Worldwide Diwali Celebrations : ಜಗತ್ತಿನಾದ್ಯಂತದ ನಾಯಕರಿಂದ ದೀಪಾವಳಿ ಆಚರಣೆ !

‘ವೈಟ್ ಹೌಸ್’ ದಿಂದ ಬ್ರಿಟನ್ನಿನ ಪ್ರಧಾನಿಯ ಮನೆವರೆಗೂ ದೀಪಾವಳಿ ಆಚರಣೆ !

ನವದೆಹಲಿ – ವಿಶ್ವದಲ್ಲಿನ ಹಲವು ರಾಷ್ಟ್ರಗಳ ದೊಡ್ಡ ನಾಯಕರು ಅಕ್ಟೋಬರ್ 30 ರಂದು ದೀಪಾವಳಿಯನ್ನು ಆಚರಿಸಿ ಶುಭ ಹಾರೈಸಿದ್ದಾರೆ. ಅಮೆರಿಕಾದ ಅಧ್ಯಕ್ಷರ ನಿವಾಸ ‘ಶ್ವೇತಭವನ’ದಲ್ಲಿ ದೀಪಾವಳಿ ಆಚರಿಸಲಾಯಿತು. ಬ್ರಿಟನ್ ಪ್ರಧಾನಿಯವರು ತಮ್ಮ ನಿವಾಸದಲ್ಲಿ ದೀಪ ಬೆಳಗಿಸಿದರು. ಬ್ರಿಟನ್‌ನಲ್ಲಿ ದೀಪಾವಳಿ ಆಚರಿಸುತ್ತಿರುವ ಎಲ್ಲರಿಗೂ ಅವರು ಅಭಿನಂದಿಸಿ ಶುಭ ಹಾರೈಸಿದರು.

1. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಜ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ‘ಪೋಸ್ಟ್’ ಮಾಡಿ ದೀಪಾವಳಿಯ ಶುಭಾಶಯಗಳನ್ನು ಹೇಳಿದ್ದಾರೆ. ‘ದೀಪಾವಳಿ ದೀಪಗಳ ಹಬ್ಬವಾಗಿದ್ದು, ಅದನ್ನು ಸಂಭ್ರಮದಿಂದ ಆಚರಿಸಬೇಕು’ ಎಂದು ಅವರು ಹೇಳಿದ್ದಾರೆ.

2. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಪಾಕಿಸ್ತಾನ ಮತ್ತು ವಿಶ್ವದಾದ್ಯಂತ ವಾಸಿಸುವ ಹಿಂದೂಗಳಿಗೆ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ.

3. ಸಂಯುಕ್ತ ಅರಬ್ ಎಮಿರೇಟ್ಸ್ ನ ಶಾಸಕ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಇವರು ಎಲ್ಲರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, ‘ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ಮತ್ತು ಪ್ರಪಂಚದಾದ್ಯಂತ ದೀಪಾವಳಿಯನ್ನು ಆಚರಿಸುತ್ತಿರುವ ಎಲ್ಲಾ ಜನರಿಗೆ ದೀಪಾವಳಿಯ ಶುಭಾಶಯಗಳು. ದೀಪಗಳ ಬೆಳಕಿನ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷವನ್ನು ತರಲಿ ಮತ್ತು ದೇವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಯಾವಾಗಲೂ ಸುರಕ್ಷಿತವಾಗಿಡಲಿ.’ ಎಂದು ಬರೆದಿದ್ದಾರೆ.