ವಿದೇಶದಿಂದ ವಿವಿಧ ಧರ್ಮಗಳ ಜನರು ಹಿಂದೂಸ್ಥಾನಕ್ಕೆ ಬರುತ್ತಾರೆ. ‘ಹಿಂದೂಸ್ಥಾನದ ಆದಿವಾಸಿ ಪ್ರದೇಶದ ಜನರ ಜೀವನದ ಅಧ್ಯಯನದ ಉದ್ದೇಶದಿಂದ ನಾವು ಬಂದಿದ್ದೇವೆ ಎಂದು ಭಾಸವಾಗುವಂತೆ ಮಾಡು ತ್ತಾರೆ. ಈ ಅಧ್ಯಯನಕಾರರ ಆಂತರಿಕ ಉದ್ದೇಶ ಅಧ್ಯಯನ ವಾಗಿರದೇ ಆದಿವಾಸಿಗಳ ಮತಾಂತರ ಆಗಿರುತ್ತದೆ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ೧೯೨೭ ರಲ್ಲಿ ಮಾನವಶಾಸ್ತ್ರಜ್ಞ ವೆರಿಯರ ಎಲ್ವಿನ್ ಹಿಂದೂಸ್ಥಾನಕ್ಕೆ ಬಂದನು. ಮಾನವಶಾಸ್ತ್ರಜ್ಞ ಎಂದರೆ ಮಾನವನ ಸಂಸ್ಕೃತಿ, ಅನುವಂಶಿಕತೆ, ಮಾನವ ಸಮಾಜದ ವೈಜ್ಞಾನಿಕ ಮತ್ತು ಸಮಾಜಶಾಸ್ತ್ರ ದೃಷ್ಟಿಕೋನದಿಂದ ಮಾಡಿದ ಅಧ್ಯಯನ. ಈ ವಿಷಯದಲ್ಲಿ ಎಲ್ವಿನ್ ‘ವಿದ್ಯಾವಾಚಸ್ಪತಿ (ಡಾಕ್ಟರೇಟ) ಪದವೀಧರನಾಗಿದ್ದನು. ಅವನು ಹಿಂದೂಸ್ಥಾನಕ್ಕೆ ಬಂದು, ತನ್ನ ವಿಷಯಕ್ಕಾಗಿ ನಾಗಭೂಮಿಯನ್ನು ಆರಿಸಿದನು. ಜ್ಞಾನ ಸಂಪಾದನೆಗಾಗಿ ಬಂದ ಈ ಮಾನವ ವಿಜ್ಞಾನಿಯು ಕಪಟಿ ಮತ್ತು ಸುಳ್ಳುಕೋರ ನಾಗಿದ್ದನು. ಹಿಂದೂಸ್ಥಾನಕ್ಕೆ ಬರುತ್ತಲೇ ೩೭ ವರ್ಷದ ಎಲ್ವಿನ್‌ನ ಕಾಮದೃಷ್ಟಿ ಒಬ್ಬ ೧೩ ವರ್ಷದ ಕೌಸಲ್ಯಾ ಹೆಸರಿನ ಆದಿವಾಸಿ ಗೊಂಡ ಜಾತಿಯ ಎಳೆವಯಸ್ಸಿನ ಹುಡುಗಿಯ ಮೇಲೆ ಬಿದ್ದಿತು. ಅವನು ಅವಳೊಂದಿಗೆ ಶಾರೀರಿಕ ಸಂಬಂಧವನ್ನು ಬೆಳೆಸಿದನು. ಇದರಿಂದ ಆ ಹುಡುಗಿ ತನ್ನ ೧೪ ನೇ ವಯಸ್ಸಿನಲ್ಲಿ ತಾಯಿಯಾದಳು. ಅವನು ಕೌಸಲ್ಯಾಳ ಹೆಸರನ್ನು ‘ಕೋಸಿ ಎಂದು ಬದಲಾಯಿಸಿದನು. ಅವಳೊಂದಿಗೆ ವಿವಾಹವಾದನು. ಕೆಲವು ದಿನಗಳ ಬಳಿಕ ಅವಳಿಗೆ ಹೇಳದೆಯೇ, ವಿವಾಹ ವಿಚ್ಛೇದನೆಯನ್ನು ಪಡೆದನು. ಪ್ರಾರಂಭದಲ್ಲಿ ಅವನು ಅವಳಿಗೆ ಪ್ರತಿ ತಿಂಗಳು ೨೫ ರೂಪಾಯಿಗಳನ್ನು ಕೊಟ್ಟನು. ತದನಂತರ ಲೀಲಾ ಹೆಸರಿನ ಮತ್ತೊಬ್ಬ ಆದಿವಾಸಿ ಹುಡುಗಿಯ ಮೇಲೆ ಅವನ ವಕ್ರದೃಷ್ಟಿ ಬಿದ್ದಿತು. ಅವನು ಅವಳನ್ನು ವಿವಾಹವಾದನು ಮತ್ತು ಅವನು ಶಿಲ್ಲಾಂಗ್ (ಮೇಘಾಲಯ) ನಲ್ಲಿ ವಾಸಿಸತೊಡಗಿದನು. ‘ಹಿಂದೂಸ್ಥಾನದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಗುರುತನ್ನು ನಾಶಗೊಳಿಸುವುದು, ಇದೇ ವೆರಿಯರ ಎಲ್ವಿನ್‌ನ ಪ್ರಮುಖ ಉದ್ದೇಶವಾಗಿತ್ತು. ಇದನ್ನು ಅವನೇ ಬರೆದಿರುವ ‘ಮಿಥ್ಸ್ ಆಫ್ ಮಿಡಲ್ ಇಂಡಿಯಾ ಎಂಬ ಪುಸ್ತಕದಲ್ಲಿ ಸ್ಪಷ್ಟಗೊಳಿಸಿದ್ದಾನೆ.
೧. ಹಿಂದೂ ಸಂಸ್ಕೃತಿಯನ್ನು ನಾಶಪಡಿಸಲು ನಾಗಾಭೂಮಿಯಲ್ಲಿ ಸಾಧುಗಳಿಗೆ ನಿರ್ಬಂಧ
ಹಿಂದೂಸ್ಥಾನದ ಬೈರಾಗಿಗಳು(ಸಾಧು) ಹಳ್ಳಿಹಳ್ಳಿಗಳಲ್ಲಿ ತಿರುಗುತ್ತಾರೆ ಮತ್ತು ಅಲ್ಲಿಯ ಜನರಿಗೆ ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ನಮ್ಮ ಧರ್ಮವನ್ನು ಪರಿಚಯಿಸುತ್ತಾರೆ. ಈ ರೀತಿ ಹಿಂದೂ ಸಂಸ್ಕೃತಿ, ಧರ್ಮ ಮತ್ತು ಹಿಂದೂಗಳ ಇತಿಹಾಸ ಈ ಮೊದಲು ರಕ್ಷಿಸಲ್ಪಡುತ್ತಿತ್ತು. ಈ ವಿಷಯವನ್ನು ಮಿಶನರಿ ಎಲ್ವಿನ್ ಗುರುತಿಸಿದನು. ‘ಹಿಂದೂ ಸಂಸ್ಕೃತಿಯನ್ನು ನಾಶಗೊಳಿಸಬೇಕಾಗಿದ್ದರೆ, ಆದಿವಾಸಿ ಪ್ರದೇಶಗಳಲ್ಲಿ ತಿರುಗುವ ಈ ಬೈರಾಗಿಗಳನ್ನು ಇಲ್ಲಿಗೆ ಬರದಂತೆ ನಿರ್ಬಂಧಿಸಬೇಕು. ಆಗಲೇ ನಮ್ಮ ಉದ್ದೇಶ ಸಫಲವಾಗುವುದು ಎಂದು ಅವನು ಅರಿತನು. ತನ್ನ ಉದ್ದೇಶವನ್ನು ಸಾಧಿಸುವುದಕ್ಕಾಗಿಯೇ ಅವನು ಹಿಂದೂಸ್ಥಾನ ಸ್ವತಂತ್ರವಾದ ಬಳಿಕ ಆಗಿನ ಪ್ರಧಾನಮಂತ್ರಿ ಜವಾಹರಲಾಲ ನೆಹರೂರೊಂದಿಗೆ ಒಪ್ಪಂದ ಮಾಡಿಕೊಂಡನು.
೨. ವೆರಿಯರ್ ಎಲ್ವಿನ್‌ನನ್ನು ಈಶಾನ್ಯ ಭಾರತದಲ್ಲಿ ‘ಸಲಹೆಗಾರ ಎಂದು ನಿಯೋಜಿಸಿದ ನೆಹರೂ ಈಶಾನ್ಯ ಹಿಂದೂಸ್ಥಾನವು ಕ್ರೈಸ್ತರ ದೇಶವಿರೋಧಿ ಕೃತ್ಯಗಳಿಂದಾಗಿಯೇ ಅಲ್ಲಿಯ ಸಮಾಜದ ‘ಹಿಂದೂ ಎಂಬ ಪರಿಚಯವು ನಿಧಾನವಾಗಿ ಮಸುಕಾಗತೊಡಗಿತು. ಇದು ತಿಳಿಯುತ್ತಿದ್ದರೂ ನೆಹರೂರವರು ಹಿಂದೂಸ್ಥಾನದ ಸ್ವಾತಂತ್ರ್ಯದ ಬಳಿಕ ಈಶಾನ್ಯ ಭಾರತದಲ್ಲಿ ‘ಸಲಹೆಗಾರ ಎಂದು ವೆರಿಯರ ಎಲ್ವಿನ್ ಇವನನ್ನು ನಿಯೋಜಿಸಿದರು.
೩. ನೆಹರೂ ಎಲ್ವಿನ್ ಒಪ್ಪಂದವೇ ಈಶಾನ್ಯ ಭಾರತದ ಎಲ್ಲ ಸಮಸ್ಯೆಗಳಿಗೆ ಮೂಲ
ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ನಾಶಪಡಿಸಿದ ಎಲ್ವಿನ್‌ನು ನೆಹರೂರವರ ಕುತ್ತಿಗೆಯ ತಾಯಿತವಾಗಿದ್ದನು. ಇಲ್ಲಿಯ ಬುದ್ಧಿಜೀವಿಗಳು ಕೂಡ ಸಮಾಜಕಂಟಕನನ್ನು ತಲೆಯ ಮೇಲೆರಿಸಿಕೊಂಡರು. ಅಧ್ಯಯನದ ಹೆಸರಿನಲ್ಲಿ ಹಿಂದೂಸ್ಥಾನ ದಲ್ಲಿರುವ ಹಿಂದೂಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಕೆಲಸವನ್ನು ಅವನು ಮಾಡಿದನು. ಅವನ ವಿರುದ್ಧ ಯಾವುದೇ ಕ್ರಮ ಕೈಕೊಳ್ಳಲಿಲ್ಲ. ಇಂದು ಈಶಾನ್ಯ ಭಾರತದಲ್ಲಿ ಉದ್ಭವಿಸಿರುವ ಎಲ್ಲ ಸಮಸ್ಯೆಗಳಿಗೆ ಮೂಲ ವೆರಿಯರ ಎಲ್ವಿನನೊಂದಿಗೆ ನೆಹರೂ ಮಾಡಿಕೊಂಡಿರುವ ಒಪ್ಪಂದವೇ ಆಗಿದೆ. ಈ ಒಪ್ಪಂದದಿಂದಲೇ ಎಲ್ವಿನ್‌ನಿಗೆ ಹಿಂದೂಗಳನ್ನು ಮತಾಂತರಿಸಲು ಸಂಪೂರ್ಣ ಸ್ವ್ವಾತಂತ್ರ್ಯ ಸಿಕ್ಕಿತು.
ಮೂಲದಲ್ಲಿಯೇ ಹಿಂದೂ ಆಗಿರುವ ಆದಿವಾಸಿ ಜನರನ್ನು ಬಲವಂತದಿಂದ ಹಿಂದೂಗಳನ್ನಾಗಿ ಮಾಡಲಾಗುತ್ತಿದೆಯೆಂದು ಸುಳ್ಳುಸುದ್ದಿಯನ್ನು ಮಿಶನರಿಗಳು ಹಬ್ಬಿಸಿದರು. ಅದರ ವಿರುದ್ಧ ಹಿಂದೂಸ್ಥಾನ ಸರಕಾರವು ಸೂಕ್ತ ಸಮಯದಲ್ಲಿ ಕ್ರಮವನ್ನು ಕೈಕೊಂಡಿದ್ದರೆ, ಇಂದು ಯಾವ ಸಮಸ್ಯೆಗಳು ಕಾಡುತ್ತಿವೆಯೋ, ಅವುಗಳು ಅಸ್ತಿತ್ವದಲ್ಲಿಯೇ ಇರುತ್ತಿರಲಿಲ್ಲ.
೪. ಸಂಪೂರ್ಣ ಹಿಂದೂ ಸಮಾಜ ಮತ್ತು ಹಿಂದೂ ಧರ್ಮ ನಾಶಗೊಳಿಸುವ ಷಡ್ಯಂತ್ರ
ಮಿಶನರಿಗಳ ವಿರುದ್ಧ ಕ್ರಮವನ್ನು ಕೈಕೊಳ್ಳದೇ ಅವರೊಂದಿಗೆ ಒಪ್ಪಂದವನ್ನು ಮಾಡಿಕೊಂಡು ‘ನಮ್ಮದೇ ಹಿಂದೂ ಜನರಿಗೆ ತಮ್ಮ ದೇಶದ ವಿವಿಧ ಭಾಗಗಳಿಗೆ ಹೋಗಲು ಆಗದಂತಹ ಒಪ್ಪಂದವನ್ನು ಮಾಡಿ ನಿರ್ಬಂಧ ಹೇರಲಾಯಿತು. ಇದರರ್ಥ ‘ಈ ದೇಶ ಹಿಂದೂಗಳದ್ದಾಗಿರಬಾರದು; ಎಂದು ಪ್ರಯತ್ನಿಸಲಾಗುತ್ತಿತ್ತೇ ? ಎಂಬ ಸಂಶಯ ಮೂಡುತ್ತದೆ. ‘ಹಿಂದೂಗಳಿಗೆ ತಮ್ಮದೇ ಆದ ಭೂಮಿ ಇರಬಾರದು, ಹಿಂದೂ ಧರ್ಮ ನಾಶವಾಗಬೇಕು, ಎಲ್ಲ ಹಿಂದೂಗಳನ್ನು ಕ್ರೈಸ್ತ ಅಥವಾ ಮುಸಲ್ಮಾನ ಧರ್ಮಕ್ಕೆ ಮತಾಂತರಿಸಿ ಸಂಪೂರ್ಣ ಹಿಂದೂಗಳನ್ನು ನಶಿಸುವ ಷಡ್ಯಂತ್ರವಾಗಿದೆಯೇ ? ಎನ್ನುವ ಸಂಶಯ ಮನಸ್ಸಿನಲ್ಲಿ ದೃಢಗೊಳ್ಳುವಲ್ಲಿ ಈ ಘಟನೆ ಸಹಾಯ ಮಾಡುತ್ತದೆ ಎಂದು ಹೇಳಬಹುದಾಗಿದೆ. ಯಾವ ರೀತಿ ಪ್ರಾರಂಭದಲ್ಲಿ ಜ್ಯೂ ಧರ್ಮದ ಜನರನ್ನು ಅವರ ಭೂಮಿಯಿಂದ ವಂಚಿಸಲಾಯಿತೋ, ಅದೇ ರೀತಿ ‘ಹಿಂದೂಗಳಿಗೆ ಅವರ ಹಕ್ಕಿನ ಭೂಮಿಯಿರಬಾರದು.
ಎಂದು ಈ ಪ್ರಯತ್ನ ನಡೆಸಲಾಗುತ್ತಿದೆಯೇ ? ಎನ್ನುವ ಪ್ರಶ್ನೆ ಮನಸ್ಸಿನಲ್ಲಿ ಮೂಡುತ್ತದೆ.
೫. ನೆಹರೂರಿಗೆ ನೀಡಿರುವ ‘ಪಂಡಿತ ಗೌರವ ನಿಷ್ಪ್ರಯೋಜಕ
ಸ್ವತಂತ್ರ ದೇಶದ ಭೂಮಿಯಲ್ಲಿ ವಿದೇಶಿ ವ್ಯಕ್ತಿಯೊಬ್ಬನು ಬಂದು ಅಲ್ಲಿಯ ಜನರಿಗೆ ಅವರದ್ದೇ ಭೂಮಿಯಲ್ಲಿ ಕೆಲವು ಪ್ರದೇಶಗಳಿಗೆ ಪ್ರವೇಶವನ್ನು ನಿರಾಕರಿಸಬೇಕು ಎಂದೊಡನೆ ದೇಶದ ಪ್ರಧಾನಮಂತ್ರಿಯು ಒಪ್ಪಂದ ಮಾಡುತ್ತಿದ್ದಾರೆ ಎಂದಾದರೆ, ‘ಆ ಪ್ರಧಾನಮಂತ್ರಿಗೆ ಯೋಗ್ಯ ರೀತಿಯಲ್ಲಿ ಆಡಳಿತ ವನ್ನು ನಡೆಸುವ ಜ್ಞಾನವಿದೆಯೆಂದು ಹೇಳಲು ಸಾಧ್ಯವಿಲ್ಲ. ಇಂತಹ ಪ್ರಧಾನಮಂತ್ರಿಗೆ ‘ಪಂಡಿತ ಎಂದು ನೀಡಿರುವ ಈ ಗೌರವ ಪದವಿ ನಿಷ್ಪ್ರಯೋಜಕವಾಗಿದೆ.
೬. ನೆಹರೂ ಎಲ್ವಿನ್ ಒಪ್ಪಂದದಿಂದ ಮತಾಂತರಕ್ಕಾಗಿ ಅಪರಿಮಿತ ಸ್ವಾತಂತ್ರ್ಯ
ಎಲ್ಲಕ್ಕಿಂತ ವಿಚಿತ್ರ ವಿಷಯವೆಂದರೆ ‘ಸಂಚಾರ ಸ್ವಾತಂತ್ರ್ಯ ಇದು ಸಂವಿಧಾನ ನೀಡಿರುವ ಮೂಲಭೂತ ಹಕ್ಕಾಗಿದೆ. ಈ ಮೂಲಭೂತ ಹಕ್ಕನ್ನು ಬದಿಗೊತ್ತಿ ನೆಹರೂರವರು ಮಿಶನರಿಗಳ ಮತಾಂತರದ ಕಾರ್ಯದಲ್ಲಿ ಅಡಚಣೆಯಾಗಬಾರದು ಎಂದು ಹಿಂದೂಗಳನ್ನೇ ಅಲ್ಲಿಂದ ಹೋಗಲು ನಿರ್ಬಂಧಿಸಿದರು. ಈ
ರೀತಿಯ ನಿರ್ಬಂಧ ಹಿಂದೂಗಳನ್ನು ಹೊರತುಪಡಿಸಿ ಇನ್ನಿತರ ಯಾವುದೇ ಧರ್ಮದವರಿಗಿರಲಿಲ್ಲ. ವಾಸ್ತವದಲ್ಲಿ ಈ ರೀತಿಯ ಒಪ್ಪಂದವನ್ನು ಯಾವುದೇ ಸರಕಾರಕ್ಕೆ ಯಾರೊಂದಿಗೂ ಮಾಡಲು ಸಂವಿಧಾನ ಅನುಮತಿಯನ್ನು ನೀಡುವುದಿಲ್ಲ. ಈ ರೀತಿಯ ಒಪ್ಪಂದದಿಂದಲೇ ಕ್ರೈಸ್ತರು ಮತ್ತು ಮುಸಲ್ಮಾನರು
ಯಾವುದೇ ಅಡ್ಡಿ ಆತಂಕವಿಲ್ಲದೇ ಮುಕ್ತವಾಗಿ ಸಂಚರಿಸ ಬಹುದಾಗಿತ್ತು. ಅವರಿಗೆ ತಮ್ಮ ಧರ್ಮದ ಜನಸಂಖ್ಯೆಯನ್ನು ಹೆಚ್ಚಿಸಲು ಮತಾಂತರಿಸಲು ಅನುಮತಿ ನೀಡಿ ಅಪಾರ ಸ್ವಾತಂತ್ರ್ಯವನ್ನು ನೀಡಲಾಯಿತು. ಇದರಿಂದಲೇ ಹಿಂದೂಸ್ಥಾನದ ಅಷ್ಟು ಭೂಮಿ ನಮ್ಮದಾಗಿದ್ದರೂ ನಮ್ಮದಾಗಿ ಉಳಿದಿಲ್ಲ.
೭. ರಾಷ್ಟ್ರದ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯ ಅಬಾಧಿತವಾಗಿರಲು ಕಠಿಣ ಕ್ರಮಗಳನ್ನು ಕೈಕೊಳ್ಳಬೇಕು
ಇಂತಹ ದೇಶವಿರೋಧಿ ಒಪ್ಪಂದವನ್ನು ರದ್ದುಪಡಿಸ ಬೇಕಾಗಿದೆ. ಸಂವಿಧಾನದಲ್ಲಿರುವ ಇಂತಹ ದೇಶವಿರೋಧಿ ನಿಬಂಧನೆಗಳನ್ನು ಸಂವಿಧಾನದಿಂದ ಕಿತ್ತೆಸೆಯುವುದು ಆವಶ್ಯಕ ವಾಗಿದೆ. ದೇಶದ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯ ಅಬಾಧಿತ ವಾಗಿಡಲು ಕಠಿಣ ಕ್ರಮಗಳನ್ನು ಕೈಕೊಳ್ಳುವುದು ಆವಶ್ಯಕವಾಗಿದೆ. ಇಲ್ಲವಾದರೆ ನಮ್ಮ ದೇಶ ಸಣ್ಣ ಸಣ್ಣ ಭಾಗವಾಗಿ ಹಿಂದೂಗಳಿಗೆ ಸ್ವತಂತ್ರ ಭೂಮಿ ಉಳಿಯುವುದಿಲ್ಲ ಎನ್ನುವ ಪರಿಸ್ಥಿತಿ ಉದ್ಭವಿಸ ಬಹುದು.
– ಶ್ರೀ. ದುರ್ಗೇಶ ಪರೂಳೆಕರ, ಹಿಂದುತ್ವನಿಷ್ಠ ವಕ್ತಾರರು ಮತ್ತು ಲೇಖಕರು, ಡೊಂಬಿವಿಲಿ (೭.೭.೨೦೨೩)
ನಾಗಭೂಮಿಯಲ್ಲಿ ಸಾಧುಗಳಿಗೆ ಪ್ರವೇಶವನ್ನು ನಿರ್ಬಂಧಿಸಲು ನೆಹರೂ ಮತ್ತು ಎಲ್ವಿನ್ ಇವರ ನಡುವಿನ ಒಪ್ಪಂದಈಶಾನ್ಯ ಹಿಂದೂಸ್ಥಾನದ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಿಝೋರಾಮ್, ಮಣಿಪುರ, ನಾಗಭೂಮಿ (ನಾಗಾಲ್ಯಾಂಡ) ಮತ್ತು ತ್ರಿಪುರಾ ಈ ೭ ರಾಜ್ಯಗಳಿಗೆ ಮಿಶನರಿಗಳು ‘೭ ಕನ್ಯೆಯರು ಎಂದು ಸಂಬೋಧಿಸುತ್ತಾರೆ. ಈ ೭ ರಾಜ್ಯಗಳನ್ನು ಹಿಂದೂಸ್ಥಾನದಿಂದ ಬೇರ್ಪಡಿಸುವ ಕಾರ್ಯವನ್ನು ಮಿಶನರಿಗಳು ಮಾಡುತ್ತಿದ್ದಾರೆ. ನಾಗಭೂಮಿ ಯಲ್ಲಿ ಸಾಧುಗಳಿಗೆ ಪ್ರವೇಶಿಸಲು ಸಾಧ್ಯವಾಗಬಾರದು ಎಂದು ನೆಹರೂ ಮತ್ತು ಎಲ್ವಿನ್ ಇವರಲ್ಲಿ ಒಪ್ಪಂದವಾಗಿತ್ತು. ಈ ಸುದ್ದಿ ‘ಪೆಟ್ರಿಎಟ್ ವರ್ತಮಾನಪತ್ರಿಕೆಯಲ್ಲಿ ಅಕ್ಟೋಬರ ೧೫, ೧೯೬೪ ರ ಸಂಚಿಕೆಯಲ್ಲಿ ಪ್ರಸಾರವಾಗಿದೆ. (ವಾರ್ತಾಪತ್ರಿಕೆಯ ಸುದ್ದಿಯ ವಿವರವನ್ನು ಪಕ್ಕದಲ್ಲಿ ನೋಡಿ) ಈ ಒಪ್ಪಂದದಿಂದ ಅಲ್ಲಿಯ ಹಿಂದೂ ಜನತೆಗೆ ಕ್ರೈಸ್ತ ಧರ್ಮದ ದೀಕ್ಷೆಯನ್ನು ನೀಡುವ ಕಾರ್ಯವನ್ನು ಮುಕ್ತವಾಗಿ ಮಾಡಲು ಕ್ರಿಶ್ಚಿಯನ್ ಮಿಶನರಿಗಳಿಗೆ ಸಾಧ್ಯವಾಯಿತು. ಈ ಮತಾಂತರದಿಂದಲೇ ೨೦೧೧ ರ ಜನಗಣತಿಯಲ್ಲಿ ನಾಗಭೂಮಿಯಲ್ಲಿ ಅಲ್ಲಿಯ ಒಟ್ಟು ಜನಸಂಖ್ಯೆಯಲ್ಲಿ ಶೇ. ೮೮ ರಷ್ಟು ಕ್ರೈಸ್ತ ಜನಸಂಖ್ಯೆ ಇರುವುದು ಕಂಡು ಬಂದಿತು. ಹಿಂದೂಗಳಿಗೆ ಕ್ರೈಸ್ತ ಧರ್ಮದ ದೀಕ್ಷೆಯನ್ನು ನೀಡಿದ್ದರಿಂದ ಕ್ರೈಸ್ತ ರ ಜನಸಂಖ್ಯೆ ಶೇ. ೮೮ ರಷ್ಟಾಯಿತು. ವೆರಿಯರ ಎಲ್ವಿನ್‌ನಿಗೆ ‘ಪದ್ಮಶ್ರಿ ಮತ್ತು ಅವನ ಆತ್ಮಕಥೆಗೆ ‘ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದೂ ಧರ್ಮ, ಸಂಸ್ಕೃತಿ ಮತ್ತು ಹಿಂದೂ ರಾಷ್ಟ್ರದ ಬುಡಕ್ಕೆ ಕೊಡಲಿಯೇಟು ಹಾಕಿದ್ದ ಮತ್ತು ಕಾಮಾಂಧ ವೆರಿಯರ ಎಲ್ವಿನನನ್ನು ‘ಪದ್ಮಶ್ರಿ ಪ್ರಶಸ್ತಿಯಿಂದ ಗೌರವಿಸಲಾಯಿತು. ಆದಿವಾಸಿ ಸಂಸ್ಕೃತಿಯನ್ನು ನಾಶಗೊಳಿಸಿ ಅಪಮಾನಿಸಿದ ಎಲ್ವಿನ್‌ನ ಆತ್ಮಕಥೆಗೆ ‘ಸಾಹಿತ್ಯ ಅಕಾಡಮಿ ಪ್ರಶಸ್ತಿ ನೀಡಲಾಯಿತು. – ಶ್ರೀ ದುರ್ಗೆಶ ಜಯವಂತ ಪರೂಳಕರ |