‘ಶ್ರೀ ಗಣೇಶ ಚತುರ್ಥಿಯನ್ನು ‘ಕಳಂಕಿತ ಚತುರ್ಥಿ’ ಎಂದೂ ಕರೆಯುತ್ತಾರೆ. ಈ ಚತುರ್ಥಿಯಂದು ಚಂದ್ರನನ್ನು ನೋಡುವುದು ನಿಷೇಧಿಸಲಾಗಿದೆ. ಚತುರ್ಥಿಯಂದು ಚಂದ್ರನನ್ನು ತಪ್ಪಿಯೂ ನೋಡಿದರೆ, ‘ಶ್ರೀಮದ್ ಭಾಗವತ’ದ 10ನೇ ಸ್ಕಂಧದಲ್ಲಿ 56-57 ನೇ ಅಧ್ಯಾಯದಲ್ಲಿ ನೀಡಿರುವ ‘ಶ್ಯಮಂತಕ ಮಣಿಯ ಕಳ್ಳತನ’ದ ಕಥೆಯನ್ನು ಗೌರವದಿಂದ ಓದಬೇಕು ಅಥವಾ ಕೇಳಬೇಕು. ಭಾದ್ರಪದ ಶುಕ್ಲ ತೃತೀಯ ಅಥವಾ ಪಂಚಮಿಯ ಚಂದ್ರನನ್ನು ನೋಡಬೇಕು. ಇದರಿಂದಾಗಿ ಚತುರ್ಥಿಯಂದು ಚಂದ್ರದರ್ಶನ ಆಗಿದ್ದರೇ ಅದರ ಹೆಚ್ಚಿನ ಅಪಾಯ ಉಳಿಯುವುದಿಲ್ಲ.
ಆಕಸ್ಮಿಕ ಚಂದ್ರನ ದರ್ಶನವಾದರೆ, ಈ ಕೆಳಗಿನ ಮಂತ್ರದಿಂದ ಅಭಿಮಂತ್ರಿಸಿದ ಪವಿತ್ರ ನೀರನ್ನು ಸೇವಿಸಬೇಕು. ಈ ಮಂತ್ರವನ್ನು 21, 54 ಅಥವಾ 108 ಬಾರಿ ಜಪಿಸಬೇಕು.
ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾರೋಧಿಃ ತವಹ್ಯೇಷಃ ಸ್ಯಮಂತಕಃ || – ಬ್ರಹ್ಮವೈವರ್ತ ಪುರಾಣ, ಅಧ್ಯಾಯ 78
(ಅರ್ಥ: ಸಿಂಹವು ಪ್ರಸೇನನನ್ನು ಕೊಂದಿತು. ಸಿಂಹವು ಜಾಂಬವಂತನಿಂದ ಕೊಲ್ಲಲ್ಪಟ್ಟಿತು. ಮಗುವೇ, ಅಳಬೇಡ ಈ ಸ್ಯಮಂತಕ ಮಣಿ ನಿನ್ನದೇ.)
ಆಧಾರ – ‘ಋಷಿ ಪ್ರಸಾದ್’ ಆಗಸ್ಟ್ 2011