ಇಸ್ಲಾಮಿಕ್ ದೇಶಗಳ ಸಂಘಟನೆಯಿಂದ ಮಹಿಳೆಯರಿಗೆ ಶಿಕ್ಷಣ ನೀಡಲು ಪ್ರಾರಂಭಿಸುವಂತೆ ತಾಲಿಬಾನ ಮೇಲೆ ಒತ್ತಡ !

ಪರಿಸ್ಥಿತಿ ನೋಡಿ ನಿರ್ಧಾರ ಕೈಗೊಳ್ಳುವವರೆಗೆ ತಾಳ್ಮೆಯಿಂದಿರುವಂತೆ ತಾಲಿಬಾನಿಗಳ ಸಲಹೆ !

ಕಾಬೂಲ್ (ಅಫ್ಘಾನಿಸ್ತಾನ) – ನಮ್ಮ ಸಮಾಜಕ್ಕೂ ಸ್ತ್ರೀ ಶಿಕ್ಷಣದ ಅಗತ್ಯವಿದೆ. ನಾವು ಈ ಅಂಶದ ಮೇಲೆ ಕಾರ್ಯ ಮಾಡುತ್ತಿದ್ದೇವೆ; ಆದರೆ ಪರಿಸ್ಥಿತಿ ನೋಡಿ ನಂತರ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಆದ್ದರಿಂದ ತಾಳ್ಮೆ ವಹಿಸಬೇಕು ಎನ್ನುವ ಶಬ್ದಗಳಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಸರಕಾರ ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯಾದ ‘ಆರ್ಗನೈಜೆಶನ್ ಆಫ್ ಇಸ್ಲಾಮಿಕ್ ಕೊಆಪರೇಶನ್’ಯ (ಒಐಸಿಯ) ನಿಯೋಗಕ್ಕೆ ತಿಳಿಸಿದೆ. ಸದ್ಯಕ್ಕೆ ಈ ನಿಯೋಗವು ಅಫ್ಘಾನಿಸ್ತಾನ ಪ್ರವಾಸದಲ್ಲಿದೆ. ಅಫ್ಘಾನಿಸ್ತಾನ ಈ ಸಂಘಟನೆಯ ಸದಸ್ಯ ರಾಷ್ಟ್ರವಾಗಿರುವುದರಿಂದ ತಾಲಿಬಾನ್ ಸರಕಾರದ ಮೇಲೆ ಈ ಬಾರಿ ಮಹಿಳೆಯರಿಗೆ ಶಿಕ್ಷಣ ನೀಡಲು ಪ್ರಾರಂಭಿಸುವಂತೆ ಈ ಸಂಘಟನೆ ಒತ್ತಡ ಹೇರಿತ್ತು. ಅದಕ್ಕೆ ಉತ್ತರವಾಗಿ ತಾಲಿಬಾನ ಮೇಲಿನ ಅಧಿಕೃತ ಹೇಳಿಕೆಯನ್ನು ಪ್ರಸಾರ ಮಾಡಿದೆ. ಈ ಪ್ರಕರಣದಲ್ಲಿ ತಾಲಿಬಾನ್ ಸರಕಾರ ಮತ್ತು ಒಐಸಿ ನಿಯೋಗದ ನಡುವೆ ಇಲ್ಲಿಯವರೆಗೆ ಯಾವುದೇ ಒಪ್ಪಂದ ಆಗಿಲ್ಲ. ಈ ನಿಯೋಗ ಅನೇಕ ಧಾರ್ಮಿಕ ಮುಖಂಡರನ್ನು ಒಳಗೊಂಡಿದೆ.

ಅಫಘಾನಿ ವಿದ್ಯಾರ್ಥಿನಿಯರಿಂದ ತಾಲಿಬಾನ ಸರಕಾರದ ಟೀಕೆ

ಅಫ್ಘಾನಿಸ್ತಾನದ ವಿದ್ಯಾರ್ಥಿನಿಯರು ತಾಲಿಬಾನ ಸರಕಾರದ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ಅವರು, ಇನ್ನೂ ಎಷ್ಟು ತಾಳ್ಮೆ ವಹಿಸಬೇಕು? ಇಂತಹ ನಿರ್ಬಂಧಗಳಿಂದ ನಾವು ಬೇಸತ್ತಿದ್ದೇವೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಎಲ್ಲಾ ಸಂಸ್ಥೆಗಳು ಸುಮಾರು 2 ವರ್ಷಗಳಿಂದ ಮುಚ್ಚಲ್ಪಟ್ಟಿವೆ. ನಾವು ಈ ಬಗ್ಗೆ ತಾಲಿಬಾನ್ ಸರಕಾರದೊಂದಿಗೆ ಮಾತನಾಡಿದಾಗ, ಅವರು ಶೀಘ್ರದಲ್ಲೇ ಶಾಲೆಗಳು ಮತ್ತು ಕಾಲೇಜುಗಳನ್ನು ತೆರೆಯುವುದಾಗಿ ಭರವಸೆ ನೀಡಿದರು; ಆದರೆ ಇಲ್ಲಿಯವರೆಗೆ ಅದು ನಡೆದಿಲ್ಲ ಎಂದು ಹೇಳಿದೆ.

ಸಂಪಾದಕೀಯ ನಿಲುವು

‘ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯ ಮಾತನ್ನೂ ಕೇಳದ ತಾಲಿಬಾನಿಗಳು ಯಾವ ಇಸ್ಲಾಮಿಕ್ ರಾಜ್ಯವನ್ನು ನಡೆಸುತ್ತಿದ್ದಾರೆ?’ ಎಂದು ಜಗತ್ತಿಗೆ ಪ್ರಶ್ನೆ ಮೂಡಿದೆ. ‘ಈ ಸಂಘಟನೆಯು ತಾಲಿಬಾನ್ ಸರಕಾರಕ್ಕೆ ಮಾನ್ಯತೆಯನ್ನು ಕೊಡಬಾರದು ಎಂದು ಯಾರಾದರೂ ಹೇಳಿದರೆ ತಪ್ಪಾಗುವುದಿಲ್ಲ !