ಬ್ರಹ್ಮೋತ್ಸವ ಸಮಾರಂಭದ ಸಮಯದಲ್ಲಿನ ವೈಶಿಷ್ಟ ಪೂರ್ಣ ಕ್ಷಣಚಿತ್ರಗಳು !

ಸಮಾರಂಭ ನಡೆಯುತ್ತಿರುವಾಗ ಸಾಯಂಕಾಲ ಆಕಾಶದಲ್ಲಿ ನೇರಳೆ ಬಣ್ಣ ಹರಡಿತ್ತು. ‘ನೇರಳೆ ಬಣ್ಣ ಶ್ರೀವಿಷ್ಣುವಿನ ಪ್ರತೀಕವಾಗಿದೆ, ಎಂದು ಈ ಹಿಂದೆ ಸಪ್ತರ್ಷಿಗಳು ಹೇಳಿದ್ದಾರೆ.

 

ರಥದ ದರ್ಶನ ಪಡೆಯುವಾಗಲೂ ಸಾಧಕರು ಭಾವಪರವಶರಾಗಿದ್ದರು. ಗುರುದೇವರ ಆಗಮನದಿಂದ ಪವಿತ್ರ ವಾಗಿರುವ ಆ ಪರಿಸರದ ಮಣ್ಣನ್ನು ಸಾಧಕರು ಜೊತೆಗೆ ಕೊಂಡೊಯ್ದರು

ಬ್ರಹ್ಮೋತ್ಸವ ಮುಗಿದ ನಂತರ ದಿವ್ಯ 

* ಬ್ರಹ್ಮೋತ್ಸವದ ಸ್ಥಳಕ್ಕೆ ಹೋಗುವ ದಾರಿಯಲ್ಲಿ ಚತುಷ್ಚಕ್ರ ಹಾಗೂ ಬಸ್‌ಗಳ ಬಹುದೊಡ್ಡ ಸಾಲಿತ್ತು. ಅವುಗಳಿಗೆ ಕೇಸರಿ ಧ್ವಜಗಳನ್ನು ಅಳವಡಿಸಲಾಗಿತ್ತು. ಅವುಗಳ ಹಿಂದೆಯೇ ಹೋಗುವಾಗ ‘ಬ್ರಹ್ಮೋತ್ಸವದ ವಾಹನಮೆರವಣಿಗೆ ಹೋಗುತ್ತಿದೆ, ಎಂದು ಅನಿಸುತ್ತಿತ್ತು.

* ಬ್ರಹ್ಮೋತ್ಸವಕ್ಕೆ ಬಂದಿರುವ ಎಲ್ಲ ಸಾಧಕರ ಮುಖದಲ್ಲಿ ಭಾವ, ಆನಂದ ಹಾಗೂ ಉತ್ಸಾಹವು ತುಂಬಿ ತುಳುಕುತ್ತಿತ್ತು. ಪ್ರತಿಯೊಬ್ಬರೂ ಸ್ವಯಂಸ್ಫೂರ್ತಿಯಿಂದ ಸಮಾರಂಭವು ಸುಂದರವಾಗಬೇಕೆಂದು ಪ್ರಯತ್ನಿಸುತ್ತಿದ್ದರು.

* ಬ್ರಹ್ಮೋತ್ಸವ ಪ್ರಾರಂಭವಾಗುವ ಮೊದಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಈ ಹಿಂದೆ ತೆಗೆದುಕೊಂಡ ಸಭೆಗಳ ಧ್ವನಿಚಿತ್ರಸುರುಳಿಗಳನ್ನು (ವಿಡಿಯೋ) ಹಾಕಲಾಗಿತ್ತು. ಅದರಿಂದ ವಾತಾವರಣದಲ್ಲಿ ಅವರ ಅಸ್ತಿತ್ವದ ಅರಿವಾಗುತ್ತಿತ್ತು.

* ಕೇಸರಿ ಬಣ್ಣದ ಮುಂಡಾಸಿನಲ್ಲಿ ಸಾಧಕರು, ಹಳದಿ ಮುಂಡಾಸು ಧರಿಸಿದ ಸಂಯೋಜಕರು ಹಾಗೂ ಸಂಪೂರ್ಣ ಮಂಟಪದಲ್ಲಿ ಹಚ್ಚಿದ ಕೇಸರಿ ಧ್ವಜ, ‘ಗೋವಿಂದಾ ಗೋವಿಂದಾದ ಭಾವಪೂರ್ಣ ಜಯಘೋಷ ಇತ್ಯಾದಿಗಳು ‘ಹಿಂದೂ ರಾಷ್ಟ್ರ ಬೇಗನೆ ಅವತರಿಸಲಿದೆ ! ಎಂಬುದನ್ನು ತೋರಿಸುತ್ತಿತ್ತು.

* ಈ ಬ್ರಹ್ಮೋತ್ಸವಕ್ಕೆ ಕರ್ನಾಟಕದಿಂದ ಅನೇಕ ಸಾಧಕರು ಬಂದಿದ್ದರು. ಆಗ ಬ್ರಹ್ಮೋತ್ಸವ ಪ್ರತ್ಯಕ್ಷ ಆರಂಭವಾಗುವ ಮೊದಲು ನಿರೂಪಕರಾದ ಶ್ರೀ. ವಿನಾಯಕ ಶಾನಭಾಗ ಇವರು ಒಮ್ಮೆ ಕನ್ನಡ ಭಾಷೆಯಲ್ಲಿ ನಿರೂಪಣೆ ಮಾಡಿದರು. ಅವರು ಇದರಿಂದ ತಮ್ಮಲ್ಲಿರುವ ವ್ಯಾಪಕತೆಯನ್ನು ತೋರಿಸಿದರು, ಅದರಿಂದ ಅವರ ಸಮಯಪ್ರಜ್ಞೆಯ ಅರಿವಾಯಿತು.

* ಬ್ರಹ್ಮೋತ್ಸವದ ಮೊದಲು ಇತರ ಸಮಾರಂಭಗಳ ಧ್ವನಿಚಿತ್ರಸುರುಳಿಗಳನ್ನು ತೋರಿಸಲಾಗುತ್ತಿತ್ತು. ಆಗ ಸಾಧಕರ ಚಲನವಲನ ನಡೆಯುತ್ತಿತ್ತು. ‘ಸಚ್ಚಿದಾನಂದ ಪರಬ್ರಹ್ಮ ಗುರುದೇವರ ರಥವು ಕಾರ್ಯಸ್ಥಳಕ್ಕೆ ಆಗಮಿಸಿದಾಗ ಎಲ್ಲೆಡೆ ಶಾಂತಿ ಹರಡಿತು. ಎಲ್ಲರೂ ಸ್ತಬ್ಧರಾದರು.

* ಬ್ರಹ್ಮೋತ್ಸವ ಮುಗಿದು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ರಥದಿಂದ ಇಳಿದು ಇನ್ನೊಂದು ವಾಹನದಲ್ಲಿ ಸಾಧಕರಿಗೆ ದರ್ಶನ ನೀಡುತ್ತಾ ಕಾರ್ಯಸ್ಥಳದಿಂದ ಹೊರಟರು, ಆಗ ಪುನಃ ಸಾಧಕರ ಭಾವಾಶ್ರು ಉಮ್ಮಳಿಸಿತು.