ಜೂನ್ ೧೬ ರಿಂದ ೨೨ ರ ಕಾಲಾವಧಿಯಲ್ಲಿ ಗೋವಾದಲ್ಲಿ ನಡೆಯಲಿರುವ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಿಮಿತ್ತ
ಸ್ವಾತಂತ್ರ್ಯದ ನಂತರದ ಕಾಲಾವಧಿಯಲ್ಲಿ ಹಿಂದೂಗಳ ಮನಸ್ಸನ್ನು ಕ್ರೈಸ್ತೀಕರಣ, ಇಸ್ಲಾಮೀಕರಣ ಹಾಗೂ ಜಾತ್ಯತೀತಗೊಳಿಸಲು ಬಹುದೊಡ್ಡ ಪ್ರಮಾಣದಲ್ಲಿ ಪ್ರಯತ್ನವಾಯಿತು. ಇದರಿಂದ ಜನ್ಮ ಹಿಂದೂ; ಆದರೆ ಮನಸ್ಸು ಮತ್ತು ವಿಚಾರಗಳಿಂದ ಹಿಂದೂಯೇತರ ಎಂಬಂತೆ ಜನಸಂಖ್ಯೆ ಬೆಳೆಯಿತು. ಈಗ ಮಾತ್ರ ಈ ಚಿತ್ರಣ ಬದಲಾಗುತ್ತಿದ್ದು, ಹಿಂದೂಗಳ ಮನಸ್ಸು ಜಾಗೃತಗೊಳ್ಳುತ್ತಿದೆ. ಈ ಜಾಗೃತಿಗೊಳ್ಳುವುದರ ಹಿಂದೆ ಹಿಂದುತ್ವನಿಷ್ಠ ಸಂಘಟನೆಗಳನ್ನು ಸಂಘಟಿಸುವ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಯೋಗದಾನ ಅಪರಿಮಿತವಾಗಿದೆ.
ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದಿದ್ದರೆ ಭಾರತ ಇಸ್ಲಾಮೀಕರಣವಾಗಲು ಸಮಯಬೇಕಾಗದು
ವಾಸ್ತವದಲ್ಲಿ ಭಾರತದಲ್ಲಿ ಹಿಂದೂಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಭಾರತದಲ್ಲಿರುವ ೯ ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಅಲ್ಲಿ ಹಿಂದೂಗಳನ್ನು ದ್ವಿತೀಯ ದರ್ಜೆಯ ನಾಗರಿಕರೆಂಬಂತೆ ನಡೆಸಿಕೊಳ್ಳಲಾಗುತ್ತಿದೆ. ಹಿಂದೂಗಳ ಮೇಲೆ ಅತ್ಯಾಚಾರ ಹೆಚ್ಚಾಗಿದೆ ಎಂಬುದು ಮಣಿಪುರದ ಹಿಂಸಾತ್ಮಕ ಘಟನೆಗಳಿಂದ ಮತ್ತೊಮ್ಮೆ ಸಾಬೀತಾಗಿದೆ. ಒಟ್ಟಾರೆ ಈ ದೇಶವನ್ನು ಅನೇಕ ಭಾಗಗಳನ್ನಾಗಿಸಿ ದೇಶವನ್ನೇ ವಿಭಜಿಸಲಾಗುತ್ತಿದೆ. ಈ ಅಪಾಯಕಾರಿ ವಿಷಯದ ಬಗ್ಗೆ ಹಿಂದೂಗಳನ್ನು ಜಾಗೃತಗೊಳಿಸಬೇಕಾಗಿದೆ. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದಿದ್ದರೆ, ಭಾರತವು ಇಸ್ಲಾಮೀಕರಣಗೊಳ್ಳಲು ಹೆಚ್ಚು ಸಮಯ ತಗಲುವುದಿಲ್ಲ.
ಹಿಂದೂಗಳ ಮೇಲಿನ ಅತ್ಯಾಚಾರ ಬಯಲಿಗೆಳೆಯುವ ಅಧಿವೇಶನ
ಹಿಂದೂಗಳ ವಿರುದ್ಧ ನಡೆಸಲಾಗುವ ಈ ವಿವಿಧ ಷಡ್ಯಂತ್ರಗಳನ್ನು ಬಯಲಿಗೆಳೆಯುವಲ್ಲಿ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಯೋಗದಾನ ಅಪಾರವಾಗಿದೆ. ೨೦೧೨ ರಲ್ಲಿ ಗೋವಾದಲ್ಲಿ ‘ಪ್ರಥಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ನಡೆಯಿತು. ಪ್ರಥಮ ಅಧಿವೇಶನದಿಂದ ಇಲ್ಲಿಯವರೆಗೆ ‘ಹಿಂದೂ ರಾಷ್ಟ್ರದ ಉದ್ಘೋಷಣೆ ‘ಹಿಂದೂ ಜಾಗೃತಿ ಮತ್ತು ‘ಹಿಂದೂ ಸಂಘಟನೆ ಇವುಗಳೇ ಅಧಿವೇಶನದ ಮುಖ್ಯ ಸಾರವಾಗಿದೆ. ಮೊದಲು ಹಿಂದೂ ರಾಷ್ಟ್ರವೆಂದರೆ, ಅದರೆಡೆಗೆ ನಕಾರಾತ್ಮಕ ಮತ್ತು ಕೋಮು ದೃಷ್ಟಿಯಿಂದ ನೋಡಲಾಗುತ್ತಿತ್ತು. ಇಂದು ಮಾತ್ರ ತಳಮಟ್ಟ ದಿಂದ ಹಿಡಿದು ಎಲ್ಲೆಡೆಯ ಹಿಂದೂಗಳೂ ಹಿಂದೂ ರಾಷ್ಟ್ರಕ್ಕೆ ಸಮರ್ಥನೆ ನೀಡುತ್ತಿದ್ದಾರೆ. ಇದಕ್ಕೆ ಹಿಂದೂ ಧರ್ಮದ ಸರ್ವಸಮಾವೇಶಕತನ ಮತ್ತು ವಿಶ್ವಕಲ್ಯಾಣಕಾರಿ ಸಂಕಲ್ಪನೆಯೇ ಕಾರಣವಾಗಿದೆ. ಹಿಂದೂ ಧರ್ಮದ ಮೇಲಾಗುವ ಆಘಾತಗಳ ವಿಷಯದಲ್ಲಿ ಜಾಗೃತಿಗೊಳಿಸುವಾಗ ಹಿಂದೂ ಧರ್ಮವನ್ನು ಆಚರಣೆಯಲ್ಲಿ ತರುವ ದೃಷ್ಟಿಯಿಂದಲೂ ಜಾಗೃತಿಗೊಳಿಸಲು ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವು ಮಹತ್ವದ ಪಾತ್ರವನ್ನು ವಹಿಸಿದೆ.
ಹಿಂದೂ ರಾಷ್ಟ್ರವನ್ನು ಸಾಕಾರಗೊಳಿಸಲು ಪ್ರಯತ್ನ
ಜಾತ್ಯತೀತ ವ್ಯವಸ್ಥೆಯಲ್ಲಿ ಹಿಂದೂಗಳ ರಕ್ಷಣೆ ಮಾಡುವುದಿದ್ದರೆ, ಕೇವಲ ರಾಷ್ಟ್ರೀಯ ಮಾತ್ರವಲ್ಲ, ಅಂತರರಾಷ್ಟ್ರೀಯ ಮಟ್ಟ ದಲ್ಲಿಯೂ ಹಿಂದೂ ಸಂಘಟನೆ ಮಾಡುವುದು ಕಾಲದ ಆವಶ್ಯಕತೆಯಾಗಿದೆ. ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವು ಆ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಈ ಅಧಿವೇಶನಗಳ ಮಾಧ್ಯಮದಿಂದ ಭಾರತದಲ್ಲಿರುವ ಸಂತರು, ಮಹಾತ್ಮರು, ಹಿಂದುತ್ವವಾದಿ ಸಂಘಟನೆಗಳ ಪದಾಧಿಕಾರಿಗಳು, ದೇವಸ್ಥಾನಗಳ ವಿಶ್ವಸ್ಥರು ಮುಂತಾದವರ ಉಪಸ್ಥಿತಿಯಲ್ಲಿ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವನ್ನು ಆಯೋಜಿಸಲಾಗುತ್ತಿದೆ.
ಈ ಅಧಿವೇಶನದಲ್ಲಿ ಹಿಂದೂ ರಾಷ್ಟ್ರದ ದೃಷ್ಟಿಯಿಂದ ವಿಚಾರ ಮಂಥನವಾಗುವುದರೊಂದಿಗೆ ಹಿಂದುತ್ವದ ಕಾರ್ಯದಲ್ಲಿ ಎದುರಾಗುವ ಉತ್ತಮ ಮತ್ತು ಕಹಿ ಅನುಭವಗಳ ವಿನಿಮಯ ಆಗುತ್ತದೆ. ಹಾಗೆಯೇ ಇಡೀ ವರ್ಷಕ್ಕಾಗಿ ಹಿಂದುತ್ವದ ಕಾರ್ಯದ ದಿಶೆಯನ್ನು ನಿರ್ಧರಿಸಲಾಗುತ್ತದೆ. ದೇಶ-ವಿದೇಶಗಳ ೩೦೦ಕ್ಕಿಂತ ಅಧಿಕ ಅಗ್ರಗಣ್ಯ ಹಿಂದುತ್ವನಿಷ್ಠ ಸಂಘಟನೆಗಳ ಸಹಭಾಗದಲ್ಲಿ ಈ ಅಧಿವೇಶನದ ಮಾಧ್ಯಮದಿಂದ ಹಿಂದೂ ರಾಷ್ಟ್ರವನ್ನು ಸಾಕಾರಗೊಳಿಸುವ ಕಾರ್ಯ ನಡೆಯುತ್ತಿದೆ.
ಈ ಸಲವೂ ೧೬ ರಿಂದ ೨೨ ಜೂನ್ ಈ ಕಾಲಾವಧಿಯಲ್ಲಿ ಗೋವಾದಲ್ಲಿ ೧೧ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಅಂದರೆ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ನಡೆಯಲಿದೆ. ಅದರಲ್ಲಿ ಲವ್ ಜಿಹಾದ್, ಹಲಾಲ್ ಸರ್ಟಿಫಿಕೇಶನ್, ಲ್ಯಾಂಡ್ ಜಿಹಾದ, ಕಾಶಿ-ಮಥುರಾ ಮುಕ್ತಿ, ಮತಾಂತರ, ಗೋಹತ್ಯೆ, ದೇವಸ್ಥಾನ ಸಂಸ್ಕೃತಿಯ ರಕ್ಷಣೆ, ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ಮಾತೃಭೂಮಿಯಲ್ಲಿ ಪುನರ್ವಸತಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳ ಮೇಲಿನ ಅತ್ಯಾಚಾರಗಳು, ವಿವಿಧ ಜಿಹಾದಿ ಆಕ್ರಮಣಗಳು ಮಾತ್ರವಲ್ಲ, ಹಿಂದೂ ರಾಷ್ಟ್ರದ ಅಡಿಪಾಯಕ್ಕಾಗಿ ಆವಶ್ಯಕವಿರುವ ಮುಂಬರುವ ಮಹತ್ವದ ವಿಷಯಗಳ ಮೇಲೆ ವಿಚಾರಮಂಥನ ಹಾಗೂ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗುವುದು. ಈ ಅಧಿವೇಶನವನ್ನು ಹಿಂದೂ ಜನಜಾಗೃತಿ ಸಮಿತಿಯ ಯು-ಟ್ಯೂಬ್, ಫೇಸ್‌ಬುಕ್ ಮತ್ತು ಟ್ವಿಟರ್ ಅಕೌಂಟ್‌ನಿಂದ ಹಾಗೆಯೇ www.hindujagruti.org ಈ ಜಾಲತಾಣಗಳಿಂದ ಲೈವ್ ಪ್ರಸಾರ ಮಾಡಲಾಗುವುದು. ಇಂದಿನವರೆಗಿನ ಆಂದೋಲನಗಳಿಂದ ಸಮಸ್ತ ಹಿಂದೂಗಳಿಗೆ ಸಿಗುತ್ತಿರುವ ಯಶಸ್ಸಿನ ಹಿನ್ನೆಲೆಯಲ್ಲಿ ಈ ಅಧಿವೇಶನವು ಸಮಸ್ತ ಹಿಂದೂಗಳಿಗೆ ಅತ್ಯಂತ ಉತ್ಸಾಹದಾಯಕವಾಗಿರಲಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ.
– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.