ಶಾಶ್ವತ ಆನಂದಪ್ರಾಪ್ತಿಗಾಗಿ ಸಾಧನೆ ಮತ್ತು ಸ್ವಭಾವದೋಷ ನಿರ್ಮೂಲನೆ ಆವಶ್ಯಕ !

ಮಾರೀಷಸ್ ನಲ್ಲಿ ಶೋಧ ಪ್ರಬಂಧ ಮಂಡನೆ : ‘ಧಾವಂತದ ಜಗತ್ತಿನಲ್ಲಿ ಶಾಶ್ವತ ಆನಂದ ಪಡೆಯುವುದು’

ಕು. ಮಿಲ್ಕಿ ಅಗರ್ವಾಲ್

ನಿಯಮಿತವಾಗಿ ಆಧ್ಯಾತ್ಮಿಕ ಸಾಧನೆಯನ್ನು ಮಾಡಿದರೆ ಮತ್ತು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ನಿರಂತರ ಪ್ರಯತ್ನ ಮಾಡಿದರೆ ನಮ್ಮ ಎಲ್ಲಾ ಸಮಸ್ಯೆಗಳನ್ನು ಎದುರಿಸ ಬಹುದು ಮತ್ತು ನಾವು ಶಾಶ್ವತ ಸುಖದ ಎಂದರೆ ಆನಂದದ ಅನುಭೂತಿ ಪಡೆಯುತ್ತೇವೆ, ಎಂದು ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಕು. ಮಿಲ್ಕಿ ಅಗ್ರವಾಲ ಇವರು ಹೇಳಿದರು. ಮಾರೀಷಸ್ ನಲ್ಲಿ ಇತ್ತೀಚೆಗೆ ‘ಎಮೋಷನಲ್ ವೆಲ್ ಬೀಯಿಂಗ್ ಇನ್ಸ್ಟಿಟ್ಯೂಟ್ ನಿಂದ (ಇ.ಡಬ್ಲ್ಯೂ.ಬಿ.ಐ.) ಮಾರೀಷಸ್ ಮುಕ್ತ ವಿದ್ಯಾಪೀಠ , ರಾದುಯಿ ಮತ್ತು ಮಿಡಲ್ ಸೆಕ್ಸ್ ಯೂನಿವರ್ಸಿಟಿ , ಮೋರಿಷಸ್ ಇವರ ಜೊತೆಗೆ ಆಯೋಜಿಸಿರುವ ‘ ಫಸ್ಟ್ ಎಮೋಷನಲ್ ವೆಲ್ ಬೀಯಿಂಗ್ ಇಂಟರ್ ರ್ನ್ಯಷನಲ್ ಕಾನ್ಫ್ರೆನ್ಸ್ ‘ ನಲ್ಲಿ (ಇ . ಡಬ್ಲ್ಯೂ ಬಿ. ಐ .ಸಿ.) ಮಾತನಾಡುತ್ತಿದ್ದರು. ಅವರು’ ಧಾವಂತದ ಜಗತ್ತಿನಲ್ಲಿ ಶಾಶ್ವತ ಆನಂದ ಪಡೆಯುವುದು : ಆಧ್ಯಾತ್ಮಿಕ ಸಂಶೋಧನೆಯಿಂದ ಅಂತರ್ದೃಷ್ಟಿ ‘ ಈ ವಿಷಯದ ಬಗ್ಗೆ ಆನ್ ಲೈನ್ ನಲ್ಲಿ ಶೋಧ ಪ್ರಬಂಧ ಮಂಡಿಸಿದರು.

ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಇವರು ಈ ಶೋಧ ಪ್ರಬಂಧದ ಲೇಖಕರಾಗಿದ್ದಾರೆ, ಹಾಗೂ ಶ್ರೀ. ಶಾನ್ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ. ಅಂತರಾಷ್ಟ್ರೀಯ ಪರಿಷತ್ತಿನಲ್ಲಿ ಇದು 89 ನೆಯ ಮಂಡನೆಯಾಗಿದೆ. ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದಿಂದ ಇಲ್ಲಿಯವರೆಗೆ 107 ಪರಿಷತ್ತಿನಲ್ಲಿ ಶೋಧ ಪ್ರಬಂಧಗಳನ್ನು ಮಂಡಿಸಲಾಗಿದೆ. ಇದರಲ್ಲಿನ 13 ಅಂತರಾಷ್ಟ್ರೀಯ ಪರಿಷತ್ತುಗಳಲ್ಲಿ ಸರ್ವೋತ್ಕೃಷ್ಠ ಶೋಧ ಪ್ರಬಂಧ ಪ್ರಶಸ್ತಿ ಪಡೆದಿದೆ.

ಕು. ಮಿಲ್ಕಿ ಅಗರ್ವಾಲ್ ಇವರು ಮಂಡನೆ ಮುಂದುವರಿಸುತ್ತಾ, ಶಾಶ್ವತ ಆನಂದ ಪಡೆಯುವುದಕ್ಕೆ ನಾವು ಶ್ರದ್ಧೆಯಿಂದ ಮೂರು ಹಂತದಲ್ಲಿನ ಉಪಾಯ ಪ್ರತಿದಿನ ಮಾಡಬಹುದು. ಮೊದಲು, ಈಶ್ವರನ ನಾಮಜಪ ಮಾಡುವುದು, ‘ಜಿ.ಡಿ.ವಿ. ಬಯೋವೆಲ್ ‘ ಈ ವೈಜ್ಞಾನಿಕ ಉಪಕರಣ ಉಪಯೋಗಿಸಿ ಪ್ರಯೋಗದಲ್ಲಿ ‘ಓಂ ನಮೋ ಭಗವತೇ ವಾಸುದೇವಾಯ ‘ ಈ ನಾಮಜಪ ಕೇವಲ 40 ನಿಮಿಷ ಮಾಡಿದ ನಂತರ ಕುಂಡಲಿನಿ ಚಕ್ರ ಒಂದು ರೇಖೆಯಲ್ಲಿ ಬಂದು ಬೃಹತ್ ಪ್ರಮಾಣದ ಸಕಾರಾತ್ಮಕ ಉರ್ಜೆ ಸ್ವಂತದ ಕಡೆಗೆ ಆಕರ್ಷಿತವಾಗಿರುವುದು ಕಂಡುಬಂದಿತು. ಎರಡನೆಯದು, ಎಂದರೆ ಪರಾತ್ಪರ ಗುರು ಡಾ. ಅಠವಲೆ ಇವರು ನಿರ್ಮಿಸಿರುವ ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆ. ಮೂರನೆಯದು, ಪ್ರತಿ ದಿನ ಕಲ್ಲುಪ್ಪಿನ ನೀರಿನಲ್ಲಿ 15 ನಿಮಿಷ ಕಾಲು ಇಟ್ಟು ಕುಳಿತುಕೊಳ್ಳುವ ಉಪಾಯ ಮಾಡಿದರೆ ಶರೀರದಲ್ಲಿನ ನಕಾರಾತ್ಮಕ ಉರ್ಜೆ ಹೊರಹಾಕಲು ಸಹಾಯವಾಗುತ್ತದೆ.

ಈ ಸಮಯದಲ್ಲಿ ಸಂಶೋಧನೆ ನಿಷ್ಕರ್ಷ ಹೇಳುವಾಗ, ಕು. ಮಿಲ್ಕಿ ಅಗರ್ವಾಲ್ ರು, ಯಾರಾದರೂ ಅಧ್ಯಾತ್ಮ ಶಾಸ್ತ್ರದ ಪ್ರಕಾರ ಪ್ರಾಮಾಣಿಕವಾಗಿ ಸಾಧನೆ ಮಾಡಿದರೆ, ಆಗ ಕಾಲಾಂತರದಲ್ಲಿ ಅವರ ಜೀವನದಲ್ಲಿನ ದುಃಖ ಮತ್ತು ಒತ್ತಡ ಕಡಿಮೆ ಆಗುತ್ತದೆ ಮತ್ತು ಆ ವ್ಯಕ್ತಿಗೆ ಶಾಂತಿ ಮತ್ತು ಆಂತರಿಕ ಆನಂದ ದೊರೆಯಲು ಸಹಾಯವಾಗುತ್ತದೆ ಎಂದು ಹೇಳಿದರು.