ಹೇ ಗುರುದೇವಾ, ಹಿಂದೂ ಜನಜಾಗೃತಿ ಸಮಿತಿಯ ಮಾಧ್ಯಮದಿಂದ ತಾವು ಯಾವ ಅಭಿಯಾನಗಳನ್ನು ನಡೆಸಲು ಪ್ರೇರಣೆ ನೀಡಿದಿರೋ, ಕಾಲಾಂತರದಲ್ಲಿ ಆ ಅಭಿಯಾನಗಳನ್ನು ಸಮಾಜವು ತಾನಾಗಿ ಎತ್ತಿ ಹಿಡಿಯಿತು ಮತ್ತು ಅದಕ್ಕೆ ವ್ಯಾಪಕ ರೂಪ ಪ್ರಾಪ್ತವಾಯಿತು. ಇದು ಚಮತ್ಕಾರವಲ್ಲ, ತಮ್ಮ ದೈವೀ ಸಂಕಲ್ಪ, ಧರ್ಮಶಕ್ತಿ ಕಾರ್ಯನಿರತವಾಗಿರುವುದೇ ಕಾರಣವಾಗಿದೆ.
೧. ಗಣೇಶೋತ್ಸವ, ನವರಾತ್ರೋತ್ಸವ ಮುಂತಾದ ಸಾರ್ವಜನಿಕ ಉತ್ಸವಗಳನ್ನು ಆದರ್ಶ ರೀತಿಯಲ್ಲಿ ಹೇಗೆ ಆಚರಿಸಬೇಕು ?, ಎಂಬುದನ್ನು ಹೇಳಿ ಈ ಉತ್ಸವಗಳಲ್ಲಾಗುವ ಜೂಜು, ಡಿಜೆ, ಪಟಾಕಿಗಳನ್ನು ಸಿಡಿಸುವುದು ಮುಂತಾದ ತಪ್ಪು ಆಚರಣೆಗಳ ವಿರುದ್ಧ ದೊಡ್ಡ ಜನಜಾಗೃತಿಯನ್ನು ಮಾಡಿದ್ದೀರಿ. ಈಗ ಪಟಾಕಿಗಳನ್ನು ಸಿಡಿಸುವಿಕೆಯ ಪ್ರಮಾಣ ಬಹಳ ಕಡಿಮೆಯಾಗಿದೆ.
೨. ವಿವಿಧ ಮಾಧ್ಯಮಗಳಿಂದಾಗುವ ಶ್ರದ್ಧಾಸ್ಥಾನಗಳ ವಿಡಂಬನೆಯ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಸತತವಾಗಿ ವ್ಯಾಪಕ ಜನಜಾಗೃತಿಯನ್ನು ಮಾಡಿತು. ಅನಂತರ ಈಗ ಹಿಂದೂಗಳು ಜಾಗೃತರಾಗಿರುವುದರಿಂದ ಅವರು ಈಗ ತಾವಾಗಿಯೇ ಅವುಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅನೇಕ ಚಲನಚಿತ್ರಗಳಲ್ಲಿ ವಿಡಂಬನೆಗೆ ಆಗುತ್ತಿರುವ ವಿರೋಧದಿಂದ ಇದು ಗಮನಕ್ಕೆ ಬರುತ್ತದೆ.
೩. ಹಿಂದೂಗಳ ಮೇಲಿನ ಅನ್ಯಾಯ ಮತ್ತು ಆಘಾತ ಇವುಗಳ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಧ್ವನಿ ಎತ್ತಿತು ಮತ್ತು ಈ ವಿರೋಧದಲ್ಲಿ ಧ್ವನಿ ಎತ್ತುವವರನ್ನು ಸಂಘಟಿಸಿತು, ಹಾಗೆಯೇ ಸಮಿತಿಯು ಹಿಂದೂಗಳಿಗೆ ವೇದಿಕೆಯನ್ನು ಒದಗಿಸಿ ಕೊಟ್ಟಿತು.
೪. ಸಮಿತಿಯು ‘ಲವ್ ಜಿಹಾದ್ನ ವಿರುದ್ಧ ಮೊಟ್ಟಮೊದಲು ಧ್ವನಿಎತ್ತಿ ೨೦ ವರ್ಷಗಳ ಹಿಂದೆಯೇ ವಿವಿಧ ಮಾಧ್ಯಮಗಳಿಂದ ಜನಜಾಗೃತಿಯನ್ನು ಪ್ರಾರಂಭಿಸಿತು. ಇತ್ತೀಚಿನ ಕಾಲದಲ್ಲಿ ಅದರ ಸಂದರ್ಭದಲ್ಲಿ ಹಿಂದೂಗಳು ಜಾಗೃತರಾದರು ಮತ್ತು ೨ ರಾಜ್ಯಗಳಲ್ಲಿ ಅದರ ವಿರುದ್ಧ ಕಾನೂನು ಕೂಡ ಜಾರಿಯಾಯಿತು.
೫. ದೇವಸ್ಥಾನ ಸರಕಾರೀಕರಣ, ದೇವಸ್ಥಾನಗಳಲ್ಲಿನ ಭ್ರಷ್ಟಾಚಾರ ಇತ್ಯಾದಿಗಳ ವಿರುದ್ಧ ಜನಜಾಗೃತಿ ನಡೆಸುವುದೊಂದಿಗೆ ನ್ಯಾಯಾಂಗ ಹೋರಾಟಗಳು ಸಹ ನಡೆಯುತ್ತಿವೆ.
ಸನಾತನದ ಸಾಧಕರಲ್ಲಿ ಆಧ್ಯಾತ್ಮಿಕ ಸ್ತರದಲ್ಲಿನ ಗುಣವೈಶಿಷ್ಟ್ಯಗಳನ್ನು ಸೃಷ್ಟಿಸುವುದರ ಬಗ್ಗೆ ಕೃತಜ್ಞತೆ !ಸನಾತನ ಸಂಸ್ಥೆಯು ಕಡಿಮೆ ಕಾಲಾವಧಿಯಲ್ಲಿ ವಿಶ್ವವ್ಯಾಪಿ ಆಗುವುದರ ಹಿಂದೆಯೂ ಪ್ರೇಮಭಾವ, ನಿರಪೇಕ್ಷತೆ, ತಮ್ಮ ಗುಣ-ದೋಷಗಳ ಬಗ್ಗೆ ಸತತ ಆತ್ಮಪರೀಕ್ಷಣೆ ಮತ್ತು ಕ್ಷಮಾಯಾಚನೆ ಮಾಡುವುದು, ಸಂಕಟಕ್ಕೆ ಹೆದರದೇ ಈಶ್ವರನ ಮೇಲೆ ಶ್ರದ್ಧೆ ಮತ್ತು ವ್ಯಾಪಕತೆ, ನಮ್ರತೆ ಈ ಆಯ್ದ ಆಧ್ಯಾತ್ಮಿಕ ಸ್ತರದ ವೈಶಿಷ್ಟ್ಯಗಳು ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಸನಾತನದ ನೂರಾರು ಸಾಧಕರಲ್ಲಿವೆ. ೨೦೧೮ ರಲ್ಲಿ ಓರ್ವ ಸಂತರು ‘ಅಧ್ಯಾತ್ಮವನ್ನು ಕೃತಿಯಲ್ಲಿ ತರಲು ಬೇಕಿರುವ ಸಮರ್ಪಣಾಭಾವವು ಸಾಧಕರಲ್ಲಿ ಅನೇಕಡೆಗಳಲ್ಲಿ ಕಂಡು ಬರುತ್ತದೆ, ಎಂದಿದ್ದರು. |