ಪಾಕಿಸ್ತಾನದಲ್ಲಿನ ಸಂತ್ರಸ್ತ ಹಿಂದೂಗಳಿಗೆ ಭಾರತದ ವೀಸಾ ಸಿಗದೇ ಇದ್ದರಿಂದ ಆತ್ಮಹತ್ಯೆಗೆ ಶರಣು !

ಕಳೆದ ೧೨ ವರ್ಷಗಳಲ್ಲಿ ಪಾಕಿಸ್ತಾನದಲ್ಲಿನ ೧೪ ಸಾವಿರ ಹಿಂದೂ ಹುಡುಗಿಯರ ಅಪಹರಣ ಮತ್ತು ಮತಾಂತರ

ಸಾಂದರ್ಭಿಕ ಚಿತ್ರ

ನವ ದೆಹಲಿ – ಪಾಕಿಸ್ತಾನದಲ್ಲಿನ ಹಿಂದೂಗಳು ನರಕಾಯಾತನೇ ಭೋಗಿಸುತ್ತಿದ್ದಾರೆ. ಹಿಂದೂ ಹುಡುಗಿಯರ ಅಪಹರಣ ಮತ್ತು ಅವರ ಮತಾಂತರ ಇವು ನಿತ್ಯದ ಘಟನೆಗಳಾಗಿವೆ. ಇದಕ್ಕೆ ಬೇಸತ್ತು ಅಲ್ಲಿಯ ಹಿಂದೂಗಳು ಭಾರತಕ್ಕೆ ಮರಳಿ ಬರಬೇಕಿದೆ; ಆದರೆ ಭಾರತದ ವೀಸಾ ಸಿಗದೇ ಇದ್ದರಿಂದ ಹಿಂದೂ ಸಮಾಜದ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

೧. ಸಿಂಧಪ್ರಾಂತದಲ್ಲಿನ ಗದಿಯ ಲುಹಾರ ಸಹಾಯ್ಯತಾ ಸಮಿತಿಯ ಅಧ್ಯಕ್ಷ ಮಂಜಿ ಲುಹಾರ ಅಲಿಯಾಸ್ ಕಾಕಾ ಇವರು, ಕಳೆದ ೬ ತಿಂಗಳಲ್ಲಿ ಅವರ ಪರಿಚಯದವರ 4 ಹಿಂದೂಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಜನರಿಗೆ ಭಾರತಕ್ಕೆ ಹೋಗುವುದಿತ್ತು, ಈ ಅವರಿಗೆ ವೀಸಾ ನೀಡಲಾಗುತ್ತಿಲ್ಲ. ಪಾಕಿಸ್ತಾನದಲ್ಲಿ ಇಂತಹ ನೂರಾರು ಹಿಂದೂ ಕುಟುಂಬಗಳಿವೆ, ಅವರಿಗೆ ಭಾರತಕ್ಕೆ ಬರಲು ವೀಸಾ ಸಿಗುತ್ತಿಲ್ಲ ಮತ್ತು ಪಾಕಿಸ್ತಾನದಲ್ಲಿ ಅವರ ಕುಟುಂಬದವರ ಸ್ಥಿತಿ ಅಪಾಯದಲ್ಲಿದೆ.

೨. ಸಿಂಧಪ್ರಾಂತದಲ್ಲಿನ ಮಿರಪುರ ಖಾಸ ಇಲ್ಲಿಯ ಮೋಹನ್ ಇವರು ಭಾರತದಲ್ಲಿನ ಜೈಸಲಮೇರ್ ಗೆ ಬರಬೇಕಿತ್ತು; ಆದರೆ ಅವರಿಗೆ ೩ ವರ್ಷಗಳಿಂದ ವೀಸಾ ಸಿಗಲಿಲ್ಲ. ಅದಕ್ಕೆ ರೋಸಿ ಅವರು ವಿಷ ಕುಡಿದರು. ಅದೇರೀತಿ ಕಚ್ಚುರಿಯಲ್ಲಿನ ಒಬ್ಬ ಹಿಂದೂ ಹಿರಿಯ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳು.

೩. ಪಾಕಿಸ್ತಾನದಿಂದ ಸ್ಥಳಾಂತರಗೊಂಡಿರುವ ಗಣೇಶ ಇವರು ಜೈಪುರದಲ್ಲಿ ವಾಸಿಸುತ್ತಾರೆ. ಅವರು, ನಮ್ಮ ಕಾಕಾ ಪಾಕಿಸ್ತಾನದಲ್ಲಿನ ರಹಿಮಯಾರ ಖಾನದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾರೆ. ಅವರಿಗೆ ಆರು ಜನ ಹೆಣ್ಣು ಮಕ್ಕಳು ಇದ್ದಾರೆ. ಅದರಲ್ಲಿನ ಮೂರು ಜನರನ್ನು ಮತಾಂಧ ಮುಸಲ್ಮಾನರು ಬಲವಂತವಾಗಿ ಇಸ್ಲಾಂ ಸ್ವೀಕರಿಸಲು ಅನಿವಾರ್ಯಗೊಳಿಸಿದರು, ಆದರೂ ಒಬ್ಬಳ ಹತ್ಯೆ ಮಾಡಲಾಗಿದೆ. ಅವಕಾಶ ಸಿಗುತ್ತಲೇ ಗಣೇಶ ೧೦ ವರ್ಷಗಳ ಹಿಂದೆ ಭಾರತಕ್ಕೆ ಹಿಂತಿರುಗಿದ್ದಾರೆ.

೪. ಪಾಕಿಸ್ತಾನದಲ್ಲಿನ ಕೋಟಗುಲಾಮ ಇಲ್ಲಿ ವಾಸಿಸುವ ವಿಷ್ಣುರಾಮ ಅವರ ಮಗಳು ೯ನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಅಲ್ಲಿಯ ಕೆಲವು ಮುಸಲ್ಮಾನರು ಆಕೆಯನ್ನು ಅಪಹರಿಸಿದರು. ಹುಡುಗಿಯ ತಂದೆ ಆಕೆಯನ್ನು ಹುಡುಕಲು ಬಹಳ ಪ್ರಯತ್ನ ಮಾಡಿದರು ಆದರೆ ಮಗಳು ಸಿಗಲಿಲ್ಲ. ಇಂತಹ ಅನೇಕ ಜನರ ಸಹೋದರಿಯರು ಮತ್ತು ಹೆಣ್ಣು ಮಕ್ಕಳನ್ನು ಮುಸಲ್ಮಾನರು ಅಪಹರಿಸುತ್ತಾರೆ. ಪೋಷಕರು ಧ್ವನಿ ಎತ್ತಿದರು ಕೂಡ ಪೊಲೀಸರಿಂದ ನ್ಯಾಯ ವ್ಯವಸ್ಥೆಯವರೆಗೆ ಅವರ ಮಾತಿನ ಕಡೆ ದುರ್ಲಕ್ಷ ಮಾಡಲಾಗುತ್ತದೆ ಎಂದು ಹೇಳಿದರು.

೫. ಮಿರಾಪುರ ಖಾಸ ಇಲ್ಲಿ ವಾಸಿಸುವ ರಾವ ಕುಟುಂಬ ಮೂರು ತಿಂಗಳ ಹಿಂದೆ ಪಾಕಿಸ್ತಾನದಿಂದ ರಾಜಸ್ಥಾನಕ್ಕೆ ತಲುಪಿದರು. ಅವರ ಒಬ್ಬ ಹುಡುಗಿಯ ಮತಾಂತರ ಮಾಡಲಾಗಿದೆ. ರಾಮ ಕುಟುಂಬದ ಜನರು, ಅವರ ಹುಡುಗಿ ಈಗ ಯಾವ ಸ್ಥಿತಿಯಲ್ಲಿದ್ದಾಳೆ ಇದು ಅವರಿಗೆ ಅಥವಾ ಅವರ ಕುಟುಂಬದವರಿಗೆ ತಿಳಿದಿಲ್ಲ ಎಂದು ಹೇಳಿದರು.

೬. ಸಮಾಜಸೇವಕ ರೋಷನ ಭಿಲ್ ಇವರು, ಇಂತಹ ಪ್ರತಿಯೊಂದು ಕುಟುಂಬ ಭೂತಕಾಲ ಮರೆಯಬೇಕಿರುತ್ತದೆ, ಆದರೆ ಹಾಗೆ ಆಗುತ್ತಿಲ್ಲ. ಪಾಕಿಸ್ತಾನದಲ್ಲಿ ಕಳೆದ ೧೨ ವರ್ಷಗಳಲ್ಲಿ ೧೪ ಸಾವಿರ ಹಿಂದೂ ಹುಡುಗಿಯರ ಅಪಹರಣ, ಮತಾಂತರ ಮತ್ತು ಸಾಮೂಹಿಕ ಬಲತ್ಕಾರ ಇಂತಹ ಘಟನೆಗಳು ಬೆಳಕಿಗೆ ಬಂದಿವೆ ಎಂದು ಹೇಳಿದರು.

ಪಾಕಿಸ್ತಾನದಲ್ಲಿ ದೌರ್ಜನ್ಯದಿಂದ ರೋಸಿಹೋದ ಅಲ್ಲಿಯ ಹಿಂದೂಗಳು ಭಾರತದಲ್ಲಿ ಆಶ್ರಯ ನೀಡಲು ಭಾರತ ಸರಕಾರದ ಬಳಿ ಬೇಡಿಕೆ ಸಲ್ಲಿಸಿದ್ದಾರೆ. ಭಾರತಕ್ಕೆ ಬರಲು ಹಿಂದೂ ಕುಟುಂಬಗಳಿಗೆ ವೀಸಾ ನೀಡಲು ಒತ್ತಾಯಿಸಿದ್ದಾರೆ. ಹಾಗೂ ಭಾರತದಲ್ಲಿರುವ ಕುಟುಂಬದವರಿಗೆ ಪಾಕಿಸ್ತಾನಕ್ಕೆ ಕಳಿಸದಂತೆ ಮನವಿ ನೀಡಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿನ ಹಿಂದೂಗಳ ಈ ಶೋಚನೀಯ ಸ್ಥಿತಿಯು ವಿಶ್ವಸಂಸ್ಥೆ, ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಮುಂತಾದವರಿಗೆ ಕಾಣುವುದಿಲ್ಲವೇ ?