(ಟಿಪ್ಪಣಿ : ‘ಡೀಪ್ ಸ್ಟೇಟ್’ ಅಂದರೆ ಸರಕಾರಿ ಅಧಿಕಾರಿಗಳು ಮತ್ತು ಖಾಸಗಿ ಸಂಸ್ಥೆಗಳ ನಡುವೆ ಗುಪ್ತ ಜಾಲವನ್ನು ನಿರ್ಮಿಸುವ ಹಾಗೂ ಅದು ಯಾರಿಗೂ ಜವಾಬ್ದಾರವಾಗಿರದೇ ಸರಕಾರಿ ನಿಲುವುಗಳ ಮೇಲೆ ಪ್ರಭಾವ ಬೀರುವ ವಿಚಾರಧಾರೆ.) ಸಾಮ್ಯವಾದಿ ವ್ಯವಸ್ಥೆ ನಿರ್ಮಿಸಲು ಇರುವ ವಿಚಾರಧಾರೆ, ಬಹಿರಂಗವಾಗಿ ಅಥವಾ ಗುಪ್ತವಾಗಿ ಈಗಿರುವ ವ್ಯವಸ್ಥೆಯನ್ನು ಬುಡಮೇಲು ಮಾಡುವ ‘ಡೀಪ್ ಸ್ಟೇಟ್’ಅನ್ನು ಪ್ರತಿನಿಧಿಸುವ ಚಿತ್ರ ‘ಇಡೀ ಜಗತ್ತಿನ ಮೇಲೆ ತನ್ನ ವರ್ಚಸ್ಸು ಇರಬೇಕು’, ಎಂಬ ಮಹತ್ವಾಕಾಂಕ್ಷೆಯಲ್ಲಿರುವ ಕೆಲವು ನಿರಂಕುಶವಾದಿ ಶಕ್ತಿಗಳು ಜಗತ್ತಿನಲ್ಲಿ ಕಾರ್ಯನಿರತವಾಗಿವೆ. ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ತಮ್ಮ ಇಚ್ಛೆಗನುಸಾರ ಭೂರಾಜಕೀಯ ಬದಲಾವಣೆಯನ್ನು ಕೆಲವೊಮ್ಮೆ ಬಲವಂತದಿಂದ ಅಥವಾ ಆಕ್ರಮಣದ ಮೂಲಕ, ಕೆಲವೊಮ್ಮೆ ರಹಸ್ಯವಾಗಿ ಕಪಟತನದಿಂದ ನಿರಂತರ ಮಾಡಿಸಿಕೊಳ್ಳುವುದು, ಇದು ಈ ದುಷ್ಟ ಶಕ್ತಿಗಳ ಕಾರ್ಯಶೈಲಿಯಾಗಿದೆ. ಈ ಶಕ್ತಿಯೆಂದರೆ – ಅ. ಅಮೇರಿಕಾದ ವರ್ಚಸ್ಸನ್ನು ಕಾಪಾಡುವ ‘ಆಂಗ್ಲೋ-ಸಕ್ಸನ್ ಡೀಪ್ ಸ್ಟೇಟ್’. ಆ. ಇಡೀ ಮಾನವೀ ಸಭ್ಯತೆಯನ್ನು ನಾಶಗೊಳಿಸಿ ಅದರ ಸ್ಥಾನದಲ್ಲಿ ತಮ್ಮ ವಿಚಾರಗಳ ಸಾಮ್ಯವಾದಿ ವ್ಯವಸ್ಥೆ ನಿರ್ಮಿಸಲು ಟೊಂಕಕಟ್ಟಿರುವ ಸಾಂಸ್ಕೃತಿಕ ಮಾರ್ಕ್ಸ್‌ವಾದದ ವಿಚಾರಧಾರೆ, ಅದನ್ನು ಜಗತ್ತಿನ ಉದಯೋನ್ಮುಖ ಬಲಿಷ್ಠ ರಾಷ್ಟ್ರವಾಗಿರುವ ಚೀನಾ ಚಾತುರ್ಯದಿಂದ ಮಾಡಿಸಿಕೊಳ್ಳುತ್ತಿರುತ್ತದೆ. ಇ. ‘ಇಡೀ ಜಗತ್ತು ಕ್ರೈಸ್ತ ಧರ್ಮದ ವರ್ಚಸ್ಸಿನಲ್ಲಿರಬೇಕು’, ಎಂಬುದಕ್ಕಾಗಿ ಹಗಲಿರುಳು ಶ್ರಮಿಸುವ ಚರ್ಚ್‌ಗಳು ಈ. ‘ಇಡೀ ಜಗತ್ತಿನ ಮೇಲೆ ಇಸ್ಲಾಮ್‌ನ ಧ್ವಜವನ್ನು ಹಾರಿಸಲು ಹಾತೊರೆಯುವ ಜಿಹಾದಿ ಇಸ್ಲಾಮ್’. ಈ ನಾಲ್ಕೂ ಶಕ್ತಿಗಳು ಕೆಲವೊಮ್ಮೆ ಪರಸ್ಪರರ ಸಹಕಾರದಿಂದ, ಕೆಲವೊಮ್ಮೆ ಪರಸ್ಪರರ ವಿರುದ್ಧ ತಮ್ಮ ‘ಅಜೆಂಡಾ’ವನ್ನು (ಕಾರ್ಯ ಸೂಚಿ) ಮುಂದೆ ಸರಿಸುತ್ತಿರುತ್ತವೆ. ಆದ್ದರಿಂದ ಅಂತಾರಾಷ್ಟ್ರೀಯ ಮುತ್ಸದ್ಧಿತನವು ಅನೇಕ ಪದರುಗಳಿರುವ ಹಾಗೂ ಗೊಂದಲಮಯ ಪ್ರಕ್ರಿಯೆ ಆಗಿರುತ್ತದೆ, ಅದರಲ್ಲಿ ಯಾರು ಯಾರ ಜೊತೆಗೆ ಹಾಗೂ ಯಾರ ವಿರುದ್ಧ ಇದು ನಿರಂತರ ಬದಲಾಗುತ್ತಿರುತ್ತದೆ ಹಾಗೂ ಅರ್ಥ ಮಾಡಿಕೊಳ್ಳಲು ಕಠಿಣವಾಗುತ್ತದೆ; ಆದರೆ ಕೆಲವು ವಿಷಯಗಳಲ್ಲಿ ಮಾತ್ರ ಅವರ ‘ಅಜೆಂಡಾಗಳು’ ನಿರಾಯಾಸವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತವೆ, ಆಗ ಅವರು ಏಕನಿಷ್ಠೆಯಿಂದ ಕಾರ್ಯನಿರತರಾಗುತ್ತಾರೆ. ‘ಭಾರತವನ್ನು ವಿಭಜಿಸುವುದು’, ಇದು ಅಂತಹ ಒಂದು ಕಾರ್ಯಕ್ರಮವಾಗಿದೆ. ಇದರಲ್ಲಿ ಇವರೆಲ್ಲರ ಏಕನಿಷ್ಠೆಯಿದೆ. |
೧. ಕ್ರೈಸ್ತರು ಮತ್ತು ಸಾಮ್ಯವಾದಿಗಳು ಆರಂಭಿಸಿದ ಹೊಸ ಪದ್ಧತಿಯ ಯುದ್ಧನೀತಿ
ಚೀನಿ ತತ್ತ್ವಜ್ಞಾನಿ ಸುನ್ ಝು ಇವನು ೨ ಸಾವಿರ ವರ್ಷಗಳ ಹಿಂದೆಯೇ ಮುಂದಿನಂತೆ ಹೇಳಿಟ್ಟಿದ್ದಾನೆ, ‘ಯುದ್ಧ ಭೂಮಿಯಲ್ಲಿ ಮುಖಾಮುಖಿ, ಶಸ್ತ್ರಾಸ್ತ್ರಗಳಿಂದ ಯುದ್ಧ ಮಾಡುವುದು, ಇದು ಹಳೆಯ ಪದ್ಧತಿಯಾಗಿದೆ. ನಿಜವಾದ ಯುದ್ಧವೆಂದರೆ, ಶತ್ರುವಿನ ಪ್ರದೇಶದ ಜನರನ್ನೇ ಉಪಯೋಗಿಸಿ ಅದನ್ನು (ಆ ದೇಶವನ್ನು) ಒಳಗಿಂದಲೇ ಕೊರೆಯುತ್ತಾ ದುರ್ಬಲಗೊಳಿಸಿ ಅದು ತನ್ನಿಂತಾನೇ ಕುಸಿದು ಬೀಳುವಂತೆ ಮಾಡುವುದು’. ಈ ಲೇಖನದಲ್ಲಿ ಉಲ್ಲೇಖಿಸಿದ ಎಲ್ಲ ನಿರಂಕುಶವಾದಿ ಶಕ್ತಿಗಳಿಗೆ ಈ ಮಾರ್ಗದ ಮಹತ್ವ ತಿಳಿದು ಅವರು ಅದನ್ನು ಉಪಯೋಗಿಸಲು ಆರಂಭಿಸಿದ್ದಾರೆ. ಅದಕ್ಕಾಗಿ ಅವರು ತಮ್ಮ ಜಾಗತಿಕ ವರ್ಚಸ್ಸಿನ ಉದ್ದೇಶದ ಮೇಲೆ ಸದ್ಗುಣಗಳ ಸಂಕೇತವನ್ನು ತೋರಿಸುವ (ವರ್ಚ್ಯುವಲ್ ಸಿಗ್ನಲಿಂಗ್) ಆಕರ್ಷಕ ಮುಖವಾಡವನ್ನು ಧರಿಸಿ ಅದರ ಹಿಂದೆ ತಮ್ಮ ವಿಧ್ವಂಸಕ ಕೃತ್ಯಗಳನ್ನು ಆರಂಭಿಸಿದ್ದಾರೆ. ಈ ತಂತ್ರದ ಮಹತ್ವವು ಮೊಟ್ಟಮೊದಲು ಕ್ರೈಸ್ತ ಚರ್ಚ್‌ಗಳಿಗೆ ಮನವರಿಕೆಯಾಯಿತು. ಆದ್ದರಿಂದ ಅವರು ತಮ್ಮ ಧರ್ಮಪ್ರಸಾರದ ಉದ್ದೇಶದಿಂದ ದುರ್ಬಲ ಜನಾಂಗದವರಿಗೆ ಶಿಕ್ಷಣ, ಆರೋಗ್ಯ ಇತ್ಯಾದಿ ಸೇವೆ ನೀಡುವ ಮುಖವಾಡ ಧರಿಸಿದರು. ಸಾಮ್ಯವಾದಿಗಳು ‘ಬಂದೂಕಿನ ನಳಿಕೆಯಿಂದ ಬರುವ ರಕ್ತರಂಜಿತ ಕ್ರಾಂತಿ’ಯ ಬಹಿರಂಗ ಪಾತ್ರವನ್ನು ಬದಿಗಿರಿಸಿ ಸಂಸ್ಕೃತಿಯನ್ನು ಪೋಷಣೆ ಮಾಡುವ ಸಂಸ್ಥೆಗಳನ್ನು ಒಳಗಿಂದ ಗೆದ್ದಲಿನಂತೆ ಕೊರೆಯುವಂತಹ ಸಾಂಸ್ಕೃತಿಕ ಸಂಕಲ್ಪನೆಯನ್ನು ಅಂಗೀಕರಿಸಿದವು.
೨. ‘ಡೀಪ್ ಸ್ಟೇಟ್’ನ ಯೋಜನೆ ಮತ್ತು ಅದರಂತೆ ಮಾಡಿದ ಸರಕಾರ ಉರುಳಿಸಲು ಮಾಡಿದ ಆಘಾತಕಾರಿ ತಂತ್ರ
ಸ್ವಾರ್ಥ ಸಾಧಿಸುವ ಅಮೇರಿಕಾದ ‘ಡೀಪ್ ಸ್ಟೇಟ್’ಗೆ ಈ ತಂತ್ರದ ಮಹತ್ವ ಸ್ವಲ್ಪ ತಡವಾಗಿ ತಿಳಿಯಿತು; ಆದರೆ ನಂತರ ಅದು ಅತ್ಯಂತ ಪ್ರಭಾವಿಯಾಗಿ ಅದನ್ನು ಉಪಯೋಗಿಸಲು ಆರಂಭಿಸಿತು. ಮೊದಲು ‘ಸೈಎ’ (ಅಮೇರಿಕಾದ ಗೂಢಚಾರ ಸಂಸ್ಥೆ) ಈ ಬಲಿಷ್ಠ ಗೂಢಚಾರ ಸಂಘಟನೆಯ ಮೂಲಕ ಜಗತ್ತಿನಲ್ಲಿ ತನಗೆ ಬೇಕಾದ ಹಾಗೆ ಬುಡಮೇಲು ಮಾಡುವ ಆಟವನ್ನು ಆಡಲಾಗುತ್ತಿತ್ತು; ಆದರೆ ಇಂತಹ ಭೂಗತ ಪದ್ಧತಿಯಲ್ಲಿ, ರಹಸ್ಯವಾಗಿ, ಪ್ರಸಂಗಾನುಸಾರ ಹಿಂಸೆಯ ತಂತ್ರವನ್ನು ಉಪಯೋಗಿಸಿ ಮಾಡುವ ಕಾರ್ಯದಿಂದ ‘ದಾನಶೂರ ಪ್ರಜಾಪ್ರಭುತ್ವದ ನಿರ್ಮಾಪಕ’ ಅನಿಸಿಕೊಳ್ಳುವ ಅಮೇರಿಕಾದ ಘನತೆಗೆ ಕುಂದು ಬರುತ್ತಿತ್ತು. ಇದನ್ನು ಗಮನಿಸಿ ಅಮೇರಿಕಾ ‘ನ್ಯಾಶನಲ್ ಎಂಡೋಮೆಂಟ್ ಫಾರ್ ಡೆಮೋಕ್ರಸಿ’ (ಎನ್.ಇ.ಪಿ.) ಎಂಬ ಅಮೇರಿಕನ್ ಸರಕಾರ ಹಾಗೂ ‘ಸಿ.ಐ.ಎ.’ಯ ಸಂಪೂರ್ಣ ಬೆಂಬಲವಿರುವ; ಆದರೆ ಬಹಿರಂಗವಾಗಿ ಖಾಸಗಿಯೆಂದು ಪರಿಗಣಿಸಲ್ಪಡುವ ಸಂಸ್ಥೆಯನ್ನು ಸ್ಥಾಪಿಸಿತು. ‘ಇಡೀ ಜಗತ್ತಿನಲ್ಲಿ ಪ್ರಜಾಪ್ರಭುತ್ವವನ್ನು ಪುರಸ್ಕರಿಸುವುದು’, ಎಂಬ ಆಕರ್ಷಕ ಮುಖವಾಡದ ಹಿಂದೆ ‘ವಿವಿಧ ದೇಶಗಳಲ್ಲಿನ ತನ್ನ ದೃಷ್ಟಿಗೆ ಚುಚ್ಚುವ ಸರಕಾರಗಳನ್ನು ಬುಡಮೇಲು ಮಾಡುವುದು’, ಈ ಸಂಸ್ಥೆಯ ಮುಖ್ಯ ಕಾರ್ಯವಾಗಿರುತ್ತದೆ. ಇದಕ್ಕಾಗಿ ಅದು ತನ್ನ ಗಮನದಲ್ಲಿರುವ ದೇಶಗಳಲ್ಲಿ ಶಿಕ್ಷಣ, ಪರಿಸರ, ಪ್ರಜಾಪ್ರಭುತ್ವದ ಸ್ಥಾಪನೆಯಂತಹ ಆಕರ್ಷಕ ವಿಷಯಗಳನ್ನು ಆಯ್ದುಕೊಂಡು ಅದರ ಆಧಾರದಲ್ಲಿ ಸರಕಾರದ ವಿರುದ್ಧ ಜನಾಭಿಪ್ರಾಯ ಸಿದ್ಧಪಡಿಸುವುದು, ಚಳುವಳಿ ಆರಂಭಿಸುವುದು, ಸಮಾಜದಲ್ಲಿ ಬಿರುಕುಂಟು ಮಾಡಿ ಸಂಘರ್ಷ ಮಾಡಿಸುವುದು, ಅರಾಜಕ ಪರಿಸ್ಥಿತಿ ಸೃಷ್ಟಿಸಿ ಸರಕಾರವನ್ನು ಉರುಳಿಸುವುದು, ಇತ್ಯಾದಿ ಕಾರ್ಯ ಮಾಡುತ್ತದೆ. ಆ ದೇಶದಲ್ಲಿ ಮೊದಲೇ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದ್ದರೆ, ಆ ದೇಶದ ಪ್ರಜಾಪ್ರಭುತ್ವ ದುರ್ಬಲವಾಗಿದೆಯೆಂದು ಸುಳ್ಳು ಸುದ್ಧಿಯನ್ನು ಹಬ್ಬಿಸಲಾಗುತ್ತದೆ. ಈ ಯೋಜನೆಯನ್ನು ಹಮ್ಮಿಕೊಳ್ಳಲು ಅವರು ಆರ್ಥಿಕವಾಗಿ ಬಲಿಷ್ಠವಾದ ಫೌಂಡೇಶನ್ಸ್, ಮಾಧ್ಯಮಗಳು, ಕಾರ್ಯಕರ್ತರು, ಸ್ವಯಂಸೇವಿ ಸಂಸ್ಥೆಗಳ ದೊಡ್ಡ ಒಂದು ವಿಶ್ವವ್ಯಾಪಿ ಜಾಲವನ್ನು ನಿರ್ಮಿಸಿದ್ದಾರೆ. ಅವರು ಹಮ್ಮಿಕೊಳ್ಳುವ ಆಂದೋಲನಗಳ ಹಿಂದೆ ಈ ಜಾಲಗಳ ಆರ್ಥಿಕ ಶಕ್ತಿ ಹಾಗೂ ಪ್ರಚಾರತಂತ್ರದ ಆದೇಶವಿರುವುದು ಕಂಡುಬರುತ್ತದೆ.
‘ಡೀಪ್ ಸ್ಟೇಟ್’ನ ಯೋಜನೆಗನುಸಾರ ‘ಭಾರತದಲ್ಲಿನ ಚುನಾವಣೆಗಳಲ್ಲಿ ಸರಕಾರ ಬದಲಾಯಿಸುವ ತಂತ್ರ ಸಫಲವಾಗಿಲ್ಲ’, ಎಂದು ಹೇಳಿದಾಗ ಯೋಗೇಂದ್ರ ಯಾದವ ಹೇಳಿದ ಮಾತು ಹೀಗಿತ್ತು, ‘ಇನ್ನು ಮುಂದೆ ಸಂವಿಧಾನದ ರಕ್ಷಣೆ ಚುನಾವಣೆಯಿಂದಲ್ಲ, ಜನಾಂದೋಲನದಿಂದಾಗುವುದು’, ಈ ವಾಕ್ಯ ಮುಂದೆ ಏನು ಸೂಚಿಸುತ್ತದೆ, ಎಂಬುದರ ಉದಾಹರಣೆ ಆಗಿದೆ. ಈಜಿಪ್ತ್, ಟ್ಯುನೀಶಿಯಾದಂತಹ ದೇಶಗಳಲ್ಲಿ ೨೦೧೧ ರಲ್ಲಿ ನಡೆದಿರುವ ‘ಅರಬ ಸ್ಪ್ರಿಂಗ್’ ಈ ಚಳುವಳಿ, ಯುಕ್ರೇನ್‌ನಲ್ಲಿ ೨೦೦೪ ರಲ್ಲಿ ನಡೆದಿರುವ ‘ಆರೇಂಜ್ ರಿವೆಲ್ಯುಶನ್’ ಚಳುವಳಿ ೨೦೧೩-೧೪ ರಲ್ಲಿನ ‘ಯುರೋಮೆಡನ್ ಪ್ರೊಟೆಸ್ಟ್ಸ್’, ೨೦೨೪ ರಲ್ಲಿನ ಬಾಂಗ್ಲಾದೇಶದಲ್ಲಿನ ಸರಕಾರ ಬುಡಮೇಲು, ಇಂತಹ ಅನೇಕ ಪ್ರಯೋಗಗಳಲ್ಲಿನ ಅನುಭವದಿಂದ ಬೇಡವಾಗಿರುವ ಸರಕಾರಗಳನ್ನು ಬುಡಮೇಲು ಮಾಡುವ ‘ರೆಜೀಮ್ ಚೇಂಜ್ ಎಕ್ಸ್‌ಪರ್ಟ್ಸ್’ (ಸರಕಾರಗಳನ್ನು ಬೀಳಿಸುವ ತಜ್ಞರು) ಸಿದ್ಧರಾಗಿದ್ದಾರೆ. ಅಂತಹ ಒಬ್ಬ ‘ತಜ್ಞೆ’ ವಿಕ್ಟೋರಿಯಾ ನ್ಯೂಲ್ಯಾಂಡ್ಸ್ ಇವರನ್ನು ಇತ್ತೀಚೆಗೆ ‘ಎನ್.ಇ.ಪಿ.’ಯ ಸಂಚಾಲಕಿ ಎಂದು ನೇಮಿಸಲಾಯಿತು. ಈ ಹಿಂದೆ ‘ಸಿ.ಐ.ಎ.’ ರಹಸ್ಯವಾಗಿ ಮಾಡುತ್ತಿದ್ದ ಕೆಲಸವನ್ನು ಈಗ ‘ಎನ್.ಇ.ಪಿ.’ ಬಹಿರಂಗವಾಗಿ, ತಾನು ನೀತಿನಿಯಮಗಳ ಪಾಲಕನಂತೆ ಮಾಡುತ್ತದೆ. ಅಮೇರಿಕಾದ ಒತ್ತಡಕ್ಕೆ ಮಣಿಯದೆ ‘ದೇಶಹಿತದ ನಿಲುವನ್ನು ಪಾಲಿಸುವ ಸರಕಾರಗಳು ಹೇಗೆ ‘ಪ್ರಜಾಪ್ರಭುತ್ವವಿರೋಧಿ’ ಆಗಿವೆ ಹಾಗೂ ಅವುಗಳನ್ನು ಉರುಳಿಸುವುದು ಎಷ್ಟು ಪವಿತ್ರ ಕಾರ್ಯವಾಗಿದೆ’, ಎಂಬುದನ್ನು ಪ್ರಚಾರ ಮಾಡಿ ಅವರ ‘ಇಕೋಸಿಸ್ಟಮ್’ ಈ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಚಳುವಳಿಯಿಂದ ಇಂದಿನವರೆಗೆ ವಿವಿಧ ದೇಶಗಳಲ್ಲಿ ಪ್ರಜಾಪ್ರಭುತ್ವವಲ್ಲ, ಅರಾಜಕತೆ, ಹಿಂಸೆ ಹಾಗೂ ವಿಧ್ವಂಸ ಕೋಲಾಹಲವೆಬ್ಬಿಸುತ್ತಿದೆ.
೩. ಆಕರ್ಷಕ ವ್ಯಕ್ತಿಗಳು ‘ಡೀಪ್‌ಸ್ಟೇಟ್’ನ ಹೊಸ ಆಟಗಾರರಾಗಿದ್ದಾರೆ !
ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಪರಿಸರ ಇಂತಹ ಆಕರ್ಷಕ ಮುಖವಾಡಗಳೊಂದಿಗೆ ತಮ್ಮ ವಿಧ್ವಂಸಕಾರಿ ಕೃತ್ಯಗಳಿಗೆ ಸ್ವೀಕಾರಾರ್ಹ ಮುಖವೆನಿಸುವಂತಹ ಕೆಲವು ಆಕರ್ಷಕ ವ್ಯಕ್ತಿಗಳನ್ನೂ ಅವರು ನಿರ್ಮಿಸುತ್ತಾರೆ. ವಿವಿಧ ಮಾನಸನ್ಮಾನ, ಪುರಸ್ಕಾರಗಳನ್ನು ನೀಡಿ ಒಂದು ‘ಐಕಾನ್’ ಎಂದು ಅವರನ್ನು ನಿರ್ಮಿಸಲಾಗುತ್ತದೆ. ‘ಮ್ಯಾಗೆಸೆಸ್’ ಪುರಸ್ಕಾರ ಈ ಜನರಿಗೆ ಅನಾಯಾಸವಾಗಿ ಸಿಗುತ್ತವೆ. ಅನೇಕ ಬಾರಿ ಇವರು ನೋಬೆಲ್ ಪುರಸ್ಕಾರಗಳಿಗೂ ಸಾಲಿನಲ್ಲಿ ನಿಲ್ಲುತ್ತಾರೆ. ಯಾವುದೇ ಪ್ರಾಮಾಣಿಕತೆ ಅಥವಾ ಸಂವಿಧಾನಾತ್ಮಕ ಆಧಾರವಿಲ್ಲದ ಬಾಂಗ್ಲಾದೇಶದ ಮೇಲೆ ಹೇರಿರುವ ಸರಕಾರದ ‘ಸಲಹೆಗಾರ’ ಮಹಮ್ಮದ ಯೂನಸ್ ಇವನು ಕೂಡ ಹೀಗೆಯೆ ಒಬ್ಬ ‘ಡೀಪ್ ಸ್ಟೇಟ್’ ಪೋಷಣೆ ಮಾಡಿರುವ ಮುಖವಾಗಿದೆ ! ಭಾರತದಲ್ಲಿಯೂ ಇಂತಹ ಅನೇಕ ಮುಖಗಳನ್ನು ನಿರ್ಮಿಸುವ ಪ್ರಯತ್ನ ನಡೆಯಿತು. ಅದರಲ್ಲಿ ಒಂದು ಮುಖವೆಂದರೆ, ಅರವಿಂದ ಕೇಜರೀವಾಲ ! ತನ್ನ ಉದ್ದೇಶವನ್ನು ಸಾಧಿಸಲು ಕೇಜರಿವಾಲ ಎಷ್ಟು ಉಪಯೋಗವಾಗುವರು, ಎಂಬುದು ಖಾತ್ರಿ ಇಲ್ಲದಿರುವುದರಿಂದ ಹೊಸ ಮುಖಗಳ ಹುಡುಕಾಟ ಆರಂಭವಾಗಿದೆ. ಇದರಲ್ಲಿನ ಒಂದು ಹೆಸರು ಸೋನಮ್ ವಾಂಗ್‌ಚುಕ್ !
೪. ನಟ ಆಮೀರ್ ಖಾನ್, ಕಾಂಗ್ರೆಸ್, ಚೀನಾ ಮತ್ತು ಸೋನಮ್ ವಾಂಗ್‌ಚುಕ್ ಇವರಲ್ಲಿ ಇರುವ ಪರಸ್ಪರ ಸಂಬಂಧ
ನಟ ಆಮೀರ್ ಖಾನ್‌ನ ‘ಥ್ರೀ ಈಡಿಯೆಟ್ಸ್’ ಈ ಚಲನಚಿತ್ರದಲ್ಲಿ ‘ರ್ಯಾಂಚೋ’ ಈ ಪಾತ್ರವನ್ನು ಸೋನಮ್ ವಾಂಗ್‌ಚುಕ್ ಇವರಿಂದ ಆಯ್ದುಕೊಳ್ಳಲಾಗಿದೆ’, ಎಂದು ಹೇಳಲಾಯಿತು ಹಾಗೂ ಅವರ ಸುತ್ತಲೂ ಸದ್ಗುಣಗಳ ಒಂದು ವಲಯವನ್ನು ಹೆಣೆಯಲಾಯಿತು. ಚಲನಚಿತ್ರದಲ್ಲಿ ‘ರ್ಯಾಂಚೋ ಇವನನ್ನು ಒಬ್ಬ ಬಡ ಮಾಲಿಯ (ತೋಟಗಾರ) ಮಗನಾಗಿ ತೋರಿಸಲಾಗಿದೆ; ಆದರೆ ಸೋನಮ್ ವಾಂಗ್‌ಚುಕ್ ಇವರು ಶ್ರೀಮಂತ ಹಾಗೂ ಅಧಿಕಾರಶಾಹಿ ಕುಟುಂಬದಲ್ಲಿ ಜನಿಸಿದ್ದಾರೆ, ಎಂಬುದನ್ನು ಎಲ್ಲಿಯೂ ಹೇಳಿಲ್ಲ. ಅವರ ತಂದೆ ಸೋನಮ್ ವಾಂಗ್ಯಾಲ ಇವರು ಕಾಂಗ್ರೆಸ್ಸಿನ ಮುಖಂಡರು ಹಾಗೂ ಜಮ್ಮು-ಕಾಶ್ಮೀರ ಸರಕಾರದಲ್ಲಿ ಸಚಿವರಾಗಿದ್ದರು. ೨೦೦೮ ರಲ್ಲಿ ಕಾಂಗ್ರೆಸ್ ಪಕ್ಷ ಚೀನಾದ ‘ಕಮ್ಯುನಿಸ್ಟ್ ಪಕ್ಷ’ದೊಂದಿಗೆ ರಹಸ್ಯವಾಗಿ ಒಪ್ಪಂದ ಮಾಡಿಕೊಂಡಿತು, ಅದರ ವಿವರಣೆ ಇದುವರೆಗೂ ಬಹಿರಂಗವಾಗಿಲ್ಲ. ಅನಂತರ ಆಮೀರ್ ಖಾನ್‌ನ ಚಲನಚಿತ್ರಗಳಿಗೆ ಚೀನಾದಲ್ಲಿ ಅನಿರೀಕ್ಷಿತವಾಗಿ ಸಾವಿರಾರು ಕೋಟಿ ರೂಪಾಯಿಗಳ ರಹಸ್ಯ ಆದಾಯ ಬರಲು ಆರಂಭವಾಯಿತು. ೨೦೦೯ ರಲ್ಲಿ ಕಾಂಗ್ರೆಸ್ ಸರಕಾರದ ಅಂದಿನ ರಕ್ಷಣಾಸಚಿವ ಎ.ಕೆ. ಆಂಟನಿ ಇವರು ಲೋಕಸಭೆಯಲ್ಲಿ, ‘ನಾವು ನಿರ್ಮಿಸಿದ ಸೇತುವೆ ಮತ್ತು ರಸ್ತೆಗಳನ್ನು ಉಪಯೋಗಿಸಿ ಚೀನಾ ನಮ್ಮ ಮೇಲೆ ದಾಳಿ ಮಾಡಬಾರದು; ಎಂದು ನಾವು ಭಾರತ-ಚೀನಾ ಗಡಿಯಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳನ್ನು ನಿರ್ಮಿಸುವುದಿಲ್ಲ ಎಂದು ಹೇಳಿದರು.’ ಈಗ ಸೋನಮ್ ವಾಂಗ್‌ಚುಕ್ ಇವರ ಬೇಡಿಕೆಯೆಂದರೆ, ‘ಲಡಾಖ್ ಇದರ ಪರಿಸರದ ಮೇಲೆ ಪರಿಣಾಮವಾಗಬಾರದು ಎಂಬುದಕ್ಕಾಗಿ ಮೋದಿ ಸರಕಾರವು ಗಡಿಯಲ್ಲಿ ಮೂಲಭೂತ ಸೌಕರ್ಯಗಳನ್ನು ನಿಲ್ಲಿಸಬೇಕು.’ ‘ಸಂಪೂರ್ಣ ಲಡಾಖ್ ಕಬಳಿಸುವ ಚೀನಾದ ಮಹತ್ವಾಕಾಂಕ್ಷೆ ಇರುವಾಗ ಭಾರತೀಯ ಸೈನಿಕರಿಗೆ ವೇಗವಾಗಿ ಚಲಿಸಲು ಸಾಧ್ಯವಾಗಬೇಕೆಂದು ಭಾರತ ಸರಕಾರ ಮಾಡುತ್ತಿರುವ ಪ್ರಯತ್ನಗಳಿಗೆ ಅಡ್ಡಗಾಲು ಇಡುವ ಪ್ರಯತ್ನ ಇದಾಗಿದೆ’, ಇದು ಕಾಂಗ್ರೆಸ್ ಮತ್ತು ಸೋನಮ್ ವಾಂಗ್‌ಚುಕ್ ಇವರಿಬ್ಬರಿಗೂ ಒಪ್ಪಿಗೆಯಿದೆ ಹಾಗೂ ಇನ್ನೂ ಅನೇಕ ವಿಷಯಗಳು ಸಿದ್ಧವಾಗಬಹುದು !
೫. ಸೋನಮ್ ವಾಂಗ್‌ಚುಕ್‌ನಿಗೆ ವಿದೇಶದಿಂದ ಸಿಗುವ ಧನಸಹಾಯ ಹಾಗೂ ಕಾಂಗ್ರೆಸ್ಸಿನೊಂದಿಗಿನ ಹಿತಸಂಬಂಧ
೧೯೮೮ ರಲ್ಲಿ ವಾಂಗ್‌ಚುಕ್ ಇವರು ಲಡಾಖ್‌ನಲ್ಲಿ ‘ಸ್ಟುಡೆಂಟ್ಸ್ ಎಜ್ಯುಕೇಶನ್‌ಲ್ ಎಂಡ್ ಕಲ್ಚರಲ್ ಮೂವ್‌ಮೆಂಟ್’, ೧೯೯೫ ರಲ್ಲಿ ‘ಆಪರೇಶನ್ ನ್ಯೂ ಹೋಪ್’ ಇದನ್ನು ಪ್ರಾರಂಭಿಸಿದರು. ಅದರ ಎಲ್ಲ ಯೋಜನೆಗಳಿಗೆ ‘ಫೋರ್ಡ್ ಫೌಂಡೇಶನ್’ ಮತ್ತು ‘ಡನ್ ಚರ್ಚ್ ಏಡ್’ ಇದರಿಂದ ಧನಸಹಾಯ ಸಿಗುತ್ತಿತ್ತು. ೧೯೯೦ ರ ದಶಕದ ಪ್ರಾರಂಭದಲ್ಲಿ ಅವರು ಅಮೇರಿಕನ್ ರಿಬೆಕಾ ನಾರ್ಮನ್ ಇವಳೊಂದಿಗೆ ವಿವಾಹವಾದರು. ಅವಳ ಶಿಕ್ಷಣ ಅಮೇರಿಕಾದ ವಿದೇಶ ವಿಭಾಗದೊಂದಿಗೆ ಸಂಬಂಧವಿರುವ ‘ಸ್ಕೂಲ್ ಫಾರ್ ಇಂಟರ್‌ನೇಶನಲ್ ಟ್ರೇನಿಂಗ್ (ಎಸ್.ಐ.ಟಿ.)’ ಹಾಗೂ ಹಾರ್ವರ್ಡ್ ವಿದ್ಯಾಪೀಠದಲ್ಲಿ ಆಗಿತ್ತು. ‘ಎಸ್.ಐ.ಟಿ.’ಗೆ ‘ಫೋರ್ಡ್ ಫೌಂಡೇಶನ್’ ಮತ್ತು ಅಂತಾರಾಷ್ಟ್ರೀಯ ಉದ್ಯಮಿ ಜಾರ್ಜ್ ಸೊರೋಸ್ ಇವರ ‘ಓಪನ್ ಸೊಸೈಟಿ ಫೌಂಡೇಶನ್’ ನಿಂದ ಆರ್ಥಿಕ ಸಹಾಯ ಸಿಗುತ್ತಿದೆ. ರೆಬೆಕಾಳೊಂದಿಗೆ ವಿವಾಹವಾದ ನಂತರ ವಾಂಗ್‌ಚುಕ್‌ಗೆ ವಿದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಹಣ ಸಿಗಲು ಆರಂಭವಾಯಿತು. ೨೦೦೨ ರಲ್ಲಿ ಅವರಿಗೆ ‘ಅಶೋಕಾ ಫೆಲೋಶಿಪ್’ (ಶಿಷ್ಯವೃತ್ತಿ) ಸಿಕ್ಕಿತು, ಅದನ್ನು ‘ಸ್ಕೋಲ್ ಫೌಂಡೇಶನ್’, ‘ಸ್ವಬ್ ಫೌಂಡೇಶನ್’ ಮತ್ತು ‘ರಾಕ್‌ಫೆಲರ್ ಫೌಂಡೇಶನ್’ ಇವರ ವತಿಯಿಂದ ನೀಡಲಾಗುತ್ತಿತ್ತು.
೨೦೦೪ ರಲ್ಲಿ ಕಾಂಗ್ರೆಸ್ ಪುರಸ್ಕೃತ ಸಮ್ಮಿಶ್ರ ಮೈತ್ರಿ ಸರಕಾರ ಬಂದ ನಂತರ ವಾಂಗ್‌ಚುಕ್‌ಗೆ ದೊಡ್ಡ ಪ್ರಮಾಣದಲ್ಲಿ ಹೊಸ ಹೊಸ ಅವಕಾಶ ಗಳು ಮತ್ತು ಸಹಾಯ ಸಿಗಲು ಆರಂಭವಾಯಿತು. ಲಡಾಖ್‌ನ ‘ವಿಸನ್ ಡೊಕ್ಯುಮೆಂಟ್’ ತಯಾರಿಸುವ (ಭವಿಷ್ಯದಲ್ಲಿ ಲಡಾಖ್ ಹೇಗಿರಬೇಕು, ಎಂಬುದರ ಯೋಜನೆ) ಸಮಿತಿಯ ಮೇಲೆ ಹಾಗೂ ಲಡಾಖ್‌ನ ಶಿಕ್ಷಣ ಹಾಗೂ ಪ್ರವಾಸ ಧೋರಣೆಯನ್ನು ಸಿದ್ಧಪಡಿಸಲು ಸ್ಥಾಪಿಸಿದ ಸಮಿತಿಗಳಿಗೆ ಅವರನ್ನು ನೇಮಿಸಲಾಯಿತು. ಕಾಂಗ್ರೆಸ್ಸಿನ ಮನಮೋಹನ ಸಿಂಹ ಸರಕಾರದ ಮಾನವ ಶಕ್ತಿ ವಿಕಾಸ ಸಚಿವಾಲಯದ ‘ನ್ಯಾಶನಲ್ ಗವರ್ನಿಂಗ್ ಕೌನ್ಸಿಲ್ ಫಾರ್ ಎಲಿಮೆಂಟ್ರಿ ಎಜ್ಯುಕೇಶನ್’ ಇದರಲ್ಲಿಯೂ ಅವರ ನೇಮಕ ವಾಯಿತು. ೨೦೦೭ ರಿಂದ ೨೦೧೦ ರ ವರೆಗೆ ಡೆನ್ಮಾರ್ಕ್‌ನ ಒಂದು ಸ್ವಯಂಸೇವಿ ಸಂಸ್ಥೆಯು ಭಾರತ ಸರಕಾರದ ಶಿಕ್ಷಣ ಸಚಿವಾಲಯಕ್ಕಾಗಿ ಕಾರ್ಯ ಮಾಡುತ್ತಿತ್ತು. ಸೋನಮ್ ವಾಂಗ್‌ಚುಕ್ ಇವರು ಅವರಿಗೆ ಸಲಹೆಗಾರರಾಗಿದ್ದರು. ವಿವಿಧ ಹಿತಸಂಬಂಧಗಳ ಜಾಲದಿಂದ ಅವರಿಗೆ ಕಾಂಗ್ರೆಸ್ ಪಕ್ಷದೊಂದಿಗೆ ಆತ್ಮೀಯತೆ ಇತ್ತು ಎಂಬುದು ಸ್ಪಷ್ಟವಾಗುತ್ತದೆ.
೬. ಸೋನಮ್ ವಾಂಗ್‌ಚುಕ್ ಇವರನ್ನು ಆದರ್ಶವನ್ನಾಗಿ ಬಿಂಬಿಸಲು ಕಾಂಗ್ರೆಸ್ ಪಕ್ಷ ಮತ್ತು ‘ಡೀಪ್ ಸ್ಟೇಟ್’ ಇವರು ಮಾಡಿದ ಪ್ರಯತ್ನ !
೨೦೧೬ ರಲ್ಲಿ ಸೋನಮ್ ವಾಂಗ್‌ಚುಕ್ ಇವರಿಗೆ ಸ್ವಿಝರ್ಲೇಂಡ್‌ನಲ್ಲಿನ ‘ಇಂಟರ್‌ನ್ಯಾಶನಲ್ ಯುನಿಯನ್ ಫಾರ್ ಕಂಝರ್ವೇಶನ್ ಆಫ್ ನೇಚರ್’ನ ವತಿಯಿಂದ ‘ಫ್ರೆಡ್ ಎಮ್. ಪೆಕರ್ಡ್’ಈ ಪುರಸ್ಕಾರವನ್ನು ನೀಡಲಾಯಿತು. ಇದಕ್ಕೆ ‘ರಾಕ್‌ಫೆಲರ್ ಫೌಂಡೇಶನ್’ನಿಂದ ಫಂಡಿಂಗ್ ಆಗಿತ್ತು. ೨೦೧೭ ರಲ್ಲಿ ‘ಫೋರ್ಡ್ ಫೌಂಡೇಶನ್’ನಿಂದ ಅವರಿಗೆ ‘ಟಿ.ಎನ್. ಕೋಶೂ ಮೆಮೋರಿಯಲ್ ಅವಾರ್ಡ್’ ನೀಡಲಾಯಿತು. ೨೦೧೮ ರಲ್ಲಿ ವಾಂಗ್‌ಚುಕ್ ಇವರಿಗೆ ‘ಫೋರ್ಡ್ ಫೌಂಡೇಶನ್’ನ ಸರ್ವೋಚ್ಚ ‘ಮ್ಯಾಗೆಸೆಸ್ ಪುರಸ್ಕಾರ’ ನೀಡಲಾಯಿತು. ಪ್ರತಿವರ್ಷ ಒಂದು ಮಹತ್ವದ ಪುರಸ್ಕಾರ ವನ್ನು ನೀಡಿ ಅವರನ್ನು ‘ಐಕಾನ್’ (ಆದರ್ಶ ವ್ಯಕ್ತಿತ್ವ) ಮಾಡಲಾಗುತ್ತಿತ್ತು. ವಾಂಗ್‌ಚುಕ್ ಇವರ ಸಂಪರ್ಕದಲ್ಲಿರುವ ‘ಲೀಡ್ ಇಂಡಿಯಾ’ ಈ ಸಂಸ್ಥೆಗೆ ಕೂಡ ‘ಫೋರ್ಡ್ ಫೌಂಡೇಶನ್’ನಿಂದ ನಿಧಿ ಪೂರೈಸಲಾಗುತ್ತಿದೆ. ವಾಂಗ್‌ಚುಕ್ ಇವರ ಸಂಪರ್ಕದಲ್ಲಿರುವ ಇನ್ನೂ ಒಂದು ಸಂಸ್ಥೆ ‘ಇಂಟರ್‌ನ್ಯಾಶನಲ್ ಅಸೋಸಿಯೇಶನ್ ಫಾರ್ ಲಡಾಖ್ ಸ್ಟಡೀಸ್’ ಇದು ಲಡಾಖ್‌ನ ಸಂಸ್ಕೃತಿಯ ಬಗ್ಗೆ ೪ ಖಂಡಗಳನ್ನು ಪ್ರಕಾಶನ ಮಾಡಿದೆ. ಈ ಯೋಜನೆಗೆ ಯಾರಿಂದ ನಿಧಿ ಬಂದಿದೆ ? ಅದು ಕೂಡ ‘ಫೋರ್ಡ್ ಫೌಂಡೇಶನ್’ನಿಂದಲೆ ! ಈ ಎಲ್ಲ ಮಾಹಿತಿಯಿಂದ ಸೋನಮ್ ವಾಂಗ್‌ಚುಕ್ ಇವರಿಗೆ ಕಾಂಗ್ರೆಸ್ ಪಕ್ಷ ಹಾಗೂ ‘ಡೀಪ್ ಸ್ಟೇಟ್’ನ ಆರ್ಥಿಕ ಶಕ್ತಿ ಯಾರಿಂದ ನಿರ್ವಹಿಸಲಾಗುತ್ತದೆಯೊ, ಆ ಫೌಂಡೇಶನ್ಸ್‌ಗಳ ಜೊತೆಗೆ ಎಷ್ಟು ನಂಟಿದೆ, ಎಂಬುದು ಸ್ಪಷ್ಟವಾಗುತ್ತದೆ. ಇದರಿಂದ ಅವರು ಸೋನಮ್ ವಾಂಗ್‌ಚುಕ್ ಇವರನ್ನು ‘ಒಂದು ಐಕಾನ್’ ಎಂದು ಸೃಷ್ಟಿಸಲು ಎಷ್ಟು ಹಣ ಹೂಡಿದ್ದಾರೆ, ಎಂಬುದು ಕೂಡ ಬಹಿರಂಗವಾಗುತ್ತದೆ. ಈ ಹೂಡಿಕೆಯ ಲಾಭವನ್ನು ಹಿಂತಿರುಗಿಸುವ ಸಮಯ ಈಗ ಬಂದಿದೆಯೆಂದು ಕಾಣಿಸುತ್ತಿದೆ. ಆದ್ದರಿಂದಲೆ ಕಲಮ್ ೩೭೦ (ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಮ್) ರದ್ದುಪಡಿಸಿದಾಗ ಮೊದಲು ಅದನ್ನು ಸ್ವಾಗತಿಸಿದ ಸೋನಮ್ ವಾಂಗ್‌ಚುಕ್ ನಂತರ ಮಾತು ಬದಲಾಯಿಸಿ ಆ ನಿರ್ಣಯವನ್ನು ವಿರೋಧಿಸಲು ಪ್ರಾರಂಭಿಸಿದರು. ಇದರ ಲಾಭ ಪಡೆದು ಪಾಕಿಸ್ತಾನವೂ ಈ ನಿರ್ಣಯಕ್ಕೆ ಲಡಾಖ್ ಕೂಡ ವಿರೋಧಿಸುತ್ತದೆ ಎಂದು ಪ್ರಚಾರ ಮಾಡಲು ಆರಂಭಿಸಿತು. ಚೀನಾ ಮತ್ತು ಪಾಕಿಸ್ತಾನಕ್ಕೆ ಲಾಭವಾಗುವಂತಹ ಚಳುವಳಿ ಮಾಡಲು ಎಂತಹ ಒತ್ತಡ ವಾಂಗ್‌ಚುಕ್ ಇವರ ಮೇಲಿದೆ ?’, ಎಂದು ಪ್ರಶ್ನಿಸುವ ಅವಶ್ಯಕತೆಯಿದೆ.
೭. ಕಥಿತ ಆದರ್ಶ ವ್ಯಕ್ತಿಗಳನ್ನು ಯೋಗ್ಯ ಸಮಯದಲ್ಲಿಯೇ ಗುರುತಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ !
ಈಗ ನಾನು ೨೧ ನೇ ಶತಮಾನದ ಗಾಂಧಿ ಎಂದು ನಟನೆ ಮಾಡುತ್ತಾ ವಾಂಗ್‌ಚುಕ್ ಇವರು ದೆಹಲಿಯಲ್ಲಿ ಉಪವಾಸ ಆರಂಭಿಸಿದ್ದಾರೆ. ಅದರ ಆಧಾರದಲ್ಲಿ ಭಾರತವಿರೋಧಿ ಪ್ರಚಾರ ಜಗತ್ತಿನಾದ್ಯಂತ ಹರಡಿಸಲಾಗುವುದು. ಬಾಂಗ್ಲಾದೇಶದ ನಂತರ ಈಗ ‘ರೆಜೀಮ್ ಚೇಂಜ್’ಗಾಗಿ (ಸರಕಾರವನ್ನು ಉರುಳಿಸುವ ತಜ್ಞ) ಭಾರತವನ್ನು ಸಜ್ಜುಗೊಳಿಸುವ ‘ಡೀಪ್ ಸ್ಟೇಟ್’ನ ಇಚ್ಛೆ ಗುಟ್ಟಾಗಿ ಉಳಿದಿಲ್ಲ. ಆದ್ದರಿಂದ ಪರಿಸರ, ಪ್ರಜಾಪ್ರಭುತ್ವ, ಸಂವಿಧಾನದಂತಹ ಒಳ್ಳೊಳ್ಳೆ ವಿಷಯಗಳಿಗಾಗಿ ಆಂದೋಲನ ಮಾಡುವ ಅನೇಕ ‘ಐಕಾನ್’ ಗಳನ್ನು ನಾವು ನೋಡಲಿಕ್ಕಿದ್ದೇವೆ. ಅವರನ್ನು ಗುರುತಿಸುವುದು ನಮ್ಮ ಕರ್ತವ್ಯವಾಗಿದೆ !
– ಶ್ರೀ. ಅಭಿಜಿತ ಜೋಗ್, ‘ಜಗತ್ತನ್ನು ಕೊರೆಯುವ ಎಡಪಂಥೀಯ ಗೆದ್ದಲು’ ಈ ಪುಸ್ತಕದ ಲೇಖಕರು, ಪುಣೆ. (೭.೧೦.೨೦೨೪)