ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ.ಜಯಂತ ಆಠವಲೆಯವರ ೮೧ ನೇ ಜನ್ಮೋತ್ಸವದ ನಿಮಿತ್ತ ಹುಬ್ಬಳ್ಳಿ, ಮಂಗಳೂರು ಮತ್ತು ಉಡುಪಿಯಲ್ಲಿ ಹಿಂದೂ ಐಕ್ಯತಾ ಮೆರವಣಿಗೆ

ಮಂಗಳೂರಿನ ಶೋಭಾಯಾತ್ರೆಯಲ್ಲಿ ವೇದಿಕೆಯಲ್ಲಿ ಗಣ್ಯರು
ಹುಬ್ಬಳ್ಳಿಯಲ್ಲಿ ನೆರವೇರಿದ ಶೋಭಾಯಾತ್ರೆಯಲ್ಲಿ ಸೇರಿದ ಸನಾತನದ ಸಾಧಕರು ಹಾಗೂ ಧರ್ಮಪ್ರೇಮಿಗಳು

ಮಂಗಳೂರು : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ  ಆಠವಲೆ ಯವರ ೮೧ ನೇ ಜನ್ಮೋತ್ಸವದ ನಿಮಿತ್ತ ಮೇ ೨೭ ರಂದು ಮಂಗಳೂರು ಹಾಗೂ ಮೇ ೨೬ ರಂದು ಉಡುಪಿಯಲ್ಲಿ ಅದೇ ರೀತಿ ಹುಬ್ಬಳ್ಳಿಯಲ್ಲಿ ಮೇ ೨೭ ರಂದು ಶೋಭಾಯಾತ್ರೆ ನಡೆಸಲಾಯಿತು. ಧರ್ಮಧ್ವಜದ ಪೂಜೆಯೊಂದಿಗೆ ಪ್ರಾರಂಭವಾದ ಶೋಭಾಯಾತ್ರೆಯಲ್ಲಿ ಸನಾತನ ಸಂಸ್ಥೆಯ ಸಾಧಕರು, ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು, ನೂರಾರು ಸಂಖ್ಯೆಯಲ್ಲಿ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮಹಿಳಾ ಮಂಡಳಿಗಳ ಕಾರ್ಯಕರ್ತರು ಭಾಗಿಯಾಗಿದ್ದರು. ಭಜನಾ ಮಂಡಳಿಯವರ ಕುಣಿತ ಭಜನೆ, ಚಂಡೆ, ವಾದ್ಯಗಳ ಝೇಂಕಾರ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಬಾಲ ಗಂಗಾಧರ ತಿಲಕ ಮುಂತಾದ ವೇಷಭೂಷಣ ತೊಟ್ಟ ಮಕ್ಕಳು ಶೋಭಾಯಾತ್ರೆಯಲ್ಲಿದ್ದರು. ಶೋಭಾಯಾತ್ರೆಯ ಉದ್ದಕ್ಕೂ ಸಂಸ್ಥೆಯ ಸಾಧಕರು ಧರ್ಮಜಾಗೃತಿ, ಹಿಂದೂ ಐಕ್ಯತೆ, ರಾಷ್ಟ್ರಪ್ರೇಮ ಜಾಗೃತಿ ಮೂಡಿಸುವ ಘೋಷಣೆಗಳನ್ನು ಕೂಗುತ್ತಾ ಸಮಾಜದಲ್ಲಿ ಜಾಗೃತಿ ಮೂಡಿಸಿದರು. ಮಂಗಳೂರಿನಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಸನಾತನದ ಸಂತರಾದ ಪೂ. ವಿನಾಯಕ ಕರ್ವೇ, ಪೂ. ರಾಧಾ ಪ್ರಭು ಅದೇ ರೀತಿ ಸನಾತನದ ಮೊದಲ ಬಾಲಕ ಸಂತರಾದ ಪೂ. ಭಾರ್ಗವರಾಮ ಪ್ರಭು ಇವರ ವಂದನೀಯ ಉಪಸ್ಥಿತಿ ಇತ್ತು, ಹುಬ್ಬಳ್ಳಿಯಲ್ಲಿ ಸುಮಾರು ೭೦೦ ಮಂದಿ ಉಪಸ್ಥಿತರಿದ್ದರು

ಗಮನಾರ್ಹ ಅಂಶಗಳು

೧. ಮಂಗಳೂರಿನಲ್ಲಿ ಮೆರವಣಿಗೆ ಹೋಗುವಾಗ ಗರುಡ ಆಕಾಶದಲ್ಲಿ ಪ್ರದಕ್ಷಿಣೆ ಹಾಕುವುದು ಅನೇಕ ಸಾಧಕರು ಗಮನಿಸಿದರು.

೨. ಮಂಗಳೂರಿನ ಮೆರವಣಿಗೆಯಲ್ಲಿ ಘೋಷಣೆ ಕೂಗುವಾಗ ಬಸ್ಸುಗಳಲ್ಲಿದ್ದ ಪ್ರಯಾಣಿಕರೂ ಜಯಘೋಷ ಮಾಡುತ್ತಿದ್ದರು.