಾಶ್ಚಾತ್ಯ ‘ಫೇಂಗ್‌ಶುಯೀ’ ತಜ್ಞರು ಬರೆದಿದ್ದಾರೆ. ನಮ್ಮ ದೇಶದಲ್ಲಿ ಯಾವುದೇ ‘ಫೇಂಗ್‌ಶುಯಿ’ ತಜ್ಞರ ಜಾಹೀರಾತುಗಳಲ್ಲಿ ಅವನು ಏನೇನು ಮತ್ತು ಯಾವೆಲ್ಲ ವಸ್ತು ಗಳನ್ನು ಮಾರುತ್ತಾನೆ ?’, ಇದರ ಜಾಹೀರಾತೇ ಮೊದಲಿರುತ್ತದೆ.
೬. ಓರ್ವ ‘ಫೇಂಗ್‌ಶುಯೀ’ ತಜ್ಞ ಎಂದು ಹೇಳಿಕೊಳ್ಳುವ ಮಹಿಳೆಯು ‘ಫೇಂಗ್‌ಶುಯೀ’ ಪರಿಹಾರದಲ್ಲಿ ಭಾರತೀಯ ವಾಸ್ತುಶಾಸ್ತ್ರಕ್ಕೆ ಸಂಬಂಧಿಸಿದ ಉಪಾಯಗಳನ್ನು ಹೇಳಿದ್ದಾಳೆ.
೬ ಅ. ‘ಫೇಂಗ್‌ಶುಯೀ’ಯ ಪರಿಹಾರದಲ್ಲಿ ನಂದಾದೀಪ, ರಂಗೋಲಿ ಮತ್ತು ತ್ರಿಶೂಲ ಇವು ಸೇರಿವೆ : ಸದ್ಯ ‘ಫೇಂಗ್‌ಶುಯೀ’ಗೆ ಸಂಬಂಧಿಸಿದ, ಅಂದರೆ ಚೀನಿ ವಾಸ್ತುಶಾಸ್ತ್ರಕ್ಕೆ ಸಂಬಂಧಿಸಿದ ಬರಹಗಳು ಮತ್ತು ಜಾಹೀರಾತುಗಳು ಎಷ್ಟು ಜೋರಾಗಿ ನಡೆದಿವೆ ಎಂದರೆ, ಓರ್ವ ‘ಫೇಂಗ್‌ಶುಯೀ’ ತಜ್ಞ ಎಂದು ಹೇಳಿಕೊಳ್ಳುವ ಮಹಿಳೆಯು ಬರೆದ ಲೇಖನದಲ್ಲಿ ಚಕ್ರ, ನಂದಾದೀಪ, ತ್ರಿಶೂಲ, ರಂಗೋಲಿ, ಇತ್ಯಾದಿಗಳ ಉಪಾಯಗಳನ್ನು ಸೂಚಿಸಲಾಗಿದೆ. ‘ಚೀನಿ ವಾಸ್ತುಶಾಸ್ತ್ರದಲ್ಲಿ ಭಾಗ್ಯವಂತರಾಗಲು ೨೫ ಸುವರ್ಣ ಮಾರ್ಗಗಳು’, ಈ ಶೀರ್ಷಿಕೆಯ ಲೇಖನವನ್ನು ಆ ಮಹಿಳೆ ಬರೆದಿದ್ದಾಳೆ. ಆ ಲೇಖನದ ಕೆಳಗೆ ದಪ್ಪ ಅಕ್ಷರಗಳಲ್ಲಿ ಬಾಕ್ಸನಲ್ಲಿ ಜಾಹೀರಾತುಗಳನ್ನು ಕೊಟ್ಟಿದ್ದಾಳೆ. ಜಾಹೀರಾತಿನಲ್ಲಿ ಬೇರೆ ಬೇರೆ ವಸ್ತುಗಳ ಪಟ್ಟಿ (ಸೂಚಿ) ಮತ್ತು ‘ಆ ಎಲ್ಲ ವಸ್ತುಗಳು ನನ್ನ ಹತ್ತಿರ ಮಾರಾಟಕ್ಕೆ ಸಿಗುತ್ತವೆ’, ಇದನ್ನೂ ಸಹ ಬರೆದಿದ್ದಾಳೆ.
‘ಫೇಂಗ್‌ಶುಯೀ’ ತಜ್ಞ ಅನಿಸಿಕೊಳ್ಳುವ ಆ ಮಹಿಳೆಯು ಹೇಳಿರುವ ೨೫ ಉಪಾಯಗಳಲ್ಲಿ ೧೪ ಉಪಾಯಗಳು ಶುದ್ಧ ಭಾರತೀಯ ಉಪಾಯಗಳಾಗಿವೆ. ನಾನು ದೂರವಾಣಿಕರೆ ಮಾಡಿ ಆ ಮಹಿಳೆಯನ್ನು ಕೇಳಿದೆ, ”ಚೀನಿ ಜನರು ತ್ರಿಶೂಲ, ರಂಗೋಲಿ, ನಂದಾದೀಪ ಇತ್ಯಾದಿಗಳನ್ನು ಯಾವಾಗಿನಿಂದ ಉಪಯೋಗಿಸುತ್ತಿದ್ದಾರೆ ?” ಆಗ ಅವಳು, ”ನಾನು ‘ಫೇಂಗ್‌ಶುಯೀ’ ‘ಕೊರ್ಸ’ ಮಾಡಿದ್ದೇನೆ ಎಂದು ಹೇಳಿದಳು. ಈಗ ಇದಕ್ಕೆ ನಾನೇನು ಹೇಳಬೇಕು ? ನನ್ನ ಬಳಿ ‘ಫೇಂಗ್‌ಶುಯೀ’ಯ ಬಗ್ಗೆ ವಿದೇಶಿ ತಜ್ಞರು ಬರೆದ ೨೭ ಪುಸ್ತಕಗಳಿವೆ, ಅವುಗಳನ್ನು ಪುನಃ ಓದಿ ನೋಡಿದೆ; ಆದರೆ ನನಗೇನು ನಂದಾದೀಪ, ತ್ರಿಶೂಲ, ರಂಗೋಲಿ ಇವುಗಳ ಉಲ್ಲೇಖ ಎಲ್ಲಿಯೂ ಸಿಗಲಿಲ್ಲ. ‘ಜನರಲ್ಲಿ ಭ್ರಮೆಯನ್ನುಂಟು ಮಾಡುವುದೇ’, ಇದರ ಉದ್ದೇಶವಾಗಿದೆ. ಬೇರೆ ಏನೂ ಇಲ್ಲ.
೬ ಆ. ರಂಧ್ರ ಇರುವ ನಾಣ್ಯ ಅಥವಾ ಕಪ್ಪೆ ಏಕೆ ಬೇಡ ?
೬ ಆ ೧. ಐಶ್ವರ್ಯಸಂಪನ್ನ ಶ್ರೀ ಮಹಾಲಕ್ಷ್ಮೀ ದೇವಿ ಕೇವಲ ಚೀನಿ ನಾಣ್ಯಗಳ ಮೇಲೆಯೇ ಏಕೆ ಪ್ರಸನ್ನಳಾಗುತ್ತಾಳೆ ? : ಬೇರೆ ಬೇರೆ ವಸ್ತುಗಳು ಚೀನಿ ವಾಸ್ತುಶಾಸ್ತ್ರದಲ್ಲ್ಲ್ಲಿರುತ್ತವೆ ‘ಚೀನಿ ನಾಣ್ಯವನ್ನು ಒಂದು ಕೆಂಪು ದಾರದಲ್ಲಿ ಪೋಣಿಸಿ ಉಪಯೋಗಿಸಿ ದರೆ, ಆರ್ಥಿಕ ಸಮೃದ್ಧಿ ಆಗುತ್ತದೆಯಂತೆ.’ ನಾನು ಚಕಿತನಾದೆ, ಐಶ್ವರ್ಯಸಂಪನ್ನ ಶ್ರೀಮಹಾಲಕ್ಷ್ಮಿ ದೇವಿಯು ಕೇವಲ ಚೀನಿ ನಾಣ್ಯಗಳ ಮೇಲೆಯೇ ಏಕೆ ಪ್ರಸನ್ನಳಾಗುತ್ತಾಳೆ ? ನಮ್ಮಲ್ಲಿಯೂ ಹಿಂದೆ ರಂಧ್ರವಿರುವ ತಾಮ್ರದ ನಾಣ್ಯಗಳಿದ್ದವು.
೬ ಆ ೨. ಭಾರತೀಯರು ಇಂತಹ ಚೀನಿ ವಸ್ತುಗಳ ಮೇಲೆ ಹಣ ಖರ್ಚು ಮಾಡಿ ಅವುಗಳನ್ನು ಬಳಸುತ್ತಿದ್ದಾರೆ : ಒಬ್ಬ ‘ಫೇಂಗ್‌ಶುಯೀ’ ತಜ್ಞನಿಗೆ, ನಮ್ಮ ದೇಶದ ”ರಂಧ್ರವಿರುವ ತಾಮ್ರದ ನಾಣ್ಯ ಉಪಯೋಗಿಸÀಬಹುದೇ ? ಎಂದು ಕೇಳಿದೆ” ಅದಕ್ಕೆ ಅವನು, ”ಇಲ್ಲ. ಅದಕ್ಕೆ ಚೀನಿ ನಾಣ್ಯಗಳೇ ಬೇಕಾಗುತ್ತವೆ; ಕಾರಣ ನನಗೆ ಗೊತ್ತಿಲ್ಲ, ನಮ್ಮ ‘ಮಾಸ್ಟರ’ ನಮಗೆ ಹೀಗೆ ಹೇಳಲು ಹೇಳಿದ್ದಾನೆ” ಎಂದನು. ಮೂಲದಲ್ಲಿ ಶ್ರೀ ಲಕ್ಷ್ಮಿ ಮತ್ತು ಕುಬೇರ ಇವರು ನಮ್ಮ ಭಾರತದ ಐಶ್ವರ್ಯದ ದೇವತೆ ಗಳಾಗಿದ್ದಾರೆ; ಆದರೆ ಅವರ ಮೂರ್ತಿಗಳನ್ನು ಮನೆಯಲ್ಲಿಟ್ಟು ಪೂಜಿಸಲು ನಮ್ಮ ಜನರಿಗೆ ಸಮಯವಿಲ್ಲ; ದುಬಾರಿ ಚೀನಿ ನಾಣ್ಯಗಳನ್ನು ಖರೀದಿಸಿ ಕೆಂಪು ದಾರದಲ್ಲಿ ಪೋಣಿಸಲು ಸಮಯವಿದೆ; ಏಕೆಂದರೆ ಚೀನಿ ನಾಣ್ಯಗಳು ಹಣ ಕೊಡುತ್ತವೆಯಂತೆ !
೬ ಇ. ಬಾಯಿಯಲ್ಲಿ ನಾಣ್ಯವಿರುವ ದುಬಾರಿ ಕಪ್ಪೆಯನ್ನು ಪೂಜಿಸುವುದು; ಆದರೆ ಮನೆಯಲ್ಲಿ ಜೀವಂತ ಕಪ್ಪೆ ಬಂದರೆ ಅದನ್ನು ಹೊಡೆಯುವುದು : ಬಾಯಿಯಲ್ಲಿ ನಾಣ್ಯವಿರುವ ಮೂರು ಕಾಲುಗಳ ಕಪ್ಪೆಯನ್ನು ಒಂದುವರೆ ಸಾವಿರ ರೂಪಾಯಿಗಳಿಗೆ ಖರೀದಿಸಿ ಆ ಕಪ್ಪೆಯನ್ನು ನಮ್ಮ ಜನರು ಮೇಜಿನ ಮೇಲೆ ಬಹಳ ಹೆಮ್ಮೆಯಿಂದ ಇಡುತ್ತಾರೆ; ಏಕೆಂದರೆ, ಅದು ಆರ್ಥಿಕ ಸಮೃದ್ಧಿಯನ್ನು ಮಾಡಿಕೊಡುತ್ತದೆಯಂತೆ; ಆದರೆ ನಮ್ಮ ಮನೆಯ ಅಂಗಳದಿಂದ ಒಂದು ಕಪ್ಪೆ ಜಿಗಿಯುತ್ತಾ ಮನೆಯೊಳಗೆ ಬಂದರೆ, ಅದನ್ನು ಮಾತ್ರ ಕೋಲಿನಿಂದ ಆಚೆಗೆ ಓಡಿಸುತ್ತಾರೆ ಅಥವಾ ಅದನ್ನು ಹೊಡೆಯಲು ಓಡುತ್ತಾರೆ. ಇದು ಎಷ್ಟೊಂದು ವಿರೋಧಾಭಾಸವಾಗಿದೆ ! ವಾಸ್ತವದಲ್ಲಿ ಈಗಲೂ ಹಳ್ಳಿಗಳಲ್ಲಿ ಸುಸಂಸೃತ ಮನೆಗಳಲ್ಲಿ ಸಾಯಂಕಾಲದ ಸಮಯದಲ್ಲಿ ಕಪ್ಪೆ ಜಿಗಿಯುತ್ತಾ ಮನೆಯೊಳಗೆ ಬಂದರೆ, ‘ಲಕ್ಷ್ಮಿಬಂದಳು, ಕುಂಕುಮ ಕೊಡಿ’, ಹೀಗೆಂದು ಆ ಮನೆಯ ಹೆಂಗಸರು ಆ ಕಪ್ಪೆಯಮೇಲೆ ಕುಂಕುಮ ಎರೆಚುತ್ತಾರೆ; ಆದರೆ ಅದಕ್ಕೆ ನಾವು ಅಂಧಶ್ರದ್ಧೆಯೆಂದು ಹೇಳುತ್ತೇವೆ ! ನಮ್ಮ ನಡುವಳಿಕೆಯಲ್ಲಿ ಅದೆಷ್ಟು ವಿರೋಧಾಭಾಸ ! – ನ್ಯಾಯವಾದಿ ಅರವಿಂದ ವಝೆ
ಮುಂದಿನ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ – https://sanatanprabhat.org/kannada/99294.html