ದೆಹಲಿ – ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೂತನ ಸಂಸದ ಭವನದಲ್ಲಿ ‘ಸೆಂಗೋಲನ್ನು (ಧರ್ಮದಂಡ) ಸ್ಥಾಪಿಸಲು ತಮಿಳುನಾಡಿನ ವಿವಿಧ ಅಧೀನಮ್‌ಗಳ ಸ್ವಾಮೀಜಿಗಳನ್ನು (ಮಠಾಧಿಪತಿಗಳನ್ನು) ಆಮಂತ್ರಿಸಿದ್ದರು. ಈ ಐತಿಹಾಸಿಕ ಸಮಾರಂಭಕ್ಕೆ ೨೧ ಪ್ರಮುಖ ಮಠಾಧಿಪತಿಗಳ ವಂದನೀಯ ಉಪಸ್ಥಿತಿ ಲಭಿಸಿತು. ಸಂಸದ ಭವನದ ಉದ್ಘಾಟನಾ ಸಮಾರಂಭದ ನಂತರ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆಯವರು ಪ್ರಮುಖ ಮಠಾಧಿಪತಿಗಳ ನಿವಾಸಸ್ಥಾನಗಳಿಗೆ ಹೋಗಿ ಶಾಲು ಮತ್ತು ಗ್ರಂಥಗಳ ಉಡುಗೊರೆಯನ್ನು ನೀಡಿ ಸನ್ಮಾನಿಸಿದರು. ಈ ಸಮಯದಲ್ಲಿ ಸದ್ಗುರು ಡಾ. ಪಿಂಗಳೆಯವರು ಸ್ವಾಮೀಜಿಗಳಿಗೆ ಸಮಿತಿಯ ಕಾರ್ಯದ ಸಂಕ್ಷಿಪ್ತ ಮಾಹಿತಿ ನೀಡಿದರು.
೧. ೧ ಸಾವಿರದ ೩೦೦ ವರ್ಷಗಳಿಗಿಂತ ಹೆಚ್ಚು ಪ್ರಾಚೀನವಾದ ಮದುರೈ ಮಧೀನಮ್‌ನ ೨೯೩ ನೇ ಮಠಾಧಿಪತಿಗಳಾದ ಶ್ರೀ ಲಾ ಶ್ರೀ ಹರಿಹರ ಜ್ಞಾನ ಸಂಬಂಧ ದೆಸಿಕ ಸ್ವಾಮಿ ಇವರು ಸಮಿತಿಯ ಕಾರ್ಯಕ್ಕೆ ಆಶೀರ್ವಾದ ನೀಡಿದರು.
೨. ಪೆರೂರ ಅಧೀನಮ್ ಇದರ ಮಠಾಧಿಪತಿ ಮತ್ತು ಶ್ರೀ ದಕ್ಷಿಣಾಮೂರ್ತಿ ಮಠದ ೬ ನೇ ಮಠಾಧಿಪತಿಗಳಾದ ಪೂ. ಡಾ. ಶಾಂತಲಿಂಗಮ್ ಮರುದಶಾಲಾ ಸ್ವಾಮೀಯವರು ಸಮಿತಿಯ ‘ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಕೇಳಿ ‘ವಿಶೇಷ ಆನಂದವಾಯಿತು, ಎಂಬ ಗೌರವೋದ್ಗಾರವನ್ನು ತೆಗೆದರು. ಹಾಗೆಯೇ ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ಗೋವಾದಲ್ಲಿ ನಡೆಯ ಲಿರುವ ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವಕ್ಕೆ ಆಶೀರ್ವಾದ ನೀಡಿದರು. ಸ್ವಾಮೀಜಿಯವರ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಅವರು ‘ನಾನು ಪ್ರತ್ಯಕ್ಷ ಒಂದು ದಿನದ ಮಟ್ಟಿಗಾದರೂ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಉಪಸ್ಥಿತನಿರಲು ಖಂಡಿತ ಪ್ರಯತ್ನಿಸುತ್ತೇನೆ, ಎಂದು ಹೇಳಿದರು.
೩. ಕುಂಡ್ರಕುಡಿ ಅಧಿನಮ್‌ನ ಮಠಾಧಿಪತಿಗಳಾದ, ಹಾಗೆಯೇ ಸ್ವಾಮಿ ವೇದಾಂತಾನಂದ ಇವರನ್ನೂ ಸನ್ಮಾನಿಸಲಾಯಿತು.
ಗಮನಾರ್ಹ ಅಂಶಗಳು
ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ಅಖಿಲ ಭಾರತೀಯ ಹಿಂದು ರಾಷ್ಟ್ರ ಅಧಿವೇಶನಕ್ಕೆ ತಮಿಳುನಾಡಿನಿಂದ ಪ್ರತಿವರ್ಷ ಪಾಲ್ಗೊಳ್ಳುವ ಯುವಾ ಹಿಂದುತ್ವನಿಷ್ಠ ಸರ್ವಶ್ರೀ ಸಂತೋಷಕುಮಾರ ಪಾಲಾ, ಸತೀಶ ಕಣ್ಣಾ ಇವರು ಭಾಗವಹಿಸಿದ್ದರು. ೨೦೨೨ ರಲ್ಲಿ ನಡೆದ ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಶ್ರೀ. ಸಂತೋಷ ಇವರು ತಮ್ಮ ಭಾಷಣದಲ್ಲಿ ‘ಸೆಂಗೋಲ್ ಬಗೆಗಿನ ಮಾಹಿತಿಯನ್ನು ನೀಡಿದ ಬಗ್ಗೆ ಹೇಳಿದರು ಮತ್ತು ಆ ಕುರಿತಾದ ವಿಡಿಯೋವನ್ನು ಈ ಸಮಯದಲ್ಲಿ ಸ್ವಾಮೀಜಿಗಳಿಗೆ ತೋರಿಸಲಾಯಿತು.