ಏಕಾದಶಿ ವ್ರತದ ಮಹಾತ್ಮೆ, ವ್ರತದ ವಿಧಗಳು ಮತ್ತು ನಿಯಮಗಳು

ನವೆಂಬರ್‌ ೧೧ ರಂದು ಇರುವ ಪ್ರಬೋಧಿನಿ ಏಕಾದಶಿ ಮತ್ತು ಪಂಢರಾಪುರ ಯಾತ್ರೆ ನಿಮಿತ್ತ …

೧. ಏಕಾದಶಿ ವ್ರತವನ್ನು ಏಕೆ ಮಾಡಬೇಕು ?

ವ್ರತಗಳ ಮಹಾತ್ಮೆಯನ್ನು ಹೇಳುವಾಗ ಶ್ರೀಲ ವ್ಯಾಸದೇವರು ಹೇಳುತ್ತಾರೆ, ”ವ್ರತ-ಉಪವಾಸ ಇತ್ಯಾದಿ ಮಾಡುವುದರಿಂದ ಭಗವಾನ ಶ್ರೀಕೃಷ್ಣನು ಪ್ರಸನ್ನನಾಗಿ ತನ್ನ ಪ್ರೇಮಭಕ್ತಿಯನ್ನು ನೀಡುತ್ತಾನೆ ಮತ್ತು ಭೋಗ ಹಾಗೂ ಮೋಕ್ಷವನ್ನೂ ನೀಡುತ್ತಾನೆ. ವ್ರತೋಪವಾಸವು ಪಾಪಕರ್ಮಗಳನ್ನು ದೂರಗೊಳಿಸಿ, ಪುಣ್ಯವನ್ನು ಸಂಗ್ರಹಿಸಿ ಭಗವದ್‌ಪ್ರಾಪ್ತಿಯ ಮಾರ್ಗದಲ್ಲಿ ಸಹಾಯ ಮಾಡುತ್ತದೆ ಮತ್ತು ಭಕ್ತಿಯನ್ನು ಹಬ್ಬಿಸಿ ಪ್ರಭುವಿನ ಪ್ರೇಮಭಕ್ತನನ್ನಾಗಿ ಮಾಡುತ್ತದೆ.’’

ವ್ರತೇನ ದೀಕ್ಷಾಮಾಪ್ನೋತಿ ದೀಕ್ಷಯಾಽಪ್ನೋತಿ ದಕ್ಷಿಣಾಮ್‌ |

ದಕ್ಷಿಣಾ ಶ್ರದ್ಧಾಮಾಪ್ನೋತಿ ಶ್ರದ್ಧಯಾ ಸತ್ಯಮಾಪ್ಯತೇ ||

– ಯಜುರ್ವೇದ, ಅಧ್ಯಾಯ ೧೯, ಕಣ್ಡಿಕಾ ೩೦

ಅರ್ಥ : ವ್ರತಗಳಿಂದ ದೀಕ್ಷೆಯ ಪಾಪ್ತಿ ಆಗುತ್ತದೆ ಮತ್ತು ದೀಕ್ಷೆಯಿಂದ ದಾಕ್ಷಿಣ್ಯ ಅಂದರೆ ವ್ರತದಲ್ಲಿ ದಕ್ಷತೆ, ಯೋಗ್ಯತೆ ಇವುಗಳು ಲಭಿಸುತ್ತವೆ. ದಾಕ್ಷಿಣ್ಯದಿಂದ ಶ್ರದ್ಧೆಯ ಪುಷ್ಠಿ ಮತ್ತು ಶ್ರದ್ಧೆಯಿಂದ ಸತ್ಯ ಪ್ರಾಪ್ತಿಯಾಗುತ್ತದೆ.

ಸತ್ಯದ ತಾತ್ಪರ್ಯವಿದೆ – ಸತ್ಯ ಸ್ವರೂಪ ಪರಮಾತ್ಮ.

ಈ ರೀತಿ ವ್ರತದ ಅತ್ಯುಚ್ಚ ಫಲವೆಂದರೆ ಭಗವಂತನು ಪ್ರಸನ್ನನಾಗುತ್ತಾನೆ ಮತ್ತು ಭಗವದ್‌ಪ್ರಾಪ್ತಿಯಾಗುತ್ತದೆ ! ಇಷ್ಟೇ ಅಲ್ಲದೇ ವ್ರತವನ್ನು ನಿಷ್ಕಾಮಭಾವದಿಂದ ದೇವರಿಗಾಗಿ, ಭಗವಂತನಲ್ಲಿ ಸಂಪೂರ್ಣ ಸಮರ್ಪಿತವಾಗಿ ಮಾಡಬೇಕು.

ಈ ವ್ರತಗಳಲ್ಲಿ ಫಲಾಕಾಂಕ್ಷೆಯ ಅತ್ಯಂತ ಕೊರತೆ ಇರುತ್ತದೆ. ನದಿಗಳಲ್ಲಿ ಗಂಗೆ, ನಕ್ಷತ್ರಗಳಲ್ಲಿ ಚಂದ್ರ ಮತ್ತು ದೇವತೆಗಳಲ್ಲಿ ಭಗವಾನ ವಿಷ್ಣುವು ಹೇಗೆ ಮುಖ್ಯವಾಗಿದ್ದಾನೆಯೋ, ಅದೇ ರೀತಿ ವ್ರತಗಳಲ್ಲಿ ಏಕಾದಶಿ ವ್ರತವು ಮುಖ್ಯವಾಗಿದೆ. ಈ ವ್ರತವನ್ನು ಮಾಡುವುದರಿಂದ ಕೆಲವು ಭೌತಿಕ ಲಾಭವಾಗುತ್ತಿದ್ದರೂ, ಈ ವ್ರತದಿಂದ ಹೃದಯದ ಶುದ್ಧೀಕರಣವಾಗಿ ಭಗವಂತನ ಪ್ರಾಪ್ತಿಯಾಗುತ್ತದೆ. ಇದಲ್ಲದೇ ಈ ತಿಥಿಗೆ ‘ಹರಿವಾಸರ’, ಅಂದರೆ ‘ಹರಿಯ ದಿನ’ ಎಂದು ಕರೆಯುತ್ತಾರೆ. ಏಕಾದಶಿ ತಿಥಿಯು ಭಗವಾನ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾಗಿದೆ.

ಅತ್ರ ವ್ರತಸ್ಯ ನಿತ್ಯತ್ವಾದಯಶ್ಯಂ ತತ್‌ ಸಮಾಚರೇತ್‌ |

ಸರ್ವಪಾಪಾಪಹಂ ಸರ್ವಾರ್ಥದಂ ಶ್ರೀಕೃಷ್ಣತೋಷಣಮ್‌ ||

ಅರ್ಥ : ಈ ವ್ರತವನ್ನು ನಿಯಮಿತವಾಗಿ ಆಚರಿಸಬೇಕು. ಅದು ಎಲ್ಲ ಪಾಪಗಳನ್ನು ನಾಶ ಮಾಡುತ್ತದೆ ಮತ್ತು ಎಲ್ಲವನ್ನು ಪ್ರದಾನಿಸುವ ಶ್ರೀಕೃಷ್ಣನನ್ನು ಸಂತುಷ್ಟಗೊಳಿಸುತ್ತದೆ.

೨. ಏಕಾದಶಿ ವ್ರತದ ತತ್ತ್ವಗಳು

ಏಕಾದಶಿ ವ್ರತದ ದಿನಚರಿಯಲ್ಲಿ ೪ ತತ್ತ್ವಗಳಿವೆ.

ತಚ್ಚ ಕೃಷ್ಣಪ್ರೀಣನತ್ವಾದ್ವಿಧಿಪ್ರಾಪ್ತತ್ವತಸ್ತಥಾ |

ಭೋಜನಸ್ಯ ನಿಷೇಧಾಚ್ಚಾಕರಣೇ ಪ್ರತ್ಯವಾಯತಃ ||

ಅರ್ಥ : ಭಗವಾನ ಶ್ರೀಕೃಷ್ಣನನ್ನು ಪ್ರಸನ್ನಗೊಳಿಸಲು ಈ ವ್ರತದ ವಿಧಿಯನ್ನು ಹೇಳಲಾಗಿದೆ ಮತ್ತು ಪಾಪಗಳ ಪರಿಮಾರ್ಜನೆ ಮಾಡಿಕೊಳ್ಳಲು ಭೋಜನ ನಿಷೇಧ (ಉಪವಾಸ) ಮಾಡಲು ಹೇಳಲಾಗಿದೆ.

೧. ಭಗವಾನ ಶ್ರೀಹರಿಯನ್ನು ಸಂತುಷ್ಟಗೊಳಿಸುವ ವಿಧಾನ – ಅವನ ಪ್ರಸನ್ನತೆ.

೨. ಶಾಸ್ತ್ರಗಳಲ್ಲಿ ಏಕಾದಶಿ ವ್ರತವನ್ನು ಮಾಡುವ ಆಜ್ಞೆಯಿದೆ – ಈ ಆಜ್ಞೆಯನ್ನು ಪಾಲಿಸುವುದು.

೩. ಭೋಜನ ಮಾಡಿದ ದೋಷಗಳಿಂದ ಸ್ವ-ಸಂರಕ್ಷಣೆ.

೪. ವ್ರತವನ್ನು ಮಾಡದಿರುವುದರಿಂದ ಭಜನೆ ಭಕ್ತಿಯಲ್ಲಿ ವಿಘ್ನ – ಪರಿಣಾಮ ಪಾಪ.

ವರಾಹ ಪುರಾಣದಲ್ಲಿ ಮುಂದಿನಂತೆ ಹೇಳಲಾಗಿದೆ,

ಏಕಾದಶ್ಯಾಂ ನಿರಾಹಾರೋ ಯೋ ಭುಙõಕ್ತ್ ದ್ವಾದಶೀದಿನೇ |

ಶುಕ್ಲೇ ವಾ ಯದಿ ವಾ ಕೃಷ್ಣೇ ತದ್ವ್ರತಂ ವೈಷ್ಣವಂ ಮಹತ್‌ ||

– ವರಾಹಪುರಾಣ, ಅಧ್ಯಾಯ ೬೫, ಶ್ಲೋಕ ೭

ಅರ್ಥ : ಯಾರು ಶುಕ್ಲ ಅಥವಾ ಕೃಷ್ಣ ಪಕ್ಷದ ಏಕಾದಶಿಯಂದು ನಿರಾಹಾರಿಯಾಗಿದ್ದು (ಉಪವಾಸವಿದ್ದು) ದ್ವಾದಶಿಯಂದು ಆಹಾರ ಸೇವಿಸುತ್ತಾನೆಯೋ, ಅವನು ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯನಾಗುತ್ತಾನೆ.

೩. ಏಕಾದಶಿಯಂದು ಅನ್ನಧಾನ್ಯ ನಿಷಿದ್ಧ

ಶುಕ್ಲ ಮತ್ತು ಕೃಷ್ಣ ಪಕ್ಷದಲ್ಲಿ, ಅಂದರೆ ಪ್ರತಿಯೊಂದು ಮಾಸದ ಏಕಾದಶಿ ತಿಥಿಯಂದು ಭೋಜನ ಮಾಡಬಾರದೆಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಇದರ ಅರ್ಥವನ್ನು ಜಗದ್ಗುರು ಸಂತ ತುಕಾರಾಮ ಮಹಾರಾಜರು ಮುಂದಿನಂತೆ ಹೇಳಿದ್ದಾರೆ. – ‘ಯಾರು ಏಕಾದಶಿಯಂದು ಆಹಾರ ಸೇವಿಸುತ್ತಾರೆಯೋ, ಭೋಜನ ಮಾಡುತ್ತಾರೆಯೋ, ಅವರು ಅತ್ಯಂತ ಪಾಪಿ ಜೀವಗಳಾಗಿದ್ದಾರೆ. ಅವರನ್ನು ಪಾಪಿಗಳೆಂದು ನಂಬಲಾಗುತ್ತದೆ; ಏಕೆಂದರೆ ಅವರು ಮಾಡುವ ಭೋಜನವು ನಾಯಿಯ ಶೌಚ ಸಮಾನವಾಗಿರುತ್ತದೆ. ಯಾರು ಈ ವ್ರತವನ್ನು ಮಾಡವುದಿಲ್ಲವೋ, ಅವರು ಯಮದೂತರ ಅಧೀನದಲ್ಲಿರುತ್ತಾರೆ, ಅಂದರೆ ಅವರು ನರಕವಾಸಿಯಾಗುತ್ತಾರೆ’.

ಏಕಾದಶಿ ತಿಥಿಯಂದು ಪಾಪ ಮಾಡಿದ ಪುರುಷನು ಆಹಾರದಲ್ಲಿ ವಾಸಿಸುತ್ತಾನೆ, ಆದ್ದರಿಂದ ಆಹಾರವನ್ನು ಸೇವಿಸಬಾರದು. ಗೋದಿ, ಜವೆಗೋದಿ, ಜೋಳ, ಸಜ್ಜೆ, ರಾಗಿ, ಅಕ್ಕಿ, ಮಕ್ಕೆಜೋಳ ಇತ್ಯಾದಿ ಅನ್ನಧಾನ್ಯಗಳು ಮತ್ತು ತೊಗರಿಬೇಳೆ, ಚೆನ್ನಂಗಿ, ಕಡಲೆಕಾಳು, ಆಲಸಂಡೆ, ಹೆಸರುಕಾಳು, ಮಡಕೆಕಾಳು, ರಾಜ್ಮಾ ಮತ್ತು ಅಂತಹದೇ ಬೀಜಗಳು ಇತ್ಯಾದಿ ದ್ವಿದಳಧಾನ್ಯಗಳನ್ನು ಏಕಾದಶಿಯಂದು ಸೇವಿಸಬಾರದು. ಎಳ್ಳು ಕೇವಲ ‘ಷಟ್ತಿಲಾ’ ಈ ಒಂದೇ ಏಕಾದಶಿಗೆ ತಿನ್ನಬೇಕು, ಇದು ಇತರ ಏಕಾದಶಿಗಳಿಗೆ ನಿಷಿದ್ಧವಾಗಿದೆ. ಸಾಸಿವೆಕಾಳು, ಮೆಂತೆಕಾಳು, ಅಜ್ವಾನ ಅಥವಾ ಇಂತಹ ಮಸಾಲೆಗಳನ್ನು ಒಗ್ಗರಣೆಯಲ್ಲಿ ಬಳಸಬಾರದು. ಸೊಯಾಬಿನ್‌ ಅಥವಾ ಅದರ ಎಣ್ಣೆ, ಸಾಸಿವೆಕಾಳಿನ ಎಣ್ಣೆ, ಹತ್ತಿಎಣ್ಣೆ ಮತ್ತು ಇತರ ಧಾನ್ಯದ ಎಣ್ಣೆಯನ್ನು ಬಳಸಬಾರದು. ಕೊಬ್ಬರಿಎಣ್ಣೆ, ಶೇಂಗಾಎಣ್ಣೆ ಮತ್ತು ಹಸುವಿನ ತುಪ್ಪವನ್ನು ಬಳಸಬೇಕು. ಎಲ್ಲ ವಿಧದ ಹಣ್ಣುಗಳು, ಡ್ರೈಫ್ರುಟ್ಸ್‌, ಆಲುಗಡ್ಡೆ, ಗೆಣಸು, ಕಾಯಿಪಲ್ಯಗಳನ್ನು ಬಳಸಬೇಕು. ಬೇಕಿಂಗ್‌ ಸೋಡಾ, ರಾಸಾಯನಿಕ ಬಣ್ಣ, ಸಮುದ್ರದಲ್ಲಿನ ಉಪ್ಪನ್ನು ಬಳಸಬಾರದು. ತದ್ವಿರುದ್ಧ ಖನಿಜ ಉಪ್ಪು, ಕಪ್ಪು ಉಪ್ಪು ಮತ್ತು ಲವಣವನ್ನು ಬಳಸಬೇಕು. ಇಂಗು ಬಳಸಬಾರದು. ಪೇಟೆಯ ಪದಾರ್ಥಗಳನ್ನು ತಿನ್ನಬಾರದು.

ನಿಜ ಹೇಳಬೇಕೆಂದರೆ ನೀರು ಕುಡಿಯದೇ ಏಕಾದಶಿಯ ಉಪವಾಸವನ್ನು ಮಾಡಬೇಕು. ಹಾಗೆ ಮಾಡಲು ಸಾಧ್ಯವಾಗದಿದ್ದರೆ, ಹಸುವಿನ ಹಾಲು, ಹಣ್ಣು, ಡ್ರೈಫ್ರುಟ್ಸ್ ಇತ್ಯಾದಿಗಳನ್ನು ಸೇವಿಸಬೇಕು. ಇವುಗಳನ್ನು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಏಕಾದಶಿಯಂದು ಎರಡು ಪಟ್ಟು ತಿನ್ನುವುದು ಮತ್ತು ಆದರೂ ನಾವು ಉಪವಾಸವಿದ್ದೇವೆ ಎಂದು ಹೇಳುವುದು ! ಹೀಗೆ ಎಂದಿಗೂ ಆಗಬಾರದು.

‘ಏಕಾದಶ್ಯಾಂ ನ ಭುಞ್ಜೀತ ಪಕ್ಷಯೋರುಭಯೋರಪಿ |’ (ನಾರದಪುರಾಣ, ಪೂರ್ವಖಣ್ಡ, ಅಧ್ಯಾಯ ೨೩, ಶ್ಲೋಕ ೪) ಅಂದರೆ ‘(ಶುಕ್ಲ ಮತ್ತು ಕೃಷ್ಣ) ಎರಡು ಪಕ್ಷಗಳ ಏಕಾದಶಿಯಲ್ಲಿ ಆಹಾರವನ್ನು ಸೇವಿಸಬಾರದು’ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

೪. ಏಕಾದಶಿ ವ್ರತ ಮಾಡುವುದರಿಂದ ದೊರಕುವ ಫಲ

ಏಕಾದಶಿ ತಿಥಿಯು ಶ್ರೇಷ್ಠ ಪುಣ್ಯಫಲ ಕೊಡುವುದಾಗಿದೆ. ಆದುದರಿಂದ ಸಭ್ಯ ಮನುಷ್ಯರು ಏಕಾದಶಿ ವ್ರತವನ್ನು ಆಚರಿಸಬೇಕು. ವಿಶಿಷ್ಟ ನಕ್ಷತ್ರಗಳ ಯೋಗವನ್ನು ಕೂಡಿ ಬಂದ ನಂತರ ಈ ಏಕಾದಶಿ ತಿಥಿಯು ಜಯಾ, ವಿಜಯಾ, ಜಯಂತಿ ಮತ್ತು ಪಾಪಮೋಚನೆ ಈ ನಾಲ್ಕು ಹೆಸರುಗಳಿಂದ ಪ್ರಸಿದ್ಧವಾಗಿದೆ. ಈ ಏಕಾದಶಿಗಳು ಎಲ್ಲ ರೀತಿಯ ಪಾಪಗಳನ್ನು ನಾಶ ಮಾಡುತ್ತವೆ.

ಅ. ಯಾವಾಗ ಶುಕ್ಲ ಪಕ್ಷದ ದ್ವಾದಶಿಯಂದು ‘ಪುನರ್ವಸು’ ನಕ್ಷತ್ರ ಇರುತ್ತದೆಯೋ, ಆಗ ಆ ಏಕಾದಶಿ ತಿಥಿಯನ್ನು ‘ಜಯಾ’ ಎಂದು ಕರೆಯಲಾಗುತ್ತದೆ. ಈ ಏಕಾದಶಿಯ ವ್ರತವನ್ನು ಮಾಡುವುದರಿಂದ ಮನುಷ್ಯನು ನಿಶ್ಚಿತವಾಗಿ ಎಲ್ಲ ಪಾಪಗಳಿಂದ ಮುಕ್ತನಾಗಿ ಪರಮಧಾಮಕ್ಕೆ ಹೋಗುತ್ತಾನೆ.

ಆ. ಯಾವಾಗ ಶುಕ್ಲ ಪಕ್ಷದ ದ್ವಾದಶಿಯಂದು ‘ಶ್ರವಣ’ ನಕ್ಷತ್ರವಿರುತ್ತದೆಯೋ, ಆಗ ಆ ಉತ್ತಮ ತಿಥಿಗೆ ‘ವಿಜಯಾ’ ಎಂದು ಕರೆಯಲಾಗುತ್ತದೆ. ಈ ತಿಥಿಯಂದು ಮಾಡಿದ ದಾನ, ಜಪ, ಕೀರ್ತನೆ ಮತ್ತು ಸಾಧು-ಬ್ರಾಹ್ಮಣರ ಭೋಜನ ಇತ್ಯಾದಿಗಳಿಂದ ಸಾವಿರಾರುಪಟ್ಟು ಫಲ ನೀಡುತ್ತದೆ ಮತ್ತು ಉಪವಾಸ ಮಾಡಿದರೆ ಅದಕ್ಕಿಂತಲೂ ಹೆಚ್ಚು ಫಲ ನೀಡುತ್ತದೆ.

ಇ. ಯಾವಾಗ ಶುಕ್ಲ ಪಕ್ಷದ ‘ದ್ವಾದಶಿಯಂದು ‘ರೋಹಿಣಿ’ ನಕ್ಷತ್ರವಿರುತ್ತದೆಯೋ, ಆಗ ಅದನ್ನು ಉತ್ತಮ ತಿಥಿ ‘ಜಯಂತಿ’ ಎಂದು ಕರೆಯಲಾಗುತ್ತದೆ. ಇದು ಎಲ್ಲ ಮಹಾಪಾತಕಗಳನ್ನು ಹರಣ ಮಾಡುತ್ತದೆ. ಈ ತಿಥಿಗೆ ಶ್ರೀಹರಿಯ ಆರಾಧನೆ ಮಾಡುವುದರಿಂದ ಶ್ರೀಹರಿಯು ಖಂಡಿತವಾಗಿಯೂ ಎಲ್ಲಾ ಪಾಪಗಳನ್ನು ನಾಶ ಮಾಡುತ್ತಾನೆ.

ಈ. ಯಾವಾಗ ಶುಕ್ಲ ಪಕ್ಷದ ದ್ವಾದಶಿಯಂದು ‘ಪುಷ್ಯ’ ನಕ್ಷತ್ರವಿರುತ್ತದೆಯೋ, ಆಗ ಅದು ಮಹಾಪುಣ್ಯವಂತ ತಿಥಿ ‘ಪಾಪಮೋಚನೆ’ ಎಂದು ಕರೆಯಲಾಗುತ್ತದೆ. ಇಡೀ ಒಂದು ವರ್ಷದಲ್ಲಿ ಪ್ರತಿದಿನ ಎಳ್ಳು ದಾನ ಮಾಡುವುದರಿಂದ ಯಾವ ಫಲ ಸಿಗುತ್ತದೆಯೋ, ಅಷ್ಟೇ ಫಲವು ‘ಪಾಪಮೊಚನೆ ಏಕಾದಶಿ’ಯ ವ್ರತ ಮಾಡುವುದರಿಂದ ಸಿಗುತ್ತದೆ. ಈ ದಿನದಂದು ಶ್ರೀಹರಿಯ ಪೂಜೆ ಮಾಡುವುದರಿಂದ ಅವನು ಸಂತುಷ್ಟನಾಗಿ ಪ್ರತ್ಯಕ್ಷ ದರ್ಶನ ನೀಡುತ್ತಾನೆ. ಈ ದಿನ ಮಾಡಿದ ಪ್ರತಿಯೊಂದು ಪುಣ್ಯಕರ್ಮದಿಂದ ಅನಂತ ಪಟ್ಟು ಫಲ ನೀಡುತ್ತದೆ.

ಈ ತಿಥಿಯಂದು ವ್ರತ ಮಾಡುವುದರಿಂದ ಮನುಷ್ಯನು ೭ ಜನ್ಮಗಳಲ್ಲಿನ ಕಾಯಾ, ವಾಚಾ ಮತ್ತು ಮಾನಸಿಕ ಪಾಪದಿಂದ ಮುಕ್ತನಾಗಿ ಪರಮಗತಿಯನ್ನು ಪ್ರಾಪ್ತಮಾಡಿಕೊಳ್ಳುತ್ತಾನೆ. ಇದರಲ್ಲಿ ಕಿಂಚಿತ್ತವೂ ಸಂದೇಹವಿಲ್ಲ.

‘ಪುಷ್ಯ’ ನಕ್ಷತ್ರದಿಂದ ಯುಕ್ತವಾಗಿರುವ ಈ ಏಕೈಕ ಪಾಪಮೋಚನೆ ಏಕಾದಶಿಯ ವ್ರತವನ್ನು ಮಾಡಿ ಮನುಷ್ಯನು ೧ ಸಾವಿರ ಏಕಾದಶಿ ವ್ರತಗಳ ಫಲವನ್ನು ಪ್ರಾಪ್ತಮಾಡಿಕೊಳ್ಳುತ್ತಾನೆ. ಈ ದಿನ ಪವಿತ್ರ ತೀರ್ಥಸ್ನಾನ, ದಾನ, ಜಪ, ಸ್ವಾಧ್ಯಾಯ, ಭಗವದ್‌ಪೂಜೆ, ಶ್ರವಣ ಮತ್ತು ಕೀರ್ತನೆ ಇತ್ಯಾದಿಗಳ ಶುಭಕರ್ಮಗಳನ್ನು ಮಾಡಲಾಗುತ್ತದೆಯೋ, ಅದರ ಅಕ್ಷಯ (ಕ್ಷಯವಾಗದ) ಫಲ ಪ್ರಾಪ್ತವಾಗುತ್ತದೆ. ಹೀಗೆ ಮಹತ್ವಪೂರ್ಣ ವರ್ಣನೆಯನ್ನು ‘ಪದ್ಮಪುರಾಣ’ದ ಉತ್ತರಖಂಡದಲ್ಲಿನ ೪೦ ನೇ ಅಧ್ಯಾಯದಲ್ಲಿ ಮಾಡಲಾಗಿದೆ. ಅದರಲ್ಲಿನ ಇದು ಸಂಕ್ಷಿಪ್ತ ವರ್ಣನೆಯಾಗಿದೆ.

೫. ಏಕಾದಶಿ ವ್ರತವನ್ನು ಯಾರು ಮಾಡಬೇಕು ?

ಅ. ಶಾಸ್ತ್ರದಲ್ಲಿ ಹೀಗೆ ಹೇಳಲಾಗಿದೆ, ‘ಏಕಾದಶ್ಯಾಂ ನ ಭುಞ್ಜೀತ ಕದಾಚಿದಪಿ ಮಾನವಃ |’, ಅಂದರೆ ‘ಮನುಷ್ಯನು ಏಕಾದಶಿಯಂದು ಆಹಾರವನ್ನು ಸೇವಿಸಬಾರದು.’

ಆ. ‘ಏಕಾದಶ್ಯಾಂ ನ ಭುಞ್ಜೀತ ನಾರೀ ದೃಷ್ಟೇ ರಜಸ್ಯಪಿ |’, ಅಂದರೇ ‘ಸ್ತ್ರೀಯರು ಮಾಸಿಕ ಸರದಿಯಲ್ಲಿಯೂ ಏಕಾದಶಿ ವ್ರತವನ್ನು ತ್ಯಜಿಸಬಾರದು.’ (ಕೇವಲ ಪೂಜೆ ಇತ್ಯಾದಿಗಳನ್ನು ಮಾಡಬಾರದು.)

ಇ. ಮೇಲಿಂದ ಮೇಲೆ ತಿನ್ನುವುದು ಅಥವಾ ನೀರು ಮುಂತಾದವುಗಳನ್ನು ಕುಡಿಯುವುದರಿಂದ ವ್ರತ ಭಂಗವಾಗುತ್ತದೆ. ವ್ರತಸ್ಥ ವ್ಯಕ್ತಿಗಳು ಹಗಲು ಮಲಗುವುದು ನಿಷಿದ್ಧವಾಗಿದೆ.

ಈ. ಸೂತಿಕಾಶೌಚ-ಸೂತಕದಲ್ಲಿಯೂ ಏಕಾದಶಿ ವ್ರತವನ್ನು ಮಾಡಬೇಕು, ಹಾಗೆಯೇ ನಾಮ ಅಪರಾಧ, ಸೇವೆ ಅಪರಾಧ ಮತ್ತು ವೈಷ್ಣವ ಅಪರಾಧ ಇವುಗಳಿಂದ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಬೇಕು.

ಉಪವಾಸದಲ್ಲಿ ಬಾಧೆಯನ್ನುಂಟು ಮಾಡುವ (ಉಪವಾಸಕ್ಕೆ ಅಡ್ಡಿಪಡಿಸುವ) ೧೨ ದೋಷಗಳಿವೆ. ಯಾವಾಗ ನಾವು ದೋಷ ಗಳಿಂದ ಮುಕ್ತರಾಗಿ ವ್ರತವನ್ನು ಮಾಡುತ್ತೇವೆಯೋ, ಆವಾಗಲೇ ವ್ರತದ ಸಂಪೂರ್ಣ ಫಲ ಸಿಗುತ್ತದೆ. ಈ ದೋಷಗಳಿಂದ ಪ್ರಯತ್ನ ಪೂರ್ವಕವಾಗಿ ತನ್ನನ್ನು ದೂರ ಇಡಬೇಕು. ೧. ಕಾಮ, ೨. ಕ್ರೋಧ, ೩. ಮೋಹ, ೪. ಮದ. ೫. ಅಸಂತುಷ್ಟಿ, ೬. ನಿರ್ದಯತೆ, ೭ ಅಸೂಯೆ, ೮. ಅಭಿಮಾನ, ೯. ಶೋಕ, ೧೦. ಸ್ಪೃಹಾ, (ಇಚ್ಛೆ) ೧೧. ಮತ್ಸರ ಮತ್ತು ೧೨. ನಿಂದನೆ ಇವುಗಳು ಮನುಷ್ಯನಲ್ಲಿ ವಾಸಿಸುವ ೧೨ ದೋಷಗಳಿದ್ದು ಇವುಗಳನ್ನು ಮನುಷ್ಯನು ನಿರಂತರ ತ್ಯಜಿಸಬೇಕು. ಬೇಟೆಗಾರನು ಪಶುಗಳನ್ನು ಹೊಡೆಯಲು ಹೇಗೆ ದಾರಿ ಕಾಯುತ್ತಿರುತ್ತಾನೆಯೋ, ಅದೇ ರೀತಿ ಈ ಒಂದೊಂದು ದೋಷಗಳು ಮನುಷ್ಯನ ಗುಣಗಳ ಮೇಲೆ ಆಕ್ರಮಣ ಮಾಡಲು ಕಾಯುತ್ತಿರುತ್ತವೆ.

ಗೃಹಸ್ಥೋ ಬ್ರಹ್ಮಚಾರೀ ಚ ಆಹಿತಾಗ್ನಿರ್ಯತಿಸ್ತಥಾ |

ಏಕಾದಶ್ಯಾಂ ನ ಭುಞ್ಜೀತ ಪಕ್ಷಯೋರುಭಯೋರಪಿ ||

ಅರ್ಥ : ಗೃಹಸ್ಥ, ಬ್ರಹ್ಮಚಾರಿ, ಅಹಿತಾಗ್ನಿಯನ್ನು ಧಾರಣೆ ಮಾಡಿದ (ಸೋಮಯಾಗದಂತಹ ಶ್ರೌತಯಜ್ಞವನ್ನು ಮಾಡುವ ಅಧಿಕಾರವಿರುವವನು) ಮತ್ತು ಸನ್ಯಾಸಿ ಈ ೪ ಆಶ್ರಮವಾಸಿಗಳು ಏಕಾದಶಿಯಂದು ಆಹಾರವನ್ನು ಸೇವಿಸಬಾರದು.

ಅಷ್ಟವರ್ಷಾಧಿಕೋ ಮರ್ತ್ಯಾ ಹ್ಯಪೂರ್ಣಾಶೀತವತ್ಸರಃ |

ಏಕಾದಶ್ಯಾಮುಪವಸೇತ್‌ ಪಕ್ಷಯೋರುಭಯೋರಪಿ ||

ಅರ್ಥ : ೮ ವರ್ಷಕ್ಕಿಂತೆ ಹೆಚ್ಚು ವಯಸ್ಸಿನ ಬಾಲಕರಿಂದ ೮೦ ವರ್ಷದ ವಯಸ್ಸಿನ ವೃದ್ಧರವರೆಗಿನ ಎಲ್ಲರೂ (ಶುಕ್ಲ ಮತ್ತು ಕೃಷ್ಣ) ಎರಡೂ ಪಕ್ಷಗಳಲ್ಲಿನ ಏಕಾದಶಿಯಂದು ಉಪವಾಸ ಮಾಡಬೇಕು. ಶಿವ ಉಪಾಸಕರಿಗಾಗಿಯೂ ಏಕಾದಶಿ ವ್ರತವು ಆವಶ್ಯಕವಾಗಿದೆ. ಈ ಕುರಿತು ಶಿವ-ಪಾರ್ವತಿ ಇವರ ಸಂವಾದ ಪದ್ಮಪುರಾಣದಲ್ಲಿದೆ

– ಯೋ ಭುಙõಕ್ತ್ÉÃ ವಾಸರೇ ವಿಷ್ಣೋರ್ಜ್ಞೇಯಃ ಪಶ್ವಧಿಕೋ ಹಿ ಸಃ | (ಪದ್ಮಪುರಾಣ, ಉತ್ತರಖಣ್ಡ)

(ಅರ್ಥ : ಯಾವ ಮನುಷ್ಯನು ಏಕಾದಶಿಯಂದು ಭೋಜನ ಮಾಡುತ್ತಾನೆಯೋ, ಅವನು ಪಶುಗಿಂತಲೂ ಹೀನನಾಗಿದ್ದಾನೆ ಎಂದು ತಿಳಿಯಬೇಕು.)

ವಿಪ್ರಿಯಂ ಚ ಕೃತಂ ತೇನ ದುಷ್ಟೇನೈವ ಚ ಪಾಪಿನಾ |

ಮದ್ಭಕ್ತಿಬಲಮಾಶ್ರಿತ್ಯ ಯೋ ಭುಙõಕ್ತ್É್ಕ್ತೀ ವೈ ಹರೇರ್ದಿನೇ ||

– ಪದ್ಮಪುರಾಣ, ಉತ್ತರಖಣ್ಡ, ಅಧ್ಯಾಯ ೩೭, ಶ್ಲೋಕ ೬೧

ಅರ್ಥ : ಏಕಾದಶಿಯ ದಿನದಂದು ನನ್ನ ಭಕ್ತಿಯ ಬಲದ ಆಶ್ರಯವನ್ನು ಪಡೆದು ಯಾವನು ಭೋಜನ ಮಾಡುತ್ತಾನೆಯೋ, ಅವನು ದುಷ್ಟ, ಪಾಪಿ. ನನಗೆ ಎಂದಿಗೂ ಪ್ರಿಯನಾಗುವುದಿಲ್ಲ.

೬. ವೃದ್ಧ ಮತ್ತು ವ್ಯಾಧಿಗ್ರಸ್ತರು ಏಕಾದಶಿ ವ್ರತವನ್ನು ಮಾಡಬೇಕೋ ಅಥವಾ ಮಾಡಬಾರದೋ ?

ವೃದ್ಧ ಮತ್ತು ವ್ಯಾಧಿಗ್ರಸ್ತರಾಗಿರುವ ಅಶಕ್ತ ವ್ಯಕ್ತಿಗಳು ಕಠಿಣ ಉಪವಾಸವನ್ನು ಮಾಡಬಾರದು, ಹಾಗೆಯೇ ಯಾರ ವಯಸ್ಸು ೮೦ ವರ್ಷಗಳಾಗಿವೆ, ಪಿತ್ತಕಾರಕ ಪ್ರಕೃತಿಯಿದೆ ಮತ್ತು ೩೦ ವರ್ಷಗಳಿಂಗಿತಲೂ ಹೆಚ್ಚು ಕಾಲ ಯಾರು ಈ ವ್ರತವನ್ನು ಪಾಲಿಸಿದ್ದಾರೆಯೋ, ಅವರು ಒಂದು ಸಮಯ ಉಪವಾಸದ ಪದಾರ್ಥಗಳನ್ನು ಸೇವಿಸಲು ಯಾವುದೇ ಅಡ್ಡಿಯಿಲ್ಲ; ಆದರೆ ಗಟ್ಟಿಮುಟ್ಟಾಗಿರುವ ಮನುಷ್ಯರು ಏನಾದರೂ ನೆಪ ಹೇಳಿ ಏಕಾದಶಿಯಂದು ಬಹಳಷ್ಟು ತಿನ್ನುತ್ತಿದ್ದರೆ, ಅವರಿಂದ ಅಪರಾಧವಾಗುವುದು.

೭. ಏಕಾದಶಿ ವ್ರತವನ್ನು ಯಾವಾಗ ಮಾಡಬೇಕು ?

ಸಾಧಾರಣ ಪ್ರತಿ ತಿಂಗಳಿನಲ್ಲಿ ಕೃಷ್ಣ ಮತ್ತು ಶುಕ್ಲ ಪಕ್ಷದಲ್ಲಿನ ೧೧ ನೇ ತಿಥಿಗೆ ‘ಏಕಾದಶಿ’ ಅನ್ನುತ್ತಾರೆ; ಆದರೆ ಪ್ರತಿಯೊಂದು ಏಕಾದಶಿ ತಿಥಿಯು ವ್ರತಕ್ಕಾಗಿ ಸ್ವೀಕೃತವಿಲ್ಲ. ದಶಮಿ ತಿಥಿಯು ಯುಕ್ತ ಏಕಾದಶಿಯಾಗಿದ್ದರೆ, ವೈಷ್ಣವರು ಅಂದು ಉಪವಾಸ ಮಾಡುವುದಿಲ್ಲ; ಆದರೆ ಮರುದಿನ ಸೂರ್ಯೋದಯದ ಸಮಯದಲ್ಲಿ ಏಕಾದಶಿ ಇದ್ದರೆ ಮತ್ತು ನಂತರ ದ್ವಾದಶಿ ಇದ್ದರೆ, ದ್ವಾದಶಿಯುಕ್ತ ಏಕಾದಶಿಯಂದು ಉಪವಾಸ ಮಾಡಬೇಕು, ಹಾಗೆಯೇ ಮೊದಲನೇ ದಿನದಂದು ದಿನವಿಡಿ ಮತ್ತು ಇಡೀರಾತ್ರಿ ಏಕಾದಶಿ ಇದೆ, ಅಂದರೇ ಸಂಪೂರ್ಣ ದಿನ ಏಕಾದಶಿ ಇದ್ದರೆ ಮತ್ತು ಮರುದಿನ ಮುಂಜಾನೆ ಸ್ವಲ್ಪ ಸಮಯ ಏಕಾದಶಿ ಇದ್ದರೆ, ಮರುದಿನ ಯುಕ್ತ ಏಕಾದಶಿಯಲ್ಲಿಯೇ ವ್ರತವನ್ನು ಮಾಡಬೇಕು. ಈ ವಿಧಿಯು ಎರಡೂ ಪಕ್ಷದಲ್ಲಿನ ಏಕಾದಶಿಗೆ ಅನ್ವಯಿಸುತ್ತದೆ.

ಉದಯಸ್ಥಾ ತಿಥಿರ್ಯಾ ಹಿ ನ ಭವೇದ್ದಿನಮಧ್ಯಮಾಕ್‌ |

ಸಾ ಖಣ್ಡಾ ನ ವ್ರತಾನಾಂ ಸ್ಯಾದಾರಮ್ಭಶ್ಚ ಸಮಾಪನಮ್‌ ||

– ನಿರ್ಣಯಸಿನ್ಧು

ಅರ್ಥ : ಯಾವ ತಿಥಿಗೆ ಸೂರ್ಯೋದಯವಾಗುತ್ತದೆಯೋ, ಆ ತಿಥಿಯು ಒಂದು ವೇಳೆ ಮಧ್ಯಾಹ್ನದ ವರೆಗೆ ಇರದಿದ್ದರೆ, ಆ ತಿಥಿಗೆ ವ್ರತಾರಂಭವನ್ನು ಮಾಡಬಾರದು. ಸ್ಥಗಿತವಾಗದಿರುವ ತಿಥಿಗೆ ವ್ರತದ ಆರಂಭ ಮತ್ತು ಸಮಾಪ್ತಿಯನ್ನು ಮಾಡಬೇಕು.

ದಶಮಿಯುಕ್ತ ಏಕಾದಶಿಯು ಧನ ಮತ್ತು ಸಂತತಿಯ ನಾಶ ಮಾಡುತ್ತದೆ. ಇದು ಎಲ್ಲಾ ಪುಣ್ಯಗಳ ನಾಶ ಮಾಡುತ್ತದೆ, ಹಾಗೆಯೇ ಕೃಷ್ಣಭಕ್ತಿಯ ನಾಶವನ್ನೂ ಮಾಡುತ್ತದೆ. ನಾರದ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ ದಶಮಿಯುಕ್ತ ಏಕಾದಶಿಗೆ ವ್ರತ ಮಾಡಲು ಸಂಪೂರ್ಣ ನಿಷೇಧಿಸಲಾಗಿದೆ. ನಾರದ ಪುರಾಣದಲ್ಲಿನ ಉತ್ತರ ಭಾಗ ‘ಆದ್ಯಂತ, ಅಧ್ಯಾಯ ೨, ಏಕಾದಶಿ’ ಎಂಬ ಅಧ್ಯಾಯದಿಂದ ತುಂಬಿದೆ.

೮. ಏಕಾದಶಿ ತಿಥಿಯ ಆಹಾರ

ಏಕಾದಶಿ ತಿಥಿಯಂದು ಯಾವ ಆಹಾರವನ್ನು ಸೇವಿಸಬೇಕು ? ಈ ಕುರಿತು ಅನೇಕ ಭ್ರಮೆಗಳಿವೆ; ಆದರೆ ಶಾಸ್ತ್ರಗಳಲ್ಲಿ ಆಹಾರದ ಬಗ್ಗೆ ಇರುವ ಆದೇಶವೆಂದರೆ, ನಿರ್ಜಲ-ನಿರಾಹಾರವಾಗಿರಲು ಸಾಧ್ಯವಾಗದಿದ್ದರೆ, ಕೇವಲ ವಾಯು ಭಕ್ಷಣ ಮಾಡಬೇಕು. ವಾಯುಸೇವನೆಯಿಂದ ಕಾರ್ಯವಾಗದಿದ್ದರೆ, ಪಂಚಗವ್ಯ ಅಥವಾ ತುಪ್ಪವನ್ನು ತಿನ್ನಬೇಕು. ಅದೂ ಸಾಕಾಗದಿದ್ದರೆ, ನೀರು ಅಥವಾ ಹಾಲು ಕುಡಿಯಬೇಕು ಅಥವಾ ಎಳ್ಳು ಅಥವಾ ಹಣ್ಣುಗಳನ್ನು ಅಥವಾ ಆಹಾರದ ಹೊರತು ಹೆಚ್ಚುವರಿ ಆಹಾರವನ್ನು ಸೇವಿಸಬೇಕು. ಇಲ್ಲಿ ಯಾವ ಪದಾರ್ಥಗಳ ಹೆಸರುಗಳನ್ನು ಹೇಳಲಾಗಿದೆಯೋ, ಅವುಗಳಲ್ಲಿನ ಕ್ರಮದ ಪ್ರಕಾರ ಒಂದು ವೇಳೆ ಮೊದಲನೇ ಪದಾರ್ಥದಿಂದ ಸಾಕಾಗದಿದ್ದರೆ, ಮುಂದಿನ ಪದಾರ್ಥಗಳನ್ನು ಸೇವಿಸಬೇಕು. ಅಂದರೆ ತುಪ್ಪದಿಂದ ಸಾಕಾಗದಿದ್ದರೆ, ನೀರು ಕುಡಿಯಬೇಕು. ನೀರು ಸಾಕಾಗದಿದ್ದರೆ, ಹಾಲು ಕುಡಿಯಬೇಕು ಮತ್ತು ಹಾಲು ಸಾಕಾಗದಿದ್ದರೆ, ಎಳ್ಳು ಅಥವಾ ಹಣ್ಣುಗಳನ್ನು ತಿನ್ನಬೇಕು. ಇದರ ಅರ್ಥ, ಎಲ್ಲ ಪದಾರ್ಥಗಳೊಂದಿಗೆ ಹೊಟ್ಟೆ ತುಂಬ ಊಟ ಮಾಡಬೇಕು, ಎಂದೇನಿಲ್ಲ. ಶ್ರೀಲ ಪ್ರಭುಪಾದರು, ಉಪವಾಸದಂದು ಹಣ್ಣುಗಳು ಮತ್ತು ಗಡ್ಡೆಗೆಣಸುಗಳನ್ನು ಸೇವಿಸಿ ಮತ್ತು ಆಹಾರಧಾನ್ಯ ಮತ್ತು ದ್ವಿದಳಧಾನ್ಯಗಳನ್ನು ನಿಷೇಧಿಸಬೇಕು, ಎಂದು ಹೇಳುತ್ತಾರೆ.

(ಆಧಾರ : ಮಾಸಿಕ ‘ಗೋಡಸೇವಾದಿ’, ಜುಲೈ ೨೦೧೬)