ಸಂಸ್ಕೃತ ಭಾಷೆಯನ್ನು ಕಾಪಾಡಲು ವಿವಿಧ ಪ್ರಯತ್ನಗಳಾಗುವುದು ಆವಶ್ಯಕ !

ಸಂಸ್ಕೃತದ ಶಬ್ದಗಳು ಆಕರ್ಷಕ ಮತ್ತು ಆನಂದದಾಯಕ ವಾಗಿವೆ. ಉದಾಹರಣೆಗೆ ಸುಪ್ರಭಾತಮ್, ಸುಸ್ವಾಗತಮ್, ಹಾಗೆಯೇ ‘ಮಧುರಾಷ್ಟಕಮ್’ ಮೊದಲಾದ ಶಬ್ದಗಳು. ಒಂದು ವೇಳೆ ಸಂಸ್ಕೃತ ಭಾಷೆಯನ್ನು ವ್ಯವಹಾರದಲ್ಲಿ ಬಳಸಿದರೆ, ನಾವು ಸತತವಾಗಿ ಪ್ರಸನ್ನರಾಗಿರಬಹುದು; ಆದರೆ ಇಂದಿನ ಕಾಲದಲ್ಲಿ ಪಾಶ್ಚಿಮಾತ್ಯರ ಕುರುಡು ಅನುಕರಣೆಯಿಂದಾಗಿ ಸಂಸ್ಕೃತ ಭಾಷೆಯ ಬಳಕೆ ಸಂಪೂರ್ಣ ನಿಂತುಹೋಗಿದೆ. ಇದು ಖೇದಜನಕ ವಿಷಯವಾಗಿದೆ. ಸಂಸ್ಕೃತದ ಮರುಬಳಕೆಗಾಗಿ ನಾವು ವ್ಯವಹಾರದಲ್ಲಿ ಸಂಸ್ಕೃತವನ್ನು ಮಾತನಾಡಲು ಪ್ರಾರಂಭಿಸಬೇಕಾಗುವುದು. ಮಕ್ಕಳಿಗೆ ಪಠ್ಯಪುಸ್ತಕದಲ್ಲಿ ಸಂಸ್ಕೃತ ಭಾಷೆಯನ್ನು ಕಡ್ಡಾಯವಾಗಿಸಿ ಅದನ್ನು ಕಲಿಸಬೇಕು ಮತ್ತು ಅವರಿಗೆ ಅದನ್ನು ಕಲಿಯಲು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳಿಗೆ ವೈದಿಕ ಗಣಿತದ ಲಾಭವನ್ನು ದೊರಕಿಸಿಕೊಟ್ಟರೆ, ಅವರು ಗಣಿತದ ಕ್ಷೇತ್ರದಲ್ಲಿ ತುಂಬಾ ಪ್ರಗತಿಯನ್ನು ಮಾಡಿಕೊಳ್ಳುವರು. ಸಂಸ್ಕೃತ ಭಾಷೆಯು ನಮ್ಮ ದೇಶದ ಮತ್ತು ಸಂಸ್ಕೃತಿಯ ಗುರುತಾಗಿದೆ, ಸ್ವಾಭಿಮಾನವಾಗಿದೆ. ಈ ಭಾಷೆಯು ಲೋಪವಾಗದಂತೆ ನಾವು ನೋಡಿಕೊಳ್ಳಬೇಕಾಗುವುದು.’
(ಆಧಾರ : ಮಾಸಿಕ ‘ಋಷಿ ಪ್ರಸಾದ’, ಜುಲೈ ೨೦೧೪)