ಬ್ರಹ್ಮೋತ್ಸವಕ್ಕೆ ಬರುವ ಭಕ್ತರ ಸರ್ವತೋಮುಖ ಕಾಳಜಿ ವಹಿಸುವ ಬ್ರಹ್ಮೋತ್ಸವ ಸಮಾರಂಭದ ವ್ಯವಸ್ಥಾಪಕರು ಮತ್ತು ಸನಾತನ ಸಾಧಕರ ಸ್ವಯಂಶಿಸ್ತು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ವೈಶಾಖ ಮಾಸ ಪ್ರಾರಂಭವಾದರೆ, ಶ್ರೀಮನ್ನಾರಾಯಣಸ್ವರೂಪ ಶ್ರೀಗುರುಗಳ ಜನ್ಮೋತ್ಸವದ ಪ್ರತೀಕ್ಷೆ ಇರುತ್ತದೆ ! ಈ ವರ್ಷ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೮೧ ನೇಯ ಜನ್ಮೋತ್ಸವವಿತ್ತು ! ಪ್ರತಿ ವರ್ಷ ಈ ಜನ್ಮೋತ್ಸವ ಸಮಾರಂಭವನ್ನು ಸನಾತನದ ರಾಮನಾಥಿ ಆಶ್ರಮದಲ್ಲಿ ಚಿತ್ರೀಕರಣಕಕ್ಷೆಯಲ್ಲಿ ಚಿಕ್ಕ ಸ್ವರೂಪದಲ್ಲಿ ಆಚರಿಸಲಾಗುತ್ತದೆ. “ಈ ವರ್ಷ ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ಈ ರಾಜ್ಯಗಳ ಸಾವಿರಾರು ಸಾಧಕರಿಗೆ ಜನ್ಮೋತ್ಸವ ಸಮಾರಂಭವನ್ನು ನೋಡುವ  ಪರಮಭಾಗ್ಯ ಲಭಿಸಲಿದೆ, ಎಂಬ ಸಂದೇಶ ಎಲ್ಲ ಜಿಲ್ಲೆಗಳಿಗೆ ತಲುಪಿತು ಮತ್ತು ಸಾಧಕರ ಆನಂದ ಗಗನಕ್ಕೇರಿತು ! ಅನೇಕ ಜಿಲ್ಲೆಯ ಸಾಧಕರು ಜನ್ಮೋತ್ಸವ ಸಮಾರಂಭಕ್ಕೆ ಬರುವ ಸಿದ್ಧತೆಯನ್ನು ಮಾಡತೊಡಗಿದರು.

‘ಸನಾತನದ ಕಾರ್ಯಕ್ರಮಗಳು ಯಾವಾಗಲೂ ಅತ್ಯಂತ ಶಿಸ್ತುಬದ್ಧ ರೀತಿಯಲ್ಲಿ ನಡೆಯುತ್ತವೆ, ಇದು ಕೇವಲ ಸನಾತನದ ಸಾಧಕರಿಗಷ್ಟೇ ಅಲ್ಲ, ಸಮಾಜದಲ್ಲಿನ ಗಣ್ಯವ್ಯಕ್ತಿಗಳಿಗೆ, ಪೊಲೀಸರು ಮತ್ತು ಆಡಳಿತದವರಿಗೂ ಗೊತ್ತಿದೆ. ಆದುದರಿಂದ ಈ ಸಮಾರಂಭಕ್ಕೆ ಅನೇಕ ಜಿಲ್ಲೆಗಳಿಂದ ಸಾವಿರಾರು ಸಾಧಕರು ಬರುವವರಿದ್ದರೂ ಕೂಡ, ಅದು ಎಂದಿನಂತೆ ಸನಾತನದ ಶಿಸ್ತುಬದ್ಧ ರೀತಿಯಲ್ಲಿ ಮತ್ತು ಭಾವಪೂರ್ಣವಾತಾವರಣದಲ್ಲಿ ನೆರವೇರುವ ಬಗ್ಗೆ ಯಾವುದೇ ಸಂದೇಹವಿರಲಿಲ್ಲ. ಬ್ರಹ್ಮೋತ್ಸವಕ್ಕೆ ಮಹಾರಾಷ್ಟ್ರ, ಗೋವಾ, ಕರ್ನಾಟಕ ಇತ್ಯಾದಿ ರಾಜ್ಯಗಳಿಂದ ೧೦ ಸಾವಿರಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿ ಸಾಧಕರು ಬಂದಿದ್ದರು. ವಾಹನನಿಲುಗಡೆ ವ್ಯವಸ್ಥೆ (ಪಾರ್ಕಿಂಗ್) ಸೇರಿದಂತೆ ಒಟ್ಟು ೧೩ ಎಕರೆ ಕ್ಷೇತ್ರದಲ್ಲಿ ಎಲ್ಲ ಸಮಾರಂಭದ ವ್ಯವಸ್ಥೆ ಮಾಡಲಾಗಿತ್ತು. ಸಾಧಕರಿಗೆ ಬ್ರಹ್ಮೋತ್ಸವವನ್ನು ಭಾವದ ಸ್ಥಿತಿಯಲ್ಲಿ ಮತ್ತು ಯಾವುದೇ ಅಡಚಣೆ ಇಲ್ಲದೆ ಅನುಭವಿಸಲು ಸಿಗಬೇಕೆಂದು ಬ್ರಹ್ಮೋತ್ಸವದ ಸ್ಥಳದಲ್ಲಿ ಉತ್ಕೃಷ್ಠವಾಗಿ ಸಾಧಕರ ವ್ಯವಸ್ಥೆಯನ್ನು ಮಾಡಲಾಗಿತ್ತು. 

ಡ್ರೋನ್ ಮೂಲಕ ತೆಗೆದ ಬ್ರಹ್ಮೋತ್ಸವ ಸ್ಥಳದ ವಿಹಂಗಮ ದೃಶ್ಯ !

ಸಮಾರಂಭದ ಅದ್ವಿತೀಯ ಶಿಸ್ತನ್ನು ತೋರಿಸುವ ನೂರಾರು ವಾಹನಗಳ ಶಿಸ್ತುಬದ್ಧ ಸಾಲುಗಳು ! ವಾಹನಗಳನ್ನು ನಿಲ್ಲಿಸಲು (ಪಾರ್ಕಿಂಗ) ಜಿಲ್ಲಾವಾರು ವ್ಯವಸ್ಥೆಯನ್ನು ಮಾಡಲಾಗಿತ್ತು ! ಬ್ರಹ್ಮೋತ್ಸವದ ಮುಖ್ಯ ಮಂಟಪ ! ಮಧ್ಯಭಾಗದಲ್ಲಿ ಶ್ರೀಗುರುಗಳ ದಿವ್ಯ ರಥ ಮತ್ತು ವ್ಯಾಸಪೀಠ ! ಸುತ್ತಲೂ ಸಾಧಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.

ಭಕ್ತರ ವಾಹನಗಳ ವ್ಯವಸ್ಥೆ !

. ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಿಂದ ೧೦೫ ಕ್ಕಿಂತಲೂ ಹೆಚ್ಚು ಬಸ್ಸುಗಳಲ್ಲಿ ಹಾಗೂ ೬೦೦ ಕ್ಕೂ ಹೆಚ್ಚು ಚತುಷ್ಚಕ್ರ ವಾಹನಗಳಲ್ಲಿ ಸಾಧಕರು ‘ಬ್ರಹ್ಮೋತ್ಸವದ ಸ್ಥಳಕ್ಕೆ ಬಂದಿದ್ದರು.

. ಸಾಧಕರು ವಿವಿಧ ಜಿಲ್ಲೆಗಳಿಂದ ಬರುವವರಿದ್ದ ಕಾರಣ ಅವರ ಅನುಕೂಲಕ್ಕಾಗಿ ಕಾರ್ಯಸ್ಥಳದಿಂದ ೧ ಕಿಲೋಮೀಟರ್‌ನಷ್ಟು ಹಿಂದಿನಿಂದಲೇ ಸ್ವಲ್ಪ ಸ್ವಲ್ಪ ಅಂತರದಲ್ಲಿ ಕಾರ್ಯಸ್ಥಳದ ದಿಶಾದರ್ಶಕ ಫಲಕಗಳನ್ನು ಹಚ್ಚಲಾಗಿತ್ತು.

೩. ಬ್ರಹ್ಮೋತ್ಸವದ ಭವ್ಯ ಸಭಾಮಂಟಪಕ್ಕೆ ೪ ಪ್ರವೇಶದ್ವಾರಗಳು ಇದ್ದವು. ಯಾವ ಜಿಲ್ಲೆಯ ಸಾಧಕರು ತಮ್ಮ ವಾಹನಗಳನ್ನು ಎಲ್ಲಿ ಇಡಬೇಕು ? ಅವರು ಯಾವ ದ್ವಾರದಿಂದ ಒಳಗೆ ಬರಬೇಕು ? ಅವರು ಎಲ್ಲಿ ಕುಳಿತುಕೊಳ್ಳಬೇಕು ? ಇವೆಲ್ಲವುಗಳನ್ನು ಮೊದಲೇ ನಿರ್ಧರಿಸಲಾಗಿತ್ತು. ಹಾಗಾಗಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಾಧಕರು ಬಂದಿದ್ದರೂ ಎಲ್ಲಿಯೂ ಗೊಂದಲದ ವಾತಾವರಣ ಉಂಟಾಗಲಿಲ್ಲ.

. ಸಾಧಕರು ಸಭಾಮಂಟಪದಲ್ಲಿ ಯಾವ ದ್ವಾರದಿಂದ ಪ್ರವೇಶ ಮಾಡಿದರೋ, ಅದೇ ಪ್ರವೇಶದ್ವಾರದಿಂದ ಸಾಧಕರಿಗೆ ಕಾರ್ಯಕ್ರಮದ ನಂತರ ಹೊರಗೆ ಹೋಗಲು ಹೇಳಲಾಯಿತು. ಆದುದರಿಂದ ಸಾಧಕರಿಗೆ ಕಾರ್ಯಕ್ರಮ ಮುಗಿದ ಮೇಲೆ ಮನೆಗೆ ಹೋಗಲು ತಮ್ಮ ವಾಹನಗಳನ್ನು ಹುಡುಕಲು ಯಾವುದೇ ಅಡಚಣೆ ಬರಲಿಲ್ಲ.

. ‘ಬ್ರಹ್ಮೋತ್ಸವಕ್ಕಾಗಿ ಲಂಬಾಕಾರದ ಮೈದಾನದ ಪರಿಧಿಯ ಮೇಲೆ ೭೬ ಸಾವಿರ ೩೨೦ ಸ್ಕ್ವೇರ್‌ಫೀಟ್ (ಚದರಡಿ) ಮಂಟಪದಲ್ಲಿ ಸಾಧಕರಿಗೆ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಭಾಮಂಟಪದ ಮಧ್ಯಭಾಗದಲ್ಲಿ ಶ್ರೀವಿಷ್ಣುರೂಪದಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮತ್ತು ಅವರ ಆಧ್ಯಾತ್ಮಿಕ ಉತ್ತರಾಧಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ದಿವ್ಯ ರಥ ಮತ್ತು ಸುತ್ತಮುತ್ತಲು ಸಾಧಕರಿಗಾಗಿ ಕುಳಿತು ಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿತ್ತು.

. ಕಾರ್ಯಸ್ಥಳದ ಆಕಾರವು ಬಹಳ ದೊಡ್ಡದಾಗಿದ್ದರಿಂದ ಎಲ್ಲರಿಗೂ ಬ್ರಹ್ಮೋತ್ಸವವನ್ನು ಹತ್ತಿರದಿಂದ ನೋಡಲು ಬರಬೇಕೆಂದು, ೧೬ ಅಡಿ x ೧೨ ಅಡಿ ಆಕಾರದ ೪ ‘ಔಟ್‌ಡೋರ್ ಎಲ್.ಈ.ಡಿ. ಡಿಸ್‌ಪ್ಲೆಗಳನ್ನು ಹಾಕಲಾಗಿತ್ತು. ಅವುಗಳ ಮೇಲೆ ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವನ್ನು ತೋರಿಸಲಾಗುತ್ತಿತ್ತು.

(1).ಸಮಾರಂಭದ ನಂತರ ಮಹಾಪ್ರಸಾದದ ಪಾಕೀಟು ಮತ್ತು ನೀರಿನ ಬಾಟಲಿಯನ್ನು ಪ್ರಸಾದವೆಂದು ಸರದಿಯಲ್ಲಿ ಸ್ವೀಕರಿಸುವ ಸಾಧಕರು  (2). ರಸ್ತೆಯಲ್ಲಿ ಹಾಕಿದ ವಾಹನ ನಿಲುಗಡೆಯ (ಪಾರ್ಕಿಂಗ್) ಸ್ಥಳದ ಮಾಹಿತಿಯನ್ನು ನೀಡುವ ದಿಶಾದರ್ಶಕ ಫಲಕಗಳು

ಗುರುದೇವರು ದೂರದೂರದ ಸ್ಥಳಗಳಿಂದ ಬಂದ ಸಾಧಕರನ್ನು ಪ್ರೀತಿಯಿಂದ ನೋಡಿಕೊಳ್ಳುವುದು !

* ಬ್ರಹ್ಮೋತ್ಸವವು ಮಧ್ಯಾಹ್ನ ೩ ರಿಂದ ಸಾಯಂಕಾಲ ೭ ರ ವರೆಗೆ ಇದ್ದುದರಿಂದ ಕಾರ್ಯಕ್ರಮದ ಸ್ಥಳದಲ್ಲಿ ತಂಪು ಪಾನೀಯ, ಸಾಯಂಕಾಲ ತಿನ್ನಲು ಖಾರ ಮತ್ತು ಸಿಹಿತಿನಿಸುಗಳ ಆಯೋಜನೆಯನ್ನು ಮಾಡಲಾಗಿತ್ತು.

* ಕಾರ್ಯಕ್ರಮ ಮುಗಿದ ನಂತರ ಹಿಂದಿರುಗುವಾಗ ಪ್ರತಿ ಸಾಧಕನಿಗೆ ಕುಡಿಯುವ ನೀರಿನ ಬಾಟಲಿ ಮತ್ತು ರಾತ್ರಿಯ ಮಹಾಪ್ರಸಾದದ (ಊಟದ) ಪಾಕೀಟನ್ನು ಕೊಡಲಾಯಿತು.

* ‘ಬ್ರಹ್ಮೋತ್ಸವದ ಸ್ಧಳದಲ್ಲಿ ಪಾರ್ಕಿಂಗನ ಹತ್ತಿರ, ಹಾಗೆಯೇ ಕಾರ್ಯಸ್ಥಳದ ಹೊರಗೆ ಶೌಚಾಲಯಗಳನ್ನು ಒದಗಿಸಲಾಗಿತ್ತು.

* ವಾಸ್ತವದಲ್ಲಿ ಶಿಷ್ಯರು ಗುರುಗಳ ಸೇವೆಯನ್ನು ಮಾಡಬೇಕು, ಆದರೆ ಇಲ್ಲಿ ಮಾತ್ರ ಗುರುಗಳು ಶಿಷ್ಯರಿಗೆ ಏನೂ ಕಡಿಮೆ ಆಗದಂತೆ ನೋಡಿಕೊಂಡರು ! ಪ್ರೀತಿಯಿಂದ ಎಲ್ಲೆಡೆಯ ಶಿಷ್ಯರ ಕಾಳಜಿ ತೆಗೆದುಕೊಳ್ಳುವ ಗುರುಗಳು ಮತ್ತು ಶ್ರೀಗುರುಗಳ ಒಂದು ದರ್ಶನಕ್ಕಾಗಿ ಬೇಸಿಗೆಯಲ್ಲಿ, ವಾಹನಗಳಿಂದ ೧೨-೧೩ ಗಂಟೆ ಮತ್ತು ಕೆಲವು ಜಿಲ್ಲೆಗಳಿಂದ ೧೮-೨೦ ಗಂಟೆ ಪ್ರಯಾಣ ಮಾಡಿ ಬರುವ ಸಾಧಕರು, ಇದಕ್ಕಿಂತ ದೊಡ್ಡ ಉದಾಹರಣೆ ಇನ್ನೆಲ್ಲಿದೆ ?

– ಕು. ಸಾಯಲಿ ಡಿಂಗರೆ.

ಸನಾತನದ ಸಾಧಕರು ನೋಡಿದರು….. ಗುರುಗಳನ್ನು ಕಣ್ತುಂಬಿಕೊಂಡರು … !

ವರ್ಷ ೧೯೯೫ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಪ.ಪೂ. ಭಕ್ತರಾಜ ಮಹಾರಾಜರ ಅಮೃತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಿದ್ದರು. ಆ ಮಹೋತ್ಸವದ ಅಮೃತಕ್ಷಣಗಳು ಇನ್ನೂ ಅನೇಕ ಸಾಧಕರ ನೆನಪಿನಲ್ಲಿದೆ. ಇನ್ನು ೮-೧೦ ತಿಂಗಳು ಇರುವಾಗಲೇ ಗುರುದೇವರು ಮತ್ತು ಸಾಧಕರು ಈ ಅಮೃತಮಹೋತ್ಸವದ ಸಿದ್ಧತೆಯನ್ನು ಮಾಡಿ ಒಂದು ತಿಂಗಳು ಹಗಲು-ರಾತ್ರಿ ಸೇವೆಯನ್ನು ಮಾಡುತ್ತಿದ್ದರು. ‘ಈ ಸಮಾರಂಭಕ್ಕೆ ಕಾರಣರಾದ ಗುರುದೇವರ ಭವ್ಯದಿವ್ಯ ಜನ್ಮೋತ್ಸವವನ್ನು ಆಚರಿಸಬೇಕೆಂಬ ಆಸೆಯು ಸನಾತನದ ಸಾಧಕರ ಮನಸ್ಸಿನಲ್ಲಿ ಕಳೆದ ಅನೇಕ ವರ್ಷಗಳಿಂದಿತ್ತು, ಅದು ಈ ಜನ್ಮೋತ್ಸವದ ಮೂಲಕ ಪೂರ್ಣವಾಯಿತು. ಪ.ಪೂ. ಭಕ್ತರಾಜ ಮಹಾರಾಜರ ಅಮೃತ ಮಹೋತ್ಸವದಲ್ಲಿ ಸೇವೆ ಮಾಡಿದ ಅನೇಕ ಸಾಧಕರಿಗೆ ವಯಸ್ಸಾದ ಕಾರಣ ಈ ಸಮಾರಂಭದಲ್ಲಿ ಸೇವೆಯನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಸ್ವಲ್ಪ ಮಟ್ಟಿಗೆ ಖೇದವೆನಿಸಿರಬಹುದು; ಆದರೆ ‘ಗುರುದೇವರ ಜನ್ಮೋತ್ಸವವನ್ನು ನೋಡುವ ಸುವರ್ಣದಿನವು ನಮ್ಮ ಜೀವನದಲ್ಲಿ ಬಂದಿತೆಂಬ, ಕೃತಾರ್ಥ ಭಾವವು ಕೇವಲ ಈ ಸಾಧಕರಿಗೆ ಮಾತ್ರವಲ್ಲ, ಸನಾತನದ ಪ್ರತಿಯೊಬ್ಬ ಸಾಧಕನಿಗೆ ಅನಿಸಿರಬೇಕು, ಇದು ಖಂಡಿತ  !

ಸಮಾರಂಭದ ನಿಮಿತ್ತ ಸನಾತನದ ಸಾಧಕರು ತೋರಿಸಿದ ಆಜ್ಞಾಪಾಲನೆ ಮತ್ತು ಸಾಧಕತ್ವದ ದರ್ಶನ !

ಕು. ಸಾಯಲಿ ಡಿಂಗರೆ

ಸನಾತನ ಸಂಸ್ಥೆಯ ಜವಾಬ್ದಾರ ಸಾಧಕರು ಸಾಧಕರಿಗೆ ಎಷ್ಟು ಪ್ರೀತಿಯನ್ನು ಮಾಡುತ್ತಾರೆಯೋ, ಅಷ್ಟೇ ವಿವಿಧ ಕಾರ್ಯಪದ್ಧತಿಗಳ ಮಾಧ್ಯಮದಿಂದ ಶಿಸ್ತನ್ನೂ ಕಲಿಸುತ್ತಾರೆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಿಂದಲೂ ಸಾಧಕರಿಗೆ ಶಿಸ್ತುಬದ್ಧ ಜೀವನ ನಡೆಸುವುದನ್ನೂ ಕಲಿಸಲಾಗುತ್ತದೆ. ಸನಾತನದ ಸಾಧಕರ ಈ ಶಿಸ್ತನ್ನು ಪ್ರಮುಖ ಸಾಧಕರು ಹೇಳಿದ ಸೂಚನೆಗಳನ್ನು ಭಾವಪೂರ್ಣ ಮತ್ತು ಹೇಗಿದೆಯೋ ಹಾಗೇ ಪಾಲಿಸುವ ವೃತ್ತಿಯ ದರ್ಶನವು ಈ ಸಮಾರಂಭದ ನಿಮಿತ್ತದಿಂದ ನೋಡಲು ಸಿಕ್ಕಿತು. ಶ್ರೀಗುರುಗಳ ಮೇಲೆ ಶ್ರದ್ಧೆ ಇರುವ ಈ ರೀತಿಯ ಶಿಸ್ತುಬದ್ಧ ಸಾಧಕರೇ ಸನಾತನದ ನಿಜವಾದ ಶಕ್ತಿಯಾಗಿದ್ದಾರೆ !

. ಫಾರ್ಮಾಗುಡಿಯಿಂದ ಕಾರ್ಯಸ್ಥಳಕ್ಕೆ ಬರುವ ರಸ್ತೆಯ ಅಗಲ ಕಡಿಮೆಯಿತ್ತು. ಹಾಗಾಗಿ ವಾಹನಗಳ ದಟ್ಟಣೆಯಾಗಿತ್ತು. ಆದರೂ ಪಟ್ಟಣಗಳ ವೃತ್ತಗಳಲ್ಲಿ ‘ಟ್ರಾಫಿಕ್ ಜಾಮ್ ಆದ ಮೇಲೆ ಯಾವರೀತಿ ವಾಹನಗಳ ಹಾರ್ನ್‌ಗಳನ್ನು ಬಾರಿಸುವುದು ಮತ್ತು ತಡವಾಗುತ್ತಿದೆ ಎಂದು ಸಿಟ್ಟು ಮಾಡುವುದು ಮುಂತಾದ ವಾತಾವರಣ ಇಲ್ಲಿ ಕಂಡು ಬರಲಿಲ್ಲ. ವಾಹನಗಳಲ್ಲಿದ್ದ ಎಲ್ಲ ಸಾಧಕರು ತಾಳ್ಮೆಯಿಂದ ಮುಂದಿನ ವಾಹನ ಮುಂದೆ ಹೋಗುವುದರ ದಾರಿಯನ್ನು ಕಾಯುತ್ತಿದ್ದರು.

ಆ. ಜಿಲ್ಲಾವಾರು ವ್ಯವಸ್ಥೆ ಇರುವುದರಿಂದ ಅವರು ಸಮೀಪದ ಪ್ರವೇಶದ್ವಾರದಿಂದಲೇ ಬರುವುದು-ಹೋಗುವುದು ಮಾಡಬೇಕೆಂಬ ಸೂಚನೆಯನ್ನು ಸಾಧಕರು ಕಟ್ಟುನಿಟ್ಟಾಗಿ ಪಾಲಿಸಿದರು.

. ಸಮಾರಂಭ ಮುಗಿದ ನಂತರ ಶ್ರೀಗುರುಗಳು ಕುಳಿತಿದ್ದ ದಿವ್ಯ ರಥದ ದರ್ಶನ ಪಡೆಯಲು ಸಾಧಕರನ್ನು ಕರೆಯಲಾಯಿತು. ಆಗಲೂ ಸಹ ‘ಬೇಗನೆ ಜಿಲ್ಲೆಗೆ ಹೋಗುವುದಿದೆ, ಈ ವಿಚಾರದಿಂದ ದಟ್ಟಣೆ ಮಾಡದೆ ಯಾವ ಜಿಲ್ಲೆಯ ಹೆಸರಿನ ಘೋಷಣೆ ಮಾಡುತ್ತಿದ್ದರೋ, ಅದೇ ರೀತಿ ಕ್ರಮವಾಗಿ ಸಾಧಕರು ಭಾವಪೂರ್ಣ ಬಂದು ದರ್ಶನ ಪಡೆಯುತ್ತಿದ್ದರು. ಈ ರೀತಿ  ೧೦ ಸಾವಿರ ಸಾಧಕರಿಗೆ ಅಲ್ಪ ಕಾಲಾವಧಿಯಲ್ಲಿ ಹತ್ತಿರದಿಂದ ರಥದ ದರ್ಶನ ಪಡೆದು ಜಿಲ್ಲೆಗಳಿಗೆ ಹೋಗಲು ಸಾಧ್ಯವಾಯಿತು.

. ಜಿಲ್ಲೆಗಳಿಂದ ಸಾಧಕರು ಅವರ ಬಸ್ಸಿನ ಸಮಯಕ್ಕಿಂತ ಸ್ವಲ್ಪ ಸಮಯ ಬೇಗನೆ ಕಾರ್ಯಸ್ಥಳವನ್ನು ತಲುಪಿದ್ದರು. ಆ ಸಮಯದಲ್ಲಿಯೂ ಮೈದಾನದಲ್ಲಿ ಕಾಲಹರಣೆ ಹರಟೆ, ತಿಂಡಿ ತಿನ್ನುವುದು ಹೀಗೆಲ್ಲ ಮಾಡದೆ, ಎಲ್ಲ ಸಾಧಕರು ಕಾರ್ಯಸ್ಥಳದಲ್ಲಿ ಕುಳಿತು ನಾಮಜಪಿಸುವುದು ಹಾಗೂ ಇತರ ಜಿಲ್ಲೆಯ ಪರಿಚಯದ ಸಾಧಕರ ಜೊತೆಗೆ ಸಾಧನೆಯ ಬಗ್ಗೆ ಮಾತಾಡುವುದು, ಹೀಗೆ ಮಾಡುತ್ತಿದ್ದರು

ಒಟ್ಟಿನಲ್ಲಿ ಈ ಸಮಾರಂಭದ ಸ್ಥಳದ ವಾತಾವರಣ ಹೇಗಿತ್ತೆಂದರೆ, ಯಾರೂ ಹೇಳದಿದ್ದರೂ ಈ ಸಮಾರಂಭವು ‘ಸನಾತನದ್ದಾಗಿದೆ ಎಂದು ಸಹಜವಾಗಿ ಗೊತ್ತಾಗುತ್ತಿತ್ತು ! ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಇಷ್ಟು ವರ್ಷ ವಿವಿಧ ಮಾಧ್ಯಮಗಳ ಮೂಲಕ ಆಜ್ಞಾಪಾಲನೆ ಮತ್ತು ಸ್ವಯಂಶಿಸ್ತಿನ ಮಹತ್ವವನ್ನು ಹೇಳಿದ್ದಾರೆ, ಅದು ಎಲ್ಲೆಡೆಯ ಸಾಧಕರ ಮನಸ್ಸಿನ ಮೇಲೆ ಸಂಪೂರ್ಣ ಮೂಡಿದೆ, ಇದೇ ಈ ಸಮಾರಂಭದ ಮೂಲಕ ಕಂಡು ಬಂದಿತು !

– ಕು. ಸಾಯಲಿ ಡಿಂಗರೆ, ಶ್ರೀ. ಸಾಗರ ನಿಂಬಾಳಕರ, ಶ್ರೀ. ಅಭಿಜಿತ ನಾಡಕರ್ಣಿ ಮತ್ತು ಜಗದೀಶ ಇಂಗೋಲೆ.