ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ಸನಾತನ ಸಂಸ್ಥೆಯ ರಜತ ಮಹೋತ್ಸವದ ವರ್ಷದಲ್ಲಿ ಹೊಸ ಉಪಕ್ರಮಗಳ ಮೂಲಕ ಮುಗಿಲೆತ್ತರಕ್ಕೆ ತಲುಪಿದ ಧರ್ಮಕಾರ್ಯ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

‘ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ಉದ್ಭವಿಸಿದ ಸಂಚಾರನಿಷೇಧವು ಜನರ ಜೀವನವನ್ನು ಬದಲಾಯಿಸಿತು ಮತ್ತು ಪ್ರತ್ಯಕ್ಷ ಕೆಲಸದ ಪದ್ಧತಿಯು ಆನ್‌ಲೈನ್‌ ಆಗಿತ್ತು. ಇಂದಿಗೂ ಈ ಪದ್ಧತಿ ‘ವರ್ಕ್ ಫ್ರಮ್‌ ಹೋಮ್’ (ಮನೆಯಲ್ಲಿದ್ದು ಕೆಲಸ ಮಾಡುವುದು) ನಡೆದಿದೆ. ಪ್ರತ್ಯಕ್ಷ ಮಾಡಬೇಕಾದ ಕೆಲಸಗಳು ಈಗ  ‘ಆನ್‌ಲೈನ್‌’ನಲ್ಲಿ ಸುಲಭವಾಗಿ ಆಗುತ್ತಿವೆ. ಸನಾತನದ ಅನೇಕ ಉಪಕ್ರಮಗಳು ಆನ್‌ಲೈನ್‌ನಲ್ಲಿ ಪ್ರಾರಂಭವಾಗಿದ್ದವು. ಆ ಮಾಧ್ಯಮದಿಂದ ವಿವಿಧ ಕ್ಷೇತ್ರಗಳ ಜನರು ಈ ಉಪಕ್ರಮದಲ್ಲಿ ಸೇರಿಕೊಂಡರು. ಈ ಮಾಧ್ಯಮದಿಂದ ಮಾರ್ಗದರ್ಶನವನ್ನು ಪಡೆದು ‘ಸನಾತನ ಪ್ರಭಾತ’ದ ಓದುಗರು ಮತ್ತು ಜಾಹೀರಾತುದಾರರು ಹಾಗೂ ಸನಾತನದ ಹಿತೈಷಿಗಳು ಸಾಧನೆಯನ್ನು ಮಾಡಲು ಪ್ರಾರಂಭಿಸಿದರು. ಒಟ್ಟಾರೆ ಈ ಕಾಲವು ಸಾಧಕರ ಸಾಧನೆಗೆ ಹಾಗೂ ಸನಾತನದ ಕಾರ್ಯ ಪ್ರಗತಿಗೆ ಮಂಗಳಕರವಾಗಿದೆ.

‘ಸನಾತನದ ಕಾರ್ಯವು ಕಳೆದ ೪ ವರ್ಷಗಳಲ್ಲಿ ಮುಗಿಲೆತ್ತರಕ್ಕೆ ಬೆಳೆದಿದೆ’ ಇದು ಕೇವಲ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಾಗಿದೆ. ‘ಸನಾತನದ ಧರ್ಮಕಾರ್ಯದ ಪ್ರಗತಿ ಹೇಗಾಯಿತು?’ ಎನ್ನುವ ಮಾಹಿತಿಯನ್ನು ಈ ಲೇಖನದಿಂದ ತಿಳಿದುಕೊಳ್ಳೋಣ.

ಇಲ್ಲಿಯವರೆಗೆ ಮುದ್ರಣವಾಗಿರುವ ಲೇಖನಗಳಲ್ಲಿ ನಾವು ‘ಕೊರೊನಾ ಕಾಲದಲ್ಲಿ ಸಾಧಕರಿಗೆ ವ್ಯಷ್ಟಿ ಸಾಧನೆಯನ್ನು ಸಮರ್ಪಕವಾಗಿ ಕೈಗೊಳ್ಳಲು ಸಾಧ್ಯವಾಗುವುದು. ಪ್ರತಿಯೊಂದು ಜಿಲ್ಲೆಯಲ್ಲಿ ಪ್ರಾರಂಭವಾದ ‘ಆನ್‌ಲೈನ್‌ ಸಾಧನಾ ಸತ್ಸಂಗ’, ವರ್ಗವಾರು ಸಾಧನಾ ಸತ್ಸಂಗ ಮತ್ತು ಕೊರೊನಾ ಕಾಲಾವಧಿಯಲ್ಲಿ ವಿವಿಧ ವರ್ಗದವರಿಗೆ ‘ಒತ್ತಡ ನಿವಾರಣೆಗಾಗಿ ಅಧ್ಯಾತ್ಮ’ ಈ ವಿಷಯದ ಆನ್‌ಲೈನ ಪ್ರವಚನ’ ಈ ವಿಷಯದ  ಅಂಶಗಳನ್ನು ಓದಿದೆವು. ಈ ವಾರ ಈ ಲೇಖನದ ಮುಂದಿನ ಭಾಗವನ್ನು ಕೊಡುತ್ತಿದ್ದೇವೆ.                                 (ಭಾಗ ೩)

ಈ ಸಂಚಿಕೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/129794.html

ಕೊರೊನಾ ಮಹಾಮಾರಿಯ ಆಪತ್ಕಾಲ ಹಾಗೂ ಅನಂತರದ ಕಾಲವು ಸನಾತನ ಸಂಸ್ಥೆಯ ಈಶ್ವರಿ ಕಾರ್ಯದ ಸಮೃದ್ಧಿಯ ಕಾಲ !

ಕೊರೊನಾ ಮಹಾಮಾರಿಯ ಆಪತ್ಕಾಲವು ಮಾನವೀಯ ಆರ್ಥಿಕ ಮತ್ತು ಸಾಮಾಜಿಕ ಹಾನಿ ಮಾಡುವ ಕಾಲವಾಗಿತ್ತು.  ಈಗಲೂ ಜಗತ್ತು ಈ ವಿಪತ್ತಿನಿಂದ ಪಾರಾಗಿಲ್ಲ. ಆದರೆ ಕೊರೊನಾ ಮಹಾಮಾರಿಯ ಆಪತ್ಕಾಲ ಹಾಗೂ ಅನಂತರದ ಕಾಲವು ಸನಾತನ ಸಂಸ್ಥೆಯ ಈಶ್ವರಿ ಕಾರ್ಯಕ್ಕೆ ಸಮೃದ್ಧಿಯ ಕಾಲವಾಗಿತ್ತು. ಸಾಧಕರ ವ್ಯಷ್ಟಿ ಸಾಧನೆಯಲ್ಲಿ ವೃದ್ಧಿಯಾಗಿ ಅವರ ವ್ಯಷ್ಟಿ ಸಾಧನೆಯು ಸರಿಯಾಗಿ ಆಗತೊಡಗಿತು. ಸಂಸ್ಥೆಯ ಕಾರ್ಯದಿಂದ ಹೊಸ ಸಾಧಕರು ಸಿದ್ಧರಾದರು. ಇದರಿಂದ ಈಗ ಇನ್ನು ಮುಂದೆ ಸನಾತನ ಸಂಸ್ಥೆಯ ಧರ್ಮಕಾರ್ಯವು ರಚನಾತ್ಮಕ ರೀತಿಯಲ್ಲಿ ಸಮರ್ಪಕವಾಗಲು ಜುಲೈ ೨೦೨೪ ರಲ್ಲಿ ದೇಶಾದ್ಯಂತ ಎಲ್ಲೆಡೆ ‘ಸಂಘಟನಾತ್ಮಕ ರಚನೆ’ ಅಡಿಯಲ್ಲಿ ಅಭಿಯಾನ ಆಯೋಜಿಸಲು ನಿರ್ಧರಿಸಲಾಗಿದೆ. ‘ಸಂಸ್ಥೆಯ ಧರ್ಮಕಾರ್ಯದ ರಚನೆ ಮಾಡುವುದು’ ಧರ್ಮಸಂಸ್ಥಾಪನೆಯ ಕಾರ್ಯಕ್ಕೆ ಸಮನಾಗಿದೆ ಎನ್ನುವ ಅನುಭೂತಿ ಸಾಧಕರು ಈಗ ಅನುಭವಿಸುತ್ತಿದ್ದಾರೆ. ಭಕ್ತರು ‘ಪಿಂಡದಿಂದ ಬ್ರಹ್ಮಾಂಡ’ ಈ ಸಿದ್ಧಾಂತಕ್ಕನುಸಾರ ಈಶ್ವರೀ ರಾಜ್ಯಕ್ಕೆ ಸಮರ್ಪಿತವಾಗಿರುವ ಸನಾತನ ಸಂಸ್ಥೆಯ ಅಂತರ್ಗತ ರಾಮರಾಜ್ಯಕ್ಕೆ ಸಮನಾದ ರಚನೆಯಾಯಿತು. ಭವಿಷ್ಯದಲ್ಲಿ ಭಾರತದಲ್ಲಿ ರಾಮರಾಜ್ಯಕ್ಕೆ  ಸಮನಾದ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು’ ಎನ್ನುವ ಶ್ರದ್ಧೆಯನ್ನಿಟ್ಟುಕೊಂಡು ಸನಾತನ ಸಂಸ್ಥೆಯ ಸಾಧಕ ‘ಸಂಘಟನಾತ್ಮಕ ರಚನೆ’ ಈ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಈ ಸಂಘಟನಾತ್ಮಕ ರಚನೆಯ ಅಭಿಯಾನವೆಂದರೆ ಸಾಧಕರಿಗೆ ವ್ಯಷ್ಟಿ ಜೀವನದಲ್ಲಿ ಆಧ್ಯಾತ್ಮಿಕ ಉನ್ನತಿ ಮತ್ತು ಸಮಷ್ಟಿ ಜೀವನದಲ್ಲಿ ಈಶ್ವರಿ ರಾಜ್ಯದ ಸ್ಥಾಪನೆಯ ಧ್ಯೇಯವನ್ನು ನೀಡುವ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಮಾಡಿರುವ ಅಮೂಲ್ಯ ಕೃಪೆಯಾಗಿದೆ’.

– ಶ್ರೀಸತ್‌ಶಕ್ತಿ(ಸೌ.) ಬಿಂದಾ ನೀಲೇಶ ಸಿಂಗಬಾಳ

೬. ‘ಜ್ಞಾನಶಕ್ತಿ ಅಭಿಯಾನ’ದ ಅಭೂತಪೂರ್ವ ಯಶಸ್ಸು

ಕೊರೊನಾ ಸಾಂಕ್ರಾಮಿಕ ರೋಗದ ಅವಧಿಯಲ್ಲಿ, ಸನಾತನದ ಗ್ರಂಥಗಳ ವಿತರಣೆ ಸಂಪೂರ್ಣ ನಿಂತಿತ್ತು. ಸನಾತನದ ಗ್ರಂಥ ವಿತರಣೆಯಿಂದಾಗುವ ಅಧ್ಯಾತ್ಮ ಪ್ರಸಾರಕ್ಕೆ ಹೊಸ ಜೀವನವನ್ನು ನೀಡಲು ಸನಾತನ ಸಂಸ್ಥೆಯು ಜನವರಿ ೨೦೨೨ ರಲ್ಲಿ ‘ಜ್ಞಾನಶಕ್ತಿ ಅಭಿಯಾನ’ವನ್ನು ಆಯೋಜಿಸಿತು. ಈ ಮೂಲಕ ‘ವಿವಿಧ ಶಾಲೆ-ಕಾಲೇಜುಗಳು, ಸಾರ್ವಜನಿಕ ಗ್ರಂಥಾಲಯಗಳು, ಸರಕಾರಿ ಕಚೇರಿಗಳಲ್ಲಿನ ಗ್ರಂಥಾಲಯಗಳ ಸಂಪರ್ಕ, ಶಾಸಕರು-ಸಂಸದರ ಅನುದಾನದಿಂದ  ಗ್ರಂಥಗಳ ವಿತರಣೆಯ ಕಾರ್ಯ, ಕೊರೊನಾ ಕಾಲದಲ್ಲಿ ಹೊಸದಾಗಿ ಸಂಪರ್ಕವಾದ ಜಿಜ್ಞಾಸುಗಳಿಗೆ ಸನಾತನದ ಗ್ರಂಥಗಳನ್ನು ತಲುಪಿಸುವುದು’, ಎಂಬ ಉಪಕ್ರಮಗಳನ್ನು ಅನುಷ್ಠಾನಗೊಳಿಸಲಾಯಿತು. ಮೊದಲು ಈ ಪ್ರಯೋಗವನ್ನು ಕರ್ನಾಟಕ ರಾಜ್ಯದಲ್ಲಿ, ನಂತರ, ಭಾರತದಾದ್ಯಂತ ಮತ್ತು ಎಲ್ಲಾ ಭಾಷೆಗಳ ಗ್ರಂಥಗಳಿಗಾಗಿ ಆಯೋಜಿಸಲಾಯಿತು. ಈ ಅಭಿಯಾನಕ್ಕೆ ‘ನ ಭೂತೋ ನ ಭವಿಷ್ಯತಿ’ ಎನ್ನುವಂತಹ ಯಶಸ್ಸು ಸಿಕ್ಕಿತು. ಈ ಅಭಿಯಾನದಿಂದ ಇಂದು ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಸರಕಾರಿ ಗ್ರಂಥಾಲಯಗಳಲ್ಲಿ ಸನಾತನದ ಗ್ರಂಥಗಳು ಲಭ್ಯವಿವೆ.

೭. ದಾನಕ್ಕೆ ಪ್ರೋತ್ಸಾಹಿಸುವ ‘ಧರ್ಮದಾನ ಅಭಿಯಾನ’

ಕೊರೊನಾ ಸಮಯದಲ್ಲಿ, ಅನೇಕ ದಾನಿಗಳು ಸಾಮಾಜಿಕ ಕಾರ್ಯಕ್ಕಾಗಿ ದಾನ ಮಾಡಿದ್ದರು. ಕೊರೊನಾ ಬಿಕ್ಕಟ್ಟಿನಿಂದಾಗಿ ಸನಾತನದ  ಆಶ್ರಮದಲ್ಲಿ ತುರ್ತುಚಿಕಿತ್ಸೆಗೆ (ಎಮರಜನ್ಸಿ) ಅವಶ್ಯಕ ಉಪಕರಣಗಳು, ತುರ್ತು ಪರಿಸ್ಥಿತಿಯಲ್ಲಿ ಆವಶ್ಯಕವಿರುವ ಸಾಮಗ್ರಿಗಳು, ಹಾಗೂ ಧರ್ಮಕಾರ್ಯಕ್ಕಾಗಿ ಅಗತ್ಯ ಸಾಮಗ್ರಿಗಳು ಬೇಕಿದ್ದವು. ಇದಕ್ಕಾಗಿ ಸನಾತನ ಸಂಸ್ಥೆಯು ೨೦೨೨ ರಲ್ಲಿ ‘ಮಕರ ಸಂಕ್ರಾಂತಿಯಿಂದ ರಥ ಸಪ್ತಮಿ’ ತನಕದ ಸಮಯದಲ್ಲಿ ಮೊಟ್ಟ ಮೊದಲ ‘ಧರ್ಮದಾನ ಅಭಿಯಾನ’ವನ್ನು ಆಯೋಜಿಸಿತು. ಈ ಅಭಿಯಾನಕ್ಕೆ ಅನೇಕ ಜನರು ತಮ್ಮ ಕೈಲಾದಷ್ಟು ದಾನವನ್ನು ಮಾಡಿದರು. ಈ ಅಭಿಯಾನದಿಂದ ಆಶ್ರಮಕ್ಕೆ ಬೇಕಾಗುವ ತುರ್ತು ಸಲಕರಣೆಗಳ ಪೂರೈಕೆಯಾಯಿತು. ಈ ಅಭಿಯಾನಕ್ಕೆ ದೊರೆತ ಪ್ರೋತ್ಸಾಹದಿಂದ, ೨೦೨೩ ಮತ್ತು ೨೦೨೪ ರಲ್ಲಿಯೂ ‘ಧರ್ಮದಾನ ಅಭಿಯಾನ’ವನ್ನು ಆಯೋಜಿಸಲಾಯಿತು ಮತ್ತು ಸಮಾಜದ ಅನೇಕ ಕೊಡುಗೈ ದಾನಿಗಳು ಸಾಮಗ್ರಿ, ಆಹಾರ ಧಾನ್ಯಗಳು ಇತ್ಯಾದಿಗಳ ರೂಪದಲ್ಲಿ ಅರ್ಪಣೆಯನ್ನು ನೀಡಿ ಸನಾತನದ ವ್ಯಾಪಕ ಧರ್ಮಕಾರ್ಯದಲ್ಲಿ ಪಾಲ್ಗೊಂಡರು.

೮. ಸನಾತನ ಸಂಸ್ಥೆಯ ರಜತ ಮಹೋತ್ಸವದ ಕಾಲದಲ್ಲಿ ಪ್ರಾರಂಭವಾದ ಹೊಸ ಉಪಕ್ರಮಗಳು

ಸನಾತನ ಸಂಸ್ಥೆಯು ೨೨.೩.೨೦೨೪ ರಂದು ೨೫ ವರ್ಷಗಳನ್ನು ಪೂರೈಸಿದ ರಜತ ಮಹೋತ್ಸವದ ನಿಮಿತ್ತ ಸನಾತನ ಸಂಸ್ಥೆಯು ಕೆಲವು ಹೊಸ ಉಪಕ್ರಮಗಳನ್ನು ಪ್ರಾರಂಭಿಸಿದೆ. ಈ ಉಪಕ್ರಮಗಳಿಗೆ ಕಡಿಮೆ ಕಾಲಾವಧಿಯಲ್ಲಿ ದೊರೆತ ಸ್ಪಂದನವು ಗುರುಕಾರ್ಯವು ಅಭೂತಪೂರ್ವ ವೇಗದಲ್ಲಿ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ.

೮ ಅ. ಮಕ್ಕಳಿಗೆ ‘ಬಾಲಸಂಸ್ಕಾರ ವರ್ಗ’ ಮತ್ತು ಯುವಜನತೆಗೆ ‘ಸುಸಂಸ್ಕಾರ ವರ್ಗ’ : ‘ಎಲ್ಲ ವಯಸ್ಸಿನವರಿಗೆ ಸಾಧನೆಯ ಪ್ರಸಾರ ಆಗಬೇಕು’, ಎನ್ನುವ ಉದ್ದೇಶದಿಂದ ಏಪ್ರಿಲ್‌ನಲ್ಲಿ ಯುಗಾದಿಯಂದು  ಮಕ್ಕಳಿಗಾಗಿ (೬ ರಿಂದ ೧೦ ವರ್ಷದವರು) ‘ಬಾಲಸಂಸ್ಕಾರ ವರ್ಗ’ ಮತ್ತು ಯುವಜನತೆಗಾಗಿ (೧೧ ರಿಂದ ೧೫ ವರ್ಷದವರು) ‘ಸುಸಂಸ್ಕಾರ ವರ್ಗ’ ಎರಡು ಉಪಕ್ರಮಗಳನ್ನು ಪ್ರಾರಂಭಿಸಲಾಯಿತು. ‘ಸತ್ಸಂಗದಿಂದ ಕ್ರಿಯಾಶೀಲರಾಗುವ ಸಾಧಕರಿಗೆ ಸೇವೆಯ ಅವಕಾಶ ಸಿಗಬೇಕು ಮತ್ತು ಅವರೂ ಸತ್ಸಂಗ ತೆಗೆದುಕೊಳ್ಳಲು ಸಿದ್ಧರಾಗಬೇಕು’ ಎನ್ನುವ ಉದ್ದೇಶದಿಂದ ಈ ಎರಡೂ ಸಂಸ್ಕಾರವರ್ಗಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಹೊಸ ಸಾಧಕರಿಗೆ ನೀಡಲಾಯಿತು. ಹೊಸ ಸಾಧಕರ ಮಾಧ್ಯಮದಿಂದ ಸದ್ಯ ೧೩೪ ಬಾಲಸಂಸ್ಕಾರ ವರ್ಗ ಮತ್ತು ೨೭ ಸುಸಂಸ್ಕಾರ ವರ್ಗಗಳು ಪ್ರಾರಂಭವಾಗಿವೆ. ಈ ವರ್ಗಗಳ ವೈಶಿಷ್ಟ್ಯವೆಂದರೆ ಮಕ್ಕಳ ಪೋಷಕರೂ ಸಂಸ್ಕಾರ ವರ್ಗಕ್ಕೆ ಬರುತ್ತಾರೆ. ಪೋಷಕರಲ್ಲಿ ಸಾಧನೆಯ ವಿಷಯದಲ್ಲಿ ಜಿಜ್ಞಾಸೆ ಮೂಡಿರುವುದರಿಂದ ಅವರೂ ನಿಯಮಿತವಾಗಿ ಸಾಧನಾ ಸತ್ಸಂಗಕ್ಕೆ ಸೇರುತ್ತಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಪ್ರಬುದ್ಧ ಮತ್ತು ‘ದೈವಿ ಬಾಲಕರು’ ಎಂದು ಸಂಸ್ಥೆಯು ಘೋಷಿಸಿರುವ ಮಕ್ಕಳು ಮತ್ತು ಹದಿಹರೆಯದವರಿಗೆ ಈ ಉಪಕ್ರಮದ ಮೂಲಕ ಮಾರ್ಗದರ್ಶನ ಸಿಗುತ್ತಿದೆ.

೮ ಆ. ಯುವಕರಿಗಾಗಿ ‘ಯುವಾ ಸಾಧನಾ ಸತ್ಸಂಗ’ : ಸಾಧನೆಯ ಇಚ್ಛೆಯಿರುವ ಮತ್ತು ಸಂಸ್ಥೆಯಲ್ಲಿರುವ ಯುವಕರು, ಸಾಧಕರ ಮಕ್ಕಳು, ಹಾಗೆಯೇ ಸಂಸ್ಥೆಯ ಸಂಪರ್ಕದಲ್ಲಿರುವ ದೇಣಿಗೆದಾರರು, ಜಾಹೀರಾತುದಾರರು, ಹಿಂದುತ್ವನಿಷ್ಠರು, ‘ಸನಾತನ ಪ್ರಭಾತ’ದ ಓದುಗರು ಮುಂತಾದ ಯುವ ಹುಡುಗರಿಗಾಗಿ ಈ ಸತ್ಸಂಗ ಮೇ ತಿಂಗಳಿನಲ್ಲಿ ‘ಅಕ್ಷಯ ತೃತೀಯಾ’ದಿಂದ ಪ್ರಾರಂಭವಾಗಿದೆ. ಸದ್ಯ ಭಾರತಾದ್ಯಂತ ೪೦ ಸ್ಥಳಗಳಲ್ಲಿ ಯುವ ಸತ್ಸಂಗಗಳು ಪ್ರಾರಂಭವಾಗಿದ್ದು ಸನಾತನದ ಯುವ ಸಾಧಕರೇ ಸತ್ಸಂಗವನ್ನು ತೆಗೆದುಕೊಳ್ಳುತ್ತಾರೆ ಮತ್ತು ಈ ಸತ್ಸಂಗದ ವಿಷಯದ ಅಭ್ಯಾಸವರ್ಗವನ್ನೂ ಯುವ ಸಾಧಕರೇ ತೆಗೆದುಕೊಳ್ಳುತ್ತಿದ್ದಾರೆ.

೯. ‘ಹಿಂದೂ ಐಕ್ಯತೆ ಮೆರವಣಿಗೆ’ಗಳ ಆಯೋಜನೆ

೨೦೨೨ ರಲ್ಲಿ ಸಾಂಪ್ರದಾಯಿಕ ಸಂಘಟನೆಯ ಐಕ್ಯತೆಯ ಉದ್ದೇಶದಿಂದ ಮತ್ತು ‘ಹಿಂದೂಗಳ ಶಕ್ತಿಪ್ರದರ್ಶನದ’ ದೃಷ್ಟಿಯಿಂದ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಉತ್ತರಪ್ರದೇಶ, ಮಧ್ಯಪ್ರದೇಶ, ದೆಹಲಿ, ಹರಿಯಾಣಾ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸನಾತನ ಸಂಸ್ಥೆಯ ವತಿಯಿಂದ ಹಿಂದೂ ಐಕ್ಯತಾ ಮೆರಣಿಗೆಗಳ ಆಯೋಜನೆಯಿಂದ ಅನೇಕ ಧಾರ್ಮಿಕ ಸಂಸ್ಥೆ ಮತ್ತು ಸಂಘಟನೆಗಳೊಂದಿಗೆ ಆತ್ಮೀಯತೆ ಹೆಚ್ಚಾಯಿತು. ಈಗ ಆ ಎಲ್ಲ ಜನರೂ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದ ಹಿತಚಿಂತಕರಾಗಿದ್ದಾರೆ.

ಸನಾತನ ಸಂಸ್ಥೆಯ ರಜತ ಮಹೋತ್ಸವದ ನಿಮಿತ್ತ ದೇಶದಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪುಣೆ ನಗರದಲ್ಲಿ ‘ಸನಾತನ ಗೌರವ ಮೆರವಣಿಗೆ’ಗೆ ಸಮಾಜದಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಲ್ಲಿ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು, ಸಂಪ್ರದಾಯಗಳು, ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು, ವಾರಕರಿ ಸಂಪ್ರದಾಯ, ಭಜನಾ ಮಂಡಳಿಗಳು, ಸಾಂಸ್ಕ್ರತಿಕ ಸಂಸ್ಥೆಗಳು ಮುಂತಾದ ೯೫ ಕ್ಕಿಂತ ಹೆಚ್ಚು ತಂಡಗಳ ೯ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

೧೦. ಸನಾತನದ ಅಂತರ್ಗತ ಶಿಬಿರಗಳ ವೃದ್ಧಿಯಾಗುವುದು

ಕೊರೊನಾ ಸಾಂಕ್ರಾಮಿಕದ ನಂತರ, ಅಂದರೆ, ೨೦೨೨ ರಿಂದ ಪ್ರತಿ ವರ್ಷ ರಾಷ್ಟ್ರೀಯ ಸ್ತರದಲ್ಲಿ ಆಯೋಜಿಸಲಾಗುವ ಶಿಬಿರಗಳಿಗೆ ಭಾಗವಹಿಸುವ ಸಾಧಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.

೧೦ ಅ. ೧೦ ದಿನಗಳ ‘ಆಧ್ಯಾತ್ಮಿಕ ವ್ಯಕ್ತಿತ್ವ ವಿಕಸನ ಶಿಬಿರ’ಕ್ಕೆ ದೊರೆತ ಉತ್ಸಾಹದ ಪ್ರತಿಕ್ರಿಯೆ : ಆಗಸ್ಟ್  ೨೦೨೪ ರಲ್ಲಿ ಹೊಸದಾಗಿ ಸಂಪರ್ಕಕ್ಕೆ ಬಂದಿರುವ ಸಾಧಕರಿಗೆ ‘ಒಳ್ಳೆಯ ಸಾಧಕನಾಗುವುದು ಹೇಗೆ ?’ ಎನ್ನುವ ತರಬೇತಿ ನೀಡಲು ಮೊದಲ ೧೦ ದಿನಗಳ ‘ಆಧ್ಯಾತ್ಮಿಕ ವ್ಯಕ್ತಿತ್ವ ವಿಕಸನ ಶಿಬಿರ (ಸಾಧಕತ್ವ ವಿಕಾಸ ಶಿಬಿರ)’ ಅನ್ನು ಆಯೋಜಿಸಲಾಯಿತು. ‘೧೦ ದಿನಗಳ ಶಿಬಿರ’ ಇದು ಒಂದು ಪ್ರಯೋಗವಾಗಿದ್ದರಿಂದ ‘ಎಷ್ಟು ಜನರು ರಜೆ ಪಡೆದು ಬರಬಹುದು ?’ ಎಂದು ವಿಚಾರ ಮಾಡುತ್ತಿರುವಾಗ ೪೦೦ ಹೊಸ ಸಾಧಕರು ಈ ಶಿಬಿರಕ್ಕೆ ನೋಂದಣಿ ಮಾಡಿದ್ದರು. ಇವರಲ್ಲಿ ೯೦ ಮಂದಿ ಮೊದಲ ಶಿಬಿರದಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಿದ್ದಾರೆ.

೧೦ ಆ. ಸಮಾಜದ ವರ್ಗಗಳಿಗೆ ‘ಸಾಧನಾ ಶಿಬಿರ’ ಆಯೋಜನೆ : ಸಂಸ್ಥೆಯ ಕಾರ್ಯ ಹೆಚ್ಚಾಗುತ್ತಿರುವಂತೆ, ಆ ರೀತಿ ವಿವಿಧ ಸಮುದಾಯ ಅಥವಾ ಸಮಾಜದ ಜನರು ಈ ಕಾರ್ಯದೊಂದಿಗೆ ಜೋಡಿಸಲ್ಪಡುತ್ತಿದ್ದಾರೆ. ಅದಕ್ಕಾಗಿ ೨೦೨೪-೨೫ ರಲ್ಲಿ ದೇವಸ್ಥಾನ ವಿಶ್ವಸ್ತರು, ನ್ಯಾಯವಾದಿಗಳು, ಚಾರ್ಟರ್ಡ ಅಕೌಂಟೆಂಟ, ಉದ್ಯಮಿಗಳು ಮತ್ತು ಹಿಂದುತ್ವನಿಷ್ಠರಿಗಾಗಿ ಸನಾತನ ಸಂಸ್ಥೆಯ ವತಿಯಿಂದ ರಾಮನಾಥಿ ಆಶ್ರಮದಲ್ಲಿ ಸಾಧನಾ ಶಿಬಿರವನ್ನು ಆಯೋಜಿಸಲಾಗುವುದು. ಹಾಗೆಯೇ ಊರೂರುಗಳಲ್ಲಿ ಸಂಸ್ಥೆಯ ಕಾರ್ಯವನ್ನು ನಿರ್ವಹಿಸಬಲ್ಲ ಧರ್ಮಪ್ರೇಮಿ ಯುವಕರಿಗೆ ಸನಾತನ ಆಶ್ರಮದಲ್ಲಿ ಸಾಧನಾ ಶಿಬಿರವಿರಲಿದೆ. ಈ ರೀತಿಯ  ಶಿಬಿರಗಳನ್ನು ಸನಾತನ ಸಂಸ್ಥೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ.

೧೧. ‘ಕಾಲಕ್ಕನುಸಾರ ಸಾಧಕರನ್ನು ಸಿದ್ಧಗೊಳಿಸುವ ಪ್ರಕ್ರಿಯೆ ವೃದ್ಧಿಸುತ್ತಿರುವುದು ಗುರುಕೃಪಾಯೋಗದ ಶ್ರೇಷ್ಠತೆ

ಸನಾತನ ಸಂಸ್ಥೆಯು ಸಮಾಜದ ಆಧ್ಯಾತ್ಮಿಕ ಸೇವೆಯನ್ನು ಮಾಡುವ  ಸ್ವಯಂಸೇವಿ ಸಂಸ್ಥೆಯಾಗಿದೆ. ಜನರ ಜೀವನವನ್ನು ಆನಂದಿಗೊಳಿಸುವುದು, ಒತ್ತಡಮುಕ್ತಗೊಳಿಸುವುದು, ವ್ಯಸನ ಮುಕ್ತಗೊಳಿಸುವುದು, ವ್ಯಕ್ತಿತ್ವವಿಕಸನ ಮತ್ತು ಅತ್ಯಂತ ಮಹತ್ವದ್ದಾಗಿರುವುದೆಂದರೆ ಅವರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಳ್ಳುವುದು’, ಇಂತಹ ಸಮಾಜದ ಆಧ್ಯಾತ್ಮಿಕ ಶ್ರೇಯೋಭಿವೃದ್ಧಿಯ ಕಾರ್ಯವನ್ನು ಸನಾತನ ಸಂಸ್ಥೆ ಮಾಡುತ್ತಿದೆ. ಈ ಮೂಲಕ ಜನರಿಗೆ ಆಧ್ಯಾತ್ಮಿಕ ಅನುಭೂತಿಗಳು ಬಂದು ಅವರ ಜೀವನ ಆನಂದಮಯವಾಗುತ್ತದೆ. ಮಹತ್ವದ್ದೆಂದರೆ, ಮುಂದೆ ಅವರ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ. ಈ ಎಲ್ಲ ಅನುಭವ ಆಧ್ಯಾತ್ಮಿಕವಾಗಿರುವುದರಿಂದ ಸನಾತನ ಸಂಸ್ಥೆಯ ೨೫ ವರ್ಷಗಳ ಪ್ರವಾಸದ ಮೌಲ್ಯಾಂಕನವನ್ನು ಭೌತಿಕ ಕಾರ್ಯದ ದೃಷ್ಟಿಯಿಂದ ಮಾಡುವುದು ಕಷ್ಟಕರವಾಗಿದೆ. ಆದಾಗ್ಯೂ ಸಂಸ್ಥೆಯು ಈ ವರ್ಷ ಅಂದರೆ ಆಗಸ್ಟ್ ೨೦೨೩ ರಿಂದ ಮೇ ೨೦೨೪ ಈ ೯ ತಿಂಗಳ ಕಾಲಾವಧಿಯಲ್ಲಿ ‘ಪ್ರತಿ ಜಿಲ್ಲೆಯಲ್ಲಿ ಮತ್ತು ಪ್ರತಿಯೊಂದು ಉಪಕ್ರಮದಿಂದ ಎಷ್ಟು ಜನ ಸಾಧಕರಾಗಿದ್ದಾರೆ ? ಎಷ್ಟು ಜನರು ಸಾಧಕರಾಗುವ ಮಾರ್ಗದಲ್ಲಿದ್ದಾರೆ ? ಮತ್ತು ಎಷ್ಟು ಜನರು ಪ್ರಾಥಮಿಕ ಹಂತದ ಸಾಧಕರಾಗಿದ್ದಾರೆ ?’ ಎಂಬ ಅಭ್ಯಾಸದ ಕಾರ್ಯಪದ್ಧತಿಯನ್ನು ಅಭಿವೃದ್ಧಿ ಪಡಿಸಲಾಯಿತು. ಇದರಿಂದ, ಈ ೯ ತಿಂಗಳ ಅವಧಿಗೆ ನಿಖರವಾದ ಅಂಕಿಅಂಶಗಳು ತಿಳಿದವು. ಅದನ್ನು ಮುಂದೆ ನೀಡಲಾಗಿದೆ.

ಒಟ್ಟು ಸಾಧಕರು : ೩೨೯೭

‘ಕಾಲಕ್ಕನುಸಾರ  ಸನಾತನದ ‘ಸಾಧಕ ನಿರ್ಮಿತಿ ಪ್ರಕ್ರಿಯೆ’ ವೇಗವನ್ನು ಪಡೆಯುತ್ತಿದೆ. ಇದು ಕೇವಲ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಿಸಿದ ಗುರುಕೃಪಾಯೋಗದ ಶ್ರೇಷ್ಠತೆಯಾಗಿದೆ’ ಎನ್ನುವ ಪ್ರತ್ಯಕ್ಷ ಅನುಭೂತಿಯನ್ನು ಸಾಧಕರು ಪಡೆಯುತ್ತಿದ್ದಾರೆ.

೧೨. ‘ಸನಾತನದ ವ್ಯಾಪಕ ಧರ್ಮಕಾರ್ಯದ ವಿಹಂಗಮ ಗತಿಯಿಂದಾಗುವ ಮುಗಿಲೆತ್ತರದ ವೃದ್ಧಿ’, ಇದು ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆಯವರ ಭವಿಷ್ಯವಾಣಿ !

ಕೊರೊನಾ ಕಾಲದಿಂದ ಇಂದಿನವರೆಗೆ ನೋಡಿದರೆ, ‘ಮುಂಬರುವ ಕಾಲದಲ್ಲಿ ಪೂರ್ಣ ಸಿದ್ಧವಿರುವ ಸಾಧಕರು ಸಿಗುತ್ತಾರೆ’ ಎಂದು ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಹೇಳಿದ ಭವಿಷ್ಯವು ಅನುಭವಕ್ಕೆ ಬರುತ್ತಿದೆ. ಇಂದು ಎಲ್ಲ ಉಪಕ್ರಮಗಳ ಮೂಲಕ ಸೇರಿಕೊಳ್ಳುವ ಜಿಜ್ಞಾಸುಗಳು ಸಾಧಕರಾಗುತ್ತಿದ್ದು ಜವಾಬ್ದಾರಿ ವಹಿಸಿ ಸೇವೆಯನ್ನು ಮಾಡುತ್ತಿದ್ದಾರೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರು, ‘ಆನ್‌ಲೈನ್’ ಸೇವೆಯು ಆಕಾಶತತ್ತ್ವಕ್ಕೆ ಸಂಬಂಧಿಸಿರುವುದರಿಂದ, ಅದರ ವ್ಯಾಪಕ ಸ್ವರೂಪ ಆದಷ್ಟು ಬೇಗನೆ ಕಂಡು ಬರುವುದು’ ಎಂದು ಹೇಳಿದ್ದರು. ಇಂದು ಈ ಗುರುವಾಣಿಯ ಅನುಭೂತಿ ಸಾಧಕರಿಗೆ ಅಕ್ಷರಶಃ ಬರುತ್ತಿದೆ. ಈ ಆಪತ್ಕಾಲದಲ್ಲಿ ವೇಗ, ಗುಣಮಟ್ಟ ಮತ್ತು ಪರಿಣಾಮಕಾರಿತ್ವವು ಪ್ರಸಾರದ ಅತ್ಯುನ್ನತ ಮಟ್ಟವನ್ನು ತಲುಪಿದೆ. ಪ್ರಸಾರ ಎಷ್ಟು ವೇಗವಾಗಿ ಹರಡಿತೆಂದರೆ, ‘ವಿಹಂಗಮ ವೇಗ’ ಎಂದರೇನು ? ಎನ್ನುವುದು ಪ್ರಸಾರದಲ್ಲಿರುವ ಸಾಧಕರಿಗೆ ತಿಳಿಯಿತು. ಸಾಧಕರು ಈ ಪ್ರತಿಕೂಲ ಪರಿಸ್ಥಿತಿಯಲ್ಲಿ ‘ಮನೋವೇಗ’ ಅಥವಾ ‘ವಾಯುವೇಗ’ವನ್ನು ನೋಡಿದರು. ಇದು ಕೇವಲ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂಕಲ್ಪ, ಕೃಪೆ ಮತ್ತು ಆಶೀರ್ವಾದದ ಫಲಸ್ವರೂಪವಾಗಿದೆ’ ಈ ಬಗ್ಗೆ ನಾವು ಸನಾತನದ ಎಲ್ಲ ಸಾಧಕರು ಶ್ರೀ ಗುರುಚರಣಗಳಲ್ಲಿ ನತಮಸ್ತಕರಾಗಿದ್ದೇವೆ’.

(ಮುಕ್ತಾಯ)

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರು)