‘ಫಲ-ಜ್ಯೋತಿಷ್ಯಶಾಸ್ತ್ರವು ಗ್ರಹಗಳು, ರಾಶಿ ಮತ್ತು ಕುಂಡಲಿಯಲ್ಲಿನ ಸ್ಥಾನ ಈ ೩ ಮೂಲಭೂತ ಘಟಕಗಳ ಮೇಲಾಧಾರಿತವಾಗಿದೆ. ಈ ೩ ಘಟಕಗಳಿಂದ ಭವಿಷ್ಯದ ಬಗ್ಗೆ ಸಲಹೆಯನ್ನು ಕೊಡಲು ಸಾಧ್ಯವಾಗುತ್ತದೆ. ಈ ಲೇಖನದ ಮೂಲಕ ಮೂರು ಘಟಕಗಳನ್ನು ಸ್ವಲ್ಪದರಲ್ಲಿ ಪರಿಚಯ ಮಾಡಿಕೊಳ್ಳೋಣ.
೧. ಗ್ರಹ
ಗ್ರಹ ಎಂದರೆ ‘ಗ್ರಹಣ ಮಾಡುವುದು, ಗ್ರಹಗಳು ನಕ್ಷತ್ರಗಳಿಂದ ಬರುವ ಸೂಕ್ಷ್ಮ ಊರ್ಜೆಯನ್ನು ಗ್ರಹಣ ಮಾಡುತ್ತವೆ. ಆದ್ದರಿಂದ ಅವುಗಳಿಗೆ ‘ಗ್ರಹ ಎಂದು ಹೇಳಲಾಗಿದೆ. ಗ್ರಹಗಳಲ್ಲಿ ‘ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಈ ೫ ಗ್ರಹಗಳು ಮುಖ್ಯ ಗ್ರಹಗಳಾಗಿದ್ದು ಅವು ಪಂಚಮಹಾಭೂತಗಳ ಪ್ರತಿನಿಧಿಗಳಾಗಿವೆ. ರವಿ ಆತ್ಮಕ್ಕೆ ಮತ್ತು ಚಂದ್ರ ಮನಸ್ಸಿಗೆ ಸಂಬಂಧಿಸಿದ ಗ್ರಹಗಳಾಗಿವೆ. ಗ್ರಹಗಳ ತತ್ತ್ವಗಳುಮತ್ತು ಗ್ರಹಗಳು ಯಾವ ವಿಷಯಕ್ಕೆ ಸಂಬಂಧಿಸಿವೆ ಎಂಬುದನ್ನು ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ.
ಬುಧ, ಶುಕ್ರ ಮತ್ತು ಚಂದ್ರ ಈ ಗ್ರಹಗಳು ‘ಪೃಥ್ವಿ ಮತ್ತು ‘ಜಲ ಈ ತತ್ತ್ವಗಳಿಗೆ ಸಂಬಂಧಿಸಿರುವುದರಿಂದ ಅವು ವ್ಯಕ್ತಿಯ ಕುಟುಂಬ, ಕಲತ್ರ (ಸಂಗಡಿಗ), ಸ್ವಭಾವ, ಸ್ಥೈರ್ಯ ಮತ್ತು ಸೌಖ್ಯಕ್ಕಾಗಿ ಅನುಕೂಲವಾಗಿರುತ್ತವೆ. ರವಿ, ಮಂಗಳ ಮತ್ತು ಶನಿ ಈ ಗ್ರಹಗಳು ‘ಅಗ್ನಿ ಮತ್ತು ‘ವಾಯು ಈ ತತ್ತ್ವಗಳಿಗೆ ಸಂಬಂಧಿಸಿರುವುದರಿಂದ ಅವು ವ್ಯಕ್ತಿಯ ಕಾರ್ಯಕ್ಷೇತ್ರ, ಕರ್ತೃತ್ವ, ಉತ್ಕರ್ಷ ಮತ್ತು ಪ್ರತಿಷ್ಠೆಗೆ ಅನುಕೂಲವಾಗಿರುತ್ತವೆ. ಗುರುಗ್ರಹ ‘ಆಕಾಶತತ್ತ್ವಕ್ಕೆ ಸಂಬಂಧಿಸಿದ್ದು ಅದು ಅನುಕೂಲ ಮತ್ತು ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿರುತ್ತದೆ.
೨. ರಾಶಿ
ಪೃಥ್ವಿಯು ಯಾವ ಮಾರ್ಗದಿಂದ ಸೂರ್ಯನ ಸುತ್ತಲೂ ತಿರುಗುತ್ತದೆಯೋ, ಆ ಮಾರ್ಗಕ್ಕೆ ‘ಕ್ರಾಂತಿವೃತ್ತ ಎಂದು ಹೇಳುತ್ತಾರೆ. ಕ್ರಾಂತಿವೃತ್ತದ ೧೨ ಸಮಾನ ಭಾಗಗಳೆಂದರೆ ರಾಶಿಗಳು. ಪ್ರತಿಯೊಂದು ರಾಶಿಯಲ್ಲಿ ಎರಡುಕಾಲು (೨.೨೫) ನಕ್ಷತ್ರಗಳಿರುತ್ತವೆ. ರಾಶಿಗಳು ಸ್ಥಿರವಾಗಿರುತ್ತವೆ; ಆದರೆ ಪೃಥ್ವಿಯು ಸ್ವತಃ ತನ್ನ ಸುತ್ತಲೂ ತಿರುಗುತ್ತಿರುವುದರಿಂದ ರಾಶಿಚಕ್ರ ತಿರುಗುವುದು ಕಾಣಿಸುತ್ತದೆ. ಜನ್ಮಕುಂಡಲಿಯಲ್ಲಿ(ಜಾತಕದಲ್ಲಿ) ಮೊದಲ ಸ್ಥಾನದಲ್ಲಿರುವ ರಾಶಿಗೆ ‘ಲಗ್ನರಾಶಿ ಮತ್ತು ಚಂದ್ರನು ಯಾವ ರಾಶಿಯಲ್ಲಿರುತ್ತಾನೆಯೋ, ಅದಕ್ಕೆ ‘ಜನ್ಮರಾಶಿ ಎನ್ನುತ್ತಾರೆ. ಈ ಎರಡು ರಾಶಿಗಳು ವ್ಯಕ್ತಿಯ ವ್ಯಕ್ತಿತ್ತ್ವದ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತವೆ. ಲಗ್ನರಾಶಿಯು ವ್ಯಕ್ತಿಯ ಮೂಲ ಪಿಂಡ (ಪ್ರಕೃತಿ) ಮತ್ತು ಜನ್ಮರಾಶಿ ವ್ಯಕ್ತಿಯ ಸ್ವಭಾವ-ವೈಶಿಷ್ಟ್ಯಗಳನ್ನು ತೋರಿಸುತ್ತದೆ.
೨ ಅ. ಜನ್ಮರಾಶಿಗನುಸಾರ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ವೈಶಿಷ್ಟ್ಯಗಳು
ಗ್ರಹವು, ಅವನಿಗೆ ಪೂರಕವಿರುವ ಗುಣಧರ್ಮವಿರುವ ರಾಶಿಯಲ್ಲಿರುವಾಗ ಬಲಶಾಲಿಯಾಗುತ್ತದೆ ಮತ್ತು ಹೆಚ್ಚು ಫಲ ಕೊಡುತ್ತದೆ. ಉದಾ. ಅಗ್ನಿತತ್ತ್ವದ ಮಂಗಳ ಗ್ರಹ ಅಗ್ನಿತತ್ತ್ವದ ಮೇಷ ರಾಶಿಯಲ್ಲಿ ಹೆಚ್ಚು ಫಲಕೊಡುತ್ತದೆ. ತದ್ವಿರುದ್ಧ ಗ್ರಹವು ತನಗೆ ಪ್ರತಿಕೂಲ ಗುಣಧರ್ಮವಿರುವ ರಾಶಿಯಲ್ಲಿರುವಾಗ ಅವನು ದುರ್ಬಲನಾಗುತ್ತಾನೆ.
೩. ಜಾತಕದಲ್ಲಿನ ಸ್ಥಾನಗಳು
ಜಾತಕದಲ್ಲಿರುವ ಸ್ಥಾನಗಳೆಂದರೆ ದಿಶೆಗಳ ಸಮಾನ ಭಾಗಗಳು. ಜಾತಕದಲ್ಲಿ ಒಟ್ಟು ೧೨ ಸ್ಥಾನಗಳಿದ್ದು ಅವುಗಳ ಸ್ಥಾನಗಳು ಬದಲಾಗುವುದಿಲ್ಲ; ಆದರೆ ಸ್ಥಾನಗಳಲ್ಲಿನ ರಾಶಿಗಳು ಮಾತ್ರ ಬದಲಾಗುತ್ತವೆ. ಜೀವನದಲ್ಲಿನ ಪ್ರತಿಯೊಂದು ವಿಷಯದ ವಿಚಾರ ಒಂದಲ್ಲ ಒಂದು ಸ್ಥಾನದಿಂದಾಗುತ್ತದೆ. ಜಾತಕದ ೧೨ ಸ್ಥಾನಗಳಿಂದ ಅಭ್ಯಾಸ ಮಾಡಲಾಗುವ ವಿಷಯಗಳ ಮಾಹಿತಿಯನ್ನು ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.
೩ ಅ. ನಾಲ್ಕು ಪರುಷಾರ್ಥಗಳಿಗೆ ಸಂಬಂಧಿಸಿದ ಸ್ಥಾನಗಳು ಮತ್ತು ಸ್ಥಾನಗಳ ಸ್ವರೂಪ : ಹಿಂದೂ ಧರ್ಮಕ್ಕನುಸಾರ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಇವು ಮಾನವನ ಜೀವನದ ಉದ್ದೇಶಗಳಾಗಿವೆ. ಜಾತಕದಲ್ಲಿರುವ ೧೨ ಸ್ಥಾನಗಳಿಂದ ಈ ೪ ಪುರುಷಾರ್ಥಗಳ ವಿಚಾರ ಮಾಡಲಾಗುತ್ತದೆ, ಅಂದರೆ ಆ ಪುರುಷಾರ್ಥವನ್ನು ಸಾಧಿಸಲು ಅದೃಷ್ಟ ಎಷ್ಟು ಅನುಕೂಲವಿದೆ, ಎಂಬುದರ ವಿಚಾರ ಮಾಡಲಾಗುತ್ತದೆ. ಪುರುಷಾರ್ಥಗಳಿಗೆ ಸಂಬಂಧಿಸಿದ ಕುಂಡಲಿಯಲ್ಲಿನ ಸ್ಥಾನಗಳು ಮತ್ತು ಸ್ಥಾನಗಳ ಸ್ವರೂಪವನ್ನು ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.
ಸ್ಥಾನಗಳ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ವರೂಪವು ಪುರುಷಾರ್ಥಗಳನ್ನು ಸಾಧ್ಯಗೊಳಿಸುವುದರಲ್ಲಿನ ಹಂತಗಳನ್ನು ದರ್ಶಿಸುತ್ತವೆ, ಉದಾ. ಮೋಕ್ಷ ಸ್ಥಾನಗಳ ಪೈಕಿ ‘ಚತುರ್ಥ ಸ್ಥಾನವು ಕುಲಾಚಾರಗಳ ಪಾಲನೆ ಮಾಡುವುದು, ಹಬ್ಬ-ಉತ್ಸವಗಳನ್ನು ಆಚರಿಸುವುದು ಇತ್ಯಾದಿ ಪ್ರಾಥಮಿಕ ಸ್ವರೂಪದ ಸಾಧನೆಯನ್ನು ದರ್ಶಿಸುತ್ತದೆ; ‘ಅಷ್ಟಮ ಸ್ಥಾನವು ಜಪ, ತಪ, ಅನುಷ್ಠಾನ ಇತ್ಯಾದಿ ಸಕಾಮ ಸ್ವರೂಪದ ಸಾಧನೆಯನ್ನು ದರ್ಶಿಸುತ್ತದೆ ಮತ್ತು ‘ದ್ವಾದಶ ಸ್ಥಾನವು ತನು-ಮನ-ಧನದ ತ್ಯಾಗ, ಗುರುಸೇವೆ, ಅಧ್ಯಾತ್ಮಪ್ರಸಾರ ಇತ್ಯಾದಿ ನಿಷ್ಕಾಮ ಸ್ವರೂಪದ ಸಾಧನೆಯನ್ನು ದರ್ಶಿಸುತ್ತದೆ.
– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೦.೧.೨೦೨೩)