೧. ಹಿಂದೂಗಳೇ, ಅಧರ್ಮಾಚರಣೆಯನ್ನು ತಡೆಗಟ್ಟಿರಿ!
ಪ್ರತಿಯೊಂದು ದೇವತೆ ಎಂದು ಒಂದು ವಿಶಿಷ್ಠವಾದಂತಹ ತತ್ತ್ವವಾಗಿದೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅದಕ್ಕೆ ಸಂಬಂಧಿತ ಶಕ್ತಿಯು ಒಂದೆಡೆ ಇರುತ್ತದೆ ಎಂಬುದು ಅಧ್ಯಾತ್ಮಶಾಸ್ತ್ರದಲ್ಲಿನ ಒಂದು ಸಿದ್ಧಾಂತವಾಗಿದೆ. ಇದಕ್ಕನುಸಾರವಾಗಿ ದೇವತೆಯ ಹೆಸರು (ಶಬ್ದ) ಮತ್ತು ರೂಪವಿರುವುದು ಎಂದರೆ ಅಲ್ಲಿ ದೇವತೆಯ ತತ್ತ್ವವು ಅಧಿಷ್ಠಿತವಿರುತ್ತದೆ ಎಂದಾಗಿದೆ. ಈ ಸಿದ್ಧಾಂತವನ್ನು ನೆನಪಿಟ್ಟುಕೊಂಡು ಮುಂದಿನ ವಿಷಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ
೧.ದೇವತೆಗಳ ಚಿತ್ರ ಮತ್ತು ಹೆಸರುಗಳಿರುವ ಪಟಾಕಿಗಳನ್ನು ಸಿಡಿಸಬೇಡಿರಿ. ಇಂತಹ ಪಟಾಕಿಗಳನ್ನು ಸಿಡಿಸುವುದರಿಂದ ದೇವತೆಗಳ ಚಿತ್ರಗಳು ಚಿಂದಿಯಾಗಿ ಹೋಗುತ್ತವೆ. ಅದೇ ರೀತಿ ಅವುಗಳನ್ನು ಕಾಲ್ಕೆಳಗೆ ಹಾಕಿ ತುಳಿಯಲಾಗುತ್ತದೆ ಮತ್ತು ಕೊನೆಗೆ ಕಸದ ಬುಟ್ಟಿಯಲ್ಲಿ ಎಸೆಯಲಾಗುತ್ತದೆ.
೨.ದೇವತೆಗಳ ಚಿತ್ರಗಳು ಮತ್ತು ಹೆಸರುಗಳಿರುವ ಹೊದಿಕೆಗಳಿರುವ ಮಿಠಾಯಿಗಳ ಪೊಟ್ಟಣಗಳನ್ನು ಉಡುಗೊರೆಗಾಗಿ ಖರೀದಿಸಬೇಡಿ. ಹೆಚ್ಚಿನ ಬಾರಿ ಉಪಯೋಗಿಸಿದ ಬಳಿಕ ಆ ಪೊಟ್ಟಣಗಳನ್ನು ಕಸದ ಬುಟ್ಟಿಗೆ ಎಸೆಯಲಾಗುತ್ತದೆ.
ದೇವತೆಗಳನ್ನು ಇಂತಹ ರೀತಿಯಲ್ಲಿ ವಿಡಂಬನೆ ಮಾಡಲು ಬಿಡುವುದು ಅಂದರೆ ಪಾಪವನ್ನು ತಲೆಗೆ ಮೆತ್ತಿ ಕೊಳ್ಳುವುದೇ ಆಗಿದೆ. ಇದಕ್ಕಾಗಿ ಹಿಂದೂಗಳೇ, ಇಂತಹ ರೀತಿಯ ಅಧರ್ಮಾಚರಣೆಯನ್ನು ತಡೆಗಟ್ಟಿರಿ ಮತ್ತು ಇತರರಿಗೂ ಅದರ ಬಗ್ಗೆ ಜಾಗರೂಕಗೊಳಿಸಿರಿ.