ಆದರ್ಶ ಪ್ರಾಚೀನ ಭಾರತೀಯ ನ್ಯಾಯವ್ಯವಸ್ಥೆ

೧. ಅಪರಾಧಿ ಅಪರಾಧ ಮಾಡದಂತೆ ತಡೆಯುವ ತತ್ತ್ವ

‘ಆತ್ಮ, ಶರೀರ, ಇಂದ್ರಿಯಗಳು, ಅರ್ಥ, ಬುದ್ಧಿ, ಜ್ಞಾನ, ಸಿದ್ಧಿ, ಮನಸ್ಸು, ವೃತ್ತಿ, ದೋಷ, ಭೂತ, ಪರಿಣಾಮ ಮತ್ತು ನ್ಯಾಯಾಂಗದ ವಿಷಯದಲ್ಲಿ ಬರೆಯುವ ಗೌತಮ ಋಷಿಗಳು ಮುಂದಿನಂತೆ ಹೇಳಿದ್ದಾರೆ, ‘ದುಃಖ ಜನ್ಮಪ್ರವೃತ್ತಿದೋಷ ಮಿಥ್ಯಾಜ್ಞಾನ ಮುತ್ತರೋತ್ರಾಪೆ ತದನ್ತರ ಪಯದಾಪಾ ವರ್ಗಃ |’ (ಆಧಾರ : ನ್ಯಾಯಶಾಸ್ತ್ರ) ಇದರ ಅರ್ಥ ‘ದುಃಖ, ಜನ್ಮದಿಂದಲೆ ಪ್ರಾಪ್ತಿಯಾದ ದೋಷಯುಕ್ತ ಪ್ರವೃತ್ತಿ, ಸುಳ್ಳು ಜ್ಞಾನ ಹಾಗೂ ಸುಳ್ಳು ಜ್ಞಾನದಿಂದ ನಿರ್ಮಾಣವಾಗುವ ದುಷ್ಕೃತ್ಯ ಇವೆಲ್ಲವೂ ನಂತರ ಮೋಕ್ಷ ಹಾಗೂ ನ್ಯಾಯಶಾಸ್ತ್ರದಿಂದ ದೂರವಾಗುತ್ತದೆ.’ ನ್ಯಾಯಶಾಸ್ತ್ರಕ್ಕನುಸಾರ ಯಾವ ತತ್ತ್ವದ ಜ್ಞಾನವು ಮೋಕ್ಷ ಅಥವಾ ಅಪರಾಧ ಅಥವಾ ಅನಧಿಕೃತ ಕೃತಿಗಳನ್ನು ತಡೆಯುತ್ತದೋ, ಅವುಗಳ ಸಂಖ್ಯೆ ‘ಸಾಕ್ಷಿ (ಇವು ಮುಖ್ಯವಾಗಿ ೪ ಇವೆ. ಪ್ರತ್ಯಕ್ಷ, ಅನುಮಾನ, ಸದೃಶ್ಯ ಹಾಗೂ ಶಬ್ದ) ಹಾಗೂ ಪ್ರಮೇಯ (ಇವು ೧೨ ಇವೆ. ಅವುಗಳು – ಆತ್ಮ, ಶರೀರ, ಇಂದ್ರಿಯಗಳು, ಅರ್ಥ, ಬುದ್ಧಿ, ಜ್ಞಾನ, ಸಿದ್ಧಿ, ಮನಸ್ಸು, ವೃತ್ತಿ, ದೋಷ, ಪ್ರೇತಭಾವ, ಫಲ (ಪರಿಣಾಮ))’, ಈ ರೀತಿ ಇದೆ.

ಶ್ರೀ. ರಮೇಶ ಶಿಂದೆ

೨. ಇಂದಿನ ನ್ಯಾಯವ್ಯವಸ್ಥೆಯಲ್ಲಿ ಪ್ರಚಲಿತವಿರುವ ದೋಷಗಳನ್ನು ದೂರಗೊಳಿಸಲು ಪ್ರಾಚೀನ ಭಾರತೀಯ ನ್ಯಾಯಶಾಸ್ತ್ರ ಹಾಗೂ ನ್ಯಾಯವ್ಯವಸ್ಥೆಯ ಜ್ಞಾನ ಆವಶ್ಯಕ !

ಇಂದಿನ ನ್ಯಾಯವ್ಯವಸ್ಥೆಯಲ್ಲಿ ಪ್ರಚಲಿತವಿರುವ ದೋಷಗಳನ್ನು ದೂರಗೊಳಿಸಲು ನಮಗೆ ಪ್ರಾಚೀನ ಭಾರತೀಯ ನ್ಯಾಯಶಾಸ್ತ್ರ ಹಾಗೂ ನ್ಯಾಯವ್ಯವಸ್ಥೆಯ ಜ್ಞಾನವಿರುವುದು ಆವಶ್ಯಕವಿದೆ. ಈ ಜ್ಞಾನ ನಮಗೆ ವೈದಿಕ ಸಾಹಿತ್ಯ, ವೇದಾಂಗ, ಸೂತ್ರ ಗ್ರಂಥ, ರಾಮಾಯಣ, ಮಹಾಭಾರತ, ಪುರಾಣಗಳು, ಅರ್ಥಶಾಸ್ತ್ರ ಮತ್ತು ಇತರ ಧರ್ಮಶಾಸ್ತ್ರೀಯ ಗ್ರಂಥ, ಸಂಸ್ಕೃತ ಕಾವ್ಯ ಇತ್ಯಾದಿಗಳ ಅಧ್ಯಯನದಿಂದಲೇ ಸಿಗಬಲ್ಲದು.

‘ಅಧರ್ಮವನ್ನು ನಾಶಗೊಳಿಸಿ ಧರ್ಮಸ್ಥಾಪಿಸುವುದು’, ಪ್ರಾಚೀನ ಭಾರತೀಯ ತತ್ತ್ವಜ್ಞಾನಿಗಳ ಧ್ಯೇಯವಾಗಿತ್ತು. ಅಪರಾಧ ಘಟಿಸುವುದೇ ಅಧರ್ಮವಾಗಿದೆ. ಆದ್ದರಿಂದ ನ್ಯಾಯದ ಮೂಲಕ ಅಪರಾಧಗಳ ಅಸ್ತಿತ್ವವನ್ನು ನಾಶಗೊಳಿಸಿ ಧರ್ಮವನ್ನು ಸ್ಥಾಪಿಸಬೇಕು. ಆದ್ದರಿಂದ ಪ್ರಾಚೀನ ಋಷಿಮುನಿಗಳು ‘ನ್ಯಾಯ ಸ್ಥಾಪನೆಯನ್ನೇ ಧರ್ಮವೆಂದು ಪರಿಗಣಿಸಿದರು.’ ಅಂದರೆ ಅಪರಾಧದ ಮೂಲ ಕಾರಣ ಷಡ್ರಿಪುಗಳು (ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರ) ಆಗಿವೆ. ಈ ೬ ಶತ್ರುಗಳನ್ನು ಜಯಿಸಿ ಪಾಪ ಮತ್ತು ಅಧರ್ಮ ನಾಶವಾಗಿ ಧರ್ಮಸ್ಥಾಪನೆಯಾಗುವುದು ಹಾಗೂ ಅದರಿಂದ ಯೋಗ್ಯ ನ್ಯಾಯವ್ಯವಸ್ಥೆ ನಿರ್ಮಾಣವಾಗುವುದು.

೩. ಮನುಷ್ಯನನ್ನು ಅಪರಾಧಕ್ಕೆ ಪ್ರವೃತ್ತಗೊಳಿಸುವ ಷಡ್ರಿಪುಗಳು

ತಾತ್ತ್ವಿಕ ಪರಿಭಾಷೆಯಲ್ಲಿ ವಾಸನೆಗಳು, ಅಂದರೆ ಮನಸ್ಸಿನಲ್ಲಿ ಅಯೋಗ್ಯ ಇಚ್ಛೆಗಳಿರುತ್ತವೆ. ಈ ಅವಾಸ್ತವ ಇಚ್ಛೆಗಳು ಮನುಷ್ಯನನ್ನು ಕೆಟ್ಟ ಕೆಲಸಗಳಿಗೆ ಪ್ರಚೋದಿಸುತ್ತವೆ. ಈ ಇಚ್ಛೆಯನ್ನು ಪೂರ್ಣಗೊಳಿಸಲು ವ್ಯಕ್ತಿಯು ವಿವಿಧ ರೀತಿಯ ಪಾಪಗಳನ್ನು ಮಾಡುತ್ತಾನೆ. ಅಧರ್ಮವನ್ನು ನಾಶಗೊಳಿಸಿ ಧಾರ್ಮಿಕತೆಯನ್ನು ಪ್ರಸ್ಥಾಪಿಸುವುದೇ ಪ್ರಾಚೀನ ಭಾರತೀಯ ತತ್ತ್ವಜ್ಞಾನಿಗಳ ಧ್ಯೇಯವಾಗಿತ್ತು. ಅಪರಾಧ ಮಾಡುವುದೇ ಅಧರ್ಮವಾಗಿದೆ. ಆದ್ದರಿಂದ ನ್ಯಾಯದ ಮೂಲಕ ಅಪರಾಧಗಳ ಅಸ್ತಿತ್ವವನ್ನು ನಾಶಗೊಳಿಸಿ ಧರ್ಮಸ್ಥಾಪನೆ ಮಾಡಬೇಕು. ಆದ್ದರಿಂದ ಪ್ರಾಚೀನ ಋಷಿಮುನಿಗಳು ನ್ಯಾಯ ಸ್ಥಾಪಿಸುವುದನ್ನೇ ಧರ್ಮವೆಂದು ಪರಿಗಣಿಸಿದ್ದರು. ಆದ್ದರಿಂದ ಅಪರಾಧವಾಗಲು ಷಡ್ರಿಪುಗಳೇ ಮೂಲ ಕಾರಣವಾಗಿವೆ. ಕೇವಲ ಈ ೬ ಶತ್ರುಗಳನ್ನು ಜಯಿಸಿದರೆ ಪಾಪ ಹಾಗೂ ಅಧರ್ಮ ನಾಶವಾಗಬಹುದು.

ಕಾಮಶಾಸ್ತ್ರದ ಲೇಖಕ ಋಷಿ ವಾತ್ಸ್ಯಾಯನರು ಹೀಗೆ ಹೇಳುತ್ತಾರೆ, ಭೌತಿಕ ಸುಖಪ್ರಾಪ್ತಿಗಾಗಿ ಮಾಡಿದ ಕೃತಿಯು ಪಾಪಗಳಿಗೆ (ಅಪರಾಧಗಳ) ಮೂಲವಾಗಿದೆ. ಈ ಇಚ್ಛೆಗಳನ್ನು ಪೂರ್ಣಗೊಳಿಸುವ ವಿಚಾರ ಮತ್ತು ಪ್ರಯತ್ನ ವ್ಯಕ್ತಿಯಲ್ಲಿ ಪರಸ್ಪರ ದ್ವೇಷ ಮತ್ತು ಪರಸ್ಪರ ಸಂಘರ್ಷವನ್ನು ಮೂಡಿಸುತ್ತವೆ. ಆದ್ದರಿಂದ ಅವನಿಂದ ಅಪರಾಧ ಘಟಿಸುತ್ತದೆ. ಮನುಷ್ಯನ ಈ ಇಚ್ಛೆ (ವಾಸನೆ), ಕ್ರೋಧ, ಲೋಭ, ಮದ ಮತ್ತು ಮತ್ಸರ ಈ ಭಾವನೆಗಳಿಗೆ ಜನ್ಮ ನೀಡುತ್ತದೆ. ಈ ಷಡ್ರಿಪುಗಳು ಮಾನವನಿಗೆ ಅಪರಾಧ ಮಾಡಲು ಪ್ರಚೋದಿಸುತ್ತವೆ. ಆದ್ದರಿಂದ ಅವುಗಳು ಮನುಷ್ಯನ ನೈಸರ್ಗಿಕ ಶತ್ರುಗಳಾಗಿವೆ. ಪ್ರಾಚೀನ ಕಾಲದ ಜನರ ಅಭಿಪ್ರಾಯಕ್ಕನುಸಾರ ಈ ೬ ಶತ್ರುಗಳನ್ನು ಜಯಿಸಿ ಧರ್ಮವನ್ನು ಸ್ಥಾಪಿಸಬೇಕು. ಇದರ ಮೂಲಕ ಅಹಿಂಸೆ, ಸತ್ಯ, ಅಸ್ತಿತ್ವ, ಶೌಚ ಹಾಗೂ ಇಂದ್ರಿಯಗಳ ನಿಯಂತ್ರಣ ಪ್ರಾಪ್ತಿಯಾಗುತ್ತದೆ. ಸಂಕ್ಷಿಪ್ತದಲ್ಲಿ ಇದು ಧರ್ಮವಾಗಿದೆ ಹಾಗೂ ಇನ್ನೊಂದು ರೀತಿಯಲ್ಲಿ ಇದೇ ನ್ಯಾಯವಾಗಿದೆ.

೪. ಅಹಿಂಸೆ, ಸತ್ಯ, ಕಳ್ಳತನ, ಪಾವಿತ್ರ್ಯ ಹಾಗೂ ಇಂದ್ರಿಯ ನಿಗ್ರಹ

ಪ್ರಾಚೀನ ಕಾಲದಲ್ಲಿ ಆಡಳಿತ ವ್ಯವಸ್ಥೆಯ ವಿಕಾಸದ ಜೊತೆಗೆ ಕಾನೂನು ಮತ್ತು ನ್ಯಾಯವ್ಯವಸ್ಥೆಯ ವಿಕಾಸವೂ ಆಯಿತು. ವೈದಿಕ ಸಂಹಿತೆಗಳಲ್ಲಿ ವರುಣ ಮತ್ತು ಸೋಮ ಇವರನ್ನು ಆಡಳಿತ, ಕಾನೂನು ಮತ್ತು ನ್ಯಾಯದ ಪ್ರಮುಖ ದೇವತೆಗಳೆಂದು ಹೇಳಲಾಗಿದೆ. ಸಾರ್ವಜನಿಕ ವ್ಯವಹಾರದಲ್ಲಿ ರಾಜನನ್ನು ವರುಣನ ಪ್ರತಿನಿಧಿಯೆಂದು ತಿಳಿಯಲಾಗುತ್ತಿತ್ತು. ‘ಸರಕಾರದ ನಿಯಮ ಮತ್ತು ನಿಯಮಗಳ ಪಾಲನೆ ಯೋಗ್ಯ ರೀತಿಯಲ್ಲಿ ಆಗುವುದು ಮತ್ತು ಜನರಿಗೆ ಆದಷ್ಟು ಬೇಗ ನಿಜವಾದ ನ್ಯಾಯ ಸಿಗುವುದು’, ಇದು ರಾಜನ ಕರ್ತವ್ಯವಾಗಿದೆ. ಕಠೋರ ಶಿಕ್ಷೆಯ ಭಯದಿಂದ ಜನಸಾಮಾನ್ಯರು ಅಪರಾಧದಿಂದ ದೂರವಿರುತ್ತಾರೆ. ಆದರೂ ಸರಳ, ಅಗ್ಗದ ಹಾಗೂ ತಕ್ಷಣ ನ್ಯಾಯ ಸಿಗುತ್ತಿತ್ತು.

೫. ಪ್ರಾಚೀನ ಧರ್ಮಗ್ರಂಥಗಳಲ್ಲಿ ಹೇಳಿರುವ ೮ ರೀತಿಯ ಶಿಕ್ಷಾಪದ್ಧತಿಗಳು

ವಾಗ್ದಂಡ (ಕೋಪಿಸುವುದು), ಧಿಗ್ದಂಡ (ಧಿಕ್ಕರಿಸುವುದು), ಆರ್ಥಿಕದಂಡ, ಉದ್ವೇಜನ (ಕ್ಲೇಶ ನೀಡುವುದು), ಅಂಗವಿಚ್ಛೇದನ (ಶರೀರದ ಅವಯವಗಳನ್ನು ಕತ್ತರಿಸುವುದು), ನಿರ್ವಾಸನ (ವಧೆ), ಸೆರೆಮನೆ ಮತ್ತು ಮೃತ್ಯುದಂಡ ಈ ೮ ಶಿಕ್ಷೆಗಳನ್ನು ಪ್ರಾಚೀನ ಗ್ರಂಥಗಳಲ್ಲಿ ಹೇಳಲಾಗಿದೆ. ಇಂಗ್ಲೆಂಡ್, ಪಶ್ಚಿಮ ಯುರೋಪ್‌ ಮತ್ತು ಸಂಯುಕ್ತ ರಾಷ್ಟ್ರಗಳಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ೨೦ ನೇ ಶತಮಾನದಿಂದ ಭಾರತೀಯ ಸಂಸ್ಕೃತಿಯ ನ್ಯಾಯಶಾಸ್ತ್ರದಿಂದ ಪ್ರೇರಣೆ ಮತ್ತು ಶಿಕ್ಷಣ ಪಡೆಯುತ್ತಿದ್ದಾರೆ. ತದ್ವಿರುದ್ಧ ಭಾರತೀಯ ನ್ಯಾಯಾಧೀಶರು ಅಥವಾ ನ್ಯಾಯವಾದಿಗಳು ಎಲ್ಲಿಂದ ಪ್ರೇರಣೆ ಪಡೆಯುತ್ತಾರೆ ? ಅವರು ಭಾರತೀಯ ಸಂಸ್ಕೃತಿಯ ನ್ಯಾಯಶಾಸ್ತ್ರದಿಂದ ಕಲಿಯುವುದಿಲ್ಲ. ಅವರಿಗೆ ರೋಮನ್‌ ಕಾನೂನು ಮತ್ತು ಪಾಶ್ಚಾತ್ಯ ನ್ಯಾಯತಜ್ಞರ ಸಿದ್ಧಾಂತದ ಬಗ್ಗೆ ತಿಳಿದಿದೆ; ಆದರೆ ಭಾರತೀಯ ಸಂಸ್ಕೃತಿಯಲ್ಲಿನ ಕಾನೂನು ಹಾಗೂ ನ್ಯಾಯಶಾಸ್ತ್ರಗಳ ವಿಕಾಸದ ವಿಷಯದಲ್ಲಿ ಹೆಚ್ಚಿನ ಮಾಹಿತಿಯಿಲ್ಲ. ಅಲಾಹಾಬಾದ್‌ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಶಾಂತಿಸ್ವರೂಪ ಧವನ ಹೇಳಿದರು, ”ಜ್ಞಾನಿ ನ್ಯಾಯಾಧೀಶರು ಗಂಗೆಯ ಹಾಗೆ ಸ್ವರ್ಗದಿಂದ ಇಳಿಯುವುದಿಲ್ಲ, ಅವರು ಸಮಾಜದಿಂದಲೇ ಬರುತ್ತಾರೆ ಹಾಗೂ ಸಾಮಾಜಿಕ ವಾತಾವರಣದಲ್ಲಿ ಅವರು ಪರಿಪಕ್ವ ಆಗಿರುತ್ತಾರೆ. ಶ್ರೇಷ್ಠಮಟ್ಟದ ನ್ಯಾಯಾಧೀಶರು ಹುಟ್ಟಿನಿಂದಲೇ ಶ್ರೇಷ್ಠರಾಗಿರುವುದಿಲ್ಲ, ಅವರು ಯೋಗ್ಯ ಶಿಕ್ಷಣ ಹಾಗೂ ಉಚ್ಚಮಟ್ಟದ ಕಾನೂನು ಪರಂಪರೆಯಿಂದ ತಯಾರಾಗುತ್ತಾರೆ. ಇದೇ ರೀತಿ ಪ್ರಾಚೀನ ಭಾರತದಲ್ಲಿ ಮನು, ಕೌಟಿಲ್ಯ, ಕಾತ್ಯಾಯನ, ಬ್ರಹಸ್ಪತಿ, ನಾರದ, ಪರಾಶರ ಹಾಗೂ ಯಾಜ್ಞವಲ್ಕ್ಯ ರಂತಹ ಕಾನೂನಿನ ದಿಗ್ಗಜರಿದ್ದರು.”

೬. ಬ್ರಿಟಿಷ ಲೇಖಕನಿಂದ ಪ್ರಾಚೀನ ಭಾರತೀಯ ನ್ಯಾಯಪದ್ಧತಿಯ ಅಯೋಗ್ಯ ಚಿತ್ರಣ

ಕೆಲವು ಬ್ರಿಟಿಷ್‌ ಲೇಖಕರು ಭಾರತೀಯ ನ್ಯಾಯಶಾಸ್ತ್ರ ಮತ್ತು ಪ್ರಾಚೀನ ಭಾರತದಲ್ಲಿನ ನ್ಯಾಯವ್ಯವಸ್ಥೆಯ ವಿಷಯದಲ್ಲಿ ಮಾಡಿದ ಮಹಾಪರಾಧವನ್ನು ವಾಚಕರು ನಿರಾಕರಿಸಬೇಕು. ನಾನು ಕೆಲವು ಉದಾಹರಣೆ ನೀಡುವೆನು. ಹೆನ್ರಿ ಮೇನ್‌ ಇವರು ಅತ್ಯಂತ ಕ್ರೂರವಾಗಿ ಪ್ರಾಚೀನ ಭಾರತೀಯ ನ್ಯಾಯಪದ್ಧತಿಯನ್ನು ಮೂರ್ಖತನದ ಸಾಧನವೆಂದು ಬಿಂಬಿಸಿದ್ದಾರೆ. ಆಂಗ್ಲೋ ಇಂಡಿಯನ್‌ ನ್ಯಾಯವಾದಿಗಳುಯೊಬ್ಬರು ಆಂಗ್ಲರು ಭಾರತಕ್ಕೆ ಬರುವ ಮೊದಲು ಭಾರತೀಯರ ಜೀವನದಲ್ಲಿನ ಪ್ರಾಚೀನ ಪದ್ಧತಿಯ ಬಗ್ಗೆ ಟೀಕಿಸುತ್ತಾ, ‘ಈ (ಭಾರತದಲ್ಲಿನ ಬ್ರಿಟಿಷ ಆಡಳಿತ) ವಿದೇಶಿ ಆಡಳಿತದವರು ಒಂದು ಅಪರಿಚಿತ ಭೂಮಿಯಲ್ಲಿ

ಅಪರಿಚಿತ ವಂಶದವರ ಆಳ್ವಿಕೆಗಾಗಿ ಯುರೋಪಿನ ವ್ಯವಸ್ಥೆಗಳನ್ನು ಜೀವನದ ಪ್ರಾಚೀನ ನಡವಳಿಕೆಗಳೊಂದಿಗೆ ಅನುಕೂಲ ಮಾಡಿಕೊಳ್ಳಲು ಮತ್ತು ಆ ಜನರಲ್ಲಿ ನಿರಂತರ ಸರಕಾರದ ಮನಬಂದಂತೆ ವರ್ತಿಸುವ ಹಾಗೂ ಅನಿಯಂತ್ರಿತ ಅಧಿಕಾರಕ್ಕೆ ಸಂಬಂಧಿಸಿದ ನಿರ್ಧಿಷ್ಟ ಕಾನೂನಿಗೆ ಹೆಚ್ಚು ಮಹತ್ವ ನೀಡಲು ಮಾಡಿರುವ ಪ್ರಯೋಗಗಳ ದಾಖಲೆಯಿದೆ.’ ಭಾರತೀಯ ನಾಗರಿಕ ಸೇವೆಯ ನಿವೃತ್ತ ಸದಸ್ಯ ಗ್ಲಡ್‌ಹಿಲ್‌ ಇವರು ಬರೆದಿದ್ದಾರೆ. ‘ಯಾವಾಗ ಬ್ರಿಟಿಷರು ಭಾರತದಲ್ಲಿ ಅಧಿಕಾರ ಪಡೆದಾಗ ಇಲ್ಲಿ ಕಾನೂನಿಗನುಸಾರ ತತ್ತ್ವಗಳ ಅಭಾವವಿತ್ತು.’

೭. ಸ್ವತಂತ್ರ ಹಾಗೂ ಪರಿಪೂರ್ಣ ಪ್ರಾಚೀನ ಭಾರತೀಯ ನ್ಯಾಯವ್ಯವಸ್ಥೆ

ನಿಜಸ್ವರೂಪವನ್ನು ತಿಳಿದುಕೊಳ್ಳಲು ನಾವು ಮೂಲ ಗ್ರಂಥಗಳ ಅಭ್ಯಾಸ ಮಾಡಬೇಕು. ಅದರಿಂದ ವಾಚಕರಿಗೆ ತಿಳಿಯುವುದೇನೆಂದರೆ, ಭಾರತೀಯ ನ್ಯಾಯಶಾಸ್ತ್ರವು ಕಾನೂನಿನ ನಿಯಮಗಳ ಮೇಲಾಧಾರಿತವಾಗಿದೆ. ರಾಜನು ಕೂಡ ಕಾನೂನಿನ ಅಧೀನದಲ್ಲಿದ್ದನು. ಭಾರತೀಯ ರಾಜಕೀಯ ಸಿದ್ಧಾಂತ ಮತ್ತು ನ್ಯಾಯಶಾಸ್ತ್ರದಲ್ಲಿ ಮನಬಂದಂತೆ ಮಾಡಲು ಆಸ್ಪದವಿರಲಿಲ್ಲ. ರಾಜನ ಆಡಳಿತಾಧಿಕಾರ ಕರ್ತವ್ಯಪಾಲನೆಯ ಅಧೀನದಲ್ಲಿತ್ತು. ಅದನ್ನು ಉಲ್ಲಂಘಿಸಿದರೆ ಸಿಂಹಾಸನದಿಂದ ಕೆಳಗಿಳಿಯಬೇಕಾಗುತ್ತಿತ್ತು. ನ್ಯಾಯಾಧೀಶರು ಸ್ವತಂತ್ರವಾಗಿದ್ದರು ಹಾಗೂ ಕೇವಲ ಕಾನೂನಿನ ಅಧೀನದಲ್ಲಿದ್ದರು. ಯಾವುದೇ ಪ್ರಾಚೀನ ದೇಶದ ತುಲನೆಯಲ್ಲಿ ಪ್ರಾಚೀನ ಭಾರತದಲ್ಲಿ ನ್ಯಾಯಪಾಲಿಕೆಯ ಕ್ಷಮತೆ, ಜ್ಞಾನ, ಪ್ರಾಮಾಣಿಕತೆ, ನಿಷ್ಪಕ್ಷಪಾತ ಮತ್ತು ಸ್ವಾತಂತ್ರ್ಯದ ಮಾನದಂಡ ಅತ್ಯುಚ್ಚವಾಗಿತ್ತು ಮತ್ತು ಇಂದು ಕೂಡ ಅದನ್ನು ದಾಟಲು ಸಾಧ್ಯವಾಗಿಲ್ಲ.

ಭಾರತೀಯ ನ್ಯಾಯವ್ಯವಸ್ಥೆಯಲ್ಲಿ ಮುಖ್ಯ ನ್ಯಾಯಾಧೀಶರ ನ್ಯಾಯಾಲಯದ ಜೊತೆಗೆ ನ್ಯಾಯಾಧೀಶರ ಒಂದು ವಿಭಾಗವಿತ್ತು, ಅದರಲ್ಲಿ ಪ್ರತಿಯೊಂದು ಉಚ್ಚ ನ್ಯಾಯಾಲಯಕ್ಕೆ ಕೆಳಗಿನ ನ್ಯಾಯಾಲಯದ ನಿರ್ಣಯದ ಸಮೀಕ್ಷೆ ಮಾಡುವ ಅಧಿಕಾರವಿತ್ತು, ಅವರಲ್ಲಿಗೆ ಬರುವ ವಿವಾದಗಳನ್ನು ಮೂಲತಃ ನೈಸರ್ಗಿಕ ನ್ಯಾಯದ ತತ್ತ್ವಕ್ಕನುಸಾರವೇ ನಿರ್ಧರಿಸಲಾಗುತ್ತಿತ್ತು, ಅದು ಸದ್ಯದ ಆಧುನಿಕ ರಾಜ್ಯವ್ಯವಸ್ಥೆಯಲ್ಲಿ ನ್ಯಾಯಾಂಗ ಪ್ರಕ್ರಿಯೆಯನ್ನು ನಿಯಂತ್ರಿಸಲಾಗುತ್ತಿದೆ. ಪ್ರಕ್ರಿಯೆ ಮತ್ತು ಸಾಕ್ಷಿಗಳ ನಿಯಮ ಇಂದಿನ ಹಾಗೆಯೆ ಇತ್ತು.

ಕಠೋರ ತಪಾಸಣೆಯಲ್ಲಿ ಸಾಕ್ಷಿಯೆಂದು ನಿಸರ್ಗದ ವಿರುದ್ಧ ಪದ್ಧತಿಗಳನ್ನು ಉಲ್ಲೇಖಿಸಿದರೆ ಅವುಗಳಿಗೆ ಮಾನ್ಯತೆ ಇರಲಿಲ್ಲ. ಅಪರಾಧದ ಪ್ರಕರಣಗಳಲ್ಲಿ ಆರೋಪಿಯ ಅಪರಾಧ ಕಾನೂನು ಪ್ರಕಾರ ಸಿದ್ಧವಾಗುತ್ತಿತ್ತು. ಪ್ರಾಚೀನ ಭಾರತದಲ್ಲಿ ಕಾನೂನಿನ ರಾಜ್ಯವಿತ್ತೇ ?, ಎಂಬುದನ್ನು ನಾವು ನೇರವಾಗಿ ಗ್ರಂಥಗಳಿಂದಲೇ ತಿಳಿದುಕೊಳ್ಳಬೇಕು. ಮಹಾಭಾರತದಲ್ಲಿ ಹೇಳಲಾಗಿದೆ, ‘ಪ್ರಜೆಗಳ ರಕ್ಷಣೆಯ ಪ್ರತಿಜ್ಞೆ ಮಾಡಿಯೂ ಅವನ ರಕ್ಷಣೆ ಮಾಡದ ರಾಜನು ಹುಚ್ಚು ನಾಯಿಯನ್ನು ಕೊಂದ ಹಾಗೆ ಕೊಲ್ಲಲ್ಪಡಲು ಅರ್ಹನಾಗುತ್ತಾನೆ. ರಾಜನು ನಿಮ್ಮ ರಕ್ಷಣೆ ಮಾಡುತ್ತೇನೆ, ಎಂದು ಹೇಳಿಯೂ ನಿಮ್ಮ ರಕ್ಷಣೆ ಮಾಡದಿದ್ದರೆ, ಅವನನ್ನು ಹುಚ್ಚು ನಾಯಿಯನ್ನು ಕೊಲ್ಲುವ ಹಾಗೆ ಕೊಲ್ಲಬೇಕು. ಯಾವ ರಾಜನು ತನ್ನ ಪ್ರಜೆಗಳ ರಕ್ಷಣೆ ಮಾಡುವುದಿಲ್ಲವೋ, ಆದರೆ ಅವರ ಸಂಪತ್ತನ್ನು ಕಬಳಿಸುತ್ತಾನೋ ಹಾಗೂ ಯಾರಿಂದಲೂ ಸಲಹೆ ಅಥವಾ ಮಾರ್ಗದರ್ಶನ ಪಡೆಯುವುದಿಲ್ಲವೋ, ಅವನು ಸಾಯಲು ಅರ್ಹನಾಗಿರುತ್ತಾನೆ. ಇಂತಹ ರಾಜನು ರಾಜನೇ ಅಲ್ಲ. ಅನಂತರವೇ ಧರ್ಮ ಸ್ಥಾಪನೆಯಾಗುವುದು ಹಾಗೂ ಇದರಿಂದ ನ್ಯಾಯಾಂಗದ ಯೋಗ್ಯ ವ್ಯವಸ್ಥೆ ಆಗುವುದು !’

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.