ವರ್ಷ ‘೨೦೨೨ ನೇ ಗುರುಪೂರ್ಣಿಮೆಯ ದಿನ ಮಹರ್ಷಿಗಳು ‘ಸಪ್ತರ್ಷಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಹೇಳಿದಂತೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪಾದಪೂಜೆ ಯನ್ನು ಮಾಡಲಾಯಿತು. ಆಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳ ಛಾಯಾಚಿತ್ರವನ್ನು ತೆಗೆಯಲಾಯಿತು. ಅದನ್ನು ಇಲ್ಲಿ ಛಾಯಾಚಿತ್ರ (ಕ್ರಮಾಂಕ ೧ ರಲ್ಲಿ) ಕೊಡಲಾಗಿದೆ. ಆ ಗುರುಪೂರ್ಣಿಮೆಯ ದಿನ ಮಹರ್ಷಿಗಳು ಹೇಳಿದಂತೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಚಂದನದ ಬಣ್ಣದ ರೇಶ್ಮೆ ಬಟ್ಟೆಯನ್ನು ಧರಿಸಿದ್ದರು. ಛಾಯಾಚಿತ್ರದಲ್ಲಿ ಅದು ನಮಗೆ ಕಾಣಿಸುತ್ತಿದೆ. ಈ ಛಾಯಾಚಿತ್ರದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳ ಭಾಗವನ್ನು ಬದಿಗೆ ದೊಡ್ಡದು ಮಾಡಿ ತೋರಿಸಲಾಗಿದೆ. (ಛಾಯಾಚಿತ್ರ ೧ ಅ) ಈ ಛಾಯಾಚಿತ್ರದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಉಗುರುಗಳ ಬಣ್ಣ ಚಂದನದ ಬಣ್ಣದಂತೆ ಕಾಣಿಸುತ್ತಿದೆ. ಅಷ್ಟೇ ಅಲ್ಲ, ಅವರ ಚರ್ಮದ ಬಣ್ಣವೂ ಚಂದನದಂತೆ ಕಾಣಿಸುತ್ತಿದೆ. ವಾಸ್ತವದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರ್ಮ ಮತ್ತು ಉಗುರುಗಳ ಬಣ್ಣ ತಿಳಿ ಗುಲಾಬಿಯಾಗಿದೆ. (ಛಾಯಾಚಿತ್ರ ೨ ನೋಡಿ) ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರ್ಮ ಮತ್ತು ಉಗುರುಗಳ ಬಣ್ಣ ಅವರು ತೊಟ್ಟ ಚಂದನದ ಬಣ್ಣದ ರೇಶ್ಮೆಯ ಬಟ್ಟೆಯಂತೆ ಕಾಣಿಸುವುದರ ಹಿಂದಿನ ಕಾರಣವೆಂದರೆ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಪರಾತ್ಪರ ಗುರು ಪದವಿಯಲ್ಲಿ ವಿರಾಜಮಾನರಾಗಿದ್ದಾರೆ.
ಆದುದರಿಂದ ಅವರು ಈಶ್ವರನಂತೆ ‘ಸಚ್ಚಿದಾನಂದ ಸ್ಥಿತಿಯಲ್ಲಿ, ಅಂದರೆ ಸತ್, ಚಿತ್ ಮತ್ತು ಆನಂದ ಸ್ಥಿತಿಯಲ್ಲಿರುತ್ತಾರೆ. ಅವರು ದೋಷರಹಿತ, ತ್ರಿಗುಣಾತೀತರಾಗಿದ್ದಾರೆ. ಹಾಗಾಗಿ ಅವರು ನೀರಿನಂತೆ ನಿರ್ಮಲ ಮತ್ತು ಕನ್ನಡಿಯಂತೆ ಸ್ವಚ್ಛವಾಗಿದ್ದಾರೆ. ನೀರಿಗೆ ತನ್ನ ಬಣ್ಣ ಇರಲ್ಲ ಮತ್ತು ಅದನ್ನು ಯಾವ ಬಣ್ಣದ ಪಾತ್ರೆಗೆ ಹಾಕುತ್ತೇವೆಯೋ, ಅದಕ್ಕೆ ಅದೇ ಬಣ್ಣ ಬರುತ್ತದೆ. ಕನ್ನಡಿಯಲ್ಲಿಯೂ ಎದುರಿನ ಘಟಕದ ಬಣ್ಣದಂತಹ ಬಣ್ಣ ಪ್ರತಿಬಿಂಬಿಸುತ್ತದೆ. ಅದರಂತೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ನಿರ್ಮಲತೆ ಇದೆ. ಹಾಗಾಗಿ ಅವರು ತೊಟ್ಟ ಚಂದನದ ರೇಶ್ಮೆವಸ್ತ್ರದ ಬಣ್ಣವು ಅವರ ಚರ್ಮ, ಉಗುರುಗಳಲ್ಲಿ ಕಾಣಿಸಿತು. – (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್.ಡಿ., ಸನಾತನ ಆಶ್ರಮ, ರಾಮನಾಥಿ, ಗೋವಾ. (೨.೧೨.೨೦೨೨)