ವಿದ್ಯಾರ್ಥಿಗಳಿಗೆ ಮಗಧ, ಚೋಳ, ಚೆರಾ, ಪಾಂಡ್ಯ ಮತ್ತು ಹಿಂದವೀ ಸ್ವರಾಜ್ಯ ಈ ಸಾಮ್ರಾಜ್ಯಗಳ ವಿಷಯವನ್ನು ಕಲಿಸಿರಿ !

ಉತ್ತರಪ್ರದೇಶ ಸರಕಾರದ ಪಠ್ಯಪುಸ್ತಕಗಳಿಂದ ಮೊಗಲರ ಇತಿಹಾಸ ಗಡಿಪಾರು !

ಉತ್ತರಪ್ರದೇಶ ಸರಕಾರವು ಉತ್ತರಪ್ರದೇಶ ಶಿಕ್ಷಣ ಮಂಡಳಿಯ (ಯು.ಪಿ. ಬೋರ್ಡ್) ಮತ್ತು ‘ಸಿ.ಬಿ.ಎಸ್.ಇ. ಮಂಡಳಿಯ ಪಠ್ಯಕ್ರಮದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ೨೦೨೩-೨೪ ಈ ಶೈಕ್ಷಣಿಕ ವರ್ಷದ ೧೨ ನೇ ತರಗತಿಯಲ್ಲಿ ಕಲಿಸಲಾಗುವ ಇತಿಹಾಸದ ಪುಸ್ತಕದಿಂದ ಮೊಗಲರ ಪಾಠವನ್ನು ತೆಗೆದುಹಾಕಲಾಗಿದೆ. ೧೧ ನೇ ತರಗತಿಯ ಅಭ್ಯಾಸದಲ್ಲಿ ಬದಲಾವಣೆ ಮಾಡಿ ‘ಇಸ್ಲಾಮ್‌ನ ಉದಯ, ಔದ್ಯೋಗಿಕ ಕ್ರಾಂತಿ, ಸಂಸ್ಕೃತಿಯ ಸಂಘರ್ಷ ಮತ್ತು ಕಾಲದ ಪ್ರಾರಂಭ ಈ ಪ್ರಕರಣಗಳನ್ನೂ ಇತಿಹಾಸದ ಪುಸ್ತಕದಿಂದ ತೆಗೆದು ಹಾಕಲಾಗಿದೆ. ಶಾಲೆಯ ಅಭ್ಯಾಸದಲ್ಲಿ ವಿದೇಶಿ ದಾಳಿಕೋರರನ್ನು ಗೌರವಿಸುವ ಪಾಠಗಳನ್ನು ಕಳೆದ ೭೦ ವರ್ಷ ಕಲಿಸಲಾಯಿತು; ಆದರೆ ಈ ದಾಳಿಕೋರರನ್ನು ಮಣ್ಣುಮುಕ್ಕಿಸುವ ಶೌರ್ಯವನ್ನು ಹಿಂದೂಸ್ಥಾನದ ಶೂರ ರಾಜ-ಮಹಾರಾಜರು ತೋರಿಸಿದ್ದಾರೆ. ಅವರ ಶೌರ್ಯವನ್ನು ಓದಿದರೆ ಭಾರತದಲ್ಲಿನ ಪೀಳಿಗೆಗಳು ತಯಾರಾಗಬಹುದು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಇದನ್ನು ಪ್ರಾರಂಭಿಸಿದ್ದಾರೆ, ಇದು ಪ್ರಶಂಸನೀಯವಾಗಿದೆ; ಆದರೆ ರಾಷ್ಟ್ರೀಯ ಮಟ್ಟದಲ್ಲಿ ಇದರಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಬೇಕು. ಅದಕ್ಕಾಗಿ ಕೇಂದ್ರೀಯ ಶಿಕ್ಷಣ ಮಂಡಳಿಯ ಅಭ್ಯಾಸದ ಪುಸ್ತಕಗಳ ಪುನರ್ರ‍ಚನೆಯನ್ನು ಮಾಡಬೇಕಾಗುವುದು.

ಶ್ರೀ ರಮೇಶ ಶಿಂದೆ

೧. ಭಾವೀ ಪೀಳಿಗೆಗೆ ಭಾರತೀಯ ಇತಿಹಾಸದ ಸವಿಸ್ತಾರ ಪರಿಚಯ ಆಗಬಾರದೆಂದು ‘ಎನ್.ಸಿ.ಈ.ಆರ್.ಟಿ.’ ಮಾಡಿದ ಪ್ರಯತ್ನ !

ಶಾಲೆಯ ಪಠ್ಯಕ್ರಮದಲ್ಲಿ ‘ಇತಿಹಾಸದ ವಿಷಯ ಹೇಗಿರುತ್ತದೆ ಎಂದರೆ, ಈ ವಿಷಯದಿಂದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾರ್ಥಿ ಜೀವನದಲ್ಲಿನ ತಂತ್ರಜ್ಞಾನ, ವೈದ್ಯಕೀಯ, ಇತ್ಯಾದಿ ಅನೇಕ ಶಾಖೆಗಳಲ್ಲಿ ಸ್ವಲ್ಪವೂ ಉಪಯೋಗವಿರುವುದಿಲ್ಲ. ಆದರೂ ಈ ವಿಷಯಗಳು ಎಲ್ಲ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿರುತ್ತವೆ. ಇದರ ಕಾರಣವೆಂದರೆ, ‘ಈ ಇತಿಹಾಸದಿಂದ ಅವರಿಗೆ ಮುಂದಿನ ಜೀವನದಾದ್ಯಂತ ಪ್ರೇರಣೆ ಸಿಗುತ್ತಿರುತ್ತದೆ ಮತ್ತು ಈ ಪ್ರೇರಣೆಯಿಂದ ಸ್ಫೂರ್ತಿಪಡೆದು ಅವರು ಪುನಃ ಇತಿಹಾಸವನ್ನು ರಚಿಸಬಹುದು. ಛತ್ರಪತಿ ಶಿವಾಜಿಯವರಿಗೆ ರಾಜಮಾತೆ ಜಿಜಾವೂ ಭಗವಾನ ಶ್ರೀರಾಮ ಮತ್ತು ಶ್ರೀಕೃಷ್ಣರ ಇತಿಹಾಸವನ್ನು ಹೇಳಿದ್ದ ರಿಂದ, ಅವರು ಅವುಗಳ ಪ್ರೇರಣೆ ಪಡೆದು ೫ ಮೊಗಲ

ಸಾಮ್ರಾಟರನ್ನು ಬಗ್ಗಿಸುತ್ತಾ ಹಿಂದವೀ ಸ್ವರಾಜ್ಯದ ಸ್ಥಾಪನೆಯನ್ನು ಮಾಡಿ ದೈದೀಪ್ಯಮಾನ ಇತಿಹಾಸವನ್ನು ರಚಿಸಿದರು. ಇದೇ ರೀತಿ ಮಹಾರಾಣಾ ಪ್ರತಾಪ, ಪೃಥ್ವಿರಾಜ ಚೌಹಾನ, ರಾಣಿ ಚೆನ್ನಮ್ಮಾ, ಝಾನ್ಸಿಯ ರಾಣಿ ಲಕ್ಷ್ಮೀಬಾಯಿ, ಬಾಜೀರಾವ್ ಪೇಶವೆ, ಬಾಪ್ಪಾ ರಾವಲ, ಲಚಿತ ಬರಫುಕನ ಮುಂತಾದ ಅನೇಕ ಹಿಂದೂ ಪರಾಕ್ರಮಿಗಳ ಮತ್ತು ಶೂರವೀರರ ದೈದಿಪ್ಯಮಾನ ಇತಿಹಾಸವಿದೆ; ಆದರೆ ಕಳೆದ ಕೆಲವು ದಶಕಗಳಲ್ಲಿ ರಾಷ್ಟ್ರೀಯ ಸ್ತರದಲ್ಲಿ ಪಠ್ಯಕ್ರಮವನ್ನು ನಿರ್ಣಯಿಸುವ ‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನ ಮತ್ತು ತರಬೇತಿ  ಮಂಡಳಿ (ಎನ್.ಸಿ.ಈ.ಆರ್.ಟಿ.) ಮುಂದಿನ ಪೀಳಿಗೆಗೆ ಭಾರತೀಯ ಇತಿಹಾಸವು ಸವಿಸ್ತಾರವಾಗಿ ತಿಳಿಯಬಾರದೆಂಬ ಉದ್ದೇಶದಿಂದ ಪಠ್ಯಕ್ರಮವನ್ನು ರಚಿಸಿರುವುದು ಕಂಡು ಬರುತ್ತದೆ.

೨. ಪರಕೀಯ ದಾಳಿಕೋರರ ಇತಿಹಾಸವನ್ನು ಕಲಿಸುವುದು ದೇಶದಲ್ಲಿನ ರಾಷ್ಟ್ರಪುರುಷರಿಗಾದ ಅಪಮಾನ !

ಎನ್.ಸಿ.ಈ,ಆರ್.ಟಿ.ಸಿ.ಯ ಪಠ್ಯಕ್ರಮವು ಯಾವಾಗಲೂ ವಿವಾದಾತ್ಮಕವಾಗಿದೆ. ಕೆಲವೊಮ್ಮೆ ಅದರಿಂದ ಭಗತ್‌ಸಿಂಗ್, ಚಂದ್ರಶೇಖರ ಆಝಾದ್ ಮುಂತಾದ ಕ್ರಾಂತಿಕಾರಿಗಳನ್ನು ‘ಭಯೋತ್ಪಾದಕರೆಂದು ಸಂಬೋಧಿಸಿ ಅವರನ್ನು ಅವಮಾನಿಸಲಾಯಿತು, ಕೆಲವೊಮ್ಮೆ ಭಾರತದ ಮೂಲ ಪರಂಪರೆ, ಜಗತ್ತಿನಲ್ಲಿನ ಎಲ್ಲಕ್ಕಿಂತ ಪ್ರಾಚೀನ ಹಿಂದೂ ಸಂಸ್ಕೃತಿಯ ವಿಕೃತ ಇತಿಹಾಸವನ್ನು ಮಂಡಿಸಲಾಯಿತು. ಜಗತ್ತಿನ ಯಾವುದೇ ದೇಶವು ದಾಳಿಕೋರರ ಇತಿಹಾಸವನ್ನು ಗೌರವಿಸಿ ಅವರೊಂದಿಗೆ ಹೋರಾಡಿದ ಸ್ವಕೀಯ ಯೋಧರ ಇತಿಹಾಸವನ್ನು ಅದುಮಿಡುವ ಕುಕೃತ್ಯವನ್ನು ಮಾಡಲಿಲ್ಲ !

ಲಕ್ಷಗಟ್ಟಲೆ ‘ಜ್ಯೂಗಳನ್ನು ಹತ್ಯೆ ಮಾಡಿದ ‘ಹಿಟ್ಲರನ ಇತಿಹಾಸ ವನ್ನು ಇಸ್ರೈಲ್‌ನಲ್ಲಿ ಕಲಿಸಲು ಸಾಧ್ಯವೇ ? ಆದರೆ ನಮ್ಮ ದೇಶ ದಲ್ಲಿ ಪರಕೀಯ ಆಕ್ರಮಣಕಾರರ ಇತಿಹಾಸವನ್ನು ದೊಡ್ಡ ಪ್ರಮಾಣದಲ್ಲಿ ಕಲಿಸಿ ಅವರನ್ನು ವೈಭವೀಕರಿಸಲಾಗುತ್ತ್ತದೆ. ಇದು ಈ ದೇಶದ ರಾಷ್ಟ್ರಪುರುಷರ ಅಪಮಾನವಾಗಿದೆ. ಇದರಿಂದ ಪಠ್ಯಕ್ರಮವನ್ನು ನಿಶ್ಚಿತಗೊಳಿಸುವ ಸಮಿತಿ ಯಾರಿಗಾಗಿ ಕಾರ್ಯ ಮಾಡುತ್ತಿದೆ, ಎಂಬುದು ಸಂಶೋಧನೆಯ ವಿಷಯವಾಗಿದೆ.

೩. ‘ಎನ್.ಸಿ.ಈ.ಆರ್.ಟಿ.ಯ ಪಠ್ಯಕ್ರಮದಲ್ಲಿನ ಕೊರತೆಗಳು !

೩ ಅ. ‘೭ ನೇ ತರಗತಿಯ ಇತಿಹಾಸದ ‘ಹಮಾರೆ ಅತೀತ ಎಂಬ ಪಠ್ಯಪುಸ್ತಕದಲ್ಲಿನ ಆಕ್ಷೇಪಾರ್ಹ ಅಂಶಗಳು

೩ ಅ ೧. ಪರಾಕ್ರಮಿ ರಾಷ್ಟ್ರಪುರುಷರ ಹೆಸರಿನ ಉಲ್ಲೇಖವೇ ಇಲ್ಲ : ಈ ಪುಸ್ತಕದಲ್ಲಿನ ೧೫೪ ಪುಟಗಳ ಪೈಕಿ ಹೆಚ್ಚಿನ ಪುಟಗಳನ್ನು ಹಿಂದೂಸ್ಥಾನದ ಮೇಲೆ ದಾಳಿ ಮಾಡಿ ಹಿಂದೂಗಳನ್ನು ಪಾರತಂತ್ರ್ಯಕ್ಕೆ ತಳ್ಳಿದ ಮತ್ತು ಅವರ ಮೇಲೆ ಅಪರಿಮಿತ ಅತ್ಯಾಚಾರ ಮಾಡಿದ ಮೊಗಲ ದಾಳಿಕೋರರ ಐತಿಹಾಸಿಕ ಮಾಹಿತಿಗಾಗಿ ಉಪಯೋಗಿಸಲಾಗಿದೆ ಮತ್ತು ಮೊಗಲರೊಂದಿಗೆ ಹೋರಾಡಿ ‘ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರ ಸಂಪೂರ್ಣ ಇತಿಹಾಸವನ್ನು ಕೇವಲ ೬ ಸಾಲುಗಳಲ್ಲಿ ಮಂಡಿಸಲಾಗಿದೆ. ಅದೇ ರೀತಿ ಈ ಪುಸ್ತಕದಲ್ಲಿ ಅಕ್ಬರನೊಂದಿಗೆ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ ಮಹಾರಾಣಾ ಪ್ರತಾಪ ಮತ್ತು ಇತರ ಪರಾಕ್ರಮಿ ರಾಷ್ಟ್ರಪುರುಷರ ಹೆಸರುಗಳ ಉಲ್ಲೇಖವೇ ಇಲ್ಲ.

೩ ಅ ೨. ಭಾರತ ಇಸ್ಲಾಮೀ ದೇಶ ಆಗಿದೆಯೆಂದು ತೋರಿಸಲು ಪ್ರಯತ್ನಿಸುವುದು : ಇದೇ ಪುಸ್ತಕದಲ್ಲಿನ ‘ಪಾಠ ೩ – ದೆಹಲಿಯ ಸುಲ್ತಾನ ಇದರಲ್ಲಿನ ೧೫ ಪುಟಗಳಲ್ಲಿ ದೆಹಲಿಯಲ್ಲಿನ ಸುಲ್ತಾನ, ಸುಲ್ತಾನತ್‌ನ ವಿಸ್ತಾರ, ಅಲ್ಲಾಉದ್ದೀನ ಖಿಲ್ಜಿ, ಮಹಮ್ಮದ ತುಘಲಕ ಇವರ ವಂಶಾವಳಿಯ ಮಾಹಿತಿಯನ್ನು ನೀಡಲಾಗಿದೆ. ‘ಪಾಠ ೪ – ಮೊಗಲಸಾಮ್ರಾಜ್ಯ ಇದಕ್ಕೆ ೧೫ ಪುಟಗಳನ್ನು ಉಪಯೋಗಿಸಿ ಅದರಲ್ಲಿ ಮೊಗಲರ ಸೈನ್ಯ, ಅದರಲ್ಲಿಯೂ ಮುಂದೆ ಬಾಬರ, ಅಕ್ಬರ, ಹುಮಾಯೂನ, ಜಹಾಂಗೀರ, ಔರಂಗಜೇಬ ಮುಂತಾದ ಮೊಗಲ ರಾಜರ ಚಿತ್ರಸಹಿತ ಮಾಹಿತಿಯನ್ನು ನೀಡಲಾಗಿದೆ. ‘ಪಾಠ ೫ – ಆಡಳಿತಗಾರರು ಮತ್ತು ಕಟ್ಟಡಗಳು ಇದರಲ್ಲಿ ಕುತುಬಮಿನಾರ, ದೆಹಲಿಯ ಕುವ್ವತ ಅಲ್-ಇಸ್ಲಾಮ್ ಮಸೀದಿ, ಮಕ್ಕಾ, ಹುಮಾಯೂನನ ಮಕಬರಾ, ದೆಹಲಿಯಲ್ಲಿನ ‘ದಿವಾನ-ಎ-ಆಮ್ನ ಸಿಂಹಾಸನ ಮತ್ತು ತಾಜಮಹಾಲ್‌ನ ಮಾಹಿತಿಯನ್ನು ನೀಡಲಾಗಿದೆ. ‘ಇದರಲ್ಲಿ ಭಾರತ ಇಸ್ಲಾಮೀ ದೇಶವೇ ಆಗಿದೆ, ಎಂಬ ಚಿತ್ರಣವನ್ನು ಮೂಡಿಸಲಾಗಿದೆ.

೩ ಅ ೩. ಪರಕೀಯ ದಾಳಿಕೋರರು ಮತ್ತು ಭಾರತೀಯ ರಾಜರ ನಡುವೆ ಉದ್ದೇಶಪೂರ್ವಕ ಭೇದವನ್ನು ಮಾಡುವುದು : ಈ ಪುಸ್ತಕದಲ್ಲಿನ ‘ಪಾಠ ೧೦ – ಹದಿನೆಂಟನೇಯ ಶತಮಾನದಲ್ಲಿನ ರಾಜನೈತಿಕ ಘಟನೆಗಳು ಇದರಲ್ಲಿ ೧೭ ನೇ ಶತಮಾನದಲ್ಲಿನ ಮೊಗಲ ಸಾಮ್ರಾಜ್ಯದ ಸೀಮೆ, ನಾದಿರಶಾಹನ ಆಕ್ರಮಣ, ಹೈದರಾಬಾದ್‌ನ ನಿಜಾಮ, ಬಂಗಾಲದ ಅಲೀವರ್ದೀ ಖಾನ್ ಇವರ ಮಾಹಿತಿಗಾಗಿ ಬಹಳಷ್ಟು ಪುಟಗಳನ್ನು ಉಪ ಯೋಗಿಸಲಾಗಿದೆ; ಆದರೆ ರಜಪೂತ, ಶಿಕ್ಖ್, ಮರಾಠ ಮತ್ತು ಜಾಟ್ ಮುಂತಾದ ಹಿಂದೂಸ್ಥಾನಿ ರಾಜರ ಬಗ್ಗೆ ಕೇವಲ ೬ ಪುಟಗಳನ್ನು ನೀಡಲಾಗಿದೆ. ಹೀಗೆ ಉದ್ದೇಶಪೂರ್ವಕ ಭೇದವನ್ನು ಮಾಡಲಾಗಿದೆ.

೩ ಆ. ‘೮ ನೇ ತರಗತಿಯ ‘ಸೋಶಲ್ ಸಾಯನ್ಸ್ ವಿಷಯದ ‘ಅವರ್ ಪಾಸ್ಟ್ (|||) ಪಾರ್ಟ್ – ೧ ಈ ಪಠ್ಯಪುಸ್ತಕದಲ್ಲಿನ ಆಕ್ಷೇಪಾರ್ಹ ವಿಷಯಗಳು))

೩ ಆ ೧. ಬ್ರಿಟಿಷರ ವೈಭವೀಕರಣ : ‘ಸೋಶಲ್ ಸಾಯನ್ಸ್ನ ‘ಅವರ್ ಪಾಸ್ಟ್ (|||) ಪಾರ್ಟ್ – ೧ ಈ ಆಂಗ್ಲ ಪುಸ್ತಕದಲ್ಲಿ ಜೇಮ್ಸ್ ರೆನೆಲ್ ಇವನು ವರ್ಷ ೧೭೮೨ ರಲ್ಲಿ ಬಿಡಿಸಿದ ಚಿತ್ರವನ್ನು ಪ್ರಸಿದ್ಧಪಡಿಸಲಾಗಿದೆ. ಅದರಲ್ಲಿ ಭಾರತೀಯ ಬ್ರಾಹ್ಮಣನು ಬ್ರೀಟಾನಿಯಾಳಿಗೆ ಧರ್ಮಗ್ರಂಥವನ್ನು ಕೊಡುವು ದನ್ನು ತೋರಿಸಲಾಗಿದೆ. ಇದರಲ್ಲಿ ಮುಂದೆ ಭಾರತೀಯರು ಬ್ರಿಟಾನಿಯಾಳಿಗೆ ಪ್ರಾಚೀನ ಗ್ರಂಥಗಳನ್ನು ಸ್ವೇಚ್ಛೆಯಿಂದ ನೀಡಿದ್ದಾರೆ ಎಂದು ಹೇಳಲಾಗಿದೆ. ಇದು ಬ್ರಿಟೀಶರ ವರ್ಚಸ್ಸಿ ಪ್ರಭಾವ ಎಂದು ತೋರಿಸುತ್ತಾ ಅವರು ಭಾರತೀಯ ಸಂಸ್ಕೃತಿಯ ರಕ್ಷಕರಾಗಬೇಕೆಂದು ಅವಳಿಗೆ ಹೇಳುತ್ತಿದ್ದಾರೆಂಬಂತೆ ಮಂಡಿಸಲಾಗಿದೆ. ಈ ರೀತಿ ಬ್ರಿಟಿಷರ ವೈಭವೀಕರಣ ಮಾಡಿ ಭಾರತೀಯ ವಿದ್ವಾಂಸರನ್ನು  ಕಡೆಗಣಿಸಲಾಗಿದೆ.

೩ ಆ ೨. ಹಿಂದೂ ದೇವತೆಗಳ ವಿಡಂಬನೆ : ‘ಸೋಶಲ್ ಸಾಯನ್ಸ್ನ ‘ಅವರ್ ಪಾಸ್ಟ್ (|||) ಪಾರ್ಟ್ – ೨ ಈ ಆಂಗ್ಲ ಪುಸ್ತಕದಲ್ಲಿ ಹನುಮಂತ ಮತ್ತು ಜಾಂಬವಂತ ಇವರಲ್ಲಿನ ಯುದ್ಧದ ಚಿತ್ರವನ್ನು ಮುದ್ರಿಸಲಾಗಿದೆ.

ಇದರಲ್ಲಿ ಹನುಮಂತ ಪಾದರಕ್ಷೆಗಳನ್ನು ಧರಿಸಿರುವುದನ್ನು ತೋರಿಸಲಾಗಿದೆ. ಅದೇ ರೀತಿ ಚಿತ್ರಕಾರನು ಪಾರಂಪರಿಕ ಘಟನೆಗಳನ್ನು ಆಧುನಿಕಗೊಳಿಸುವ ಹೆಸರಿನಲ್ಲಿ ಹನುಮಂತನ ಕಾಲುಗಳಲ್ಲಿ ಸ್ಲೀಪರ್ ಇರುವುದನ್ನು ತೋರಿಸಿದ್ದಾನೆ. ಇದರಿಂದ ಹಿಂದೂ ದೇವತೆಗಳನ್ನು ತಪ್ಪಾಗಿ ತೋರಿಸಿ ಅವರ ವಿಡಂಬನೆ ಯನ್ನು ಮಾಡಲಾಗಿದೆ, ಹಾಗೆಯೇ ವಿದ್ಯಾರ್ಥಿಗಳು ಇದೇ ರೀತಿ ಯಲ್ಲಿ ದೇವತೆಗಳನ್ನು ಚಿತ್ರಿಸಬೇಕೆಂದು ಒತ್ತಡ ಹೇರಲಾಗುತ್ತದೆ.

೩ ಇ. ೧೦ ನೇ ತರಗತಿಯ ಪಠ್ಯಪುಸ್ತಕದಲ್ಲಿನ ಆಕ್ಷೇಪಾರ್ಹ ಅಂಶಗಳು

೩ ಇ ೧. ಶೇಷ್ಠ ಕ್ರಾಂತಿಕಾರರನ್ನು ‘ಭಯೋತ್ಪಾದಕರು ಎಂದು ಸಂಬೋಧಿಸುವುದು : ‘೧೦ ನೇ ತರಗತಿಯ ‘ಹಿಸ್ಟ್ರೀ ಎಂಡ್ ಸಿವ್ಹಿಕ್ಸ್ ಈ ಪುಸ್ತಕದಲ್ಲಿನ ‘ರಿವೈವಲ್ ಆಫ್ ಟೆರರಿಸಮ್ ಈ ಪಾಠದಲ್ಲಿ ಹಿರಿಯ ಕ್ರಾಂತಿಕಾರಿ ಭಗತ ಸಿಂಗ್, ರಾಜಗುರು, ಸುಖದೇವ, ಲಾಲಾ ಲಜಪತರಾಯ್, ಖುದೀರಾಮ ಬೋಸ್ ಮತ್ತು ರಾಸಬಿಹಾರಿ ಬೋಸ್ ಇವರನ್ನು ‘ಭಯೋತ್ಪಾದಕರೆಂದು ಸಂಬೋಧಿಸಲಾಗಿದೆ. ಅವರ ಕಾರ್ಯಗಳನ್ನು ‘ಭಯೋತ್ಪಾದಕ ಕೃತ್ಯ ಎಂದು ಸಂಬೋಧಿಸಲಾಗಿದೆ.

೩ ಈ. ೧೦ ನೇ ತರಗತಿಯ ‘ಭಾರತ ಮತ್ತು ಸಮಕಾಲಿನ ಜಗತ್ತು – ೨ ಈ ಪಠ್ಯಪುಸ್ತಕದಲ್ಲಿ ಚಿತ್ರಿಸಿದ ಜಾತ್ಯತೀತತೆ !

೩ ಈ ೧. ಲೋಕಮಾನ್ಯ ಟಿಳಕರನ್ನು ‘ಜಾತ್ಯತೀತರೆಂದು ತೋರಿಸುವ ಪ್ರಯತ್ನ : ಪುಟ ೭೦ ರಲ್ಲಿ ಲೋಕಮಾನ್ಯ ಟಿಳಕರ ಛಾಯಾಚಿತ್ರವನ್ನು ಹಾಕಿ ಅದರ ಬದಿಯ ಚೌಕಟ್ಟಿನಲ್ಲಿ ‘ಟಿಳಕರ ಸುತ್ತಲಿರುವ ಏಕತೆಯ ಪ್ರತೀಕಗಳನ್ನು ನೋಡಿರಿ. ವಿವಿಧ ಧರ್ಮಗಳ ಪವಿತ್ರ ಧಾರ್ಮಿಕ ಸ್ಥಳಗಳಿಂದ (ಉದಾ. ಮಂದಿರ, ಚರ್ಚ್, ಮಸೀದಿ) ಸುತ್ತುವರಿದಿರುವ ಆಕೃತಿ, ಎಂದು ಹೇಳಲಾಗಿದೆ. ಇದರಲ್ಲಿ ಮಸೀದಿ ಎಂದು ಹೇಳಿದ ಆಕೃತಿ ‘ತಾಜಮಹಾಲ್ದ್ದಾಗಿದೆ. ಹಾಗೆಯೇ ಈ ಪುಸ್ತಕದಲ್ಲಿ ಲೋಕಮಾನ್ಯ ಟಿಳಕರ ವಿಷಯದಲ್ಲಿ ಒಂದು ಸಾಲಿನ ಮಾಹಿತಿಯನ್ನೂ ನೀಡಿಲ್ಲ. ಲೋಕಮಾನ್ಯ ಟಿಳಕ ಇವರ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾಲಿರುವಾಗ ಅವರ ಇತಿಹಾಸವನ್ನೇ ಬದಿಗಿರಿಸಲಾಗಿದೆ.

೩ ಈ ೨. ಪುಟ ೭೧ ಮತ್ತು ೭೨ ರಲ್ಲಿ ಭಾರತಮಾತೆಯ ಎರಡು ಚಿತ್ರಗಳನ್ನು ತೋರಿಸಿ ‘ಎಲ್ಲ ಜಾತಿ-ಧರ್ಮಗಳನ್ನು ಈ ಚಿತ್ರಗಳು ಸೆಳೆಯಬಹುದು, ಎಂದು ನಿಮಗೆ ಅನಿಸುತ್ತದೆಯೇ?, ಹೀಗೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಗೊಂದಲವನ್ನು ಹುಟ್ಟುಹಾಕಿಸುವ ಆಕ್ಷೇಪಾರ್ಹ ಪ್ರಶ್ನೆಯನ್ನು ಕೇಳಲಾಗಿದೆ.

೩ ಈ ೩. ಛಾಯಾಚಿತ್ರದ ಮಾಧ್ಯಮದಿಂದ ವಿದ್ಯಾರ್ಥಿಗಳಿಗೆ ಧೂಮ್ರಪಾನ ಮಾಡಲು ಪ್ರೋತ್ಸಾಹಿಸುವುದು : ಪುಟ ೪೪ ರಲ್ಲಿನ ಛಾಯಾಚಿತ್ರದಲ್ಲಿ ‘ಫ್ರೆಂಚ್ ಕಮಾಂಡರ್ ಜನರಲ್ ಹೆನ್ರಿ ನವಾರ್ರ‍್ರೆ ಇವರನ್ನು ಧೂಮ್ರಪಾನ ಮಾಡುವಾಗ ತೋರಿಸಲಾಗಿದೆ. ಕೇಂದ್ರ ಸರಕಾರ ಧೂಮ್ರಪಾನದ ವಿರುದ್ಧ ಕಠೋರ ನಿಲುವನ್ನು ತೆಗೆದುಕೊಂಡಿರುವಾಗ ಇಂತಹ ಚಿತ್ರಗಳನ್ನು ಪಠ್ಯಪುಸ್ತಕಗಳಲ್ಲಿ ಮುದ್ರಿಸಿ ವಿದ್ಯಾರ್ಥಿಗಳಿಗೆ ಧೂಮ್ರಪಾನ ಮಾಡಲು ಪ್ರೋತ್ಸಾಹಿಸಲಾಗುತ್ತದೆ. ಇದರಿಂದ ಪಠ್ಯಪುಸ್ತಕಗಳ ಮೂಲಕ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಕುಸಂಸ್ಕಾರವೇ ಆಗಬಹುದು.

೪. ಪಠ್ಯಕ್ರಮದಲ್ಲಿ ಈ ಮುಂದಿನಂತೆ ಬದಲಾವಣೆಗಳನ್ನು ಮಾಡುವುದು ಆವಶ್ಯಕವಾಗಿದೆ !

೪ ಅ. ಪರಕೀಯ ದಾಳಿಕೋರರನ್ನು ವೈಭವೀಕರಿಸುವ ಬರಹಗಳನ್ನು ತೆಗೆಯಬೇಕು ! : ದೇಶದಾದ್ಯಂತ ಸುಮಾರು ಶೇ. ೧೩.೩೩ ರಷ್ಟು ವಿದ್ಯಾಲಯಗಳಲ್ಲಿ ಕಳೆದ ಕೆಲವು ದಶಕ ಗಳಿಂದ ‘ಎನ್.ಸಿ.ಈ.ಆರ್.ಟಿ.ಯ ಪಠ್ಯಕ್ರಮವನ್ನು ಕಲಿಸ ಲಾಗುತ್ತದೆ. ಇದರ ಮೂಲಕ ಲಕ್ಷಗಟ್ಟಲೆ ವಿದ್ಯಾರ್ಥಿಗಳ ಮೇಲೆ ತಪ್ಪು ಇತಿಹಾಸವನ್ನು ಬಿಂಬಿಸಲಾಗುತ್ತಿದೆ. ಆದ್ದರಿಂದ ‘ಎನ್.ಸಿ.ಈ.ಆರ್.ಟಿ.ಯ ಪಠ್ಯಪುಸ್ತಕಗಳಲ್ಲಿನ ಇತಿಹಾಸದ ವಿಕೃತೀಕರಣ ಮಾಡುವ, ಪರಕೀಯ ದಾಳಿಕೋರರನ್ನು ವೈಭವೀಕರಿಸುವ, ಸುಳ್ಳು, ಸಂದರ್ಭಹೀನ, ಜಾತಿಜಾತಿಗಳಲ್ಲಿ ದ್ವೇಷ ಹುಟ್ಟಿಸುವ, ಕುಸಂಸ್ಕಾರಗಳನ್ನು ಮಾಡುವ ಲೇಖನಗಳನ್ನು ತಕ್ಷಣ ಬದಲಾಯಿಸಬೇಕು. ‘ಎನ್.ಸಿ.ಈ.ಆರ್.ಟಿ.ಯ ಕೆಲವು ಪಠ್ಯಪುಸ್ತಕಗಳಲ್ಲಿನ ಗಮನಕ್ಕೆ ಬಂದ ವಿಷಯಗಳನ್ನು ಈ ಲೇಖನದಲ್ಲಿ ಕೊಡಲಾಗಿದೆ. ಇತರ ಪುಸ್ತಕಗಳನ್ನು ಅಭ್ಯಾಸ ಮಾಡಿದರೆ ಅವುಗಳಲ್ಲಿಯೂ ಇಂತಹ ಆಕ್ಷೇಪಾರ್ಹ ಮತ್ತು ತಪ್ಪು ಸಂದರ್ಭಗಳು ಸಿಗಬಹುದು. ಆದ್ದರಿಂದ ಎಲ್ಲ ಪುಸ್ತಕಗಳ ಈ ದೃಷ್ಟಿಯಿಂದ ಅಭ್ಯಾಸ ಮಾಡಿ ಎಲ್ಲ ತಪ್ಪು ಮಾಹಿತಿಗಳನ್ನು ತೆಗೆಯಬೇಕು.

೪ ಆ. ಶೌರ್ಯಜಾಗೃತಿ ಮತ್ತು ದೇಶಭಕ್ತಿಯನ್ನು ಮೂಡಿಸುವ ಇತಿಹಾಸವನ್ನು ಕಲಿಸಿ ! : ಪುಸ್ತಕಗಳಲ್ಲಿನ ತಪ್ಪು ಬರಹವನ್ನು ತೆಗೆದು ಅದರ ಬದಲು ಹಿಂದೂಸ್ಥಾನದ ಸತ್ಯ ಇತಿಹಾಸವನ್ನು ಸಂದರ್ಭಸಹಿತ ಕಲಿಸಬೇಕು. ಇದರಲ್ಲಿ ವಿದ್ಯಾರ್ಥಿಗಳಲ್ಲಿ ಶೌರ್ಯಜಾಗೃತಿ, ಸ್ವಾಭಿಮಾನ ಮತ್ತು ದೇಶಭಕ್ತಿಯ ಭಾವನೆಯನ್ನು ಮೂಡಿಸುವ ಇತಿಹಾಸವನ್ನು ಕಲಿಸಬೇಕು.

೪ ಇ. ಭಾರತೀಯ ಇತಿಹಾಸವನ್ನು ಯೋಗ್ಯಪದ್ಧತಿಯಲ್ಲಿ ವಿದ್ಯಾರ್ಥಿಗಳವರೆಗೆ ತಲುಪಿಸುವ ಇತಿಹಾಸದ ಅಭ್ಯಾಸವಿರುವ ಪಠ್ಯಕ್ರಮವನ್ನು ತಯಾರಿಸುವ ಮಂಡಳಿಯನ್ನು / ಸಮಿತಿಯನ್ನು ನೇಮಿಸಬೇಕು.

೪ ಈ. ದೇಶದಲ್ಲಿನ ಎಲ್ಲ ಹಿಂದೂ ರಾಷ್ಟ್ರಪುರುಷರ ಪ್ರೇರಣಾದಾಯಕ ಇತಿಹಾಸವನ್ನು ರಾಷ್ಟ್ರೀಯ ಸ್ತರದಲ್ಲಿ ಕಲಿಸುವುದು ಆವಶ್ಯಕವಾಗಿದೆ ! : ಸದ್ಯ ಹಿಂದೂ ರಾಷ್ಟ್ರಪುರುಷರ ಇತಿಹಾಸವನ್ನು ಆಯಾಯ ರಾಜ್ಯಗಳಲ್ಲಿ ಆಯಾ ರಾಜ್ಯಗಳಲ್ಲಿನ ರಾಷ್ಟ್ರಪುರುಷರ ಬಗ್ಗೆ ಕಲಿಸಲಾಗುತ್ತದೆ. ಅದರೆ ಅವರು ಮಾಡಿದ ಕಾರ್ಯವು ಒಂದು ರಾಜ್ಯಕ್ಕೆ ಸೀಮಿತವಾಗಿರದೆ ದೇಶದಾದ್ಯಂತ ಕಲಿಸುವ ಹಾಗಿದೆ. ವಿದೇಶಗಳಲ್ಲಿ ಸೈನಿಕ ಶಿಕ್ಷಣ ನೀಡುವಾಗ ಜಗತ್ತಿನ ೧೦ ಮಹತ್ವದ ಯುದ್ಧಗಳನ್ನು ಕಲಿಸುವಾಗ ಅದರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಮಾಡಿದ ಅಫ್ಝಲಖಾನನ ವಧೆ ಮತ್ತು ಹಿರಿಯ ಬಾಜೀರಾವ್ ಪೇಶ್ವೆಯರ ಯುದ್ಧಗಳನ್ನು ಕಲಿಸಲಾಗುತ್ತದೆ. ಆದರೆ ದುರ್ಭಾಗ್ಯವೆಂದರೆ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ದೇಶದಾದ್ಯಂತವಲ್ಲ, ಕೇವಲ ಮಹಾರಾಷ್ಟ್ರದಲ್ಲಿ ಮಾತ್ರ ಕಲಿಸಲಾಗುತ್ತದೆ. ಅದೇ ರೀತಿ ಛತ್ರಪತಿ ಶಿವಾಜಿ ಮಹಾರಾಜರ ನಂತರ ಅವರ ಸುಪುತ್ರ ಛತ್ರಪತಿ ಸಂಭಾಜಿ ಮಹಾರಾಜರು ಸ್ವರಾಜ್ಯವನ್ನು ೫ ಪಟ್ಟು ಹೆಚ್ಚು ಮಾಡಿದ್ದರು. ಅವರು ಮೊಗಲರಲ್ಲಿ ಹುಟ್ಟುಹಾಕಿದ ಭಯದಿಂದಾಗಿ ಔರಂಗಜೇಬನು ದೆಹಲಿಯ ರಾಜಸಿಂಹಾಸನವನ್ನು ಬಿಟ್ಟು ಮರಾಠರೊಂದಿಗೆ ಯುದ್ಧ ಮಾಡಲು ಮಹಾರಾಷ್ಟ್ರಕ್ಕೆ ಬರಬೇಕಾಯಿತು. ಛತ್ರಪತಿ ಸಂಭಾಜಿ ಮಹಾರಾಜರ ನಿಧನದ ನಂತರವೂ ಮರಾಠರು ೨೭ ವರ್ಷ ಔರಂಗಜೇಬನಿಗೆ ಮಹಾರಾಷ್ಟ್ರವನ್ನು ಜಯಿಸಲು ಬಿಡಲಿಲ್ಲ.

ಅನಂತರ ಮೊದಲನೇಯ ಬಾಜೀರಾವ್ ಪೇಶ್ವೆಯವರು ಹಿಂದೂ ಸಾಮ್ರಾಜ್ಯದ ವಿಸ್ತಾರವನ್ನು ಪಾಕಿಸ್ತಾನದಲ್ಲಿನ ಅಟಕ್ (ಪಾಕಿಸ್ಥಾನದಲ್ಲಿನ ಒಂದು ಸ್ಥಳ) ನವರೆಗೆ  ಮಾಡಿದರು. ಔರಂಗಜೇಬನು ಛತ್ರಪತಿ ಶಿವಾಜಿ ಮಹಾರಾಜರ ಸಿಂಹಾಸನ ವನ್ನು ಒಡೆದನು. ಮರಾಠರು ಅದರ ಸೇಡು ತೀರಿಸಲು ದೆಹಲಿಯ ರಾಜ ಸಿಂಹಾಸನವನ್ನು ಕೊಡಲಿಯಿಂದ ಒಡೆದಿದ್ದರು. ಇಂತಹ ಪ್ರೇರಣಾದಾಯಕ ಇತಿಹಾಸವನ್ನು ರಾಷ್ಟ್ರೀಯ ಸ್ತರದಲ್ಲಿ ಕಲಿಸಬೇಕು. ಅದೇ ರೀತಿ ಮಹಾರಾಣಾ ಹಮೀರಸಿಂಗ್, ಮಹಾರಾಣಾ ಕುಂಭಾ, ಬಾಪ್ಪಾ ರಾವಲ, ಮಹಾರಾಣಾ ಸಾಂಗಾ ಮುಂತಾದವರ ಇತಿಹಾಸವನ್ನೂ ಆಯಾಯ ಪ್ರಾಂತಗಳಲ್ಲಿ ಸ್ವಲ್ಪಾಂಶ ಕಲಿಸಲಾಗುತ್ತದೆ. ಆದರೂ

ಇಂತಹ ಎಲ್ಲ ಹಿಂದೂ ರಾಜರು, ಯೋಧರು ಮತ್ತು ರಾಷ್ಟ್ರ ಪುರುಷರ ಇತಿಹಾಸವನ್ನು ರಾಷ್ಟ್ರೀಯ ಸ್ತರದಲ್ಲಿ ಕಲಿಸಬೇಕು.

೪ ಉ. ಯಾವುದೇ ಮೊಗಲ ದಾಳಿಕೋರರ ಆಡಳಿತ ಸಂಪೂರ್ಣ ಭಾರತದಲ್ಲಿ ಯಾವತ್ತೂ ಇರಲಿಲ್ಲ. ಮೊಗಲ ದಾಳಿಕೋರರು ಅನೇಕ ಹಿಂದೂ ರಾಜರೊಂದಿಗೆ ಒಪ್ಪಂದ ಮಾಡಿಕೊಂಡು ದೇಶದ ಕೆಲವು ಭಾಗಗಳಲ್ಲಿ ಮಾತ್ರ ಆಡಳಿತ ನಡೆಸುತ್ತಿದ್ದರು. ಅವರಿಗಾಗಿ ‘ಸಾಮ್ರಾಜ್ಯದಂತಹ ಶಬ್ದವನ್ನು ಉಪಯೋಗಿಸುವುದು ಒಂದು ಹಾಸ್ಯಾಸ್ಪದವಾಗಿದೆ. ಒಂದು ವೇಳೆ ವಿದ್ಯಾರ್ಥಿಗಳಿಗೆ ಸಾಮ್ರಾಜ್ಯವನ್ನು ಕಲಿಸಲಿಕ್ಕಿದ್ದರೆ, ಮಗಧ, ಚೋಳ, ಚೇರಾ, ಪಾಂಡ್ಯನ್ ಮತ್ತು ಹಿಂದವೀ ಸ್ವರಾಜ್ಯ ಇತ್ಯಾದಿ ಸಾಮ್ರಾಜ್ಯಗಳ ವಿಷಯವನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು.

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ (೧೪.೪.೨೦೨೩)